NEWSನಮ್ಮರಾಜ್ಯ

ವಜಾ ಆದೇಶ ಹಿಂಪಡೆಯಲು ಒತ್ತಾಯಿಸಿ ಇಂದು ಸಾರಿಗೆ ಸಚಿವರಿಗೆ ಸಾವಿರಾರು ನೌಕರರಿಂದ ಮನವಿ ಸಲ್ಲಿಕೆ ಕಾರ್ಯಕ್ರಮ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಸಾರಿಗೆಯ ವಜಾ, ಅಮಾನತು, ವರ್ಗಾವಣೆ ಆದ ನೌಕರರು ಇಂದು (ಸೆ.5) ಬೆಳಗ್ಗೆ ಸಚಿವ ಶ್ರೀರಾಮುಲು ಅವರ ಮನೆಯ ಹತ್ತಿರ ಹಮ್ಮಿಕೊಂಡಿದ್ದ ಮನವಿ ಪತ್ರ ಸಲ್ಲಿಸುವ ಕಾರ್ಯಕ್ರಮ ಕಾರಣಾಂತರಗಳಿಂದ ಮೌರ್ಯ ಸರ್ಕಲ್ ಗಾಂಧಿ ಪ್ರತಿಮೆ ಬಳಿಗೆ ಸ್ಥಳಾಂತರಗೊಂಡಿದೆ. ಎಲ್ಲಾ ನೌಕರರು ಬೆಳಗ್ಗೆ 8.30 ಗಂಟೆಗೆ ಇಲ್ಲಿ ಸೇರಬೇಕು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ ಮನವಿ ಮಾಡಿದೆ.

ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳಲ್ಲಿ ಮುಷ್ಕರದ ವೇಳೆ ವಜಾ ಮಾಡಿರುವ ನೌಕರರನ್ನು ಇನ್ನೂ ಕರ್ತವ್ಯಕ್ಕೆ ತೆಗೆದುಕೊಂಡಿಲ್ಲ. ಹೀಗಾಗಿ ವಜಾಗೊಂಡಿರುವ ನೌಕರರನ್ನು ವಜಾ ಆದೇಶ ಹೊರಡಿಸಿದ 6ತಿಂಗಳ ಒಳಗಾಗಿ ಮತ್ತೆ ಅವರ ಪ್ರಕರಣವನ್ನು ವಾಪಸ್‌ ಪಡೆದು ಕರ್ತವ್ಯಕ್ಕೆ ತೆಗೆದುಕೊಳ್ಳಬೇಕಿತ್ತು. ಈ ಬಗ್ಗೆ ಸಚಿವರು ಭರವಸೆಯನ್ನೂ ನೀಡಿದ್ದರು.

ಆದರೆ, ನೌಕರರನ್ನು ವಜಾ ಮಾಡಿ ಇದೇ ಅಕ್ಟೋಬರ್‌ 8ರಿಂದ ಹಂತಹಂತವಾಗಿ ಆರು ತಿಂಗಳುಗಳು ಮೀರಲಿದೆ. ಹೀಗಿದ್ದರೂ ನಿಗಮಗಳು ಈ ವಜಾ ಮಾಡಿರುವ ನೌಕರರನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳುವಂತ ಯಾವುದೇ ಸೂಚನೆಗಳು ಸದ್ಯದ ಮಟ್ಟಿಗೆ ಕಾಣಿಸುತ್ತಿಲ್ಲ. ಹೀಗಾಗಿ ವಜಾಗೊಂಡಿರುವ ಎಲ್ಲ ನೌಕರರು ಇಂದು ಸಚಿವ ಶ್ರೀರಾಮುಲು ಅವರಿಗೆ ವಜಾ ಮಾಡಿರುವುದನ್ನು ವಾಪಸ್‌ ಪಡೆಯುವಂತೆ ಮನವಿ ಪತ್ರ ಸಲ್ಲಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.

ಮುಷ್ಕರದ ವೇಳೆ ವಜಾಗೊಂಡಿರುವ ಸುಮಾರು 2,156 ಸಾರಿಗೆ ನೌಕರರು ಸರ್ಕಾರ ಮತ್ತು ಸಾರಿಗೆ ನಿಗಮಗಳ ವಿಳಂಬ ದೋರಣೆಯಿಂದ ತ್ರಿಶಂಕುಸ್ಥಿತಿಯಲ್ಲಿದ್ದು, ವಿಧಿ ಇಲ್ಲದೆ ಲೇಬರ್‌ ಕೋರ್ಟ್‌ ಕದತಟ್ಟುವಂತಾಗಿದೆ. ಹೀಗಾಗಿ  ಈಗ ಕಾರ್ಮಿಕ ನ್ಯಾಯಾಲಯ (ಲೇಬರ್‌ ಕೋರ್ಟ್‌)ದ ಮೊರೆ ಹೋಗುವುದು ಅನಿವಾರ್ಯವಾಗುತ್ತಿದೆ.

