ಇಂಧನ ಸೇರಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ರಸ್ತೆಯಲ್ಲೇ ಅಡುಗೆಮಾಡಿ ಮಹಿಳಾ ಕಾಂಗ್ರೆಸ್ ಪ್ರ ತಿಭಟನೆ
ಬೆಂಗಳೂರು: ದೇಶದಲ್ಲಿ ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ದರ ದಿನದಿಂದ ದಿನಕ್ಕೆ ಏಕೆಯಾಗುತ್ತಿರುವುದು ಖಂಡಿಸಿ ಕೆಪಿಸಿಸಿ ಮಹಿಳಾ ಘಟಕದ ಕಾರ್ಯಕರ್ತೆಯರು ಬುಧವಾರ ರಸ್ತೆಯಲ್ಲೇ ಅಡುಗೆಮಾಡಿ ವಿನೂತನವಾಗಿ ಪ್ರತಿಭಟನೆ ನಡೆಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿರುವ ಶಾಸಕ ರಾಮಲಿಂಗಾರೆಡ್ಡಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್ ನೇತೃತ್ವದಲ್ಲಿ ಮೌರ್ಯ ವೃತ್ತದ ಬಳಿ ಪ್ರ ತಿಭಟನೆ ನಡೆಸಿ ಆಕ್ರೋ ಶ ವ್ಯ ಕ್ತಪಡಿಸಿದ ಮಹಿಳೆಯರು, ಬಳಿಕ ರಾಜಭವನಮುತ್ತಿಗೆಗೆ ಮುಂದಾದರು.
ಈ ವೇಳೆ ತಡೆದ ಪೊಲೀಸರು, ರಾಮಲಿಂಗಾರೆಡ್ಡಿ , ಶಾಸಕರಾದ ಕೃಷ್ಣ ಬೈರೇಗೌಡ, ರಿಜ್ವಾ ನ್ ಅರ್ಷದ್, ಪುಷ್ಪಾ ಅಮರನಾಥ್ ಸೇರಿದಂತೆ ನೂರಾರು ಕಾರ್ಯಕರ್ತರನ್ನು ರಾಜಭವನಕ್ಕೆ ತೆರಳುವಮಾರ್ಗ ಮಧ್ಯೆ ರೇಸ್ ಕೋರ್ಸ್ ರಸ್ತೆಯ ಬಳಿ ಕಾಂಗ್ರೆಸ್ ಭವನದ ಮುಂಭಾಗದಲ್ಲಿ ಬಂಧಿಸಿದರು.
ಅದಕ್ಕೂ ಮೊದಲು ಮಾತನಾಡಿದ ಪುಷ್ಪಾ ಅಮರನಾಥ್, ದೇಶವು ಇಂದು ಕಾಣುತ್ತಿರುವುದು ಅಚ್ಚೇದಿನ್ ಅಲ್ಲ , ಬೂರೇ ದಿನ್. ಮಹಿಳೆಯರು ಹೆಣ್ಣು ಮಕ್ಕಳನ್ನು ಬಿಜೆಪಿ ಸರ್ಕಾರ ರಕ್ಷಣೆಮಾಡುತ್ತಿಲ್ಲ . ಅಡುಗೆ ಅನಿಲ ಬೆಲೆ ಇಳಿಸಿಲ್ಲ, ಇಂಥ ಅಚ್ಚೇ ದಿನ್ ನಮಗೆ ಬೇಕಾಗಿಲ್ಲ. ಈ ಹೋರಾಟವನ್ನು ಪಂಚಾಯಿತಿ ಮಟ್ಟ ದವರೆಗೂ ಕೊಂಡೊಯ್ಯುತ್ತೇವೆ ಎಂದು ಆಕ್ರೋ ಶ ವ್ಯ ಕ್ತಪಡಿಸಿದರು.
