ಬೆಂಗಳೂರು: ಚಿನ್ನದ ಬೆಲೆ ನಿನ್ನೆ ಅಂದರೆ ಜುಲೈ 3ರಂದು 100 ರೂ.ಗಳ ಇಳಿಕೆ ಕಂಡಿತ್ತು. ಆದರೆ ಇಂದು ಯಾವುದೆ ಏರಿಳಿತ ಕಾಣದೆ ಬೆಲೆ ತಟಸ್ಥವಾಗಿದೆ.
ಈ ಮೂಲಕ ಇಂದು ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲದಿದ್ದರೂ ಸಹ ವಾರದಿಂದ ಏರಿಳಿತದ ದಾರಿಯಲ್ಲಿ ಸಾಗುತ್ತಿದೆ. ವಾರಾಂತ್ಯದಲ್ಲಿ ಏರಿಕೆ ಕಂಡಿದ್ದ ಚಿನ್ನದ ಬೆಲೆ ಈಗ ತುಸು ಇಳಿದಿದೆ. ಭಾರತದಲ್ಲಿ ಮಾತ್ರವಲ್ಲ ವಿದೇಶಗಳ ಮಾರುಕಟ್ಟೆಗಳಲ್ಲೂ ಚಿನ್ನದ ಬೆಲೆ ಸ್ವಲ್ಪ ಅಗ್ಗವಾಗಿದ್ದು, ಹಬ್ಬಕ್ಕೆ ಚಿನ್ನ ಖರೀದಿಸುವವರಿಗೆ ಇದು ಸಕಾಲ ಎನಿಸಿದೆ.
ಇನ್ನು ಹೂಡಿಕೆಯಾಗಿ ಚಿನ್ನ ಖರೀದಿಸುವವರಿಗೂ ಇದು ಸರಿಯಾದ ಸಮಯದ ಎಂದೇ ಹೇಳಬಹುದು. ಇದರ ನಡುವೆ ಬೆಳ್ಳಿ ಬೆಲೆ ಸದ್ಯ ಯಥಾಸ್ಥಿತಿಯಲ್ಲಿದೆ. ಕಳೆದ ಮೂರ್ನಾಲ್ಕು ತಿಂಗಳಿಂದಲೂ ಬೆಳ್ಳಿ ಬೆಲೆ ಹೆಚ್ಚು ಏರಿಕೆ ಕಂಡಿಲ್ಲ.
ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 54,050 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 58,960 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,190 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 54,050 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 7,150 ರುಪಾಯಿಯಲ್ಲಿ ಇದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಜುಲೈ 4ಕ್ಕೆ):
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 54,050 ರೂ.
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 58,960 ರೂ.
ಬೆಳ್ಳಿ ಬೆಲೆ 10 ಗ್ರಾಂಗೆ: 719 ರೂ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ:
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 54,050 ರೂ.
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 58,960 ರೂ.
ಬೆಳ್ಳಿ ಬೆಲೆ 10 ಗ್ರಾಂಗೆ: 715 ರೂ.
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
ಬೆಂಗಳೂರು: 54,050 ರೂ.
ಚೆನ್ನೈ: 54,350 ರೂ.
ಮುಂಬೈ: 54,050 ರೂ.
ದೆಹಲಿ: 54,200 ರೂ.
ಕೋಲ್ಕತಾ: 54,050 ರೂ.
ಕೇರಳ: 54,050 ರೂ.
ಅಹ್ಮದಾಬಾದ್: 54,100 ರೂ.
ಜೈಪುರ್: 54,200 ರೂ.
ಲಕ್ನೋ: 54,200 ರೂ.
ಭುವನೇಶ್ವರ್: 54,050 ರೂ.
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ):
ಮಲೇಷ್ಯಾ: 2,870 ರಿಂಗಿಟ್ (50,480 ರುಪಾಯಿ)
ದುಬೈ: 2145 ಡಿರಾಮ್ (47,850 ರುಪಾಯಿ)
ಅಮೆರಿಕ: 590 ಡಾಲರ್ (48,346 ರುಪಾಯಿ)
ಸಿಂಗಾಪುರ: 806 ಸಿಂಗಾಪುರ್ ಡಾಲರ್ (48,879 ರುಪಾಯಿ)
ಕತಾರ್: 2,215 ಕತಾರಿ ರಿಯಾಲ್ (49,848 ರೂ)
ಓಮನ್: 235 ಒಮಾನಿ ರಿಯಾಲ್ (50,017 ರುಪಾಯಿ)
ಕುವೇತ್: 184 ಕುವೇತಿ ದಿನಾರ್ (49,179 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ)
ಬೆಂಗಳೂರು: 7,150 ರೂ.
ಚೆನ್ನೈ: 7,570 ರೂ.
ಮುಂಬೈ: 7,190 ರೂ.
ದೆಹಲಿ: 7,190 ರೂ.
ಕೋಲ್ಕತಾ: 7,190 ರೂ.
ಕೇರಳ: 7,570 ರೂ.
ಅಹ್ಮದಾಬಾದ್: 7,190 ರೂ.
ಜೈಪುರ್: 7,190 ರೂ.
ಲಕ್ನೋ: 7,190 ರೂ.
ಭುವನೇಶ್ವರ್: 7,570 ರೂ.
ಅಮೆರಿಕದಲ್ಲಿ ಬ್ಯಾಂಕ್ ಬಡ್ಡಿ ದರ ಏರಿಕೆ ಆಗಬಹುದು ಎಂಬ ಭೀತಿ ಈ ಚಿನ್ನದ ಬೆಲೆ ಇಳಿಕೆಗೆ ಎಡೆ ಮಾಡಿಕೊಟ್ಟಿದೆ. ತಜ್ಞರ ಅಂದಾಜಿನ ಪ್ರಕಾರ ಚಿನ್ನದ ಬೆಲೆ ಈಗ ಇಳಿಯುತ್ತಿದೆಯಾದರೂ ಮುಂಬರುವ ದಿನಗಳಲ್ಲಿ ಮತ್ತೆ ಏರಿಕೆಯ ಹಾದಿ ಹಿಡಿಯುವ ನಿರೀಕ್ಷೆ ಇದೆ. ಮುಂದಿನ ವರ್ಷದಲ್ಲಿ ಚಿನ್ನದ ಬೆಲೆ 70,000 ರೂ. ಗಡಿ ದಾಟಬಹುದು ಎನ್ನಲಾಗುತ್ತಿದೆ.
ವಿ.ಸೂ: ಇಲ್ಲಿ ನೀಡಲಾಗಿರುವ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.