Breaking NewsNEWSನಮ್ಮರಾಜ್ಯ

ಡಿಸೆಂಬರ್‌ 12 ರಂದು ಸಾರಿಗೆ ನೌಕರರಿಂದ ಬೆಳಗಾವಿ ಸುವರ್ಣ ವಿಧಾನಸೌಧ ಚಲೋ ಚಳವಳಿ

ಡಿಸೆಂಬರ್‌ 5ರೊಳಗೆ ನೌಕರರ ಸಮಸ್ಯೆಗೆ ಸ್ಪಂದಿಸದಿದ್ದರೆ ಅಹೋರಾತ್ರಿ ಧರಣಿಗೆ ಹಲವು ಸಂಘಟನೆಗಳ ಬೆಂಬಲ

ವಿಜಯಪಥ ಸಮಗ್ರ ಸುದ್ದಿ
  • ಮಹಾರಾಷ್ಟ್ರ ಸಾರಿಗೆ ನೌಕರರ ಮಾದರಿ ಬಿಸಿ ಮುಟ್ಟಿಸಲು ಕೆಎಸ್‌ಆರ್‌ಟಿಸಿ ನೌಕರರ ತೀರ್ಮಾನ 

  • ಮಾಡು ಇಲ್ಲವೇ ಮಡಿ ಹೋರಾಟ, ಡಿ.12ರಿಂದ ವಿಧಾನಸೌಧದ ಮುಂದೆ ಅಹೋರಾತ್ರಿ ಧರಣಿಗೆ ನಿರ್ಧಾರ 

ಬೆಂಗಳೂರು: ರಾಜ್ಯ ಸರ್ಕಾರ ಕೊಟ್ಟ ಭರವಸೆಯಂತೆ 6ನೇ ವೇತನ ಆಯೋಗದ ಶಿಫಾರಸನ್ನು ಸಾರಿಗೆ ನೌಕರರಿಗೂ ಜಾರಿ ಮಾಡಬೇಕು ಎಂಬುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಳೆದ ಏಪ್ರಿಲ್‌ನಲ್ಲಿ ನಡೆಸಿದ ಮುಷ್ಕರದಲ್ಲಿ ಆದಂತ ವಜಾ, ಅಮಾನತು, ವರ್ಗಾವಣೆ, ಸುಳ್ಳು ಪೊಲೀಸ್‌ ಪ್ರಕರಣಗಳನ್ನು ಸರ್ಕಾರ ಡಿಸೆಂಬರ್‌ 5ರೊಳಗೆ ಸರಿಪಡಿಸದ್ದಿದ್ದರೆ ಡಿಸೆಂಬರ್‌ 12 ರಂದು ಬೆಳಗಾವಿ ಸುವರ್ಣ ವಿಧಾನಸೌಧ ಚಲೋ ಚಳವಳಿ ಹಮ್ಮಿಕೊಳ್ಳಲು ನೌಕರರ ಸಂಘಟನೆಗಳು ನಿರ್ಧರಿಸಿವೆ.

ಡಿಸೆಂಬರ್‌ 1ರಿಂದ ಹುಬ್ಬಳ್ಳಿ-ಧಾರವಾಡದಿಂದ ಪಾದಯಾತ್ರೆ ಆರಂಭವಾಗಲಿದ್ದು, ಚಳವಳಿಗೆ ಎಲ್ಲಾ ನೌಕರರು ಹಾಗೂ ಕರ್ನಾಟಕ ರಾಜ್ಯದ ಕನ್ನಡಪರ ಸಂಘಟನೆಗಳು, ರೈತಪರ ಸಂಘಟನೆಗಳು ಒಟ್ಟಾಗಿ ಸಾರಿಗೆ ನೌಕರರ ಶಾಶ್ವತ ಪರಿಹಾರಕ್ಕೆ ಹೋರಾಟ ಮಾಡಲು ತಯಾರಾಗಿವೆ ಎಂದು ಸಾರಿಗೆ ನೌಕರರು ತಿಳಿಸಿದ್ದಾರೆ.

