NEWSನಮ್ಮಜಿಲ್ಲೆನಮ್ಮರಾಜ್ಯ

NWKRTC: ನಿಪ್ಪಾಣಿ ಘಟಕದಲ್ಲಿ 16 ದಿನ ಗೈರಾದ ನೌಕರರ ಬ್ಯಾಂಕ್‌ ಖಾತೆಗೆ ಬದಲಿದೆ 8 ಸಾವಿರ ರೂ.: ಡಿಎಂ ಮಾನವೀಯ ಕಾರ್ಯ..!?

ವಿಜಯಪಥ ಸಮಗ್ರ ಸುದ್ದಿ

ಚಿಕ್ಕೋಡಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಿಕ್ಕೋಡಿ ವಿಭಾಗದ ನಿಪ್ಪಾಣಿ ಘಟಕ ವ್ಯವಸ್ಥಾಪರ ಸರ್ವಾಧಿಕಾರಿ ದೋರಣೆಯಿಂದ ನೌಕರರು ಭಾರಿ ದಂಡ ತೆರುವಂತಾಗಿದೆ.

ಒಂದು ದಿನ ಮನೆಯಲ್ಲಿ ಯಾವುದೋ ತುರ್ತು ಸಂದರ್ಭದ ವೇಳೆ ಸಂಸ್ಥೆಯ ನಿರ್ವಾಹಕರು ಮತ್ತು ಚಾಲಕರು ರಜೆ ಹಾಕಿಕೊಂಡರೆ ಅವರಿಗೆ ಬರೋಬರಿ 8 ಸಾವಿರ ರೂಪಾಯಿ ದಂಡ ಹಾಕುತ್ತಾರೆ. ಈ ಮೂಲಕ ನಿಪ್ಪಾಣಿ ಘಟಕದ ವ್ಯವಸ್ಥಾಪಕ ನೌಕರರ ವಿರುದ್ಧ ದರ್ಪ ಮೆರೆಯುತ್ತಿದ್ದಾರೆ.

ಮೂರುದಿನ ಗೈರಾಗಿರುವುದಕ್ಕೆ 1500 ರೂ. ದಂಡ ಹಾಕಿ ಆದೇಶ.

ಅದನ್ನು ನಿಪ್ಪಾಣಿ ಘಟಕ ವ್ಯವಸ್ಥಾಪಕರೇ ಹೊರಡಿಸಿರುವ ಆದೇಶ ಪ್ರತಿಯೊಂದಿಗೆ ಅವರ ದರ್ಪ ನೌಕರರ ಮೇಲಿನ ದೌರ್ಜನ್ಯವನ್ನು ನಿಮ್ಮ ಮುಂದೆ ಬಹಿರಂಗಪಡಿಸುತ್ತಿದೆ ವಿಜಯಪಥ:

ಜುಲೈ 12ರಂದು ಗೈರಾಗಿದ್ದ ತನ್ನ ಘಟಕದ ನಿರ್ವಾಹಕ ಬಿ.ಎಂ.ನಾರಾಯಣ ಎಂಬುವರಿಗೆ ಆ ದಿನ ಗೈರಾಗಿದ್ದೀಯೆ ಎಂದು ಹೇಳಿ 8000 ರೂಪಾಯಿ ದಂಡ ಹಾಕಿದ್ದು, ಅದನ್ನು ಸಮಾನಾದ 16 ಕಂತುಗಳಲ್ಲಿ ವಸೂಲು ಮಾಡಬೇಕು ಎಂದು ಆದೇಶ ಹೊರಡಿಸಿದ್ದಾರೆ.

ಒಂದು ದಿನ ಗೈರಾಗಿದ್ದಾರೆ ಎಂದು 8000 ರೂ. ದಂಡ ಹಾಕಿ ನಿಪ್ಪಾಣಿ ಡಿಎಂ ಆದೇಶ ಹೊರಡಿಸಿರುವುದು.

ಆದರೆ, ಅದೇ ಘಟಕದ ಚಾಲಕ ಬಿ.ಕೆ.ಪಾಟೇಲ್‌ ಎಂಬುವರು 3ದಿನ ಅಂದರೆ ಆಗಸ್ಟ್‌ 4ರಿಂದ 6ರವರೆಗೆ ಗೈರಾಗಿದ್ದೀದ್ದಾರೆ. ಅವರಿಗೆ 1500 ರೂಪಾಯಿ ದಂಡ ಹಾಕಿದ್ದಾರೆ. ಅಂದರೆ ಇವರ ಘಟಕದಲ್ಲಿ ಒಂದು ದಿನ ಗೈರಾಗುವ ನೌಕರರಿಗೆ 8 ಸಾವಿರ ರೂಪಾಯಿ ದಂಡ ಎಂಬ ನಿಯಮವಿದ್ದರೆ, ಮೂರು ದಿನ ಗೈರಾಗುವ ನೌಕರನಿಗೆ 24 ಸಾವಿರ ರೂಪಾಯಿ ಸಂಡ ಹಾಕಬೇಕಿತ್ತಲ್ಲವೆ?

