KSRTC: 26 ತಿಂಗಳ ಹಿಂಬಾಕಿಗೆ ಒಪ್ಪಿಗೆ ಇಲ್ಲ: ನಾಳೆ ಬೆಂಗಳೂರು ಚಲೋ ಪಕ್ಕ- ಬಸ್ ಓಡಾಟ ಸ್ಥಗಿತ ಕುರಿತು ಅಲ್ಲೇ ನಿರ್ಧಾರ

ಬೆಂಗಳೂರು: 2020ರ ಜನವರಿ 1ರಿಂದ -2023ರ ಫೆ.28ರವರೆಗಿನ 38 ತಿಂಗಳ ಹಿಂಬಾಕಿ ಸೇರಿದಂತೆ ಒಟ್ಟಾರೆ 63 ತಿಂಗಳ ವೇತನ ಹಿಂಬಾಕಿಗೆ ಆಗ್ರಹಿಸುವ ಜತೆಗೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಾರಿಗೆ ನೌಕರರು ನಾಳೆ ಬೆಂಗಳೂರು ಚಲೋ ಹಮ್ಮಿಕೊಂಡಿದ್ದಾರೆ.

ಇನ್ನು 1-1-2021 ರಿಂದ 28-02-2023 ರವರೆಗೆ 26 ತಿಂಗಳ ಹಿಂಬಾಕಿ ನೀಡಲು ಒಪ್ಪಿಗೆಯನ್ನು ಸೂಚಿಸಿದೆ. ಆದರೆ, ಇದಕ್ಕೆ ನಮ್ಮ ಒಪ್ಪಿಗೆ ಇಲ್ಲ 38 ತಿಂಗಳ ಹಿಂಬಾಕಿ ಕೊಡಲೇ ಬೇಕು ಎಂದು ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳು ಆಗ್ರಹಿಸುತ್ತಿದ್ದು, ನಾಳೆ ಬೆಂಗಳೂರು ಚಲೋ ಮಾಡಲಾಗುವುದು ಎಂದು ಎಚ್.ಆರ್.ಜಗದೀಶ್ ತಿಳಿಸಿದ್ದಾರೆ.
ಒಂದು ವೇಳೆ ಇದಕ್ಕೆ ಸರ್ಕಾರ ಸ್ಪಂದಿಸದಿದ್ದರೆ ನಾಳೆ ಗುರುವಾರ ಸಂಜೆ ಬಳಿಕ ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ಕೆಕೆಆರ್‌ಟಿಸಿ ಹಾಗೂ ಎನ್‌ಡಬ್ಲ್ಯುಕೆಅರ್‌ಟಿಸಿ ಬಸ್‌ಗಳ ಹೊರತೆಗೆಯಬೇಕೆ ಬೇಡವೆ ಎಂಬುದನ್ನು ಅಲ್ಲೇ ತೀರ್ಮಾನಿಸುತ್ತೇವೆ ಎಂದು ತಿಳಿಸಿದ್ದಾರೆ.
ಸಾರಿಗೆ ನೌಕರರು ನಾಳೆ ‘ಬೆಂಗಳೂರು ಚಲೋ’ ಕೈಗೊಳ್ಳಲಿದ್ದಾರೆ. ನಗರದ ಫ್ರೀಡಂ ಪಾರಕ್‌ನಲ್ಲಿ ಈ ಪ್ರತಿಭಟನೆ ಹಮ್ಮಿಕೊಂಡಿದ್ದು, ಇದರಲ್ಲಿ 4 ನಿಗಮದ ನೌಕರರು ಭಾಗಿಯಾಗಲಿದ್ದಾರೆ. ಹೀಗಾಗಿ ನಾಳೆ ಸಂಜೆ 4 ಗಂಟೆವರೆಗೆ ಸರ್ಕಾರಕ್ಕೆ ಡೆಡ್‌ಲೈನ್ ನೀಡಲಾಗಿದ್ದು, ಬೇಡಿಕೆ ಸಂಬಂಧ ನಿರ್ಣಯ ಕೈಗೊಳ್ಳದಿದ್ದರೆ ಸಾರಿಗೆ ಬಂದ್ ಆಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇನ್ನು ಈ ಬಗ್ಗೆ ಸರ್ಕಾರ ಇಂದು ರಾತ್ರಿ 26 ತಿಂಗಳ ಹಿಂಬಾಕಿ ಕೊಡುವುದಾಗಿ ಆದೇಶ ಹೊರಡಿಸಿದೆ. ಆದರೆ ಇದಕ್ಕೆ ಸಮಸ್ತ ನೌಕರರು ಒಪ್ಪುತ್ತಿಲ್ಲ. ಈ ಅಧಿಕೃತ ನಿರ್ಧಾರದಿಂದ ಗಾಯದ ಮೇಲೆ ಬರೆ ಎಣೆದಂತೆ ಆಗುತ್ತಿದೆ ಎಂದು ನೌಕರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ 2020ರ ಬಳಿಕ ನಿವೃತ್ತರಾಗಿರುವ ನೌಕರರು ಸೇರಿದಂತೆ ಸಾರಿಗೆಯ ಎಲ್ಲ ನಿವೃತ್ತ ನೌಕರರ ಹಾಲಿ ನೌಕರರು ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.
