NEWSನಮ್ಮರಾಜ್ಯ

ಸಾರಿಗೆ ನೌಕರರು: ಅಗ್ರಿಮೆಂಟ್ ಬೇಕು ಎನ್ನುವ ಮಹಾಶಯರೇ – ಅನುಭವಿಸಿದ ಕಷ್ಟವನ್ನು ಒಮ್ಮೆ ಹಿಂತಿರುಗಿ ನೋಡಿ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಕಳೆದ 2-3 ದಶಕಗಳಿಂದ ನೌಕರರು ಮತ್ತು ಅಧಿಕಾರಿಗಳ ನಡುವೆ ಕಂದಕ ಸೃಷ್ಟಿಸಿ ಸಾರಿಗೆ ನಿಗಮಗಳಲ್ಲಿ ಕೆಲ ಸಂಘಟನೆಗಳು ತಮ್ಮ ಅಸ್ತಿತ್ವ ಕಾಯ್ದುಕೊಳ್ಳುತ್ತಿವೆ. ಆ ಸಂಘಟನೆಗಳು ಈಗಲು ನೌಕರರು ಮತ್ತು ಅಧಿಕಾರಿಗಳ ನಡುವೆ ಇನ್ನಷ್ಟು ಕಂದಕ ಸೇಷ್ಟಿಸುತ್ತಿದ್ದು ತಮ್ಮ ಹಾವು ಮುಂಗೂಸಿಯಂತೆ ಮಾಡಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿವೆ.

ಇಂಥ ಸಂಘಟನೆಗಳ ಪರ ನಿಂತು ಈಗಲೂ ಕೆಲ ನೌಕರರು ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುವಂತಹ ನಿರ್ಧಾರವನ್ನು ತೆಗೆದುಕೊಳ್ಳಲು ಮುಂದಾಗುತ್ತಿದ್ದಾರೆ. ಇಲ್ಲಿ ಎಲ್ಲ ಅಧಿಕಾರಿಗಳು ಭ್ರಷ್ಟರಲ್ಲ ಹಾಗೆಯೇ ಎಲ್ಲ ನೌಕರರು ಕೆಟ್ಟವರಲ್ಲ ಎಂಬುದನ್ನು ಅರಿತು ಸಂಸ್ಥೆಯನ್ನು ಮೇಲೆತ್ತುವ ಜತೆಗೆ ತಮ್ಮ ಜೀವನ ಮಟ್ಟವನ್ನು ಸುಧಾರಿಸಿಕೊಳ್ಳುವತ್ತ ಹೊರಳಬೇಕಿದೆ.

ಇನ್ನು ಹಿಂದಿನಿಂದಲೂ ಅಗ್ರಿಮೆಂಟ್  ಎಂಬ ಭೂತದ ಬಾಯಿಗೆ ಸಿಲುಕಿ ಪ್ರತಿ 4 ವರ್ಷಕೊಮ್ಮೆ ಅನುಭವಿಸಿರುವ ಕಷ್ಟ ಸಾಕು, ನಮಗೆ ಒಂದು ಶಾಶ್ವತ ಪರಿಹಾರ ಬೇಕು ಎಂಬ ಮಹದಾಸೆಯೊಂದಿಗೆ ನೌಕರರು  ತಮ್ಮ ಮನದಾಳವನ್ನು ಹಂಚಿಕೊಂಡಿದ್ದಾರೆ.

ನೌಕರರೇ ಬರೆದಿರುವ ಯಥಾ ವರದಿ ಇಲ್ಲಿದೆ….:  ನಮ್ಮಲ್ಲಿಯ ಅಗ್ರಿಮೆಂಟ್ ಹೇಗೆಂದರೆ ಪ್ರತಿ ವರ್ಷ ನಡೆಯುವ ಊರಿನ ಜಾತ್ರೆಯ ತೇರು / ರಥೋತ್ಸವ ಇದ್ದ ಹಾಗೆ.

ಈ ತೇರು ತನ್ನಷ್ಟಕ್ಕೆ ಹೊಗುವುದಿಲ್ಲ. ಅದಕ್ಕೆ ಎಲ್ಲರೂ ಸೇರಿ ಹಗ್ಗಕಟ್ಟಿ ಎಳೆದರೆ ಮಾತ್ರ ಚಲಿಸುವುದು.

ನಮ್ಮ ಅಗ್ರಿಮೆಂಟ್ ಕೂಡಾ ಜಾತ್ರೆಯ ತೇರು ಇದ್ದ ಹಾಗೇನೆ. ಯಾಕೆಂದರೆ ಈ ಹಿಂದಿನ ಪ್ರತಿ ಅಗ್ರಿಮೆಂಟ್‌ಅನ್ನು ಒಮ್ಮೆ ಹಿಂತಿರುಗಿ ನೋಡಿ.

