ಬೆಂಗಳೂರು: ಸಿಮೆಂಟ್ ಮಾರಾಟವಾಗುತ್ತಿರುವ ಮಾದರಿಯಲ್ಲಿಯೇ ಇನ್ನು ಮುಂದೆ ಮರಳನ್ನೂ ಸಹ ಪ್ಯಾಕಿಂಗ್ (ಮೂಟೆಯಲ್ಲಿ) ನಲ್ಲಿ ಮಾರಾಟ ಮಾಡಲು ಗಣಿ ಮತ್ತು ಭೂವಿಜ್ಞಾನ ಇಲಾಖೆ ಹೊಸ ಐಡಿಯಾ ಮಾಡಿದೆ.
ಮರಳು ವೇಸ್ಟ್ ಆಗುವ ನಷ್ಟ ಅನುಭವಿಸುವವರಿಗೆ ಇದು ಪ್ರಯೋಜನಕಾರಿಯಾಗಲಿದೆ. ಸಿಮೆಂಟ್ ಚೀಲದಂತೆಯೇ ಮರಳು ಚೀಲಗಳನ್ನು ಮಾರುಕಟ್ಟೆಗೆ ತರಲು ಇಲಾಖೆ ತೀರ್ಮಾನ ಮಾಡಿದೆ. 50 ಕೆ.ಜಿ. ಯ ಮರಳಿನ ಪ್ಯಾಕ್, 100 ಕೆ.ಜಿ. ಮರಳಿನ ಪ್ಯಾಕ್ ತಯಾರಿಕೆಗೆ ನಿರ್ಧಾರ ಮಾಡಲಾಗಿದೆ. ಇದರಿಂದ ಶೇ. 30 ರಷ್ಟು ಮರಳು ನಷ್ಟವಾಗುವ ಸಂಭವ ಕಡಿಮೆಯಾಗಲಿದೆ ಎಂದು ಆಲೋಚಿಸಿದೆ.
ಇನ್ನು, ರಸ್ತೆಗಳಲ್ಲಿ ಚೆಲ್ಲಾಪಿಲ್ಲಿಯಾಗುವ ಮರಳನ್ನು ಸಂರಕ್ಷಿಸಿ, ಬಳಸಲು ಸಾಧ್ಯವಿದೆ. ರಾಜ್ಯದ ಐದು ಕಡೆಗಳಲ್ಲಿ ಮರಳು ಪ್ಯಾಕಿಂಗ್ ಯುನಿಟ್ ಗಳ ನಿರ್ಮಾಣವಾಗಲಿದೆ. ಪ್ರಾಯೋಗಿಕ ಯಶಸ್ಸು ಸಿಕ್ಕಿದರೆ ಮುಂದೆ ರಾಜ್ಯಾದ್ಯಂತ ಮರಳಿನ ಪ್ಯಾಕೆಟ್ ಮಾರುಕಟ್ಟೆಗೆ ಬಿಡುಗಡೆ ಮಾಡಲು ಇಂದು ಇಲಾಖೆ ಅಧಿಕಾರಿಗಳ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಮಾಹಿತಿ ನೀಡಿದರು.
ಆದರೆ ಈ ಬಗ್ಗೆ ರಾಜ್ಯದ ಜನರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುವುದನ್ನು ಕಾದು ನೋಡಬೇಕಿದೆ.