ಇಲ್ಲಿ ಆರಂಭವಾದ ಹೋರಾಟ ಹಳ್ಳಿ ಹಳ್ಳಿ ತಲುಪಲಿದೆ. ಬೆಲೆ ಏರಿಕೆಯಿಂದ ಜನ ಸಾಯುತ್ತಿದ್ದಾರೆ. ಈ ಪರಿಸ್ಥಿ ತಿಯಲ್ಲಿ ರಾಷ್ಟ್ರಪತಿ ಅವರೇ ಮಧ್ಯ ಪ್ರವೇಶಿಸಬೇಕು. ಮಹಿಳಾಪರ ಹಾಗೂ ಜನಪರ ದನಿ ಎತ್ತಬೇಕು ಎಂದು ಮನವಿಮಾಡಿದರು.
ರಿಜ್ವಾನ್ ಅರ್ಷದ್ ಮಾತನಾಡಿ, ನರೇಂದ್ರ ಮೋದಿ ಅವರು ವ್ಯವಸ್ಥಿತವಾಗಿ ಹಾಗೂ ಹಾಗೂ ಅಂಬಾನಿಗೆ ದೇಶದ ಆಸ್ತಿಯನ್ನು ಹಂಚಿದ್ದಾರೆ. ಅಂಬಾನಿ, ಅದಾನಿ ಹಿಡಿತದಲ್ಲಿರುವ ಸರ್ಕಾರದ ವಿರುದ್ಧ ನಾವಿಲ್ಲಿ ಸೇರಿದ್ದೇ ವೆ. ಮೋದಿ ಬಹಳ ಶಕ್ತಿಶಾಲಿ ಪ್ರಧಾನಿ ಎಂಬ ಭ್ರಮೆ ಇತ್ತು . ಆದರೆ, ಅವರು ಅಂಬಾನಿ, ಅದಾನಿಯ ಮ್ಯಾನೇಜರ್’ ಎಂದು ವ್ಯಂಗ್ಯ ವಾಡಿದರು.
ನೇಪಾಳ, ಭೂತಾನ್ ದೇಶದವರು ನಮ್ಮಿಂದಲೇ ಪೆಟ್ರೋ ಲ್ ಕೊಂಡುಕೊಳ್ಳುತ್ತಾರೆ. ನಮ್ಮಿಂ ದ ಪಡೆದ ಅವರು ಲೀಟರ್ಗೆ 80 ರೂ.ಗೆ ಮಾರುತ್ತಾರೆ. ಪಾಕಿಸ್ತಾನದಲ್ಲಿ ಲೀಟರ್ ಪೆಟ್ರೋ ಲ್ ಬೆಲೆ 65 ರೂ.ಇದೆ. ಇದು ದೇಶದ್ರೋಹದ ಸರ್ಕಾರ. ಆದರೂ ಜನ ಮರಳೋ ಜಾತ್ರೆ ಮರಳೋ ಎಂಬಂತೆ ದೇಶದ ಜನತೆ ಬಿಜೆಪಿಗೆ ಮತ ಹಾಕುತ್ತಿದ್ದಾರೆ ಎಂದರು.
ಕೃಷ್ಣ ಬೈರೇಗೌಡಮಾತನಾಡಿ, ಅಂತಾರರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಜಾಸ್ತಿ ಆಗಿದ್ದರಿಂದ ಇಲ್ಲಿಯೂದರ ಏರಿಕೆ ಆಗುತ್ತಿದೆ ಎಂದು ಹೇಳುತ್ತಾರೆ. ಶ್ರೀ ಲಂಕಾದಲ್ಲಿ ಪೆಟ್ರೋಲ್ ದರ ಲೀಟರ್ಗೆ 75 ರೂ. ನಮ್ಮ ಲ್ಲಿ 106 ಇದೆ. ರಾವಣ ಹಾಗೂ ರಾಮನ ರಾಜ್ಯದಲ್ಲಿ ದರ ಏರಿಕೆ, ಇಳಿಕೆ ಆಗಿದೆ ಎಂದರು.