NEWSನಮ್ಮರಾಜ್ಯರಾಜಕೀಯ

ಕೆಎಸ್‌ಆರ್‌ಟಿಸಿ ನೌಕರರ ಸಿಟ್ಟು ಸರ್ಕಾರ ಆಡಳಿತ ವರ್ಗಕ್ಕೆ ಸಿಂಹಸ್ವಪ್ನವಾಗದೆ ಇರದು..!

ಮಾತು ತಪ್ಪಿದ ಸರ್ಕಾರ, ಸಾರಿಗೆ ಅಧಿಕಾರಿಗಳ ವಿರುದ್ಧ ಸಿಡಿದೇಳಲು ಸಿದ್ಧವಾಗುತ್ತಿರುವ ನೌಕರರು

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

2ತಿಂಗಳಿನಿಂದ ವೇತನವಿಲ್ಲದೆ ದುಡಿಯುತ್ತಿರುವ ಸಾರಿಗೆ ನೌಕರರ  ಹಸಿವಿನ, ನೊಂದ ಆಕ್ರೋಶದ  ಕಿಚ್ಚಿನ  ಮಾತುಗಳು ನೌಕರ ಮಾಡಿರುವ ಆಡಿಯೋಯಿಂದಲೇ ಕೇಳಿಸಿಕೊಳ್ಳಿ. ಮಾನ ಮರ್ಯಾದೆ ಇಲ್ಲದ ಸರ್ಕಾರ ಮತ್ತು ಆಡಳಿತ ವರ್ಗಕ್ಕೆ ಏನು ಹೇಳ ಬಯಸುತ್ತೀರಿ ಅದನ್ನು ಕಮೆಂಟ್‌ ಮಾಡಿ.  

ಬೆಂಗಳೂರು: ಸಾರಿಗೆ ನೌಕರರನ್ನು ಇನ್ನಿಲ್ಲದಂತೆ ಕಾಡುತ್ತಿರುವ ಸರ್ಕಾರ ಮತ್ತು ಕೆಲ ಭ್ರಷ್ಟ ಅಧಿಕಾರಿಗಳು ಮುಂದೆ ಕೇಳರಿಯದ ರೀತಿಯಲ್ಲಿ ನೌಕರರ ಸಿಟ್ಟಿಗೆ ಗುರಿಯಾಗಲಿದ್ದಾರೆ ಎಂಬುದನ್ನು ಅವರ ಆಡಿಯೋ ವಿಡಿಯೋಗಳೇ ಹೇಳುತ್ತಿವೆ.

ಜತೆಗೆ ಅವರು ಕೆಲ ಬ್ಯಾನರ್‌ಗಳು ಅವರಲ್ಲಿ ಕುದಿಯುತ್ತಿರುವ ಆಕ್ರೋಶವನ್ನು ಬಿಂಬಿಸುತ್ತಿವೆ. ಹೀಗಾಗಿ ಇನ್ನಾದರೂ ಸರ್ಕಾರ ಮತ್ತು ಸಾರಿಗೆ ಆಡಳಿತ ವರ್ಗ ಎಚ್ಚೆತ್ತುಕೊಳ್ಳಬೇಕು.

ಇಲ್ಲದಿದ್ದರೆ ಮುಂದೆ ಆಗುವಂಥ ಅನಾಹುತಗಳಿಗೆ ನೀವೆ ಜವಾಬ್ದಾರರಾಗಿ ನಿಲ್ಲುವ ಜನತೆಗೆ ಉತ್ತರ ಕೊಡಬೇಕಾಗುತ್ತದೆ ಎಚ್ಚರ.

