NWKRTC: ₹200-300 ರೂ. ಕೊಟ್ಟರೆ ರಜೆ ಇಲ್ಲ ಗೈರು ತೋರಿಸುವ ಹುನಗುಂದ ಘಟಕದ ಡಿಎಂ ಲಂಚವತಾರಕ್ಕೆ ಬೇಸತ್ತ ಸಿಬ್ಬಂದಿ..!!
ಬಾಗಲಕೋಟೆ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ಬಾಗಲಕೋಟೆ ವಿಭಾಗದ ಹುನಗುಂದ ಘಟಕದ ವ್ಯವಸ್ಥಾಪಕರು ಸಾರಿಗೆ ನೌಕರರಿಗೆ ಅವಾಚ್ಯ ಶಬ್ದದಿಂದ ನಿಂದಿಸುವುದು ಅಲ್ಲದೆ ಬೂಟಿನಿಂದ ಹೊಡಿಬೇಕು ಅಂತ ನಾಲಿಗೆ ಹರಿ ಬಿಟ್ಟಿದ್ದಾರೆ ಎಂದು ಕಿರುಕುಳಕ್ಕೆ ಒಳಗಾಗುತ್ತಿರುವ ನೌಕರರು ಅಳಲು ತೋಡಿಕೊಂಡಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲ ತಾಣಗಳ ಮೂಲಕ ಉನ್ನತ ಅಧಿಕಾರಿಗಳಿಗೆ ಮನವಿ ಮಾಡಿದ್ದು, ಹುನುಗುಂದ ಘಟಕದ ಎಲ್ಲ ಚಾಲಕ ಮತ್ತು ನಿರ್ವಾಹಕರು ಹಾಗೂ ಎಲ್ಲ ಸಿಬ್ಬಂದಿಗಳ ಮನವಿ ಏನೆಂದರೆ?
ಘಟಕದಲ್ಲಿ ಕರ್ತವ್ಯ ನಿರ್ಹಿಸುತ್ತಿರುವ ಸಿಬ್ಬಂದಿಗಳಾದ ನಾವು ತುರ್ತು ಸಂದರ್ಭದಲ್ಲಿ ರಜೆ ಬೇಕು ಎಂದು ಡಿಎಂ ಎಸ್.ಆರ್.ಸೊನ್ನದ ಅವರನ್ನು ಕೇಳಿದರೆ ಅವರು ರಜೆ ಕೊಡುವುದಿಲ್ಲ. ಆದರೆ, ಒಂದು ರಜೆಗೆ 200ರಿಂದ 300 ರೂ. ಕೊಟ್ಟರೆ ನಮಗೆ ರಜೆ ಮಂಜೂರು ಮಾಡುತ್ತಾರೆ ಎಂದು ಕಿಡಿಕಾರಿದ್ದಾರೆ.
ಡಿಪೋ ಮ್ಯಾನೇಜರ್‌ಗೆ 200-300 ರೂ. ಕೊಡಬೇಕು ಕೊಟ್ಟರೆ ಮಾತ್ರ ನಾವು ಅವರ ದೃಷ್ಟಿಯಲ್ಲಿ ಒಳ್ಳೆಯವರು. ಕೆಲವೊಂದು ವೇಳೆ ಈ ಲಂಚ ತೆಗೆದುಕೊಂಡಿದ್ದರೂ ಗೈರು ಹಾಜರಿ ತೋರಿಸುತ್ತಾರೆ. ಈ ಬಗ್ಗೆ ಯಾರ ಬಳಿ ಹೇಳಿಕೊಳ್ಳುವುದು, ಘಟಕದಲ್ಲಿ ಇವರಿಂದ ಯಾರಿಗೂ ನೆಮ್ಮದಿ ಇಲ್ಲವಾಗಿದೆ ಎಂದು ದೂರಿದ್ದಾರೆ.
