ಮಂಡ್ಯ: ಜಿಲ್ಲೆಯ ಭಾರತಿ ನಗರದಲ್ಲಿರುವ ಭಾರತಿ ಸಂಯುಕ್ತ ಪಿಯು ಕಾಲೇಜಿನ ಎಂ.ಆರ್. ಪ್ರಶಾಂತ್ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಫಲಿತಾಂಶದಲ್ಲಿ 600ಕ್ಕೆ 553 ಅಂಕಗಳನ್ನು ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾನೆ.
ಜಿಲ್ಲೆಯ ಮಳವಳ್ಳಿ ತಾಲೂಕಿನ ಮುದ್ದೇಗೌಡನ ದೊಡ್ಡಿ ನಿವಾಸಿ ರಮೇಶ್ ಮತ್ತು ಸೌಮ್ಯಾ ದಂಪತಿ ಪುತ್ರ. ತಂದೆ ಅಮೃತೇಶ್ವರಹಳ್ಳಿ ಸರ್ಕಾರಿ ಶಾಲೆಯ ಶಿಕ್ಷಕರಾಗಿದ್ದಾರೆ.
ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಭೌತಶಾಸ್ತ್ರ-92, ರಸಾಯನಶಾಸ್ತ್ರ- 87,ಗಣಿತ- 99, ಜೀವಶಾಸ್ತ್ರ – 98, ಕನ್ನಡ-92, ಇಂಗ್ಲಿಷ್-85 ಅಂಕಗಳನ್ನು ಗಳಿಸುವ ಮೂಲಕ ಪ್ರಶಾಂತ್ ಕಾಲೇಜು ಹಾಗೂ ಪಾಲಕರಿಗೆ ಕೀರ್ತಿ ತಂದಿದ್ದಾನೆ.