NEWSನಮ್ಮರಾಜ್ಯವಿಡಿಯೋ

ಕಣ್ಣೀರಿನಲ್ಲಿ ಕೈ ತೊಳೆಯುತ್ತಿರುವ ಸಾರಿಗೆ ನೌಕರರ ಕುಟುಂಬಗಳು- ಕ್ವಾರ್ಟರ್ಸ್ ಖಾಲಿ ಮಾಡಿ ಇಲ್ಲ ದುಪ್ಪಟು ಬಾಡಿಗೆ ಕಟ್ಟಿ: ನೋಟಿಸ್‌ ಜಾರಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸಾರಿಗೆ ನೌಕರರು ನಡೆಸುತ್ತಿದ್ದ ಮುಷ್ಕರದ ವೇಳೆ 3 ಸಾವಿರಕ್ಕೂ ಹೆಚ್ಚು ನೌಕರರನ್ನು ವಜಾ ಮಾಡಿದ್ದು, ಈಗ ಸಾರಿಗೆ ನೌಕರರಿಗೆ ನಾಲ್ಕೂ ನಿಗಮಗಳ ಅಧಿಕಾರಿಗಳು ಶಾಕ್ ಕೊಡುತ್ತಿದ್ದಾರೆ.

ಈಗಾಗಲೇ ವಜಾಗೊಂಡಿದ್ದರು ನೀವು ವಾಸವಿರುವ ಮನೆ (ಕ್ವಾರ್ಟರ್ಸ್) ಖಾಲಿ ಮಾಡಬೇಕು ಇಲ್ಲವಾದ್ರೆ ಬಾಡಿಗೆ ಹಣವನ್ನು ತಿಂಗಳಿಂದ ತಿಂಗಳಿಗೆ ಹೆಚ್ಚು ಕಟ್ಟಬೇಕು ಎಂದು ನೋಟಿಸ್ ಜಾರಿ ಮಾಡುತ್ತಿದ್ದಾರೆ. ಆ ನೋಟಿಸ್ ನೀಡಿದ ಹಿನ್ನೆಲೆ ಆತಂಕದಿಂದ ನೌಕರರ ಕುಟುಂಬಸ್ಥರು ಕಣ್ಣೀರಿಡುತ್ತಿದ್ದಾರೆ.

ನಮ್ಮ ಯಜಮಾನ್ರನ್ನು ಕೆಲಸದಿಂದ ವಜಾ ಮಾಡಲಾಗಿದೆ. ಈಗ ರೀತಿ ನೋಟಿಸ್‌ ಕೊಡುತ್ತಿದ್ದಾರೆ ನಾವೇನು ಮಾಡಬೇಕು. ಏಕಾಏಕಿ ಈ ರೀತಿ ಮನೆ ಖಾಲಿ ಮಾಡಿ ಅಂದರೆ ಮಕ್ಕಳನ್ನ ಕಟ್ಟಿಕೊಂಡು ಎಲ್ಲಿಗೆ ಹೋಗಬೇಕು ಎಂದು ಮಹಿಳೆಯರು ಸಾರಿಗೆ ಅಧಿಕಾರಿಗಳು ಮತ್ತು ಸರ್ಕಾರವನ್ನು ಶಪಿಸುತ್ತಿದ್ದಾರೆ.

ರಾಜ್ಯ ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸಿದ್ರೆ ನಾವೇಕೆ ಈ ರೀತಿ ಮಾಡ್ತಿದ್ದೀವಿ. ಈ ಎಲ್ಲ ಗೊಡ್ಡು ಬೆದರಿಕೆಗಳಿಗೆ ನಾವು ಹೆದರಲ್ಲ. ನಮ್ಮವರಾರು ಮನೆ ಖಾಲಿ ಮಾಡಬೇಡಿ ಅಂತಾ ಕಡ್ಡಿ ತುಂಡು ಮಾಡಿದಂತೆ ಸಂಘಟನೆಗಳು ಹೇಳುತ್ತಿವೆ.

ಆರನೇ ವೇತನ ಆಯೋಗದ ವರದಿ ಜಾರಿಗೆ ಆಗ್ರಹಿಸಿ ರಾಜ್ಯಾದ್ಯಂತ ಕೆಎಸ್‌ಆರ್‌ಟಿಸಿ ನೌಕರರು ನಡೆಸುತ್ತಿದ್ದ ಮುಷ್ಕರಕ್ಕೆ ಬೆಂಬಲ ನೀಡಿದ್ದಾರೆ ಎಂದು ಸಿಬ್ಬಂದಿಗಳಿಗೆ ಈ ಹಿಂದೆ ಹಿರಿಯ ಅಧಿಕಾರಿಗಳು ವಸತಿಗೃಹ ಖಾಲಿ ಮಾಡಿಸಲು ನೋಟಿಸ್ ನೀಡುವ ಮೂಲಕ ಬೆದರಿಕೆ ಹಾಕಿದ್ದರು. ಈಗ ಮನೆ ಖಾಲಿ ಮಾಡದಿದ್ದರೆ ಬಾಡಿಗೆ ಹೆಚ್ಚಾಗಿ ಕಟ್ಟಬೇಕು ಎಂದು ನೋಟಿಸ್‌ ನೀಡುತ್ತಿರುವುದು ಸರಿಯಲ್ಲ. ಈಗ ಕೆಲಸವಿಲ್ಲದೆ ನೌಕರರು ಜೀವನ ಸಾಗಿಸುವುದೇ ಕಷ್ಟವಾಗಿದೆ. ಈ ವೇಳೆ ಈ ರೀತಿ ನೋಟಿಸ್‌ ನೀಡುವುದು ಸರಿಯಲ್ಲ ಎಂದು ನೌಕರರ ಒಕ್ಕೂಟದ ಪದಾಧಿಕಾರಿ ಆನಂದ್‌ ಹೇಳಿದ್ದಾರೆ.

