NEWSನಮ್ಮರಾಜ್ಯರಾಜಕೀಯ

ಮಧ್ಯಂತರ ಚುನಾವಣೆಗೆ ಹೋಗುವ ಯೋಚನೆ ನಮಗಿಲ್ಲ: ಮಾಜಿ ಪ್ರಧಾನಿ ಎಚ್‌ಡಿಡಿ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ನಮ್ಮ ಸಹಕಾರ ಇರುತ್ತೆ. ಕೇಂದ್ರ ಸರ್ಕಾರದಿಂದ ಸಮಸ್ಯೆ ಇಲ್ಲ ಅಂದ್ರೆ ನಾವು ರಾಜ್ಯಸಭೆಯಲ್ಲೂ ಸಹಕಾರ ಕೊಡುತ್ತೇವೆ ಎಂದು ಮಾಜಿ ಪ್ರಧಾನ ಮಂತ್ರಿ ದೇವೇಗೌಡ ಹೇಳಿದ್ದಾರೆ.

ಸಿಎಂ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಪದ್ಮನಾಭನಗರದ ನಿವಾಸಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅವರನ್ನು ತೆಗಿಬೇಕು ಅಂತಾ ನಾವು ಹೇಳಿಲ್ಲ. 75 ವರ್ಷ ಅಂತಾ ನಿಬಂಧನೆ ಇದೆ ಅಂತಾ ಅವರ ಪಕ್ಷದವರು ಮನವಿ ಮಾಡಿದ್ದಾರೆ. ಅದಕ್ಕೆ ಯಡಿಯೂರಪ್ಪ ಅವರು ರಾಜೀನಾಮೆ ಕೊಟ್ಟಿದ್ದಾರೆ. ಇದೀಗ ಬೊಮ್ಮಾಯಿ ಅವರು ನೂತನ ಸಿಎಂ ಆಗಿದ್ದಾರೆ. ಇವರಿಗೆ ನಮ್ಮ ಸಹಕಾರ ಇರುತ್ತೆ ಎಂದು ತಿಳಿಸಿದರು.

ಇನ್ನು ಸದ್ಯ ಮಧ್ಯಂತರ ಚುನಾವಣೆಗೆ ಹೋಗುವ ಯೋಚನೆ ನಮಗಿಲ್ಲ. ಈಗ ಜಿಪಂ, ತಾಪಂ ಚುನಾವಣೆ ಬರುತ್ತಿದೆ. ಆ ನಂತರ ಚುನಾವಣೆ ಬಂದೇ ಬಿಡುತ್ತೆ ಎಂದರು.

ನೀರಾವರಿ ಹೋರಾಟದ ವಿಚಾರಕ್ಕೆ ನಮ್ಮ ಬೆಂಬಲವಿರುತ್ತದೆ. ದೆಹಲಿ ಸೇರಿದಂತೆ ಎಲ್ಲ ಕಡೆ ಓಡಾಡಲು ನನಗೆ ಆಗುವುದಿಲ್ಲ. ನನ್ನ ಮೊಮ್ಮಗ ಪ್ರಜ್ವಲ್ ರೇವಣ್ಣ ಸಂಸದನಿದ್ದಾನೆ, ಅವರು ಹೋರಾಟಗಳಿಗೆ ಆಗಮಿಸುತ್ತಾರೆ ಎಂದು ಹೇಳಿದರು.

ಸಿಎಂ ಬಸವರಾಜ ಬೊಮ್ಮಾಯಿ ಅವರ ತಂದೆ ಎಸ್.ಆರ್.ಬೊಮ್ಮಾಯಿ ಮತ್ತು ನಾನು ಒಟ್ಟಿಗಿದ್ದೆವು. ಜನತಾ ಪರಿವಾರದಲ್ಲಿದ್ದರಿಂದ ಭೇಟಿಗೆ ಬರುವುದಾಗಿ ಹೇಳಿದ್ದರು. ಅಂತೆಯೇ ಭೇಟಿಯಾಗಿದ್ದಾರೆ. ಆಶೀರ್ವಾದ ಪಡೆಯಲು ಮನೆಗೆ ಬಂದಿದ್ದರು. ರಾಜ್ಯಕ್ಕೆ ಒಳ್ಳೆಯ ಕೆಲಸ ಮಾಡಿ ಎಂದು ಹೇಳಿದ್ದೇನೆ. ಸರ್ಕಾರದ ಒಳ್ಳೆಯ ಕೆಲಸಗಳಿಗೆ ನಮ್ಮ ಸಹಕಾರ ಇರುತ್ತದೆ ಎಂದು ತಿಳಿಸಿದ್ದೇನೆ ಎಂದರು.

