NEWSದೇಶ-ವಿದೇಶ

ಕೊರೊನಾ ವಿರುದ್ಧದ ಹೋರಾಟಕ್ಕೆ ಪಿಎಂ ಕೇರ್ಸ್ ನಿಧಿಯಿಂದ 3100 ಕೋಟಿ ರೂ. ಬಿಡುಗಡೆ

ವಿಜಯಪಥ ಸಮಗ್ರ ಸುದ್ದಿ

ನ್ಯೂಡೆಲ್ಲಿ: ಪಿ.ಎಂ.ಕೇರ್ಸ್ (ತುರ್ತು ಪರಿಸ್ಥಿತಿಗಳಲ್ಲಿ ಪ್ರಧಾನ ಮಂತ್ರಿ ಅವರ ನಾಗರಿಕ ನೆರವು ಮತ್ತು ಪರಿಹಾರ ) ನಿಧಿ ಟ್ರಸ್ಟ್ ಬುಧವಾರ ಕೋವಿಡ್ -19 ರ ವಿರುದ್ದ ಹೋರಾಡಲು 3100 ಕೋ.ರೂ.ಗಳನ್ನು ದೇಶದ ಎಲ್ಲಾ ರಾಜ್ಯಗಳಿಗೂ ಅವಶ್ಯಕತೆಗೆ ಅನುಗುಣವಾಗಿ  ಬಿಡುಗಡೆ ಮಾಡಿದೆ.

ಒಟ್ಟು 3100 ಕೋ ಟಿ ರೂ.ಗಳಲ್ಲಿ 2000 ಕೋಟಿ ರೂ.ಗಳನ್ನು ವೆಂಟಿಲೇಟರ್‌ಗಳ ಖರೀದಿಗೆ , 1000 ಕೋ ಟಿ ರೂ.ಗಳನ್ನು ವಲಸೆ ಕಾರ್ಮಿಕರ ಕಾಳಜಿಗಾಗಿ ಬಳಸಲು ಮತ್ತು 100 ಕೋ ಟಿ ರೂ.ಗಳನ್ನು ಲಸಿಕೆ ಅಭಿವೃದ್ಧಿಗಾಗಿ  ನೀಡಲು ತಿಳಿಸಿದೆ.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ   https://play.google.com/store/apps/detail

ಟ್ರಸ್ಟನ್ನು 2020 ರ ಮಾರ್ಚ್ 27 ರಂದು  ಪ್ರಧಾನ ಮಂತ್ರಿ  ನರೇಂದ್ರ ಮೋದಿ (ಅಧಿಕಾರೇತರ) ಅವರ ನೇತೃತ್ವದಲ್ಲಿ ರಚಿಸಲಾಗಿತ್ತು. ಇದರ ಇತರ ಅಧಿಕಾರೇತರ ಸದಸ್ಯರೆಂದರೆ ರಕ್ಷಣಾ ಸಚಿವರು, ಗೃಹ ಸಚಿವರು ಮತ್ತು ಹಣಕಾಸು ಸಚಿವರು. ಈ ಪ್ಯಾಕೇಜನ್ನು ಘೋಷಿಸಿದ ಪ್ರಧಾನ ಮಂತ್ರಿ   ಪಿ.ಎಂ. ಕೇರ್ಸ್ ನಿಧಿಗೆ ಉದಾರವಾಗಿ ದೇಣಿಗೆ ನೀಡಿದವರಿಗೆ ಕೃತಜ್ಞತೆ ಸಲ್ಲಿಸಿದರು. ಈ ನಿಧಿ, ಕೊರೊನಾ-19 ವಿರುದ್ಧ ಭಾರತದ ಹೋರಾಟಕ್ಕೆ ನೆರವಾಗಲಿದೆ.

