NEWSನಮ್ಮರಾಜ್ಯ

ಸಾರಿಗೆ ಕರ್ಮಕಾಂಡ: ಒಂದೂವರೆ ತಿಂಗಳ ಸಂಬಳವನ್ನೂ ನೀಡಿಲ್ಲ; ಸಾಲಮಾಡಿಯಾದ್ರು ಹಬ್ಬ ಮಾಡೋಣ ಎಂದರೆ ಅಧಿಕಾರಿಗಳು ರಜೆಕೊಡ್ತಿಲ್ಲ

200-300 ರೂ. ಕೊಟ್ಟವರಿಗೆ ರಜೆ ಮಂಜೂರು ಮಾಡಿಸುವ ದಲ್ಲಾಳಿಗಳು l ದಲ್ಲಾಳಿಗಳ ಮೂಲಕ ದಂಧೆಗೆ ಇಳಿದ ಕೆಲ ಅಧಿಕಾರಿಗಳು

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಹಾವೇರಿ: ವಾಯುವ್ಯ ಸಾರಿಗೆ ಸಂಸ್ಥೆ, ಹಾವೇರಿ ವಿತಂತ್ರಾಂಶದಲ್ಲಿ ಸಾರಿಗೆ ನೌಕರರು ರಜೆ ಪಡೆಯದಂತೆ ನೌಕರರನ್ನು ಹಿಂಸಿಸುತ್ತಿದ್ದಾರೆ ಎಂಬ ಆರೋಪ ನೌಕರರಿಂದ ಕೇಳಿ ಬಂದಿದೆ.

ಅದರಲ್ಲೂ ಪ್ರಮುಖವಾಗಿ ಹಾನಗಲ್‌ ಘಟಕದಲ್ಲಿ ಸಂಚಾರ ನಿರೀಕ್ಷ ಎನ್‌.ವಿ.ಚೌಹಾಣ್ ತಂತ್ರಾಂಶದಲ್ಲಿ ಸಾರಿಗೆ ನೌಕರರು ರಜೆ ಪಡೆಯದಂತೆ ಸೆಟ್‌ ಮಾಡುವ ಮೂಲಕ ನೌಕರರನ್ನು ಹಿಂಸಿಸುತ್ತಿದ್ದಾರೆ ಎಂದು ನೌಕರರು ದೂರಿದ್ದಾರೆ.

ಆಗಸ್ಟ್‌ ತಿಂಗಳಿನ ಅರ್ಧ ಸಂಬಳವಷ್ಟೇ ಬಂದಿದೆ. ಇನ್ನು ಅದರ ಜತೆಗೆ ಸೆಪ್ಟೆಂಬರ್‌ ತಿಂಗಳ ವೇತನವೂ ಸೇರಿದರೆ ಒಟ್ಟು ಒಂದೂವರೆ ತಿಂಗಳ ವೇತನ ಕೊಡಬೇಕು. ಆದರೆ ನಿಗಮಗಳಲ್ಲಿ ಸಂಬಳ ಕೊಡಲು ಹಣವಿಲ್ಲ ಎನ್ನುವ ಆಡಳಿತ ವರ್ಗ, ಸರ್ಕಾರದಿಂದ ವೇತನಕ್ಕೆ ಹಣ ಬಿಡುಗಡೆಯಾಗಬೇಕಿದೆ ಎಂದು ಹೇಳಿಕೆ ನೀಡುವ ಮೂಲಕ ತಮ್ಮ ಜವಾಬ್ದಾರಿಯಿಂದ ಜಾರಿಕೊಳ್ಳುತ್ತಿದ್ದಾರೆ.

ಅದು ಹಾಳಾಗಿ ಹೋಗಲಿ ನೀವು ಹಬ್ಬಕ್ಕೆ ಸಂಬಳವನ್ನು ನೀಡಿಲ್ಲ ಸಾಲಮಾಡಿಯಾದರೂ ಹಬ್ಬ ಮಾಡೋಣ ರಜೆ ಕೊಡಿ ಎಂದರೆ ಅಧಿಕಾರಿಗಳು ಕೊಡುತ್ತಿಲ್ಲ  ಎಂದು ಅಸಮಾಧಾನ ಹೊರಹಾಕಿದ್ದಾರೆ.

ಸಾರಿಗೆ ಸಂಸ್ಥೆ ಕೇಂದ್ರ ಕಚೇರಿಯಿಂದ 30:08:2021 ರಂದು LMS ರಜೆಯನ್ನು ಪ್ರಾರಂಭಿಕ ಸಿಬ್ಬಂದಿಗೆ ರಜೆ ಪಡೆಯಲು ಅನುಕೂಲಮಾಡಿಕೊಡಿ ಎಂದು ಈ ಮಾಹಿತಿಯನ್ನು ನೌಕರರಿಗೆ ತಿಳಿಯುವಂತೆ ಸೊಚನ ಪಲಕದಲ್ಲಿ 20:09:2021ಕ್ಕೆ ಹಾಕಿ ಮಾಹಿತಿ ನೀಡಬೇಕು ಎಂದು ಸೂಚನೆ ನೀಡಲಾಗಿದೆ.