ಇನ್ನು ನೋಡಿ ಈ ಇಬ್ಬರೂ ನೌಕರರಿಗೂ ಒಂದೆ ತೆರನಾದ ಆಪಾದನೆ ಹೊರಿಸಿದ್ದಾರೆ. ಆಪಾದನೆ ಒಂದೇ ರೀತಿ ಇದೆ ಎಂದ ಮೇಲೆ ಮೂರು ದಿನ ಗೈರಾದ ನೌಕರರನಿಗೆ 1500 ರೂಪಾಯಿ ದಂಡ ಹಾಕಿದ್ದು, ಒಂದು ದಿನ ಗೈರಾದ ನೌಕರನಿಗೆ 8 ಸಾವಿರ ದಂಡ ಹಾಕಿರುವುದು ಏಕೆ? ಒಂದೇ ರೀತಿಯ ಆಪಾದನೆ ಮಾಡಿದ ಮೇಲೆ ಮೂರು ದಿನ ಗೈರಾದವರಿಗೆ ದಂಡ ಕಡಿಮೆಯಾಗಿದೆ ಎಂದರೆ 15 ದಿನ ಗೈರಾದರೆ ಅವರಿಗೆ ಯಾವುದೇ ದಂಡವಿಲ್ಲ ಎಂಬ ನಿಯವೇನಾದರೂ ಘಟಕದಲ್ಲಿ ವ್ಯವಸ್ಥಾಪಕರು ಮಾಡಿದ್ದಾರೆಯೇ?

ಇದನ್ನು ಗಮನಿಸಿದರೆ ನೌಕರರು ಒಂದು ದಿನ ಗೈರಾದರೆ 8000 ಸಾವಿರ ರೂಪಾಯಿ ದಂಡ ಕಟ್ಟುವ ಬದಲಿಗೆ 15 ದಿನ ಗೈರಾಗಿಬಿಡಿ ನಿಮಗೆ ಯಾವುದೇ ದಂಡವಿಲ್ಲದೆ. ಮತ್ತೆ ಡ್ಯೂಟಿಗೆ ಹೋಗಬಹುದು.

ಅಂದರೆ ಒಂದುದಿನಕ್ಕೆ ದಂಡ ಹೆಚ್ಚಾಗುತ್ತದೆ ಎರಡನೇ ದಿನಕ್ಕೆ ಮೈನಸ್‌ ಆಗುತ್ತದೆ ಮತ್ತೆ ಮೂರನೇ ದಿನಕ್ಕೂ ಮೈನಸ್‌ ಆಗುತ್ತದೆ. ಹೀಗೆ ಗೈರಾದ ದಿನಗಳು ಹೆಚ್ಚಾದಂತೆ ದಂಡದ ಪ್ರಮಾಣ ಮೈನಸ್‌ ಆಗಿ ಬಳಿಕ ಅದು ನೌಕರರಿಗೆ ವರವಾಗಿ ಅವರು ದಂಡ ಕಟ್ಟುವ ಬದಲಿಗೆ ಅವರ ಬ್ಯಾಂಕ್‌ ಖಾತೆಗೆ ಅಂದರೆ 16ನೇ ದಿನಕ್ಕೆ 8 ಸಾವಿರ ರೂಪಾಯಿಯನ್ನು ಈ ಡಿಎಂ ಅವರೆ ಹಾಕುತ್ತಾರೇನೋ? ಇದರಿಂದ ನೌಕರರಿಗೆ ಒಳ್ಳೆಯದಾಗುತ್ತದೆ ಅಲ್ಲವೇ?

ಈ ರೀತಿಯ ಹುಚ್ಚಾಟಗಳನ್ನು ಬಿಟ್ಟು ನೌಕರ ಯಾವ ಸಂದರ್ಭದಲ್ಲಿ ಗೈರಾದ ಎಂಬುದನ್ನು ತಿಳಿದುಕೊಳ್ಳಿವ ಪ್ರಯತ್ನ ಮಾಡಬೇಕು. ಅದನ್ನು ಬಿಟ್ಟು ನೌಕರರಿಗೆ ದಂಡ ವಿಧಿಸುವ ಅಧಿಕಾರ ತಮಗೆ ಇದೆ ಎಂದು ಮನಬಂದಂತೆ ಒಂದು ರೀತಿ ಹುಚ್ಚರಂತೆ, ನೌಕರರ ಮೇಲೆ ದೌರ್ಜನ್ಯದಿಂದ ಈ ರೀತಿ ದಂಡಹಾಕಿದರೆ ನೌಕರರ ಮತ್ತು ಅವರ ಕುಟುಂಬದ ಜೀವನ ನಡೆಯುವುದು ಹೇಗೆ?