50,000 ವೆಂಟಿ ಲೇಟರುಗಳು
ದೇಶಾದ್ಯಂತ ಕೋವಿಡ್-19 ಪ್ರಕರಣಗಳನ್ನು ನಿಭಾಯಿಸಲು ಮೂಲಸೌಕರ್ಯವನ್ನು ಕ್ರೋಢೀಕರಿಸುವುದಕ್ಕಾಗಿ 50 ಸಾವರ ದೇಶಿ ನಿರ್ಮಿತ ವೆಂಟಿಲೇಟರುಗಳನ್ನು ಪಿ.ಎಂ. ಕೇರ್ಸ್ ನಿಧಿಯಿಂದ ಅಂದಾಜು 2,000 ಕೋಟಿ ರೂ. ವೆಚ್ಚದಲ್ಲಿ ಖರೀದಿಸಲಾಗುವುದು. ಈ ವೆಂಟಿಲೇಟರುಗಳನ್ನು ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಸರಕಾರ ನಿರ್ವಹಿಸುವ ಕೋವಿಡ್ ಆಸ್ಪತ್ರೆಗಳಿಗೆ ಗಂಭೀರ ಸ್ಥಿತಿಯಲ್ಲಿರುವ ಕೋವಿಡ್ -19 ಪ್ರಕರಣಗಳ ಚಿಕಿತ್ಸೆಗಾಗಿ ಒದಗಿಸಲಾಗುವುದು.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ   https://play.google.com/store/apps/detail

ವಲಸೆ ಕಾರ್ಮಿಕರಿಗೆ ಪರಿಹಾರ
ವಲಸೆಗಾರರ ಮತ್ತು ಬಡವರ ಕಲ್ಯಾಣಕ್ಕಾಗಿ ಈಗಿರುವ ಕ್ರಮಗಳನ್ನು ಬಲಪಡಿಸಲು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಒಟ್ಟು 1000 ಕೋಟಿ ರೂ. ಗಳ ನೆರವನ್ನು ಪಿ.ಎಂ. ಕೇರ್ಸ್ ನಿಧಿಯಿಂದ ಕೊಡಲಾಗುವುದು. ಈ ಮೊತ್ತವನ್ನು ಜಿಲ್ಲಾಧಿಕಾರಿಗಳು/ ಮುನ್ಸಿಪಲ್ ಕಮಿಷನರ್‌ ವಲಸೆಗಾರರಿಗೆ ವಸತಿ ಒದಗಿಸುವಿಕೆ, ಆಹಾರ ವ್ಯವಸ್ಥೆ, ವೈದ್ಯಕೀಯ ಚಿಕಿತ್ಸೆ  ಮತ್ತು ವಲಸೆಗಾರರ ಸಾರಿಗೆ ವೆಚ್ಚಕ್ಕಾಗಿ ಬಳಸಿಕೊಳ್ಳಲು ಅನುಕೂಲವಾಗುವಂತೆ  ಒದಗಿಸಲಾಗುವುದು.

ಲಸಿಕೆ ಅಭಿವೃದ್ಧಿ
ಕೋವಿಡ್-19 ಕ್ಕೆ ಲಸಿಕೆಯು ಅತ್ಯಂತ ಅವಶ್ಯಕವಾಗಿದ್ದು ಮತ್ತು ಭಾರತೀಯ ಶೈಕ್ಷಣಿಕ ವಲಯ, ನವೋದ್ಯಮಗಳು, ಹಾಗೂ ಕೈಗಾರಿಕೆಗಳು ಲಸಿಕೆ ವಿನ್ಯಾಸ ಮತ್ತು ಅಭಿವೃದ್ಧಿಗಾಗಿ ಮುಂದೆ ಬಂದಿವೆ. ಕೋವಿಡ್ -19 ಲಸಿಕೆ ವಿನ್ಯಾಸಕಾರರನ್ನು ಮತ್ತು ಅಭಿವೃದಿಗಾರರನ್ನು ಬೆಂಬಲಿಸಲು ಪಿ.ಎಂ. ಕೇರ್ಸ್ ನಿಧಿಯಿಂದ 100 ಕೋಟಿ ರೂಪಾಯಿಗಳನ್ನು ಲಸಿಕೆ ಅಭಿವೃದ್ಧಿಗೆ ವೇಗ ತಂದುಕೊಡುವುದಕ್ಕಾಗಿ ನೀಡಲಾಗುವುದು, ಇದನ್ನು ಪ್ರಧಾನ ವೈಜ್ಞಾನಿಕ ಸಲಹೆಗಾರರ ಮೇಲುಸ್ತುವಾರಿಯಲ್ಲಿ ಬಳಸಲಾಗುವುದು ಎಂದು ಟ್ರಸ್ಟ್‌ ಮಾಹಿತಿ ನೀಡಿದೆ.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ   https://play.google.com/store/apps/detail