ಪ್ರತಿ ಅಗ್ರಿಮೆಂಟ್ ತೆಗೆದುಕೊಳ್ಳುವಾಗಲೂ ಸಣ್ಣ ಪ್ರಮಾಣದ ಮುಷ್ಕರ (ಸಿಬ್ಬಂದಿಗಳ ವರ್ಗಾವಣೆ, ಡಿಸ್ಮಿಸ್, ಅಮಾನತು) ಮಾಡಲೇಬೇಕು. ನ್ಯಾಯಬದ್ದವಾಗಿ ಒಮ್ಮೆಯಾದರೂ ಸರಿಯಾಗಿ ನಾಲ್ಕು ವರ್ಷಕ್ಕೊಮ್ಮೆ ಪ್ರತಿ ಜನವರಿ ತಿಂಗಳ ಒಂದನೇ ತಾರಿಖಿನಂದು ಕೊಟ್ಟಿದ್ದಾರಾ? ಅದನ್ನು ಕೂಡ ಹೋರಾಟ ಮಾಡಿಯೇ ತೆಗೆದುಕೊಳ್ಳಬೇಕು ಮತ್ತು ಸಿಬ್ಬಂದಿಗಳು ವರ್ಗಾವಣೆ, ಸಸ್ಪೆಂಡ್, ವಜಾ ಪ್ರಕರಣಗಳನ್ನು ಅನುಭವಿಸಲೇಬೇಕು.

ಹೋರಾಟ ಮಾಡುವುದೇ ನಿಜ ಅಂದಮೇಲೆ ಯಾಕಾಗಿ ಸಣ್ಣ ಮತ್ತು ಉಪಯೋಗವಿಲ್ಲದ ಹೋರಾಟ ಮಾಡಬೇಕು?

ಅದು ಅಲ್ಲದೇ ಅಷ್ಟು ಶಿಸ್ತು ಪ್ರಕರಣ ಅನುಭವಿಸಿಯೂ ನಮ್ಮಗಳ ಅಗ್ರಿಮೆಂಟ್ ಯಾವ ತರಹ ಗೊತ್ತಾ?

ಒಂದು ಸತ್ತ ಎಮ್ಮೆಯನ್ನು ತಿನ್ನಲು ಹೇಗೆ ಕಿತ್ತಾಡಿ ಜಗಳ ಮಾಡಿಕೊಂಡು ಹಂಚಿಕೊಂಡು ತಿನ್ನುತ್ತಾರೋ ಹಾಗೆ ನಮ್ಮ ಪ್ರತಿ ನಾಲ್ಕು ವರ್ಷದ ಅಗ್ರಿಮೆಂಟ್.

ಇಷ್ಟಾದರೂ ಪ್ರಸ್ತುತ ಪ್ರತಿ ತಿಂಗಳು ಕನಿಷ್ಠ ಎರಡು ಸಿಬ್ಬಂದಿಗಳು ಆದರೂ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಇದರ ಬಗ್ಗೆ ಯಾಕಾಗಿ ಧ್ವನಿ ಎತ್ತುವುದಿಲ್ಲಾ ಗೋಸುಂಬೆಗಳಾ?

ಸತ್ತವರು ಸತ್ತರು, ನಮಗೆ ಸಿಗಬೇಕಾಗಿದ್ದು ಸಿಕ್ಕಿತು ಎಂಬ ಮನೋಧೋರಣೆಯಾ ಹೆತ್ಲಾಂಡಿಗಳಾ?

ಮೂಲವ್ಯಾಧಿ ಆಗಿ ಇಷ್ಟು ನೋವು ಅನುಭವಿಸುತ್ತಿದ್ದರೂ ಯಾಕಾಗಿ ವೈದ್ಯರ ಹತ್ತಿರ ಚಿಕಿತ್ಸೆ ಪಡೆಯುತ್ತಿಲ್ಲಾ. ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸದೇ, ಸಮಾಜದಲ್ಲಿ ಒಳ್ಳೆಯ ಸಂತೃಪ್ತಿ ಬದುಕನ್ನು ಸಾಗಿಸದೇ, ನಾಚಿಕೆಗೆಟ್ಟು ಕಂಡ ಕಂಡವರ ಹತ್ತಿರ ಸಾಲ ಮಾಡಿಕೊಂಡು ಭಂಡ ಬಾಳಲ್ಲಿ ಬದುಕುತ್ತೀರಿ.