25:09:2021 ರಿಂದ LMS (leave management system) ಸಂಪೂರ್ಣ ಚಾಲ್ತಿಯಲ್ಲಿ ಇರಬೇಕು ಎಂದು ಆದೇಶ ವಿದ್ದರೂ ನೌಕಕರನ್ನು ಹಿಂಸಿಸಲೆಂದೆ ಲಂಚ ಪಡೆಯುವ ಉದ್ದೇಶದಿಂದ ತಂತ್ರಾಂಶದಲ್ಲಿ ನೌಕರರ ಹಾಜರಾತಿ ತುಂಬದೆ ಕುಂಟು ನೆಪಹೇಳಿ ಕಾಲಕಳೆಯುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ನೌಕರರು ರಜೆ ಪಡೆಯ ಬೇಕಾದರೆ ಘಟಕದ ಬ್ರೋಕರ್ ಗಳ ಹಿಂದೆ ಹೋಗಿ ನನಗೆ 2ದಿನ ರಜೆ ಕೋಡ್ಸಿ ಅಂತ ಬೇಡಬೇಕು, ಜತೆಗೆ ದಿನಕ್ಕೆ 200-300 ರೂ.ಕೊಟ್ಟು ರಜೆ ಪಡೆಯುವ ಹಾಗೆ ಅಧಿಕಾರಿಗಳೇ ವಾತಾವರಣ ಸೃಷ್ಟಿಸುತ್ತಿದ್ದಾರೆ.

ಇತ್ತಾ ಹಬ್ಬಕ್ಕೆ ಸರಿಯಾಗಿ ಸಂಬಳ ಇಲ್ಲ, ಸಾಲಮಾಡಿ ಹಬ್ಬಮಾಡಲು ಅಧಿಕಾರಿಗಳು ಬಿಡ್ತಾ ಇಲ್ಲಾ ಏನು ಮಾಡೋದು ಎಂದು ನೌಕರರು ಅಳಲು ತೋಡಿಕೊಂಡಿದ್ದಾರೆ.

Leave a Reply

error: Content is protected !!
LATEST
"ಲೋಕಾ"ವಿಚಾರಣೆ ಬಳಿಕ ಮುಗುಳ್ನಗುತ್ತಲೇ ಹೊರ ಬಂದ ಸಿಎಂ ಸಿದ್ದರಾಮಯ್ಯ ಸಿಎಂ ರಾಜೀನಾಮೆಗೆ ಆಗ್ರಹಿಸಿ ಕೇಸರಿ ಪಡೆಯಿಂದ “ಗೋ ಬ್ಯಾಕ್ ಸಿಎಂ ಚಳವಳಿ” LMV ಡಿಎಲ್‌ ಇರುವವರು 7,500 ಕೆಜಿಗಿಂತ ಕಡಿಮೆ ತೂಕದ ಸಾರಿಗೆ ವಾಹನ ಚಲಾಯಿಸಲು ಅರ್ಹರು: ಕೋರ್ಟ್‌ ಆದೇಶ NWKRTC ಕಲಘಟಗಿ ಘಟಕಕ್ಕೆ ಎಂಡಿ ಪ್ರಿಯಾಂಗಾ ಭೇಟಿ: ನೌಕರರ ಕುಂದುಕೊರತೆ ಆಲಿಕೆ BMTC ಸಾಥ್‌ನಿಂದ ಒಂದೇದಿನದಲ್ಲಿ 5.59 ಕೋಟಿ ರೂ. ಆದಾಯ ಗಳಿಸಿದ KSRTC KSRTC: ಆದಾಯ ಸಂಗ್ರಹಣೆಯಲ್ಲಿ 2ನೇ ಘಟಕ ಪ್ರಥಮ- ಪ್ರತಿಯೊಬ್ಬ ಸಿಬ್ಬಂದಿಗೂ ಧನ್ಯವಾದ ತಿಳಿಸಿದ ಸಾರಿಗೆ ಸಚಿವರು, ಅಧಿಕಾರ... ರಾಜಿಯಾಗಿದೆ ಅಂದರೂ KSRTC ಡ್ರೈವರ್‌ಗೆ 7 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು 2 ಸಾವಿರ ರೂ. ಕೊಟ್ಟಮೇಲೆ ಬಸ್‌ ಬಿಟ್ಟ ಪೊಲೀ... KSRTC ನಿವೃತ್ತ ನೌಕರರ ಕನಿಷ್ಠ ಪಿಂಚಣಿ ಪಡೆಯುವ ಹೋರಾಟಕ್ಕೆ ಅತೀ ಶೀಘ್ರದಲ್ಲೇ ಸಿಗಲಿದೆ ಫಲ: ನಂಜುಂಡೇಗೌಡ 2 ಸಾವಿರ ರೂ. ಲಂಚಕೊಟ್ಟ ಮೇಲೆ 6ಗಂಟೆ ಬಳಿಕ ಕಾರು-KSRTC ಬಸ್‌ ಬಿಟ್ಟು ಕಳಿಸಿದ ಮೈಸೂರು ಸಂಚಾರಿ ಪೊಲೀಸರು ಹಾಸನಾಂಬೆ ದೇವಿ ಉತ್ಸವದ 9ದಿನಗಳಲ್ಲಿ ದಾಖಲೆಯ ₹12,63,83,808 ಆದಾಯ ಸಂಗ್ರಹ