ಬೆಂಗಳೂರು: ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳಲ್ಲಿ ಏಪ್ರಿಲ್‌ನಲ್ಲಿ ನಡೆದ ಮುಷ್ಕರದ ವೇಳೆ ಸೇವೆಯಿಂದ ವಜಾ ಆಗಿರುವ ಎಲ್ಲಾ ಅಂದರೆ ಟ್ರೈನಿಯವರನ್ನು ಒಳಗೊಂಡಂತೆ ಎಲ್ಲಾ ವಜಾ ಆದ ನೌಕರರು ಶನಿವಾರ ಅಂದರೆ ನವೆಂಬರ್ 13ರ ಒಳಗಾಗಿ ಲೇಬರ್ ಕೋರ್ಟ್‌ನಲ್ಲಿ ಪ್ರಕರಣ ದಾಖಲಿಸುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ ಸಲಹೆ ನೀಡಿದೆ.
ಹೀಗಾಗಿ ಸೇವೆಯಿಂದ ವಜಾಗೊಂಡಿರುವ ಅಂದರೆ ಈಗ ಕೋರ್ಟ್ ಮೊರೆ ಹೋಗಿರುವವರನ್ನು ಹೊರತುಪಡಿಸಿ ಉಳಿದ ಪ್ರತಿಯೊಬ್ಬರೂ ಲೇಬರ್ ಕೊರ್ಟ್‌ನಲ್ಲಿ ತಮ್ಮನ್ನು ವಜಾ ಮಾಡಿರುವ ವಿರುದ್ಧ ವಕಾಲತ್ತುಹಾಕಲು ತಿಳಿಸಿದ್ದಾರೆ.
ಜತೆಗೆ ಕಳೆದ ತಿಂಗಳಲ್ಲಿ ವಜಾ ಆದ ನೌಕರರು ಸೇರಿದಂತೆ ಎಲ್ಲರೂ ದಾವೆ ಹೂಡಿ. ನಾವು ಶನಿವಾರ ಲೋಕ ಆದಾಲತ್‌ಗೆ ದಿನಾಂಕ ನಿಗದಿ ಪಡಿಸುತ್ತೇವೆಂದು ಸಾರಿಗೆ ಸಚಿವರು, ನಿಗಮಗಳ ಅಧ್ಯಕ್ಷರು ತಿಳಿಸಿದ್ದಾರೆ ಎಂದು ಹೇಳಿದ್ದಾರೆ.
ಇನ್ನು ಪ್ರಮುಖವಾಗಿ ಕೋರ್ಟ್‌ನಲ್ಲಿ ದಾವೆ ಹೂಡದ ನೌಕರರ ಪ್ರಕರಣವನ್ನು ಪರಿಗಣಿಸುವುದಿಲ್ಲ. ಹೀಗಾಗಿ ಪ್ರತಿಯೊಬ್ಬರೂ ಲೇಬರ್‌ಕೋರ್ಟ್‌ನಲ್ಲೇ ಮೊದಲು ದಾವೆ ಹೂಡುವಂತೆ ತಿಳಿಸಿದ್ದಾರೆ.
ವಕಾಲತ್‌ಗೆ ಬೇಕಾಗಿರುವ ದಾಖಲೆಗಳು: ಎಸ್‌ಪಿ, ಡಿಸ್ಮಿಸ್ ಕಾಪಿ, ಮೇಲ್ಮನವಿ ಪ್ರಾಧಿಕಾರಕ್ಕೆ ಸಲ್ಲಿಸಿರುವ ಕಾಪಿ, ಮೇಲ್ಮನವಿ ಪ್ರಾಧಿಕಾರ ತಿರಸ್ಕರಿಸಿರುವ ಕಾಪಿ, ಎರಡು ತಿಂಗಳ ವೇತನ ಪಟ್ಟಿ, ಆಧಾರ್ ಕಾರ್ಡ್, ಸಂಸ್ಥೆ ನೌಕರರಿಗೆ ಕೊಟ್ಟಿರುವ ಉಚಿತ ಪಾಸ್ ಕಾಪಿಯ 2-2 ನಕಲು (ಝರೆಕ್ಸ್) ಪ್ರತಿಗಳನ್ನು ಕೋರ್ಟ್‌ಗೆ ಸಲ್ಲಿಸಬೇಕಿದೆ.