ಈ ಹಿಂದಿನಿಂದಲೂ ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರು ವಜಾಗೊಂಡಿರುವ ನೌಕರರು ಸೇರಿದಂತೆ ಎಲ್ಲ ನೌಕರರನ್ನು 10ದಿನದೊಳಗಾಗಿ ವಾಪಸ್‌ ತೆಗೆದುಕೊಳ್ಳುತ್ತೇವೆ ಎಂದು ಹೇಳಿಕೊಂಡೇ ಬಂದಿದ್ದಾರೆ. ಸಚಿವರ ಹೇಳಿದ ಹತ್ತು, ಹತ್ತು ದಿನಗಳು ಹಲವು ಬಾರಿ ಉರುಳಿ ಹೋಗಿವೆ, ಇನ್ನೂ ಉರುಳುತ್ತಲೇ ಇವೆ. ಆದರೆ ನೌಕರರ ಮೇಲಿನ ವಜಾ ಆದೇಶವನ್ನು ಮಾತ್ರ ರದ್ದು ಮಾಡಿ ಕೆಲಸಕ್ಕೆ ತೆಗೆದುಕೊಂಡಿಲ್ಲ.

ಇನ್ನು ಇಲ್ಲಿಯವರೆಗೂ ಸಚಿವರು ಮತ್ತು ಸರ್ಕಾರ ಒಂದು ಒಳ್ಳೆಯ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ನಂಬಿದ್ದ ವಜಾಗೊಂಡ ನೌಕರರು ಈಗ ವಿಧಿಯಿಲ್ಲದೆ ಲೇಬರ್‌ ಕೋರ್ಟ್‌ ಮೊರೆ ಹೋಗಬೇಕಿದೆ.

ಹೀಗೆ ಲೇಬರ್‌ ಕೋರ್ಟ್‌ಗೆ ನೌಕರರು ಹೋಗುತ್ತಿರುವುದರಿಂದ ಅವರಿಗೆ ಇನ್ನಷ್ಟು ಆರ್ಥಿಕ ಹೊರೆ ಬೀಳುತ್ತಿದೆ. ಈ ಹೊರೆಯನ್ನು ಸಚಿವರು ತಪ್ಪಿಸಬಹುದಿತ್ತು. ಆದರೆ ಅವರು ದಿನ ದೂಡುವುದರಲ್ಲೇ ಕಾಲ ಕಳೆಯುತ್ತಿರುವುದರಿಂದ ನೌಕರರು ಮಾಡದ ತಪ್ಪಿಗೆ ಪರಿತಪ್ಪಿಸುವಂತಾಗಿದೆ.

ಈಗಲಾದರೂ ವಜಾಗೊಂಡಿರುವ ಎಲ್ಲ ನೌಕರರ ವಜಾ ಆದೇಶವನ್ನು ರದ್ದು ಮಾಡುತ್ತೇವೆ ಯಾರು ಲೇಬರ್‌ ಕೋರ್ಟ್‌ ಮೊರೆ ಹೋಗಬೇಡಿ ಎಂದು ವಜಾ ಆದೇಶ ರದ್ದು ಮಾಡಿದರೆ ನೌಕರರಿಗೆ ಸದ್ಯ ಆಗುತ್ತಿರುವ ಆರ್ಥಿಕ ಹೊರೆಯನ್ನು ಸಚಿವರು ತಪ್ಪಿಸಬಹುದು.

ಇನ್ನು ಇಂದು ಹಮ್ಮಿಕೊಂಡಿರುವ ಸಚಿವರಿಗೆ ಮನವಿ ಪತ್ರ ಸಲ್ಲಿಸುವ ಕಾರ್ಯಕ್ರಮದಲ್ಲಿ ವಜಾಗೊಂಡಿರುವ ನೌಕರರು ಸೇರಿದಂತೆ ಸಾವಿರಾರು ಸಾರಿಗೆ ನೌಕರರು ಭಾಗವಹಿಸುತ್ತಿದ್ದು, ಪೊಲೀಸರು ಬಿಗಿ ಭದ್ರತೆ ವಹಿಸುತ್ತಿದ್ದಾರೆ.

Leave a Reply

error: Content is protected !!
LATEST
KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು ಗಂಭೀರ ಸ್ವರೂಪ ಪಡೆಯುತ್ತಿದೆ ದೆಹಲಿ ರೈತರ ಹೋರಾಟ: ನ.26ರಿಂದ ಉಪವಾಸ ಸತ್ಯಾಗ್ರಹ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಾಗರದಂತೆ ಬನ್ನಿ: ಮೀರಾ ಶಿವಲಿಂಗಯ್ಯ ಕರೆ SC, ST ಅಲೆಮಾರಿ ಸಮುದಾಯಗಳ ಯೋಜನೆಗಳು ಸದ್ಬಳಕೆ ಆಗಬೇಕು: ಡಿಸಿ ಶಿವಶಂಕರ