NEWSನಮ್ಮರಾಜ್ಯರಾಜಕೀಯ

ಮೋದಿ ಜನಪ್ರೀಯತೆ ಹೆಚ್ಚಿಸಲು ಪ್ರಧಾನಿ ಕಚೇರಿಯಲ್ಲೇ  ಆರ್‌ಎಸ್‌ಎಸ್ ಸಭೆ: ಉಗ್ರಪ್ಪ ಆರೋಪ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಹೊಸಪೇಟೆ: ನರೇಂದ್ರ ಮೋದಿಯವರ ಜನಪ್ರಿಯತೆ ಶೇ.64ರಿಂದ ಶೇ 24ಕ್ಕೆ ಕುಸಿದಿದೆ ಎಂದು ಇತ್ತೀಚೆಗೆ ಖಾಸಗಿ ಸುದ್ದಿವಾಹಿನಿಯೊಂದು ನಡೆಸಿದ ಸಮೀಕ್ಷೆಯಲ್ಲಿಬಹಿರಂಗವಾಗಿದ್ದು, ಇದರಿಂದ ಚಿಂತಕ್ರಾಂತರಾಗಿರುವ ಆರ್‌ಎಸ್‌ಎಸ್ ನವರು ಪುನಃ ಮೋದಿ ವರ್ಚಸ್ಸು , ಜನಪ್ರಿಯತೆ ಹೆಚ್ಚಿಸಲು ಕಸರತ್ತು ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡ ವಿ.ಎಸ್. ಉಗ್ರಪ್ಪ ವ್ಯಂಗ್ಯವಾಡಿದ್ದಾರೆ.

ಸೋಮವಾರ ನಗರದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಏರ್ಪಡಿಸಿದ್ದ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನಾ ಸಭೆಯ ನಂತರ ಸುದ್ದಿ ಗಾರರೊಂದಿಗೆಮಾತನಾಡಿದರು.

ಅಲ್ಲದೇ ಪ್ರಧಾನಿ ನರೇಂದ್ರ ಮೋದಿಯವರ ವರ್ಚಸ್ಸು ಹೆಚ್ಚಿಸುವ ಸಂಬಂಧ ಇತ್ತೀಚೆಗೆ ಪ್ರಧಾನಿ ಕಚೇರಿಯಲ್ಲೇ ರಾಷ್ಟ್ರೀ ಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖಂಡರು ಸಭೆ ನಡೆಸಿದ್ದಾರೆ ಎಂದು ಉಗ್ರಪ್ಪ ಆರೋಪಿಸಿದರು.

ರಾವಣನ ಲಂಕೆಯಲ್ಲಿ ಪ್ರತಿ ಲೀಟರ್ ಪೆಟ್ರೋ ಲ್ ಬೆಲೆ 57 ರೂ.ಇದ್ದ ರೆ, ರಾಮನ ಜಪಮಾಡುವ ಭಾರತದಲ್ಲಿಅದರ ಬೆಲೆ  105 ರೂ.ಗಳ ಗಡಿ ದಾಟಿದೆ. ಇದು ಬಿಜೆಪಿಯ ರಾಮರಾಜ್ಯ ವೇ?’ ಹೀಗೆಂದು ಉಗ್ರಪ್ಪ ಪ್ರಶ್ನಿಸಿದ್ದಾರೆ.

ಸೀತೆಯ ನೇಪಾಳದಲ್ಲಿ ಪೆಟ್ರೋ ಲ್ ದರ ಲೀಟರ್‌ಗೆ 53 ರೂ. ನೆರೆಯ ಪಾಕಿಸ್ತಾನದಲ್ಲೂ ಅಷ್ಟೇ ಇದೆ ಎಂದು ಹೇಳಿದರು.

ಮನಮೋಹನ್ ಸಿಂಗ್ ಅವರು ಪ್ರಧಾನಿಯಿದ್ದಾಗ ಪೆಟ್ರೋಲ್, ಡೀಸೆಲ್ ದರ 70 ರೂ. ಗಡಿ ದಾಟಿರಲಿಲ್ಲ . ಪ್ರತಿ ಸಿಲಿಂಡರ್ ಬೆಲೆ 450 ರೂ. ಒಳಗೆ ಇತ್ತು . ಈಗ ಸಿಲಿಂಡರ್ ದರ ಸಾವಿರದ ಸನಿಹ ತಲುಪಿದೆ. ಅಡುಗೆ ಎಣ್ಣೆ ಬೆಲೆ,

ಅಗತ್ಯ ವಸ್ತುಗಳ ದರ ಸೇರಿದಂತೆ ಎಲ್ಲವೂ ಗಗನಕ್ಕೆ ಏರಿದೆ. ಆದರೆ, ಬಿಜೆಪಿಯವರು ಉಡಾಫೆಮಾತುಗಳನ್ನು ಆಡುತ್ತಿದ್ದಾರೆ. ಹಾಳುಗೆಡವಿರುವ ಆರ್ಥಿಕ ಸ್ಥಿ ತಿಯನ್ನು ಉತ್ತಮಗೊಳಿಸಬೇಕು ಎಂದು ಹಕ್ಕೊತ್ತಾಯ ಮಾಡಿದರು.

