ಬೆಂಗಳೂರು: ನಿನ್ನೆ ರಾತ್ರಿಯಿಂದ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳನ್ನು ಒಂದು ವಾರ ಲಾಕ್‌ಡೌನ್ ಮಾಡಲಾಗಿದೆ. ಆದರೆ ಜನರ ಓಡಾಟ ಈ ಹಿಂದಿನಂತೆಯೆ ಇದೆ.
ಈ ಬಗ್ಗೆ ಪೊಲೀಸ್ ಅಧಿಕಾರಿಗಳುನ್ನು ಕೇಳಿದರೆ ಗಾರ್ಮೆಂಟ್ಸ್, ಐಟಿಬಿಟಿ ಸೇರಿ ಕೆಲ ಕಂಪನಿನಿಗಳು ಹಾಗೂ ಕೆಲ ಸರ್ಕಾರಿ ಕೆಲಸಗಳು ಮಾಮೂಲಿನಂತೆ ನಡೆಯುತ್ತಿರುವುದರಿಂದ ಕಚೇರಿ, ಕಾರ್ಖಾನೆಗೆ ಹೋಗುವವರ ಸಂಚಾರದಿಂದ ಈರೀತಿ ಜನ ಸಂದಣಿ ಕಾಣುತ್ತಿದೆ ಎಂದು ಹೇಳುತ್ತಿದ್ದಾರೆ.
ಇನ್ನು ಜನರ ಓಡಾಟದಿಂದ ಬೆಂಗಳೂರಿನಲ್ಲಿ ಲಾಕ್‌ಡೌನ್ ಇದೆ ಎಂಬುವುದೇ ಕಾಣುತ್ತಿಲ್ಲ. ಬೈಕ್‌ಗಳಲ್ಲಿ ಸಂಚರಿಸುವವರು ಮತ್ತು ಕಾರ್‌ನಲ್ಲಿ ಓಡಾಡುತ್ತಿರುವುದು ಮಾಮೂಲಿಯಂತೆ ಕಂಡು ಬರುತ್ತಿದೆ.
ಇನ್ನು ಬೆಂಗಳೂರು ಉತ್ತರ ವಲಯ, ದಕ್ಷಿಣ ವಲಯ ಸೇರಿ ಬುತೇಕ ಎಲ್ಲ ವಲಯಗಲ್ಲೂ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ರಸ್ತೆಗಿಳಿದಿದ್ದು, ಎಲ್ಲೆಡೆ ಹೈ ಅಲರ್ಟ್ ಆಗಿದ್ದಾರೆ. ಜತೆಗೆ ರಸ್ತೆಯಲ್ಲಿ ಸಂಚರಿಸುತ್ತಿರುವವರ ಮಾಹಿತಿಯನ್ನು ಕಲೆಹಾಕುತ್ತಿದ್ದು, ಅವರು ಎಲ್ಲಿಗೆ ಹೋಗುತ್ತಿದ್ದಾರೆ, ಅನಿವಾರ್ಯತೆ ಏನು ಎಂಬುದನ್ನು ತಿಳಿದು ನಂತರ ಅವರ ವಾಹನಗಳನ್ನು ಸೀಜ್ ಮಾಡಬೇಕೆ ಬೇಡವೆ ಎಂಬುದರ ಬಗ್ಗೆ ಅಂತಿಮ ತೀರ್ಮಾನವನ್ನು ತೆಗೆದುಕೊಳ್ಳುತ್ತಿದ್ದಾರೆ.