Please assign a menu to the primary menu location under menu

NEWSನಮ್ಮರಾಜ್ಯರಾಜಕೀಯ

1.30 ಲಕ್ಷ ಸಾರಿಗೆ ನೌಕರರ ಜೀವನ ಅಂಧಕಾರದಲ್ಲಿ ಮುಳುಗಿರುವಾಗ 60ರ ಸಂಭ್ರಮಾಚರಣೆ ಅರ್ಥಹೀನ

328Views
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಸಾರಿಗೆಯ 1.30 ಲಕ್ಷ ನೌಕರರ ಜೀವನ ಅಂಧಕಾರದಲ್ಲಿ ಮುಳುಗಿರುವಾಗ ಈ 60ರ ಸಂಭ್ರಮದ ಆಚರಣೆ ಅರ್ಥಹೀನ. ಸಂಸ್ಥೆಗೆ ಆಧಾರವಾಗಿರುವ ನೌಕರರಿಗೆ ಸವಲತ್ತುಗಳನ್ನು ನೀಡದೆ ಆಚರಿಸುತ್ತಿರುವ ಈ ಕಾರ್ಯಕ್ರಮ ಹಾಸ್ಯಸ್ಪದ ಹಾಗೂ ಬೇಸರದ ವಿಷಯ ಎಂದು ನೌಕರರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹೌದು! ರಾಜ್ಯ ರಸ್ತೆ ಸಾರಿಗೆ ಸಂಸ್ಥೆ 60 ವಸಂತ ಪೂರೈಸಿದ ಹಿನ್ನೆಲೆಯಲ್ಲಿ ಇಂದು (ಶುಕ್ರವಾರ) ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ವಿಶೇಷ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.

4 ನಿಗಮಗಳ ಅಪಘಾತ ರಹಿತ ಚಾಲಕರಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕ ಪ್ರದಾನ, ಕೆಂಪೇಗೌಡ ಬಸ್ ನಿಲ್ದಾಣಕ್ಕೆ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಗುತ್ತಿದೆ.

ಇದೇ ವೇಳೆ ಅಂಚೆ ಇಲಾಖೆಯು ಕೆಎಸ್ಆರ್ಟಿಸಿ ಕುರಿತ ವಿಶೇಷ ಅಂಚೆ ಲಕೋಟೆ ಹೊರತಂದಿದ್ದು ಅದರ ಬಿಡುಗಡೆಯೂ ನಡೆಯುತ್ತಿದೆ. ಜತೆಗೆ ಕೆಎಸ್ಆರ್ಟಿಸಿ ಸಿಬ್ಬಂದಿ ಕುಟುಂಬದವರು ಹಾಗೂ ಮಕ್ಕಳಿಗೆ ಉಚಿತ ವಿದ್ಯಾ ಕಲಿಕೆ ಯೋಜನೆ ಸಂಬಂಧ ಕೆಎಸ್ಆರ್ಟಿಸಿ ಮತ್ತು ಇನ್ಫೋಸಿಸ್ ನಡುವೆ ಒಪ್ಪಂದಕ್ಕೆ ಸಹಿ ಹಾಕುವ ಕಾರ್ಯ ನಡೆಯುತ್ತಿದೆ.

ಇದರೊಟ್ಟಿಗೆ ಕೆಎಸ್ಆರ್ಟಿಸಿ ಮತ್ತು ಇನ್ಫೋಸಿಸ್ ಡಿಜಿಟಲ್ ಲರ್ನಿಂಗ್ ಅಂತರ್ಜಾಲಕ್ಕೆ ಚಾಲನೆ ಸಿಗಲಿದೆ. ಇದರಲ್ಲಿ 2700 ರೀತಿಯ ಕೋರ್ಸ್ಗಳು ನೌಕರರ ಕುಂದುಕೊರತೆ ನಿವಾರಣೆ ಆನ್ಲೈನ್ ವ್ಯವಸ್ಥೆಗೂ ಚಾಲನೆ ನೀಡಲಾಗುತ್ತಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ರಾಜೀವ್ ಚಂದ್ರಶೇಖರ್, ಸಚಿವರಾದ ಬಿ. ಶ್ರೀರಾಮುಲು, ಶಿವರಾಮ್ ಹೆಬ್ಬಾರ್, ಬಿ.ಸಿ. ನಾಗೇಶ್, ಶ್ರೀನಿವಾಸ ಪೂಜಾರಿ ಮತ್ತು ನಿಗಮದ ಅಧ್ಯಕ್ಷ ಎಂ. ಚಂದ್ರಪ್ಪ ಮತ್ತಿತರರು ಭಾಗವಹಿಸುತ್ತಿದ್ದಾರೆ