ಮಾತು ತಪ್ಪಿದ ಸರ್ಕಾರ, ಸಾರಿಗೆ ಅಧಿಕಾರಿಗಳು:  ಈಗಾಗಲೇ ಏಪ್ರಿಲ್ ಮುಷ್ಕರದಲ್ಲಿ ವಜಾಗೊಳಿಸಿದ ನೌಕರರಲ್ಲಿ ಕನ್ಫರ್ಮ್ ಆಗಿರುವಂತಹ ನೌಕರರನ್ನು ಮೊದಲನೇ ಬ್ಯಾಚಿನಲ್ಲಿ ತದನಂತರ ಪ್ರೊಬೆಷಿನರಿ ಹಾಗೂ ಟ್ರೈನಿ ಹೀಗೆ ಹಂತ ಹಂತವಾಗಿ ನೌಕರರನ್ನು ವಾಪಸ್‌ ಕೆಲಸಕ್ಕೆ ಕರೆಸಿಕೊಳ್ಳುತ್ತೇವೆ ಎಂದು ಭರಸವೆ ಕೊಟ್ಟಿದ್ದ ಸರ್ಕಾರ ಮತ್ತು ನಿಗಮದ ಅಧಿಕಾರಿಗಳು ಈಗ ಮಾತು ತಪ್ಪಿದ್ದಾರೆ.

ಇದರಿಂದ ನಮಗೆ ನೀಡಿದ್ದ ಭರವಸೆ ಹುಸಿಯಾಯಿತು. ಈಗ ಮತ್ತೆ ಮೊದಲನೆಯ ಭಾಗವಾಗಿ ಈ ತಿಂಗಳ ಅಂತ್ಯದೊಳಗೆ ಕನ್ಫರ್ಮ್ ಆಗಿ ವಜಾ ಆಗಿರುವಂತಹ ನೌಕರರೆಲ್ಲರನ್ನೂ ಲೋಕ ಅದಾಲತ್ ಮೂಲಕ ಮತ್ತೆ ಕೆಲಸಕ್ಕೆ ನಿಯೋಜನೆ ಮಾಡಿಕೊಳ್ಳುತ್ತೇವೆ ಎಂದೂ ಹೇಳಿಕೆ ಕೊಟ್ಟಿದ್ದರು.

ಈ ಹಿಂದಿನಿಂದಲೂ ಸಾರಿಗೆ ಸಚಿವರಾಗಬಹುದು ಸರ್ಕಾರಕ್ಕೆ ಸಂಬಂಧಪಟ್ಟಂತಹ ಸಚಿವರು ನಿಗಮಗಳ ಬೋರ್ಡ್‌ನಲ್ಲಿ ಇರುವಂಥವರು ಹಾಗೂ ಕೆಲವು ಅಧಿಕಾರಿವರ್ಗ ಇದೇ ತರ ಹಲವಾರು ದಿನಾಂಕಗಳನ್ನೂ ಕೊಟ್ಟು ತಾವು ಕೊಟ್ಟ ಮಾತಿಗೆ ಬದ್ಧರಾಗದೆ ಮಾತು ತಪ್ಪಿದ ಭ್ರಷ್ಟರಾಗಿದ್ದಾರೆ.

ನಾವು ಕೂಡ ಇವತ್ತು ಆಗೇಹೋಯಿತು ನಾಳೆ ಆಗಿಹೋಗುತ್ತದೆ ಅನ್ನೋ ಲೆಕ್ಕಚಾರಕ್ಕೆ ಮಾತನಾಡಿಕೊಂಡು ಈವರೆಗೂ ಕಾಲ ಕಳೆದಾಗಿದೆ.  ಆದರೆ ಆಡಳಿತ ವರ್ಗ ನಮ್ಮಕಿವಿ ಹಿಂದುವ ಕೆಲಸವನ್ನೇ ಮಾಡಿಕೊಂಡು ಬರುತ್ತಿದೆಯೇ ಹೊರತು ನಮ್ಮ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ.

ಇನ್ನು ಈಗ ಹರಿದಾಡುತ್ತಿರುವ ಮಾಹಿತಿಯಂತೆ ವಜಾ ಮಾಡಿರುವ ನೌಕರರನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳು ಈಗ ವಿಧಾನಪರಿಷತ್‌ ಚುನಾವಣೆ ನೀತಿ ಸಂಹಿತೆ ಅಡ್ಡಿಯಾಗಿದೆಯಂತೆ.  ಹೀಗಾಗಿ ಡಿಸೆಂಬರ್ 18 ರ ನಂತರ ಈ ಪ್ರಕ್ರಿಯೆಗಳಿಗೆ ಚಾಲನೆ ಕೊಡುತ್ತೇವೆ ಎಂದು ಸರ್ಕಾರ ಮತ್ತು ಅಧಿಕಾರಿಗಳು ಮತ್ತೆ ನಮ್ಮ ಕಿವಿ ಹಿಂಡುತ್ತಿದ್ದಾರೆ.

