ಇಂದು ಕ್ರೇಜಿಸ್ವಾರ್ ರವಿಚಂದ್ರನ್ ಜನ್ಮದಿನ
ಕೊರೊನಾ ಹಿನ್ನೆಲೆ ಅಭಿಮಾನಿಗಳು ಗುಂಪು ಸೇರದಂತೆ ಮನವಿ
ಕನ್ನಡ ಚಿತ್ರರಂಗದ ಕ್ರೇಜಿಸ್ಟಾರ್ ರವಿ ಚಂದ್ರನ್ ಹುಟ್ಟುಹಬ್ಬವನ್ನು ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲಾಗುವುದು ಎಂದು ಅವರ ಪುತ್ರರಾದ ಮನುರಂಜನ್ ಮತ್ತು ವಿಕ್ರಮ್ ಹೇಳಿದರು.

ಅಪ್ಪನಿಗೆ ಪ್ರತಿ ವರ್ಷ ಶರ್ಟ್ ಅನ್ನು ಗಿಫ್ಟ್ ಆಗಿ ಮನುರಂಜನ್ ನೀಡುತ್ತಿದೆ. ಅದನ್ನು ಅವರಿಗೆ ಕೈಗೆ ಕೊಡುವ ಬದಲು ಅವರ ವಾರ್ಡ್‌ರೋಬ್‌ನಲ್ಲಿ ಇಡುತ್ತಿದ್ದೆ. ಆದರೆ ಈ ವರ್ಷ ಕೋವಿಡ್-19 ಭಯ ಜನರನ್ನು ಕಾಡುತ್ತಿರುವುದರಿಂದ ಕೊಂಡುಕೊಳ್ಳಲು ಆಗಲಿಲ್ಲ. ಇದರಿಂದ ನಮ್ಮ ಪಪ್ಪನಿಗೆ ಹೊಸ ಶರ್ಟ್ ಕಡಲಾಗಲಿಲ್ಲವನ್ನ ಎಂಬ ಬೇಸರವಿದೆ. ಆದರೂ ಇಂದು ನಾವು ಅದ್ದೂರಿಯಾಗಿ ಹುಟ್ಟುಹಬ್ಬ ಮಾಡುವ ಬದಲು ಮನೆಯಲ್ಲಿಯೇ ಸರಳವಾಗಿ ಆಚರಿಸುತ್ತೇವೆ ಎಂದು ಹೇಳಿದರು.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ಅಪ್ಪನ ಹುಟ್ಟುಹಬ್ಬ ಅಂದರೆ ಮನೆ ಒಳಗೆ, ಹೊರಗೆ ಗಲಾಟೆ, ಇಡೀ ಮನೆ ಪೋಸ್ಟರ್, ಬ್ಯಾನರ್‌ಗಳಿಂದ ತುಂಬಿ ಹೋಗುತ್ತಿತ್ತು. ಇಲ್ಲ ಹೊಸ ಸಿನಿಮಾ ರಿಲೀಸ್ ಇರುತ್ತಿತ್ತು. ಸಾಕಷ್ಟು ಜನ ನಿರ್ಮಾಪಕರು, ನಿರ್ದೇಶಕರು ಮನೆಗೆ ಬರುತ್ತಿದ್ದರು. ಆದರೆ ಇಂದು ಅಂಥ ಅದ್ದೂರಿಯಾದ ಯಾವುದೂ ಇಲ್ಲ. ಹೀಗಾಗಿ ಹಿಂದಿನ ಜನ್ಮದಿನ ಸಂಭ್ರಮವೆಲ್ಲ ಇಂದು ಕಣ್ಣ ಮುಂದೆ ಬರುತ್ತಿದೆ. ಈ ದಿನ ಪಪ್ಪನೆ ಮನೆ ಮುಂದೆ ಅಭಿಮಾನಿಗಳು ಸೇರದಂತೆ ಮನವಿ ಮಾಡಿದ್ದಾರೆ ಹಾಗಾಗಿ ಯಾರು ಮನೆ ಬಳಿ ಬರಬೇಡಿ ಎಂದು ಮನು ಕೂಡ ಮಾನವಿ ಮಾಡಿದ್ದಾರೆ.
ಇನ್ನು ಸರಳವಾಗಿ ರವಿಮಾಮ ಜನ್ಮದಿನ ಆಚರಿಸಿಕೊಳ್ಳುತ್ತಿದ್ದು, ಅದಕ್ಕೆ ದೂರದಿಂದಲೇ ಅಭಿಮಾನಿಗಳು ಅವರನ್ನು ಹರಸಿ ಸಂಭ್ರಮಿಸಬೇಕು ಎಂದು ಏಕಾಂಗಿಯ ಮನೆಯವರು ಮನವಿ ಮಾಡಿದ್ದಾರೆ. ಹೀಗಾಗಿ ಅಭಿಮಾನಿಗಳು ಕೂಡ ಪುಟ್ಟನಂಜನ ಹುಟ್ಟುಹಬ್ಬವನ್ನು ದೂರದಿಂದಲೇ ಆಚರಿಸಿ ಸಂಭ್ರಮಿಸಲಿದ್ದಾರೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail