ಬೆಂಗಳೂರು: ಭೂ ಕಬಳಿಕೆ ಮಾಡುವವರು, ಮರಳು ಕಳ್ಳಸಾಗಣೆದಾರರು ಸೇರಿದಂತೆ ಯಾವುದೇ ಮಾಫಿಯಾಗಳ ಜತೆ ನಂಟು ಇರಿಸಿಕೊಳ್ಳಬಾರದು ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಐಪಿಎಸ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ಸೋಮವಾರ ನಡೆದ ಐಪಿಎಸ್ ಅಧಿಕಾರಿಗಳ ಸಮ್ಮೇ ಳನ ಉದ್ಘಾ ಟಿಸಿ, ಹಿರಿಯ ಅಧಿಕಾರಿಗಳ ಸಭೆ ನಡೆಸಿದ ಅವರು ಈ ಎಚ್ಚರಿಕೆ ನೀಡಿದ್ದಾರೆ.
ಸಭೆಯ ಬಳಿಕ ಸುದ್ದಿ ಗಾರರ ಜತೆಮಾತನಾಡಿದಮುಖ್ಯ ಮಂತ್ರಿ , ಭೂಮಾಫಿಯಾ, ಮರಳು ಕಳ್ಳಸಾಗಣೆ ಮಾಡುವವರು, ಕ್ರಿಮಿನಲ್ ಹಿನ್ನೆ ಲೆಯವರು, ಅವರ ಏಜೆಂಟರು ಸೇರಿದಂತೆಯಾವುದೇಮಾಫಿಯಾಜತೆ ಪೊಲೀಸರು ನಂಟು ಇರಿಸಿಕೊಳ್ಳಬಾರದು ಎಂದು ನಿರ್ದೇಶನ ನೀಡಿದ್ದೇ ನೆ. ಸಿವಿಲ್ ವ್ಯಾ ಜ್ಯ ಗಳಲ್ಲಿ ಮಧ್ಯ ಪ್ರವೇಶ ಮಾಡದಂತೆ ಯೂಸೂಚಿಸಲಾಗಿದೆ ಎಂದರು.
ರಾಜ್ಯ ಪೊಲೀಸ್ ಮಹಾನಿರ್ದೇಶಕರು, ಪೊಲೀಸ್ ಕಮಿಷನರ್ ಗಳು ಮತ್ತು ಎಲ್ಲ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ನಿರಂತರವಾಗಿ ಪ್ರ ಕರಣಗಳ ಮೇಲ್ವಿ ಚಾರಣೆ ನಡೆಸಬೇಕು. ಇದಕ್ಕಾಗಿ ಪ್ರತ್ಯೇಕ ಡ್ಯಾಷ್ ಬೋರ್ಡ್ ರೂಪಿಸುವಂತೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.
ಸೈಬರ್ ಅಪರಾಧ ಕೃತ್ಯ ಗಳು ಸೇರಿದಂತೆ ತನಿಖೆಯಲ್ಲಿ ಹೊಸ ಸವಾಲುಗಳನ್ನು ಎದುರಿಸುವುದಕ್ಕಾಗಿ ತನಿಖೆಯಲ್ಲಿ ನೂತನ ವಿಧಾನ ಮತ್ತು ತಂತ್ರಜ್ಞಾ ನ ಅಳವಡಿಸಿಕೊಳ್ಳಲು ಸಲಹೆ ನೀಡಲಾಗಿದೆ. ಅಪರಾಧ ಪ್ರ ಕರಣಗಳ ವಿಚಾರಣೆಯಲ್ಲಿ ಹಿನ್ನ ಡೆ ಆಗದಂತೆಯೂಎಚ್ಚ ರಿಕೆ ವಹಿಸಲುಸೂಚಿಸಲಾಗಿದೆ ಎಂದರು.
ಜನಸ್ನೇ ಹಿ ಪೊಲೀಸ್ ವ್ಯ ವಸ್ಥೆ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳು ವಂತೆ ಎಲ್ಲ ಅಧಿಕಾರಿಗಳಿಗೂಸೂಚನೆ ನೀಡಿದ್ದೇ ನೆ. ಪೊಲೀಸರು ಸಾರ್ವಜನಿಕರ ಜತೆ ಸೌಜನ್ಯ ಯುತವಾಗಿ ವರ್ತಿಸುವಂತೆ ನಿರ್ದೇಶನ ನೀಡಲು ತಿಳಿಸಲಾಗಿದೆ ಎಂದು ಬೊಮ್ಮಾಯಿ ಹೇಳಿದರು.
ಗೃಹ ಸಚಿವ ಆರಗ ಜ್ಞಾ ನೇಂದ್ರ , ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್, ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರ ವೀಣ್ಸೂದ್, ಗೃಹ ಇಲಾಖೆ ಹೆಚ್ಚು ವರಿಮುಖ್ಯ ಕಾರ್ಯದರ್ಶಿ ಡಾ.ರಜನೀಶ್ ಗೋಯಲ್ ಇದ್ದರು.