ಇನ್ನು ಬಿಎಂಟಿಸಿಯ ಅಧ್ಯಕ್ಷ ನಂದೀಶ್‌ ರೆಡ್ಡಿ ಮತ್ತು ಅಧಿಕಾಗಳಿಗೂ ಅವರು ಒತ್ತಾಯಿಸಿದ್ದು, ಮುಷ್ಕರದ ವೇಳೆ ವಜಾಗೊಂಡ ನೌಕರರ ಪ್ರಕರಣ ಇನ್ನೂ ಹೈ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಈ ವೇಳೆ ಈ ರೀತಿ ನೌಕರರ ವಿರುದ್ಧ ನಡೆಕೊಳ್ಳಬಾರದು ಎಂದು ಒತ್ತಾಯಿಸಿದ್ದಾರೆ.

ಸಾರಿಗೆ ನೌಕರರಿಗೆ ವಸತಿ ಗೃಹವಿದ್ದು, ಅಲ್ಲಿ ಕೆಲವರಿಗೆ ಕ್ವಾರ್ಟರ್ಸ್ ಗಳನ್ನು  ಹಂಚಿಕೆ ಮಾಡಲಾಗಿದೆ. ಏ.7ರಿಂದ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಮತ್ತು ನೌಕರರು ಅನಿರ್ದಿಷ್ಟ ಕಾಲ ಮುಷ್ಕರ ನಡೆಸಿದ್ದರು. ಹೀಗಾಗಿ, ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ಕ್ವಾರ್ಟರ್ಸ್ ನಲ್ಲಿ ವಾಸವಾಗಿರುವ ಕುಟುಂಬಗಳನ್ನು ಖಾಲಿ ಮಾಡಿಸಲು ನೋಟಿಸ್ ಜಾರಿ ಮಾಡಿದ್ದು ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಿತ್ತು. ಈಗ ದುಪ್ಪಟ್ಟು ಬಾಡಿಗೆ ಕಟ್ಟಬೇಕು ಎಂದು ಬೆದರಿಸುತ್ತಿರುವುದು ಸರಿಯಲ್ಲ ಎಂಬ ಕೂಗ ಸಾರ್ವಜನಿಕ ವಲಯದಿಂದಲೂ ಕೇಳಿ ಬರುತ್ತಿದೆ.

ನೋಟಿಸ್ ನೀಡುತ್ತಿರುವುದರಿಂದ ನೌಕರರು ಭಯಭೀತರಾಗಿದ್ದಾರೆ. ಮತ್ತೊಂದೆಡೆ ಮೇಲಧಿಕಾರಿಗಳ ಒತ್ತಡ ಮತ್ತು ಬೆದರಿಕೆ ಹಾಕುತ್ತಿರುವುದು ಸಾರಿಗೆ ನೌಕರರನ್ನು ಹೈರಾಣರಾಗುಂತೆ ಮಾಡುತ್ತಿರುವುದಂತು ಸತ್ಯ.

ಇನ್ನು ಸಾರಿಗೆ ನೌಕರರ ಬೇಡಿಕೆಗಳು ಯಾವಾಗ ಈಡೆರುತ್ತವೋ ಅವರಿಗೆ ನೆಮ್ಮದಿಯ ಜೀವನ ಸಾಗಿಸಲು ಇನ್ನು ಎಷ್ಟು ಕಾಲ ಕಾಯಬೇಕೋ? ಇದಕ್ಕೆಲ್ಲ ಆ ದೇವರೆ ಉತ್ತರ ಕೊಡಬೇಕು ಅಷ್ಟೇ.

Leave a Reply

error: Content is protected !!
LATEST
KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು ಗಂಭೀರ ಸ್ವರೂಪ ಪಡೆಯುತ್ತಿದೆ ದೆಹಲಿ ರೈತರ ಹೋರಾಟ: ನ.26ರಿಂದ ಉಪವಾಸ ಸತ್ಯಾಗ್ರಹ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಾಗರದಂತೆ ಬನ್ನಿ: ಮೀರಾ ಶಿವಲಿಂಗಯ್ಯ ಕರೆ SC, ST ಅಲೆಮಾರಿ ಸಮುದಾಯಗಳ ಯೋಜನೆಗಳು ಸದ್ಬಳಕೆ ಆಗಬೇಕು: ಡಿಸಿ ಶಿವಶಂಕರ