ಬಿಜೆಪಿ ರಾಷ್ಟ್ರೀ ಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ರಾಜ್ಯ ಘಟಕದ ಅಧ್ಯಕ್ಷ ನಳಿನ್ಕುಮಾರ್ ಕಟೀಲ್ ಅವರಿಗೆ ಬುದ್ಧಿಯಿಲ್ಲ. ಸದಾ ಸುಳ್ಳು ಮಾತುಗಳನ್ನು ಆಡುತ್ತಾರೆ. ಪ್ರ ತಿಯೊಂದರ ಮೇಲೆ ಕೇಂದ್ರ ಸರ್ಕಾರ ತೆರಿಗೆ ಹಾಕಿರುವುದರಿಂದ ಅಗತ್ಯ ವಸ್ತುಗಳ ಬೆಲೆ ಹೆಚ್ಚ ಳವಾಗಿದೆ. ಜನಸಾಮಾನ್ಯರು ಕಷ್ಟದಲ್ಲಿ ಬದುಕುತ್ತಿದ್ದಾರೆ.

ಅಂತಾರಾಷ್ಟ್ರೀ ಯಮಾರುಕಟ್ಟೆ ಯಲ್ಲಿ ಪೆಟ್ರೋ ಲ್ ದರ ತಗ್ಗಿ ದರೂ ನಮ್ಮ ದೇಶದಲ್ಲಿ ಇಳಿಕೆಮಾಡುತ್ತಿಲ್ಲ ಎಂದು ಆರೋಪಿಸಿದರು.

‘ಕೇಂದ್ರ , ರಾಜ್ಯ ಸರ್ಕಾರಗಳ ಬಳಿಯಾವುದೇಹೊಸಯೋಜನೆಗಳಿಲ್ಲ . ಕಾಂಗ್ರೆಸ್ ಜಾರಿಗೆ ತಂದಿರುವ ಯೋಜನೆಗಳ ಹೆಸರು ಬದಲಿಸಿ ತಮ್ಮ ದೆಂದು ಹೇಳಿಕೊಳ್ಳು ತ್ತಿದ್ದಾರೆ. ಇದು ಅವರು ಅಧೋಗತಿಗೆ ಇಳಿದಿರುವುದನ್ನು ತೋರಿಸುತ್ತದೆ.

ಜನಪರವಾದ ಒಂದು ಉತ್ತಮ ಕಾರ್ಯಕ್ರಮಮಾಡಲು ಆಗದ ಬಿಜೆಪಿಯವರು ಬೌದ್ಧಿಕವಾಗಿ ದಿವಾಳಿಯಾಗಿದ್ದಾರೆ ಎನ್ನುವುದು ಇದರಿಂದ ತಿಳಿಯಬಹುದು ಎಂದು ಹೇಳಿದರು.

ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ರಾಜ್ಯ ಅಧ್ಯ ಕ್ಷ ನಾರಾಯಣಸ್ವಾ ಮಿಮಾತನಾಡಿ, ಸಿದ್ದರಾಮಯ್ಯ ನವರುಮುಖ್ಯ ಮಂತ್ರಿಯಿದ್ದಾ ಗ ಪಂಚಾಯತ್ ರಾಜ್ ವ್ಯ ವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ತಂದು, ಶಕ್ತಿ ತುಂಬುವ ಕೆಲಸಮಾಡಿದ್ದರು.

ಆದರೆ, ಬಿಜೆಪಿಯವರು ಕುಂಟು ನೆಪ ಹೇಳಿ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆ ನಡೆಸಲು ಹಿಂದೇಟು ಹಾಕುತ್ತಿದ್ದಾರೆ. ಈ ವಿಷಯವಾಗಿ ಇತ್ತೀ ಚೆಗೆ ನ್ಯಾ ಯಾಲಯ ಕೂಡ ಛೀಮಾರಿ ಹಾಕಿದೆ. ಮಹಾನಗರ ಪಾಲಿಕೆಯ ಚುನಾವಣೆ ನಡೆಸಿದಂತೆ ಸ್ಥ ಳೀಯ ಸಂಸ್ಥೆ ಚುನಾವಣೆಗಳನ್ನು ಆದಷ್ಟು ಬೇಗ ನಡೆಸಬೇಕು ಎಂದು ಆಗ್ರಹಿಸಿದರು.