ಹೀಗೆ ದಿನಾಂಕವನ್ನು ಮುಂದೂಡಿ ಮುಂದೂಡಿ ಕೊನೆಗೆ ನೌಕರರ ಸ್ಥಿತಿ ಅತಂತ್ರವಾಗಿ ಇರುವಂತೆ ನೋಡಿಕೊಳ್ಳುವ ಉದ್ದೇಶ ನಮ್ಮ ಅಧಿಕಾರಿ ವರ್ಗ ಮತ್ತು ಸರ್ಕಾರಕ್ಕೆ ಇದ್ದಂತೆ ತೋರುತ್ತಿದೆ. ಆದ್ದರಿಂದ ನಮ್ಮ ವಿನಂತಿಯೇನೆಂದರೆ ವಜಾಗೊಂಡ ಎಲ್ಲಾ ನೌಕರರು ಒಪ್ಪಿಗೆ ಇದ್ದರೆ ಎಲ್ಲಾ ಸಂಘಟನೆಗಳ ಬೆಂಬಲವನ್ನು ಕೊಡುವುದರ ಜತೆಗೆ (ಒಂದು ವೇಳೆ ಕೆಲವು ಸಂಘಟನೆಗಳು ಬೆಂಬಲ ಕೊಡದಿದ್ದರೂ) ವಜಾ ಆಗಿರುವ ಎಲ್ಲಾ 2000 ನೌಕರರು ಭಾಗವಹಿಸುವುದಾದರೆ ಒಂದು ಧರಣಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ನಾವು ರೆಡಿ ಇದ್ದೇವೆ.

ಯಾಕೆಂದರೆ ಇಲ್ಲಿ ಯಾವುದೋ ಕುತಂತ್ರ ಕೆಲಸ ನಡೆಯುತ್ತಿದೆ ಎಂಬುದು ನಮ್ಮ ಗುಮಾನಿ. ಆದ್ದರಿಂದ ಎಲ್ಲಾ ನೌಕರರು ಒಗ್ಗಟ್ಟಾಗಿ ಬರುವುದೇ ಆದಲ್ಲಿ ಸರ್ಕಾರದ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಬಹುದು. ಆದರೆ ನಮ್ಮ ನೌಕರರು ಬರುವುದು ಅನುಮಾನವೂ ಕೂಡ ನಮಗೆ ಇದೆ. ಯಾಕೆಂದರೆ ಇದಕ್ಕೆ ಸೂಕ್ತವಾಗಿ ಕಾರ್ಯಕ್ರಮ ರೂಪಿಸಿದಾಗ ಯಾರೋ ಒಬ್ಬ ಮಧ್ಯರಾತ್ರಿ ವಿಡಿಯೋ ಮಾಡಿ ಯಾರ ಮಾತು ಕೇಳಬೇಡ ಯಾರಿಂದಲೂ ಏನು ಆಗಲ್ಲ ನಾವು ಮಾಡುತ್ತೇವೆ ಎಂಬ ವಿಡಿಯೋವನ್ನು ನಂಬಿ ಮತ್ತೆ ಪುನಹ ಪುನಹ ಹಳ್ಳಕ್ಕೆ ಬೀಳುತ್ತಿದ್ದರೆ ನಾವು ಜವಾಬ್ದಾರರಲ್ಲ.