2 Comments

Leave a Reply

error: Content is protected !!
LATEST
ಕೋರಮಂಗಲದ ಬಿಡಿಎ ಕಾಂಪ್ಲೆಕ್ಸ್ ಕೆಡವಿ ಮಾಲ್ ಕಟ್ಟುವ ಬಿಡಿಎ ನಿರ್ಧಾರಕ್ಕೆ ಎಎಪಿ ವಿರೋಧ ಜೈಲಲ್ಲೇ ದೇವರಾಜೇಗೌಡರ ಜೀವಕ್ಕೆ ಅಪಾಯವಿದೆ : ಸುರೇಶಗೌಡ ಆತಂಕ KSRTC ಬಸ್‌- ಕಾರು ನಡುವೆ ಭೀಕರ ಅಪಘಾತ: ಕಾರು ಚಾಲಕ ಸಾವು, ನಾಲ್ವರ ಸ್ಥಿತಿ ಗಂಭೀರ ಜಿಆರ್ ಫಾರ್ಮ್ ಹೌಸ್‌ನಲ್ಲಿ ರೇವ್​ ಪಾರ್ಟಿ: ನಟಿಯರು ಸೇರಿ 80ಕ್ಕೂ ಹೆಚ್ಚು ಬಂಧನ KSRTC: ಹೆದ್ದಾರಿಯಲ್ಲಿ ಕೆಟ್ಟುನಿಂತ ಬಸ್‌ಗಳು - ಕಿಮೀ ವರೆಗೆ ಟ್ರಾಫಿಕ್ ಜಾಮ್ KSRTC: ₹185 ಟಿಕೆಟ್‌ ಕೊಟ್ಟು ₹200 ಕೇಳಿದ ಕಂಡಕ್ಟರ್‌ - ದೂರು ಕೊಟ್ಟ ಪ್ರಯಾಣಿಕ ಧೈರ್ಯವಿದ್ದರೆ ಎಎಪಿ ಮುಖಂಡರೆಲ್ಲರನ್ನೂ ಜೈಲಿಗೆ ಹಾಕಿ: ಪ್ರಧಾನಿ ಮೋದಿಗೆ ಪೃಥ್ವಿ ರೆಡ್ಡಿ ಸವಾಲು ಪತ್ನಿ, ಮಗನಿಗೆ ಮಾಸಿಕ ಜೀವನಾಂಶ ಪಾವತಿಸದ ಪತಿ ಆಸ್ತಿ ಮುಟ್ಟುಗೋಲು: ಹೈಕೋರ್ಟ್ ಮಹತ್ವದ ಆದೇಶ ಬೆಳ್ಳಂಬೆಳಗ್ಗೆ ಸರಣಿ ಅಪಘಾತ: ಕಾರು ನಜ್ಜುಗುಜ್ಜು - ಪ್ರಯಾಣಿಕರು ಸೇಫ್ ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ:‌ ಶೇ.25.5 ವೇತನ ಹೆಚ್ಚಳ ಬಹುತೇಕ ಖಚಿತ