ಸಂಘಟನೆಯ ರಾಜ್ಯ ಸಂಚಾಲಕ ಡಿ.ಆರ್. ಪಾಟೀಲಮಾತನಾಡಿ, ಗ್ರಾಮ ಸ್ವ ರಾಜ್ಯ ಗಾಂಧೀಜಿಯವರ ಕನಸು. ಸ್ವಾ ತಂತ್ರ್ಯ ದ ಅಮೃತ ಮಹೋತ್ಸ ವದ ಸಂದರ್ಭದಲ್ಲಿ ಆ ಕನಸು ನನಸಾಗಬೇಕು. ಪಂಚಾಯಿತಿಗೆ ಹೆಚ್ಚಿನ ಅಧಿಕಾರ ಸಿಗಬೇಕು. ಆ ನಿಟ್ಟಿ ನಲ್ಲಿ ರಾಜ್ಯ ಸರ್ಕಾರ ಕೆಲಸಮಾಡಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ವಿಜಯ್ಸಿಂಗ್, ವೆಂಕಟರಾವ ಘೋರ್ಪಡೆ, ಬಿ.ವಿ. ಶಿವಯೋಗಿ, ಮೊಹಮ್ಮದ್ ಇಮಾಮ್ನಿಯಾಜಿ, ವಿ. ಸೋಮಪ್ಪ , ಸಿ. ಬಸವರಾಜ, ಗುಜ್ಜಲ್ ನಾಗರಾಜ್, ನಿಂಬಗಲ್ ರಾಮಕೃಷ್ಣ ಇದ್ದರು.

Leave a Reply

error: Content is protected !!
LATEST
"ಲೋಕಾ"ವಿಚಾರಣೆ ಬಳಿಕ ಮುಗುಳ್ನಗುತ್ತಲೇ ಹೊರ ಬಂದ ಸಿಎಂ ಸಿದ್ದರಾಮಯ್ಯ ಸಿಎಂ ರಾಜೀನಾಮೆಗೆ ಆಗ್ರಹಿಸಿ ಕೇಸರಿ ಪಡೆಯಿಂದ “ಗೋ ಬ್ಯಾಕ್ ಸಿಎಂ ಚಳವಳಿ” LMV ಡಿಎಲ್‌ ಇರುವವರು 7,500 ಕೆಜಿಗಿಂತ ಕಡಿಮೆ ತೂಕದ ಸಾರಿಗೆ ವಾಹನ ಚಲಾಯಿಸಲು ಅರ್ಹರು: ಕೋರ್ಟ್‌ ಆದೇಶ NWKRTC ಕಲಘಟಗಿ ಘಟಕಕ್ಕೆ ಎಂಡಿ ಪ್ರಿಯಾಂಗಾ ಭೇಟಿ: ನೌಕರರ ಕುಂದುಕೊರತೆ ಆಲಿಕೆ BMTC ಸಾಥ್‌ನಿಂದ ಒಂದೇದಿನದಲ್ಲಿ 5.59 ಕೋಟಿ ರೂ. ಆದಾಯ ಗಳಿಸಿದ KSRTC KSRTC: ಆದಾಯ ಸಂಗ್ರಹಣೆಯಲ್ಲಿ 2ನೇ ಘಟಕ ಪ್ರಥಮ- ಪ್ರತಿಯೊಬ್ಬ ಸಿಬ್ಬಂದಿಗೂ ಧನ್ಯವಾದ ತಿಳಿಸಿದ ಸಾರಿಗೆ ಸಚಿವರು, ಅಧಿಕಾರ... ರಾಜಿಯಾಗಿದೆ ಅಂದರೂ KSRTC ಡ್ರೈವರ್‌ಗೆ 7 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು 2 ಸಾವಿರ ರೂ. ಕೊಟ್ಟಮೇಲೆ ಬಸ್‌ ಬಿಟ್ಟ ಪೊಲೀ... KSRTC ನಿವೃತ್ತ ನೌಕರರ ಕನಿಷ್ಠ ಪಿಂಚಣಿ ಪಡೆಯುವ ಹೋರಾಟಕ್ಕೆ ಅತೀ ಶೀಘ್ರದಲ್ಲೇ ಸಿಗಲಿದೆ ಫಲ: ನಂಜುಂಡೇಗೌಡ 2 ಸಾವಿರ ರೂ. ಲಂಚಕೊಟ್ಟ ಮೇಲೆ 6ಗಂಟೆ ಬಳಿಕ ಕಾರು-KSRTC ಬಸ್‌ ಬಿಟ್ಟು ಕಳಿಸಿದ ಮೈಸೂರು ಸಂಚಾರಿ ಪೊಲೀಸರು ಹಾಸನಾಂಬೆ ದೇವಿ ಉತ್ಸವದ 9ದಿನಗಳಲ್ಲಿ ದಾಖಲೆಯ ₹12,63,83,808 ಆದಾಯ ಸಂಗ್ರಹ