ಇನ್ನಾದರೂ ಒಳ್ಳೆಯ ಯೋಚನೆಯ ಸಂಘಟನೆ, ಒಳ್ಳೆಯ ಪರಿಹಾರದತ್ತ ಮುಖ ಮಾಡು ಎಂಜಿಲು ಕಾಸಿನ ಮೂಢ ಮಾನವಾ!

ಹೋಗಲಿ ನಿಮ್ಮ ಮನೆಯಲ್ಲಿ ನಿಮ್ಮ ಅಕ್ಕ, ತಂಗಿ, ಹೆಂಡತಿ, ತಾಯಿ ಮಕ್ಕಳು, ಪರಿಚಯಸ್ಥರು ಪ್ರಸ್ತುತ ಇಷ್ಟು ಪ್ರಮಾಣದಲ್ಲಿ ಯಾಕಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಅಂತಾ ಕೇಳುವುದಿಲ್ಲವಾ ನಿಮ್ಮನ್ನಾ? ನಿಮ್ಮ ಆತ್ಮಸಾಕ್ಷಿ ಸತ್ತುಹೋಗಿದೆಯಾ?

“ಸಾರಿಗೆ ನೌಕರರಿಗೆ ಒಳ್ಳೆಯದು ಆಗಲಿ” ನೋವಿನೊಂದಿಗೆ ಸಾರಿಗೆ ನೌಕರರು….

Leave a Reply

error: Content is protected !!
LATEST
"ಲೋಕಾ"ವಿಚಾರಣೆ ಬಳಿಕ ಮುಗುಳ್ನಗುತ್ತಲೇ ಹೊರ ಬಂದ ಸಿಎಂ ಸಿದ್ದರಾಮಯ್ಯ ಸಿಎಂ ರಾಜೀನಾಮೆಗೆ ಆಗ್ರಹಿಸಿ ಕೇಸರಿ ಪಡೆಯಿಂದ “ಗೋ ಬ್ಯಾಕ್ ಸಿಎಂ ಚಳವಳಿ” LMV ಡಿಎಲ್‌ ಇರುವವರು 7,500 ಕೆಜಿಗಿಂತ ಕಡಿಮೆ ತೂಕದ ಸಾರಿಗೆ ವಾಹನ ಚಲಾಯಿಸಲು ಅರ್ಹರು: ಕೋರ್ಟ್‌ ಆದೇಶ NWKRTC ಕಲಘಟಗಿ ಘಟಕಕ್ಕೆ ಎಂಡಿ ಪ್ರಿಯಾಂಗಾ ಭೇಟಿ: ನೌಕರರ ಕುಂದುಕೊರತೆ ಆಲಿಕೆ BMTC ಸಾಥ್‌ನಿಂದ ಒಂದೇದಿನದಲ್ಲಿ 5.59 ಕೋಟಿ ರೂ. ಆದಾಯ ಗಳಿಸಿದ KSRTC KSRTC: ಆದಾಯ ಸಂಗ್ರಹಣೆಯಲ್ಲಿ 2ನೇ ಘಟಕ ಪ್ರಥಮ- ಪ್ರತಿಯೊಬ್ಬ ಸಿಬ್ಬಂದಿಗೂ ಧನ್ಯವಾದ ತಿಳಿಸಿದ ಸಾರಿಗೆ ಸಚಿವರು, ಅಧಿಕಾರ... ರಾಜಿಯಾಗಿದೆ ಅಂದರೂ KSRTC ಡ್ರೈವರ್‌ಗೆ 7 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು 2 ಸಾವಿರ ರೂ. ಕೊಟ್ಟಮೇಲೆ ಬಸ್‌ ಬಿಟ್ಟ ಪೊಲೀ... KSRTC ನಿವೃತ್ತ ನೌಕರರ ಕನಿಷ್ಠ ಪಿಂಚಣಿ ಪಡೆಯುವ ಹೋರಾಟಕ್ಕೆ ಅತೀ ಶೀಘ್ರದಲ್ಲೇ ಸಿಗಲಿದೆ ಫಲ: ನಂಜುಂಡೇಗೌಡ 2 ಸಾವಿರ ರೂ. ಲಂಚಕೊಟ್ಟ ಮೇಲೆ 6ಗಂಟೆ ಬಳಿಕ ಕಾರು-KSRTC ಬಸ್‌ ಬಿಟ್ಟು ಕಳಿಸಿದ ಮೈಸೂರು ಸಂಚಾರಿ ಪೊಲೀಸರು ಹಾಸನಾಂಬೆ ದೇವಿ ಉತ್ಸವದ 9ದಿನಗಳಲ್ಲಿ ದಾಖಲೆಯ ₹12,63,83,808 ಆದಾಯ ಸಂಗ್ರಹ