NEWSನಮ್ಮರಾಜ್ಯಸಿನಿಪಥ

ಸಂಕಷ್ಟದಲ್ಲಿರೋ ಸ್ಯಾಂಡಲ್‌ವುಡ್‌ ಮಂದಿಗೂ ನೆರವು ನೀಡಿ

ಮುಖ್ಯಮಂತ್ರಿ ಬಿಎಸ್‌ವೈಗೆ ಹಿರಿಯ ನಟಿ ತಾರಾ ಅನುರಾಧಾ ಪತ್ರದ ಮೂಲಕ ಮನವಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ವಿಶ್ವಾದ್ಯಂತ ಯಮಸ್ವರೂಪಿ ಕೊರೊನಾ ಸೋಂಕು ಜನರನ್ನು ಕಾಡುತ್ತಿದ್ದು, ಅದಕ್ಕೆ ರಾಜ್ಯದ ಮಂದಿಯೂ ಪೀಡನೆಯಿಂದ ಹೊರಬಂದಿಲ್ಲ.  ಈ ವೇಳೆ  ಸ್ಯಾಂಡಲ್‌ವುಡ್‌ ಮಂದಿಯೂ ತುಂಬ ಸಮಸ್ಯೆಯನ್ನು ಜೀವನದಲ್ಲಿ ಎದುರಿಸುವಂತಾಗಿದೆ.

ಈ ಹಿನ್ನೆಲೆಯಲ್ಲಿ ಕಲಾವಿದರಿಗೆ ನೀವು ನೆರವಾಗಬೇಕು ಎಂದು  ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಬಿಜೆಪಿ ನಾಯಕಿ, ಹಿರಿಯ ನಟಿ  ತಾರಾ ಅನುರಾಧಾ ಪತ್ರ ಬರೆಯುವ ಮೂಲಕ ಚಿತ್ರರಂಗಕ್ಕೂ ಸಹಾಯ ಹಸ್ತ ಚಾಚುವಂತೆ ಮನವಿ ಮಾಡಿದ್ದಾರೆ.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ   https://play.google.com/store/apps/detail

ಕೊರೊನಾ ಹೆಮ್ಮಾರಿಯಿಂದ ರಾಜ್ಯದ ವಿವಿಧ ವೃತ್ತಿಪರ ವಿಭಾಗಗಳಿಗಾಗಿ 1610 ಕೋಟಿ ರೂಪಾಯಿ ಮಂಜೂರು ಮಾಡುವ ಮೂಲಕ ನಾಡಿನ ಆ ಜನರ ಸಮಸ್ಯೆಗೆ ಸ್ಪಂದಿಸಿದ್ದೀರಿ ಅದರಂತೆ  ಚಿತ್ರರಂಗವೂ ಸಹ ವೃತ್ತಿಪರ ವಿಭಾಗವೇ ಆಗಿದ್ದು, ಕೊರೊನಾ ಲಾಕ್ ಡೌನ್ ಪರಿಣಾಮ ಸಂಕಷ್ಟದಲ್ಲಿದೆ. ತಾವು ಈವಿಭಾಗಕ್ಕೂ ನೆರವು ನೀಡಿ ಅದಕ್ಕಾಗಿ 1610 ಕೋಟಿ ರೂ. ನೆರವು ಪಟ್ಟಿಯಲ್ಲಿ ನಮ್ಮ ಚಿತ್ರರಂಗವನ್ನು ಸೇರಿಸಿ ಎಂದು ಕೇಳಿಕೊಂಡಿದ್ದಾರೆ.