ಅಂತಹ ಮನಸ್ಥಿತಿ ಸಮಸ್ಯೆಗಳು ನೌಕರರಲ್ಲಿ ಇದ್ದರೆ ಈ ಹೋರಾಟದ ಅನಿವಾರ್ಯತೆ ಇಲ್ಲ. ಇಲ್ಲಾ ಮಾಡಲೇಬೇಕು ನಮ್ಮ ಸಮಸ್ಯೆ ಇತ್ಯರ್ಥಪಡಿಸಿಕೊಳ್ಳಬೇಕು ಯಾವ ನಾಯಕ ಯಾವ ಸಂಘಟನೆ ಮುಂದಾಳತ್ವ ವಹಿಸಿಕೊಂಡರು ಸರಿ ನಾವು ಬರುತ್ತೇವೆ ಎಂದು ಸದಾ ಸಿದ್ಧರಾಗಿ.

 

 

Leave a Reply

error: Content is protected !!
LATEST
BMTC: ಬಸ್‌ ಚಲಾಯಿಸುತ್ತಿದ್ದಾಗಲೇ ಹೃದಯಾಘಾತದಿಂದ ಚಾಲಕ ನಿಧನ- ಸಾರಿಗೆ ಸಚಿವರು, ಎಂಡಿ ಸಂತಾಪ BMTC ಚಿಕ್ಕಲ್ಲಸಂದ್ರ: ಅವೈಜ್ಞಾನಿಕ ಸುತ್ತುವಳಿ ಸಮಯ ನಿಗದಿ ಮಾಡಿರುವುದಲ್ಲದೆ ವ್ಯಕ್ತಿಯೊಬ್ಬನ ದೂರಿಗೆ ಮಣೆಹಾಕಿ ನೌಕರರ... "ಲೋಕಾ"ವಿಚಾರಣೆ ಬಳಿಕ ಮುಗುಳ್ನಗುತ್ತಲೇ ಹೊರ ಬಂದ ಸಿಎಂ ಸಿದ್ದರಾಮಯ್ಯ ಸಿಎಂ ರಾಜೀನಾಮೆಗೆ ಆಗ್ರಹಿಸಿ ಕೇಸರಿ ಪಡೆಯಿಂದ “ಗೋ ಬ್ಯಾಕ್ ಸಿಎಂ ಚಳವಳಿ” LMV ಡಿಎಲ್‌ ಇರುವವರು 7,500 ಕೆಜಿಗಿಂತ ಕಡಿಮೆ ತೂಕದ ಸಾರಿಗೆ ವಾಹನ ಚಲಾಯಿಸಲು ಅರ್ಹರು: ಕೋರ್ಟ್‌ ಆದೇಶ NWKRTC ಕಲಘಟಗಿ ಘಟಕಕ್ಕೆ ಎಂಡಿ ಪ್ರಿಯಾಂಗಾ ಭೇಟಿ: ನೌಕರರ ಕುಂದುಕೊರತೆ ಆಲಿಕೆ BMTC ಸಾಥ್‌ನಿಂದ ಒಂದೇದಿನದಲ್ಲಿ 5.59 ಕೋಟಿ ರೂ. ಆದಾಯ ಗಳಿಸಿದ KSRTC KSRTC: ಆದಾಯ ಸಂಗ್ರಹಣೆಯಲ್ಲಿ 2ನೇ ಘಟಕ ಪ್ರಥಮ- ಪ್ರತಿಯೊಬ್ಬ ಸಿಬ್ಬಂದಿಗೂ ಧನ್ಯವಾದ ತಿಳಿಸಿದ ಸಾರಿಗೆ ಸಚಿವರು, ಅಧಿಕಾರ... ರಾಜಿಯಾಗಿದೆ ಅಂದರೂ KSRTC ಡ್ರೈವರ್‌ಗೆ 7 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು 2 ಸಾವಿರ ರೂ. ಕೊಟ್ಟಮೇಲೆ ಬಸ್‌ ಬಿಟ್ಟ ಪೊಲೀ... KSRTC ನಿವೃತ್ತ ನೌಕರರ ಕನಿಷ್ಠ ಪಿಂಚಣಿ ಪಡೆಯುವ ಹೋರಾಟಕ್ಕೆ ಅತೀ ಶೀಘ್ರದಲ್ಲೇ ಸಿಗಲಿದೆ ಫಲ: ನಂಜುಂಡೇಗೌಡ