ದೆಹಲಿಯಲ್ಲಿ ಇದ್ದಾಗ ನಿಮ್ಮ ಭೇಟಿಗೆ ಬರುತ್ತೇನೆ ಎಂದು ಬೊಮ್ಮಾಯಿ ಹೇಳಿದ್ದರು. ಆಗ ಸಾಕಷ್ಟು ಬಿಸಿ ಶೆಡ್ಯೂಲ್ ಇತ್ತು ಆಗಲಿಲ್ಲ ಇವತ್ತು ಭೇಟಿಗೆ ಸಮಯವಕಾಶ ನಿಗದಿಮಾಡಲಾಗಿತ್ತು. ಕೆಳಗೆ ಇಳಿದು ಹತ್ರ ಹೋಗಿ ಸ್ವಾಗತ ಮಾಡಲು ಆಗಲ್ಲ ಅಂತಾ ಹಾಸನದಲ್ಲಿ ಇದ್ದ ರೇವಣ್ಣ ಅವರನ್ನು ಕರೆಸಿದ್ದೆ. ರೇವಣ್ಣ ಸಿಎಂ ಅವರನ್ನು ಸ್ವಾಗತ ಮಾಡಿ ಕರೆದುಕೊಂಡು ಬಂದರು. ನಾನು, ಅವರ ತಂದೆ ಒಟ್ಟಾಗಿ ಕೆಲಸ ಮಾಡಿದ್ದೇವೆ. ಅವರ ತಂದೆ ಕಾಲದ ಹಿರಿ ಮನುಷ್ಯ ನಾನೊಬ್ಬನೇ ಈಗ. ಹಾಗಾಗಿ ಆಶೀರ್ವಾದ ಪಡೆಯಲು ಬರ್ತೀನಿ ಅಂದ್ರು, ಬನ್ನಿ ಎಂದು ಹೇಳಿದ್ದೆ ಎಂದರು.

ಇನ್ನು ಸರ್ಕಾರ ನಡೆಯಬೇಕಾದ್ರೆ ಯಡಿಯೂರಪ್ಪ ಆಶೀರ್ವಾದ ಇರಬೇಕು. ಯಡಿಯೂರಪ್ಪ ಅವರಿಂದಲೇ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾರೆ ಎಂದು ಹೇಳಿದರು.

ಎಲ್ಲರೂ ಮುಖ್ಯಮಂತ್ರಿ ಆಗಲು ಆಗಲ್ಲ:
ಜನತಾದಳದಿಂದ ಸಿದ್ದರಾಮಯ್ಯ ಜತೆಯಲ್ಲಿ ಹೋದವರು ಎಲ್ಲ ಮುಖ್ಯಮಂತ್ರಿಯಾಗಿದ್ದಾರಾ? ಎಲ್ಲರೂ ಮಿನಿಸ್ಟರ್ ಆಗುವುದಕ್ಕೂ ಆಗಲಿಲ್ಲ. ಬೊಮ್ಮಾಯಿ ಅವರು ಯಡಿಯೂರಪ್ಪ, ಸದಾನಂದ ಗೌಡ, ಜಗದೀಶ್ ಶೆಟ್ಟರ್ ಜತೆ ಮಿನಿಸ್ಟರ್ ಆಗಿ ಕೆಲಸ ಮಾಡಿದ್ದಾರೆ. ಬಿಜೆಪಿಯಲ್ಲಿ ನಡೆದುಕೊಂಡ ರೀತಿ ನೋಡಿ ಬೊಮ್ಮಾಯಿ ಅವರನ್ನು ಸಿಎಂ ಆಗಿ ಆಯ್ಕೆ ಮಾಡಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಕೆಲಸ ಮಾಡಲು ವಯಸ್ಸು ಮುಖ್ಯ ಅಲ್ಲ, ವಯಸ್ಸಿದ್ದೂ ಮನೆಯಲ್ಲಿ ಮಲಗಿದ್ರೆ ಏನು ಪ್ರಯೋಜನ? ಮಹಾಭಾರತದಲ್ಲಿ ಭೀಷ್ಮ 10 ದಿನ ಹೋರಾಟ ಮಾಡುತ್ತಾನೆ, ಕರ್ಣ ಒಂದೂವರೆ ದಿನ ಹೋರಾಟ ಮಾಡುತ್ತಾನೆ, ವಯಸ್ಸು ಮುಖ್ಯ ಆಗಲ್ಲ.

ಯಡಿಯೂರಪ್ಪ ಅವರಿಗೆ ನನಗಿಂತ ಇನ್ನೂ ವಯಸ್ಸಿದೆ, ನನಗೆ 89 ವರ್ಷ ವಯಸ್ಸು, ಯಡಿಯೂರಪ್ಪಗೆ 78 ವರ್ಷ ಅವರಿಗೆ ಇನ್ನೂ ಶಕ್ತಿ ಇದೆ. ಜಿಲ್ಲೆಗಳಿಗೆ ಹೋಗಬಹುದು. ನಾನು ಎಲ್ಲ ಜಿಲ್ಲೆಗಳಿಗೂ ಹೋಗಲು ಆಗುವುದಿಲ್ಲ ಆದರೆ ಕೆಲವು ಕಡೆ ನಾನು ಪ್ರವಾಸ ಮಾಡುತ್ತೇನೆ ಎಂದು ತಿಳಿಸಿದರು.

ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಎಎಪಿ ಕಚೇರಿ ಲೋಕಾರ್ಪಣೆ

Leave a Reply

error: Content is protected !!
LATEST
ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ ಪೋಕ್ಸೋ ಕಾಯ್ದೆಯನ್ವಯ ಸಂತ್ರಸ್ತ ಮಕ್ಕಳಿಗೆ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ ಬೆಂ.ಗ್ರಾಂ.ಜಿಲ್ಲೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಹೇಶ್ವರಿಗೆ 1 ಲಕ್ಷ ರೂ. ಪ್ರೋತ್ಸಾಹ ಧ... BBMP: ಮಳೆಯಿಂದ ಸಮಸ್ಯೆ ಆಗಿದ್ದರೆ ಕೂಡಲೇ 1533ಕ್ಕೆ ಕರೆ ಮಾಡಿ ದೂರು ನೀಡಿ