NEWSದೇಶ-ವಿದೇಶಸಂಸ್ಕೃತಿ

ಹುತಾತ್ಮ ನಮ್ಮ ಸೈನಿಕರ ಶೌರ್ಯ, ತ್ಯಾಗ, ಬಲಿದಾನಗಳಿಗೆ ಅನಂತ ಪ್ರಣಾಮಗಳು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಚೀನಾದ ಕುತಂತ್ರ ಬುದ್ಧಿಯಿಂದ ಹುತಾತ್ಮರಾದ ನಮ್ಮ ವೀರ ಯೋಧರಿಗೆ ಇದೋ ಸಲಾಮ್  ಎಂದು  ಹಲವು ಗಣ್ಯರು ಈ ವೀರ ಪುತ್ರರ ಅತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.

ಭಾರತ ಮತ್ತು ಚೀನಾ ಗಡಿಯ ಗಾಲ್ವಾನ್ ಕಣಿವೆಯಲ್ಲಿ ದೇಶ ರಕ್ಷಣೆಯ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಾ, ಹುತಾತ್ಮರಾದ ನಮ್ಮ ಸೈನಿಕರ ಶೌರ್ಯ, ತ್ಯಾಗ, ಬಲಿದಾನಗಳಿಗೆ ಅನಂತ ಪ್ರಣಾಮಗಳು. ನಮ್ಮ ಸೈನಿಕರ ಜೊತೆಗೆ ಇಡೀ ದೇಶ ನಿಂತಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪರಿಸ್ಥಿತಿಗಳನ್ನು ಸಮರ್ಥವಾಗಿ ನಿರ್ವಹಿಸುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

ಸಚಿವ ಬಿ. ಶ್ರೀರಾಮುಲು
ಮಾತು ಉಳಿಸಿಕೊಳ್ಳದ ಕುತಂತ್ರಿ ಚೀನಾದ ವಿಶ್ವಾಸಘಾತದಿಂದ ಗಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷದಲ್ಲಿ ನಮ್ಮ 20ಕ್ಕೂ ಹೆಚ್ಚು ಯೋಧರು ಪ್ರಾಣಾರ್ಪಣೆ ಮಾಡಿದ್ದಾರೆ. ದೇಶಕ್ಕಾಗಿ ಕೆಚ್ಚೆದೆಯಿಂದ ಹೋರಾಡಿ ಹುತಾತ್ಮರಾದ ವೀರ ಯೋಧರಿಗೆ ಇದೋ ಸಲಾಮ್. ಈ ಘಟನೆಯಿಂದ ಚೀನಾಕ್ಕೆ ಪ್ರತ್ಯುತ್ತರ ನೀಡುವ ನಮ್ಮ ಸೇನೆಯ ಶಕ್ತಿ, ಸಾಮರ್ಥ್ಯ ಇನ್ನಷ್ಟು ಹೆಚ್ಚಲಿದೆ. ಭಾರತಮಾತೆಯ ಈ ವೀರ ಪುತ್ರರ ಅತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ ಆರೋಗ್ಯ ಸಚಿವ ಬಿ. ಶ್ರೀರಾಮುಲು ತಿಳಿಸಿದ್ದಾರೆ.

ಶಿಕ್ಷಣ ಸಚಿವ  ಡಾ. ಕೆ. ಸುಧಾಕರ್
ಗಾಲ್ವಾನ್ ಘರ್ಷಣೆಯಲ್ಲಿ ಹುತಾತ್ಮರಾದ ಕರ್ನಲ್ ಸಂತೋಷ್ ಬಾಬು ಅವರ ತಾಯಿಯ ಮಾತು, “ತಾಯಿಯಾಗಿ ನಾನು ತುಂಬಾ ದುಃಖಿತಳಾಗಿದ್ದೇನೆ, ಆದರೂ ನನ್ನ ಮಗ ದೇಶವನ್ನು ರಕ್ಷಿಸುವಾಗ ಹುತಾತ್ಮನಾದ ಎಂದು ನನಗೆ ಹೆಮ್ಮೆ ಇದೆ!” ಆ ಧೀರ ತಾಯಿಗೆ ನಮನಗಳು. ಪ್ರತಿ ಭಾರತೀಯ ಸೈನಿಕನ ಹಿಂದೆ ಆತನ ಕುಟುಂಬ ಮತ್ತು ಭಾರತೀಯರ ದೇಶಭಕ್ತಿಯ ಶಕ್ತಿಯಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ಹೇಳಿದರು.