ಈ ನಡುವೆ ಗುರುವಾರ ಸಂಜೆ ಬಳಿಕ ಬಸ್ ಸಂಚಾರ ಸ್ಥಗಿತವಾಗುವುದು ಬಹುತೇಕ ಖಚಿತವಾಗಿದೆ. ಆದರೆ, ಇದಕ್ಕೆ ಅಧಿಕಾರಿಗಳ ಸ್ಪಂದನೆ ಹೇಗಿರುತ್ತದೆ ಎಂಬುವುದನ್ನು ಕಾದು ನೋಡಬೇಕಿದೆ. ಕಾರಣ ಸಾರಿಗೆಯ ನಾಲ್ಕೂ ನಿಗಮಗಳ ಎಲ್ಲ ಅಧಿಕಾರಿಗಳಿಗೂ ಕೂಡ ಒಟ್ಟಾರೆ 63 ತಿಂಗಳ ವೇತನ ಹಿಂಬಾಕಿ ಜತೆಗೆ 2024ರ ಜನವರಿ 1ರಿಂದ ವೇತನ ಹೆಚ್ಚಳವು ಆಗಬೇಕಿದೆ.
ಸಾರಿಗೆ ಸಚಿವರು ಇಂದು ರಾತ್ರಿಯವರೆಗೂ ಸಂಘಟನೆಗಳೊಂದಿಗೆ ಸಭೆ ನಡೆಸಿ, ನೌಕರರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ನಿರ್ಧಾರದಿಂದಾಗಿ ನಾಳೆ ನಡೆಯಬೇಕಿದ್ದ ಸೇವೆಯ ವ್ಯತ್ಯಯದ ಆತಂಕ ದೂರವಾದಂತಾಗಿದೆ. ಸರ್ಕಾರವು ಸಕಾರಾತ್ಮಕವಾಗಿ ಸ್ಪಂದಿಸಿರುವುದರಿಂದ ನೌಕರರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಒಟ್ಟಾರೆಯಾಗಿ, ಸಾರ್ವಜನಿಕರ ಸಂಚಾರಕ್ಕೆ ಯಾವುದೇ ತೊಂದರೆಯಾಗದಂತೆ ನೌಕರರ ಬೇಡಿಕೆಗಳನ್ನು ಈಡೇರಿಸುವತ್ತ ಸರ್ಕಾರ ದಾಪುಗಾಲು ಹಾಕಿದೆ.
ವೇತನದಲ್ಲಿ ಎಷ್ಟು ಪ್ರಮಾಣದ ಏರಿಕೆ ಮಾಡಬೇಕು ಎಂಬ ಬಗ್ಗೆ ಸಾರಿಗೆ ಸಂಘಟನೆಗಳ ಮುಖಂಡರೊಂದಿಗೆ ಮತ್ತೊಮ್ಮೆ ಮಾತುಕತೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸರ್ಕಾರ ತಿಳಿಸಿದೆ. ಆದರೆ, ಇಲ್ಲಿ 2024 ಜನವರಿ 1ರಿಂದ ವೇತನ ಪರಿಷ್ಕರಣೆ ಆಗಬೇಕು. ಆದರೆ 2025 ಮಾರ್ಚ್ 1ರಿಂದ ಜಾರಿಗೆ ಬರುವಂತೆ ಎಂದು ಹೇಳಿದರುವುದರಿಂದ ನೌಕರರಿಗೆ ಆರ್ಥಿಕವಾಗಿ 15 ತಿಂಗಳ ನಷ್ಟುವಾಗುತ್ತಿದೆ ಇದರಿಂದ ನೌಕರರು ಲಕ್ಷಾಂತರ ರೂಪಾಯಿ ಕಳೆದುಕೊಳ್ಳಲಿದ್ದಾರೆ. ಹೀಗಾಗಿ ಈ ಬಗ್ಗೆ ಸರ್ಕಾರ ಮತ್ತು ಸಂಘಟನೆಗಳು ಚರ್ಚಿಸಿ ಅಗತ್ಯ ಪರಿಹಾರ ನೀಡುವುದು ಸೂಕ್ತವಾಗಿದೆ.
Related