ಇನ್ನು ನೈಟ್ ಸರ್ವಿಸ್ ಡ್ಯೂಟಿ ಮುಗಿಸಿ ಕೊಂಡು ಬಂದ ನಂತರ ಒಂದು ಸ್ಕೂಲ್ ಟ್ರಿಪ್ ಹೆಚ್ಚುವರಿಯಾಗಿ ಚೋಡನೆ ಮಾಡಿರುತ್ತಾರೆ ಅದನ್ನು ಮಾಡಬೇಕು ಆದರೆ, ಅದಕ್ಕೇ ಓಟಿ ಕೊಡುವುದಿಲ್ಲ ಇದರ ಜತೆಗೆ ಮತ್ತೊಂದು ಟ್ರಿಪ್ ಮಾಡಬೇಕು ಅಂತ ಹೇಳುತ್ತಾರೆ.
ಈ ವೇಳೆ ನೌಕರರು ಆಗುವುದಿಲ್ಲ ನಾವು ನಿದ್ದಿಗೆಟ್ಟು ಬಂದಿರುತ್ತೇವೆ ಅಂದರೆ ಅಂಥವರಿಗೆ ಮೆಮೋ ಕೊಡುತ್ತಾರೆ ಜತೆಗೆ ಮೇಲಧಿಕಾರಿಗಳಿಗೆ ರಿಪೋರ್ಟ್ ಮಾಡುತ್ತಾರೆ. ಸೆಕ್ಯುರಿಟಿರಿಗೆ ಬಲವಂತವಾಗಿ ನಾನು ಡಿಪೋ ಮ್ಯಾನೇಜರ್ ಹೇಳುತ್ತಿದ್ದೇನೆ. ನನ್ನ ಮಾತಿಗೆ ಕಿಮ್ಮತ್ತಿಲ್ಲವೇ ಎಂದು ಅವರನ್ನು ಹೆದರಿಸಿ ನಾ ಹೇಳಿದಂತೆ ನೌಕರರ ವಿರುದ್ಧ ರಿಪೋರ್ಟ್ ಹಾಕು ಅಂತ ಸುಳ್ಳು ರಿಪೋರ್ಟ್ ಹಾಕಿಸುತ್ತಾರೆ ಎಂದು ಆರೋಪಿಸುತ್ತಿದ್ದಾರೆ.
ಕೆಲವೊಂದಿಷ್ಟು ಸಿಬ್ಬಂದಿಗಳು ಇವರ ಕಾಟ ತಾಳಲಾರದೆ ಪ್ರತಿ ತಿಂಗಳು 500 ರೂ.ಗಳಂತೆ ಮಂತ್ಲಿ ಕೊಡುತ್ತಿದ್ದಾರೆ. ಇದರ ಜತೆಗೆ ತಿಂಗಳ ರಜೆಗೂ ದುಡ್ಡು ಕೊಡುತ್ತಾರೆ. ಅಂಥವರಿಗೆ ಪ್ರತಿ ತಿಂಗಳೂ ತುರ್ತು ರಜೆ ಕೊಡುತ್ತಾರೆ. ಒಂದು ರಜೆಗೆ 300 ರೂ. ತೆಗೆದುಕೊಳ್ಳುತ್ತಾರೆ.
ಈ ರೀತಿ ಮಂತ್ಲಿ ಕೊಡುವವರನ್ನು ಹೊರತುಪಡಿಸಿ ಉಳಿದವರು ರಜೆ ಹಾಕಿದರೆ ನಾಟ್ ರೆಕಮಂಡ್ ಮಾಡುತ್ತಾರೆ. ಇದರ ಬಗ್ಗೆ ಕೇಳಿದರೆ, ಅದನ್ನು ಕೇಳೋಕೆ ನೀನ್ಯಾರು ನನ್ನಿಷ್ಟ ಅಂತ ಏಕವಚನದಿಂದ ನೌಕರರ ಮೇಲೆ ದರ್ಪ ತೋರುತ್ತಾರೆ ಈ ಡಿಪೋ ಮ್ಯಾನೇಜರ್. ಇವರ ಕಿರುಕುಳಕ್ಕೆ ನೊಂದ ಹುನಗುಂದ ಘಟಕದ ಸಮಸ್ತ ಸಿಬ್ಬಂದಿಗಳಾದ ನಾವೂ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ವ್ಯವಸ್ಥಾಪಕ ನಿರ್ದೇಶಕರು ಮತ್ತು ಸಾರಿಗೆ ಸಚಿವರಿಗೆ ಮನವಿ ಮಾಡುತ್ತಿದ್ದೇವೆ ಎಂದು ಕೋರಿದ್ದಾರೆ.