ಸಚಿವ ಕೆ.ಎಸ್‌. ಈಶ್ವರಪ್ಪ
ದೇಶಕ್ಕಾಗಿ ಹುತಾತ್ಮರಾದ ವೀರ ಯೋಧರಿಗೆ ನನ್ನ ಭಾವಪೂರ್ಣ ಶ್ರದ್ಧಾಂಜಲಿಗಳು. ಭಾರತ ಮಾತೆಯ ಸೇವೆಗಾಗಿ ವೀರರನ್ನು ನೀಡಿದ ಈ ತಾಯಿಗೆ ನನ್ನ ಗೌರವ ನಮನಗಳು. ನಿಮ್ಮ ತ್ಯಾಗಕ್ಕೆ ನಾವು ಸದಾ ಚಿರಋಣಿ ಎಂದು ಗ್ರಾಮೀಣಾಭಿವೃದ್ಧಿ ಮತ್ತು  ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ ತಿಳಿಸಿದ್ದಾರೆ.

ಡಾ. ಸಿ.ಎನ್‌. ಅಶ್ವಥ್‌ ನಾರಾಯಣ್‌
ಗಾಲ್ವಾನ್ ಕಣಿವೆಯಲ್ಲಿ ರಾಷ್ಟ್ರ ರಕ್ಷಣೆಯ ಕರ್ತವ್ಯ ನಿರ್ವಹಿಸುತ್ತಾ ಹುತಾತ್ಮರಾದ ನಮ್ಮ ಕೆಚ್ಚೆದೆಯ ವೀರ ಸೈನಿಕರಿಗೆ ನನ್ನ ಅನಂತ ಪ್ರಣಾಮಗಳು. ನಿಮ್ಮ ತ್ಯಾಗ, ಬಲಿದಾನಕ್ಕೆ ನಾವು ಎಂದೆಂದಿಗೂ ಚಿರಋಣಿ. ಅವರ ಕುಟುಂಬದವರಿಗೆ ಈ ದುಃಖ ಭರಿಸುವ ಶಕ್ತಿಯನ್ನು ದೇವರು ಕೊಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್‌. ಅಶ್ವಥ್‌ ನಾರಾಯಣ್‌ ಹೇಳಿದ್ದಾರೆ.

ಇಂತಹ ಸನ್ನಿವೇಶದಲ್ಲಿ ನಾವೆಲ್ಲರೂ ಒಂದು ರಾಷ್ಟ್ರವಾಗಿ ಒಗ್ಗಟ್ಟು ಪ್ರದರ್ಶಿಸಬೇಕು. ರಾಜಕೀಯ ಮಾಡದೆ ಕೇಂದ್ರ ಸರ್ಕಾರ ಹಾಗೂ ನಮ್ಮ ರಕ್ಷಣಾ ಪಡೆಯ ಬೆಂಬಲಕ್ಕೆ ನಾವಿರಬೇಕು. ನಮ್ಮ ದೇಶದ ಘನತೆಗೆ ಯಾವುದೇ ಧಕ್ಕೆ ಬರದಂತೆ ಮೋದಿ ಅವರು ನೋಡಿಕೊಳ್ಳುತ್ತಾರೆ ಎಂಬ ನಂಬಿಕೆ ನನಗಿದೆ  ತಿಳಿಸಿದರು.

ಸಚಿವ ಆರ್‌. ಅಶೋಕ್‌
ಭಾರತೀಯ ಲಡಾಖ್ ಗಡಿಯೊಳಗೆ ಅಕ್ರಮವಾಗಿ ನುಸುಳಿ ಉದ್ಧಟತನ ಮೆರೆದ ಚೀನಾಕ್ಕೆ ತಕ್ಕ ಉತ್ತರ ನೀಡಿ ತಮ್ಮ ಕೊನೆಯ ಉಸಿರಿನ ವರೆಗೂ ಗಡಿಯಲ್ಲಿ ಹೋರಾಡಿ ಹುತಾತ್ಮರಾದ 20 ವೀರ ಯೋಧರ ಚರಣಗಳಿಗೆ ಶತಕೋಟಿ ನಮನಗಳು ಎಂದು ಕಂದಾಯ ಸಚಿವ ಆರ್‌. ಅಶೋಕ್‌ ತಿಳಿಸಿದ್ದಾರೆ.

Leave a Reply