ಜತೆಗೆ ಸಾರಿಗೆಯ ಎಲ್ಲಾ ನೌಕರರು ನಮ್ಮ ಚಳವಳಿಗೆ ಒಗ್ಗಟ್ಟಿನಿಂದ ಬೆಂಬಲ ನೀಡಬೇಕು ಈ ಮೂಲಕ ಏಪ್ರಿಲ್‌ನಲ್ಲಿ ಹೋರಾಟ ಮಾಡಿದ ಮೇಲೆ ನಮ್ಮ ನೌಕರರು ಪಡುತ್ತಿರುವ ಕಷ್ಟ ಹೇಳ ತೀರದಷ್ಟು ಆಗಿದೆ. ಅದನ್ನು ನಿವಾರಿಸುವ ನಿಟ್ಟಿನಲ್ಲಿ ನಾವೇ ಮುಂದಾಗಬೇಕಿದೆ ಎಂದು ಹೇಳಿದ್ದಾರೆ.

ಇನ್ನು ನೌಕರರು ಏಪ್ರಿಲ್‌ನಿಂದ ಇಲ್ಲಿವರೆಗೂ ಎಲ್ಲಾ ಶಾಸಕರನ್ನು ಬೇಟಿಮಾಡಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಾರಿಗೆ ಸಚಿವರಿಗೆ ಹಲವು ಬಾರಿ ಕೈ ಮುಗಿದು ಮನವಿ ಮಾಡಿದರು ಸಾರಿಗೆ ನೌಕರರ ಬಗ್ಗೆ ಯಾವುದೆ ರೀತಿ ಗಟ್ಟಿ ನಿರ್ಧಾರಕ್ಕೆ ಬಾರದೆ ಕೇವಲ ಆಸ್ವಾಸನೆ ನೀಡುತ್ತಾ ಬಂದಿದ್ದಾರೆ.

ಅದರಿಂದ ಸಾರಿಗೆ ನೌಕರರು ಅವರ ಆಸ್ವಾಸನೆಗೆ ನೊಂದು ಬೆಂದು ಕೊನೆಯ ನಿರ್ಧಾರಕ್ಕೆ ಬಂದ್ದಿದ್ದು, ಎಲ್ಲಿಯವರೆಗೂ ಗುಲಾಮರಾಗಿ ಬದುಕಲು ಸಾಧ್ಯ ಹೇಳಿ? ಕೊಡುವ ಅರ್ಧ ಸಂಬಳದಲ್ಲಿ ಅದರಲ್ಲಿ ಎರಡರಿಂದ ಮೂರು ಸಾವಿರ ಮತ್ತೆ ಕಡಿತ. ಇದು ಯಾವ ನ್ಯಾಯ? ಅದೆ ಸರಕಾರಿ ನೌಕರಿಗೆ ಯಾವತ್ತಾದ್ರೂ ಅರ್ಧ ವೇತನ ನೀಡಿದ್ದಾರೆ ಹೇಳಿ?

ಇದಕ್ಕೆಲ್ಲ ಅಂತ್ಯ ಹಾಡಲು ಎಲ್ಲಾ ಸಾರಿಗೆ ನೌಕರರು ಒಗ್ಗಟ್ಟಾಗಿ ಈ ನಿರ್ಧಾರಕ್ಕೆ ಬಂದಿದ್ದು, ನಾಲ್ಕು ಸಾರಿಗೆಯ ನಿಗಮದ ನೌಕರರು ಇದರಲ್ಲಿ ಭಾಗಿಯಾಗಲಿದ್ದಾರೆ. ಹುಬ್ಬಳ್ಳಿಯಿಂದ ಪಾದಯಾತ್ರೆ ಮೂಲಕ ಬೆಳಗಾವಿ ವಿಧಾನಸೌಧ ಚಲೋ ಹಾಗೂ ನಮ್ಮ ಸಮಸ್ಯೆ ಈಡೇರುವರೆಗೆ ವಿಧಾನಸೌಧ ಮುಂದೆ ಅಹೋ ರಾತ್ರಿ ಧರಣಿ ಮಾಡಲು ಒಮ್ಮತಕ್ಕೆ ಬಂದಿದ್ದಾರೆ.

ಈ ಹೋರಾಟದ ನೇತೃತ್ವವನ್ನು ಸಾರಿಗೆ ಮುಖಂಡರಾದ ಜಗದೀಶ್, ನಾಗೇಂದ್ರ, ಹರೀಶ್, ಸುಧಾಕರರಡ್ಡಿ, ಯೋಗೀಶ್ ಹಾಗೂ ಇನ್ನು ಅನೇಕ ನಾಯಕರ ವಹಿಸಿಕೊಂಕಡಿದ್ದಾರೆ.

