ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಚಿವ ಸಂಪುಟಕ್ಕೆ 29 ಶಾಸಕರು ಇಂದು ಅಪರಾಹ್ನ 2.15 ರಿಂದ 3.26ರವರೆಗೆ ರಾಜಭವನದ ಗಾಜಿನ ಮನೆಯಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ನೂತನ ಸಚಿವರಾಗಿ ಮೊದಲಿಗೆ ಗೋವಿಂದ ಕಾರಜೋಳ ಅವರು ಪ್ರಮಾಣ ವಚನ ಸ್ವೀಕರಿಸಿದ್ದು ಆರ್.ಆರ್.ನಗರ ಶಾಸಕ ಮುನಿರತ್ನ ಅವರು 29ನೆಯವರಾಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಸಮಾರಂಭ ಪೂರ್ಣಗೊಂಡಿತು.
ಮೊದಲಿಗೆ ಗೋವಿಂದ ಕಾರಜೋಳ-ಮುಧೋಳ, ಬಳಿಕ ಕೆ.ಎಸ್.ಈಶ್ವರಪ್ಪ -ಶಿವಮೊಗ್ಗ, ಆರ್.ಅಶೋಕ್- ಪದ್ಮನಾಭ ನಗರ, ಬಿ.ಶ್ರೀ ರಾಮುಲು- ಮೊಳಕಾಲ್ಮೂರು, ವಿ ಸೋಮಣ್ಣ – ಗೋವಿಂದರಾಜನಗರ, ಉಮೇಶ್ ಕತ್ತಿ- ಹುಕ್ಕೇರಿ, ಎಸ್ ಅಂಗಾರ-ಸುಳ್ಯ.
ಮಾಧುಸ್ವಾಮಿ- ಚಿಕ್ಕನಾಯಕನಹಳ್ಳಿ, ಅರಗ ಜ್ಞಾನೇಂದ್ರ – ತೀರ್ಥಹಳ್ಳಿ, ಡಾ.ಸಿ.ಎನ್.ಅಶ್ವತ್ಥ ನಾರಾಯಣ – ಮಲ್ಲೇಶ್ವರ, ಸಿ.ಸಿ.ಪಾಟೀಲ್ – ನರಗುಂದ, ಆನಂದ್ ಸಿಂಗ್ – ಹೊಸಪೇಟೆ, ಕೋಟಾ ಶ್ರೀನಿವಾಸ ಪೂಜಾರಿ – ಎಂಎಲ್‍ಸಿ, ಪ್ರಭು ಚೌವ್ಹಾಣ್ – ಔರಾದ್.
ಮುರುಗೇಶ್ ನಿರಾಣಿ – ಬೀಳಗಿ, ಶಿವರಾಂ ಹೆಬ್ಬಾರ್- ಯಲ್ಲಾಪುರ, ಎಸ್.ಟಿ.ಸೋಮಶೇಖರ್- ಯಶವಂತಪುರ, ಬಿ.ಸಿ.ಪಾಟೀಲ್ – ಹಿರೇಕೆರೂರು, ಬೈರತಿ ಬಸವರಾಜ – ಕೆ. ಆರ್. ಪುರಂ, ಡಾ.ಕೆ.ಸುಧಾಕರ್ – ಚಿಕ್ಕಬಳ್ಳಾಪುರ, ಗೋಪಾಲಯ್ಯ- ಮಹಾಲಕ್ಷ್ಮಿ ಲೇಔಟ್.
ಶಶಿಕಲಾ ಜೊಲ್ಲೆ- ನಿಪ್ಪಾಣಿ, ಎಂ.ಟಿ.ಬಿ ನಾಗರಾಜ್ – ಎಂಎಲ್‍ಸಿ, ಕೆ.ಸಿ. ನಾರಾಯಣಗೌಡ – ಕೆ.ಆರ್. ಪೇಟೆ, ಬಿ.ಸಿ.ನಾಗೇಶ್ – ತಿಪಟೂರು, ವಿ.ಸುನೀಲ್ ಕುಮಾರ್ – ಕಾರ್ಕಳ, ಹಾಲಪ್ಪ ಆಚಾರ್ – ಯಲ್ಬುರ್ಗ, ಶಂಕರ್ ಪಾಟೀಲ್ ಮುನೇನಕೊಪ್ಪ – ನವಲುಗುಂದ, ಮುನಿರತ್ನ- ಆರ್. ಆರ್. ನಗರ ಅವರು ಪ್ರಮಾಣ ವಚನ ಸ್ವೀಕರಿಸಿದರು.