ವಿಜಯಪಥ ಸಮಗ್ರ ಸುದ್ದಿ
ನ್ಯೂಡೆಲ್ಲಿ: ಭಾರತದಲ್ಲಿ ಹೊಸದಾಗಿ ಜಾರಿಗೆ ತಂದಿರುವರುವ ಐಟಿ ನಿಯಮಗಳನ್ನು ಪಾಲಿಸುವಂತೆ ಟ್ವಿಟರ್‌ಗೆ ಕೇಂದ್ರ ಸರ್ಕಾರವು ಕೊನೆಯ ಅವಕಾಶ ನೀಡಿದೆ.
ಹೊಸ ಐಟಿ ನಿಯಮದ ಅನ್ವಯ ಎಲ್ಲ ಸಾಮಾಜಿಕ ಜಾಲತಾಣ ಸಂಸ್ಥೆಗಳು ಸ್ಥಳೀಯವಾಗಿ ಅಧಿಕಾರಿಗಳನ್ನು ನೇಮಕ ಮಾಡಿ ದ್ವೇಷ ಭಾಷಣ, ಸಮಾಜ ವಿರೋಧಿ ಪೋಸ್ಟ್‌ಗನ್ನು ನೋಟಿಸ್ ನೀಡಿದ 36 ಗಂಟೆಯೊಳಗೆ ಡಿಲಿಟ್ ಮಾಡಬೇಕು ಎಂದು ಸೂಚಿಸಲಾಗಿದೆ
ಆದರೆ ಈವರೆಗೆ ಟ್ವಿಟರ್ ಭಾರತ ಸರ್ಕಾರದ ಸರಿಯಾಗಿ ಸ್ಪಂದಿಸಿಲ್ಲ. ಕಳೆದ ಆರು ತಿಂಗಳಿನಿಂದ ಬಳಸದ ಕಾರಣ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಖಾಸಗಿ ಖಾತೆಗೆ ನೀಡಲಾಗಿರುವ ಬ್ಲೂ ಟಿಕ್ ಅನ್ನು ಟ್ವಿಟರ್ ತೆಗೆದಿತ್ತು. ಈ ಸಂಬಂಧ ಟ್ವಿಟರ್‌ಗೆ ಮನವಿ ಕಳಿಸಿದ್ದರೂ ಪ್ರತಿಕ್ರಿಯಿಸಿಲ್ಲ. ಹಾಗಾಗಿ ಟ್ವಿಟರ್‌ಗೆ ನೋಟಿಸ್ ಜಾರಿ ಮಾಡಲಾಗಿದೆ.