ಹೀಗಾಗಿ ಅಧಿಕಾರಿಗಳು ಮತ್ತು ಸರ್ಕಾರ ಕೊಡುವ ಭರವಸೆ ಮತ್ತು ಆಸ್ವಾಸನೆಗೆ ಯಾವುದೆ ಕಾರಣಕ್ಕೂ ಜಗ್ಗದೆ ಮುನ್ನಡೆಯಲು ಎಲ್ಲಾ ನೌಕರರು ಭಾಗಿಯಾಗಿ. ಈ ಹೋರಾಟದಲ್ಲಿ ನಮ್ಮ ಎಲ್ಲಾ ಸಮಸ್ಯೆ ಈಡೇರುವರೆಗೂ ಹಿಂದೆ ಸರಿಯುವ ಮಾತೆ ಇಲ್ಲ ಎಂದು ನೌಕರರು ಹೇಳಿದ್ದಾರೆ.

ರಾಜ್ಯ ಮಹಾರಾಷ್ಟ್ರದಲ್ಲಿ ಅಲ್ಲಿರುವಂತ ಬಿಜೆಪಿ ಮಹಾರಾಷ್ಟ್ರದಲ್ಲಿ ನೌಕರಿಗೆ ಬೆನ್ನೆಲುಬಾಗಿ ನಿಂತಿದೆ. ಆದರೆ ಇಲ್ಲಿರುವಂತ ಆಡಳಿತ ಪಕ್ಷ ಬಿಜೆಪಿಯೇ ಆಗಿದ್ದರೂ ನಮ್ಮ ಮೇಲೆ ಗದಾ ಪ್ರಹಾರ ಮಾಡುತಿದೆ. ಇದು ಯಾವ ನ್ಯಾಯ? ಅದ್ಕಕಾಗಿ ಸಮಸ್ತ ಸಾರಿಗೆ ನೌಕರರೆಲ್ಲರೂ ಮಾಡು ಇಲ್ಲವೇ ಮಡಿ ಹೋರಾಟಕ್ಕೆ ಮಾನಸಿಕವಾಗಿ ಸಿದ್ದರಾಗಿದ್ದು, ನಾವೆಲ್ಲರೂ ನಮ್ಮ ಬಲ ಏನು ಎಂದು ಈ ಸರ್ಕಾರಕ್ಕೆ ತೋರಿಸಿ ನಮ್ಮ ಸಮಸ್ಯೆ ಈಡೇರಿಸಿ ಕೊಳ್ಳಬೇಕಿದೆ ಎಂದು ತಿಳಿದಿದ್ದಾರೆ.

ಇನ್ನು ಬೆಳಗಾವಿ ಸುವರ್ಣ ವಿಧಾನಸೌಧ ಚಲೋ ಚಳವಳಿ ಹಮ್ಮಿಕೊಳ್ಳುವ ಸಂಬಂಧ ಇದೇ ನವೆಂಬರ್‌ 28ರಂದು ಮಾಧ್ಯಮ ಮತ್ತು ಪತ್ರಿಕೆ ಹೇಳಿಕೆ ನೀಡಲು ಎಲ್ಲರೂ ಒಗ್ಗಟ್ಟಿನಿಂದ ನಿರ್ಧಾರ ಮಾಡಿದ್ದಾರೆ.

Leave a Reply

error: Content is protected !!
LATEST
KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು ಗಂಭೀರ ಸ್ವರೂಪ ಪಡೆಯುತ್ತಿದೆ ದೆಹಲಿ ರೈತರ ಹೋರಾಟ: ನ.26ರಿಂದ ಉಪವಾಸ ಸತ್ಯಾಗ್ರಹ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಾಗರದಂತೆ ಬನ್ನಿ: ಮೀರಾ ಶಿವಲಿಂಗಯ್ಯ ಕರೆ SC, ST ಅಲೆಮಾರಿ ಸಮುದಾಯಗಳ ಯೋಜನೆಗಳು ಸದ್ಬಳಕೆ ಆಗಬೇಕು: ಡಿಸಿ ಶಿವಶಂಕರ