ರಾಜ್ಯದಲ್ಲಿ ಲಾಕ್ ಡೌನ್ ಆರಂಭವಾದ ದಿನದಿಂದಲೂ ಚಿತ್ರರಂಗದ ಚಟುವಟಿಕೆಗಳು ಸ್ತಬ್ಧವಾಗಿವೆ. ಯಾವುದೇ ಹೊಸ ಚಿತ್ರಗಳು ಸೆಟ್ಟೇರಿಲ್ಲ. ಆರಂಭವಾಗಿರುವ ಚಿತ್ರಗಳ ಶೂಟಿಂಗ್ ಅರ್ಧಕ್ಕೇ ನಿಂತಿದೆ. “ಸದ್ಯಕ್ಕೆ ಚಿತ್ರೀಕರಣಕ್ಕೆ ಅವಕಾಶವಿಲ್ಲ. ರೆಕಾರ್ಡಿಂಗ್, ಡಬ್ಬಿಂಗ್ ಮೊದಲಾದ ಕಾರ್ಯಗಳನ್ನು ಮುಗಿಸಿಕೊಳ್ಳಿ” ಎಂದು ಕಂದಾಯ ಸಚಿವ ಆರ್. ಅಶೋಕ ಈಗಾಗಲೇ ಸಲಹೆ ನೀಡಿದ್ದಾರೆ. ಆದರೆ ಅದಕ್ಕೂ ಈ ಮಹಾಮಾರಿಯ ಭಯ ಕಾಡುತ್ತಿದ್ದು, ಚಿತ್ರರಂಗದ ಮಂದಿಯ ಕೈ ಕಟ್ಟಿಹಾಕಿದೆ. ಆದ್ದರಿಂದ ತಾವು ಸ್ಯಾಂಡಲ್‌ವುಡ್‌ ಮಂದಿಯ ಕಷ್ಟಕ್ಕೆ ಸಹಾಯ ಮಾಡಬೇಕು ಎಂದು ವಿನಂತಿಸಿಕೊಂಡಿದ್ದಾರೆ.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ   https://play.google.com/store/apps/detail

Leave a Reply

error: Content is protected !!
LATEST
ಚಾಮುಂಡಿ ಹುಟ್ಟುಹಬ್ಬ: ಬೆಳ್ಳಿ ಪಲ್ಲಕ್ಕಿ ಉತ್ಸವಕ್ಕೆ ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಚಾಲನೆ ನಾಡ ಅಧಿದೇವತೆ ಚಾಮುಂಡಿ ತಾಯಿಯ ವರ್ಧಂತಿ ಸಂಭ್ರಮ: ಬೆಟ್ಟಕ್ಕೆ ಹರಿದು ಬರುತ್ತಿದೆ ಭಕ್ತ ಸಾಗರ KRSನಿಂದ ಕಾವೇರಿ ನದಿಗೆ 1.30 ಲಕ್ಷ ಕ್ಯುಸೆಕ್ ನೀರು ಬಿಡುಗಡೆ ಪತ್ನಿ ಜೊತೆ 40 ವರ್ಷಗಳ ಹಿಂದೆ ಕೋಪ ಮಾಡಿಕೊಂಡಿದ್ದ ಪತಿ- ಸಾಯುವ ವೇಳೆಯೂ ಮಾತಾಡಲಿಲ್ಲ ! ಬೆಳಗಾವಿ: ಸವದತ್ತಿ ಯಲ್ಲಮ್ಮ ದೇವಿಯ ಹುಂಡಿಯಲ್ಲಿ 2 ತಿಂಗಳಲ್ಲೇ₹ 1.96 ಕೋಟಿ ಕಾಣಿಕೆ ಸಂಗ್ರಹ ಕಡ್ಡಾಯವಾಗಿ ಮಣ್ಣಿನ ಪರೀಕ್ಷೆ ಮಾಡಿಸಿ: ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್ ಕೆ.ಆರ್‌.ಪೇಟೆ: ಚೌಡೇಶ್ವರಿ ಅಮ್ಮನವರ ದೇಗುಲದಲ್ಲಿ ಆಷಾಢ ಶುಕ್ರವಾರ ಸಂಭ್ರಮ ಸಂಸತ್‌ನಲ್ಲಿ ಕನ್ನಡಿಗರ ಪರ ಧ್ವನಿ ಎತ್ತಿ: ರಾಜ್ಯದ ಎನ್‌ಡಿಎ ಸಂಸದರಿಗೆ ಎಎಪಿಯ ಡಾ. ಮುಖ್ಯಮಂತ್ರಿ ಚಂದ್ರು ಆಗ್ರಹ “ಶಕ್ತಿ" ಯೋಜನೆಯಿಂದ ಸಾರಿಗೆ ನಿಗಮಗಳ ಆದಾಯ ಹೆಚ್ಚಾಗಿದೆ- ಆದರೆ ನೌಕರರಿಗೆ ವೇತನಕೊಡಲು ಹಣವಿಲ್ಲ- ಎಂಥಾ ಹೇಳಿಕೆ ಇದು ಸಾ... KRS ಭರ್ತಿ: ಅಣೆಕಟ್ಟೆಯಿಂದ ಒಂದು ಲಕ್ಷ ಕ್ಯುಸೆಕ್‌ಗೂ ಅಧಿಕ ಪ್ರಮಾಣದ ನೀರು ಬಿಡುಗಡೆ- ಕಾವೇರಿ ಕೊಳ್ಳದ ಜನರಿಗೆ ಎಚ್ಚರಿ...