ಬಳ್ಳಾರಿ: ಇಂಧನ ದರ ಏರಿಕೆಯಾಗುತ್ತಿದ್ದು ಬಸ್ ಪ್ರಯಾಣದರ ಏರಿಸಬೇಕೆಂಬ ಪ್ರಸ್ತಾವನೆ ಸಂಸ್ಥೆಗಳಿಂದ ಬಂದಿದೆ. ಆದರೆ, ಇಂದಿನ ಕೊರೊನಾ ಸಂಕಷ್ಟದಲ್ಲಿ ಸಾಮಾನ್ಯ ಜನರು ಇರುವುದರಿಂದ ಸದ್ಯ ಬಸ್ ಪ್ರಯಾಣ ದರ ಏರಿಸುವುದಿಲ್ಲ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ತಿಳಿಸಿದ್ದಾರೆ.
ಸಾರಿಗೆ ನೌಕರರೊಂದಿಗೆ ಸೌಹಾರ್ದಯುತ ಭೇಟಿ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯ ಇಂಧನ ಬೆಲೆ ಏರಿಕೆ ಆಗಿರುವುದರಿಂದ. ಜತೆಗೆ ಕೊರೊನಾ ಕಾರಣದಿಂದ ಜನರು ಆತಂಕದಲ್ಲಿ ದಿನದೂಡುತ್ತಿದ್ದಾರೆ. ಹೀಗಾಗಿ ಜನರಿಗೆ ಯಾವುದೇ ರೀತಿಯ ಹೊರೆಯಾಗದಂತ ತೀರ್ಮಾನ ನಮ್ಮ ಸರ್ಕಾರದ್ದು ಎಂದು ಹೇಳಿದರು.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಹಳೆ ವಾಹನ ಗುಜರಿ ನೀತಿ ಒಳ್ಳೆಯದೆ. ಇದರಿಂದ ದೇಶದ ಪರಿಸರ ಸ್ವಚ್ಛವಾಗಿರಲಿದೆ ಎಂದು ಅಭಿಪ್ರಾಯಪಟ್ಟರು.
ನಾನು ನಿಮ್ಮ ಜತೆಗಿದ್ದೇನೆ, ವೇತನ ತಾರತಮ್ಯ ನಿವಾರಿಸಲಾಗುವುದು: ಸಾರಿಗೆ ನೌಕರರಿಗೆ ಸಚಿವ ಶ್ರೀರಾಮುಲು ಅಭಯ