ಮೈಸೂರು ರಾಜ್ಯದ ಸರ್ಕಾರವಿದ್ದಾಗ ಸಾರ್ವಜನಿಕರಿಗೆ ಸಮರ್ಪಕ ಸಾರಿಗೆ ಸೌಲಭ್ಯ ಒದಗಿಸಲು ಮೈಸೂರು ಸರ್ಕಾರ ರಸ್ತೆ ಸಾರಿಗೆ ಇಲಾಖೆಯನ್ನು (ಎಂಜಿಆರ್‌ಟಿಡಿ) 1948 ಸೆಪ್ಟೆಂಬರ್ 12ರಂದು 120 ವಾಹನಗಳೊಂದಿಗೆ ಪ್ರಾರಂಭಿಸಿತ್ತು. ಬಳಿಕ ವಿವಿಧ ರೂಪ ಪಡೆದುಕೊಂಡು ರಾಜ್ಯ ರಸ್ತೆ ಸಾರಿಗೆ ನಿಗಮದ ಬೆಳೆದು ನಿಂತಿದೆ 1997ರಲ್ಲಿ ನಾಲ್ಕೂ ನಿಗಮಗಳಾಗಿ ವಿಭಜನೆಗೊಂಡಿತು.

ಪ್ರಸ್ತುತ 60 ವರ್ಷ ಪೂರೈಸಿದ ಸಂಭ್ರವನ್ನು ಇಂದು ಆಚರಿಸಿಕೊಳ್ಳುತ್ತಿದೆ. ಅದರೆ ಇತ್ತ ನೌಕರರು ಸರಿ ಸಮಾನ ವೇತನಕ್ಕಾಗಿ ಮುಷ್ಕರ ನಡೆಸಿದ್ದಾರೆ ಎಂದು 2110 ಮಂದಿಯನ್ನು ವಜಾಮಾಡಿ ಹಿಂಸೆ ನೀಡುತ್ತಿರುವುದಲ್ಲದೆ. ಸಾವಿರಾರು ನೌಕರರನ್ನು ವರ್ಗಾವಣೆ, ಅಮಾನತು ಮಾಡಿ ಮಾನಸಿಕ ಕಿರುಕುಳ ನೀಡುತ್ತಿದೆ.

ನೌಕರರಿಗೇ ನೆಮ್ಮದಿ ನೀಡಲು ಸಾಧ್ಯವಾಗದ ಮೇಲೆ ಈ ಸಂಭ್ರಮಕ್ಕೆ ಅರ್ಥವಿದೆಯೇ ಎಂದು ಹಲವಾರು ನೌಕರರು ಸಾಮಾಜಿಕ ಜಾಲ ತಾಣಗಳ ಮೂಲಕ ತಮ್ಮ ನೋವನ್ನು ಹಂಚಿಕೊಳ್ಳುತ್ತಿದ್ದಾರೆ.

Editordev
the authorEditordev

Leave a Reply

error: Content is protected !!
LATEST
ಸಾರಿಗೆ ನೌಕರರಿಗೆ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆ ಅನುಷ್ಠಾನಗೊಳಿಸಿ : ಸರ್ಕಾರಕ್ಕೆ ಬೈರಣ್ಣ ಒತ್ತಾಯ KSRTC: ಸಮಸ್ತ 4ನಿಗಮಗಳ ಅಧಿಕಾರಿಗಳು-ನೌಕರರು ಇಟ್ಟಿರುವ ಬೇಡಿಕೆಗಳ ಈಡೇರಿಸಿಕೊಳ್ಳುವುದು ಅಸಾಧ್ಯವೆ ಅಲ್ಲ! ಡಿ.9ರಿಂದ ವಿಧಾನಮಂಡಳ ಅಧಿವೇಶನ, ಉಕ ಪ್ರಗತಿಗೆ ಒತ್ತು: ಸ್ಪೀಕರ್ ಖಾದರ್ ವಿವಿಧ ಬೇಡಿಕೆಗಳ  ಈಡೇರಿಸಿ ಆಗ್ರಹಿಸಿ ಇಪಿಎಸ್ ಪಿಂಚಣಿದಾರರ ಪ್ರತಿಭಟನೆ: ಅಧಿಕಾರಿಗಳ ವಿರುದ್ಧ ಆಕ್ರೋಶ ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..! ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್...