ನೀವು ಈಗಲೇ ಕೊಡುತ್ತಿರುವ ಮೂರು ಕಾಸಿನ ವೇತದಿಂದ ಮಕ್ಕಳ ಶಾಲಾ ಶುಲ್ಕ, ಮನೆ ಬಾಡಿಗೆ, ಕುಟುಂಬ ನಿರ್ವಾಹಣೆ, ವಯಸ್ಸಾದ ಪಾಲಕರ ಆರೋಗ್ಯ ರಕ್ಷಣೆ ಮಾಡುವುದಕ್ಕೇ ಸಾಧ್ಯವಾಗದೆ ಸಾಲಸೋಲ ಮಾಡಿಕೊಂಡು ಮುಂದೆ ಒಳ್ಳೆಯ ದಿನಗಳು ಬರಬಹುದು ಎಂಬ ಆಶಾಭಾವನೆಯಿಂದ ದಿನ ದೂಡುತ್ತಿದ್ದಾರೆ. ಅಂಥ ನೌಕರರಿಗೆ ಧೈರ್ಯ ತುಂಬಬೇಕಾದರ ಕೆಲ ಇಂಥ ಕೊಳಕು ಮನಸ್ಸಿನ ಅಧಿಕಾರಿಗಳು ಈ ರೀತಿ ದರ್ಪ ಮೆರೆಯುತ್ತಿರುವುದು ಎಷ್ಟರ ಮಟ್ಟಿಗೆ ಸರಿ.

ಇನ್ನು ಇಂಥವರಿಗೆ ಕಡಿವಾಣ ಹಾಕಬೇಕಾದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಏನು ಮಾಡುತ್ತಿದ್ದಾರೋ ಎಂಬ ಪ್ರಶ್ನೆ ಮೂಡುತ್ತಿದೆ. ಇನ್ನಾದರೂ ಇಂಥ ದುಷ್ಟ ಮನಸ್ಥಿತಿಯುಳ್ಳ ಅಧಿಕಾರಿಗಳನ್ನು ಯಾವುದಾದರೂ ಬಂದಪುಟ್ಟ ಹೋದಪುಟ ಎಂಬ ವಿಭಾಗಕ್ಕೆ ಕಳಿಸಿ, ಮಾನವೀಯತೆ ನೆಲಗಟ್ಟಿನಲ್ಲಿ ಕೆಲಸ ಮಾಡುತ್ತಿರುವ ನೂರಾರು ನೌಕರರು ಈಗಲೂ ಸಂಸ್ಥೆಯಲ್ಲಿ ಇದ್ದು ಅಂಥವರನ್ನು ಈ ಸ್ಥಳಕ್ಕೆ ನಿಯೋಜನೆ ಮಾಡಿ. ನೌಕರರು ನಗುನಗುತ್ತ ಡ್ಯೂಟಿಗೆ ಹೋದರೆ, ಸಂಸ್ಥೆ ಮತ್ತು ಬಸ್ಸಿನಲ್ಲಿ ಪ್ರಯಾಣಿಸುವ ಸಾರ್ವಜನಿಕರು ಕೂಡ ಖಷಿಯಿಂದ ಇರಲು ಸಾಧ್ಯವಾಗುತ್ತದೆ.

ಇನ್ನು ಈ ಘಟಕ ವ್ಯಸ್ಥಾಪಕನ ದರ್ಪಕ್ಕೆ ನಿಗಮದ ಎಂಡಿ ಕಡಿವಾಣ ಹಾಕಬೇಕು. ಒಂದು ದಿನ ಗೈರಾದ ನಿರ್ವಾಹಕನಿಗೆ 8000 ರೂಪಾಯಿ ದಂಡ ಹಾಕಿದರೆ, ಆತನ ಗತಿ ಏನಾಗಬೇಡ. ಅದೇ ದಂಡವನ್ನು ಈತನಿಗೆ ನೀವು ಹಾಕಿನೋಡಿ ಅದನ್ನು ಈತ ಒಪ್ಪಿಕೊಳ್ಳುತ್ತಾನಾ ಕೇಳಿ. ಈತ ನಿಗಮಕ್ಕೆ ಬಂದಾಗಿನಿಂದ ರಜೆಯನ್ನೇ ತೆಗೆದುಕೊಂಡಿಲ್ಲವೇ ವಿಚಾರಿಸಿ. ಇವನೇನು ಸಂಸ್ಥೆಯಲ್ಲಿ 24×7 ದುಡಿಯುತ್ತಿದ್ದಾನೆಯೇ ಎಂಬುದನ್ನು ಪರಿಶೀಲಿಸಿ.

ಇಂಥ ಕಚಡ ಅಧಿಕಾರಿಗಳಿಂದ ಸಂಸ್ಥೆಗೆ ಕೆಟ್ಟ ಹೆಸರು ಮತ್ತು ನೌಕರರಿಗೆ ಮಾನಸಿಕ ಕಿರುಕುಳ ಹೆಚ್ಚಾಗಲಿದೆ. ಇದಕ್ಕೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಭರತ್‌ ಅವರು ಕಡಿವಾಣ ಹಾಕುಬೇಕು ಎಂದು ನೌಕರರ ಸಂಘಟನೆಗಳ ಸಮಸ್ತ ಪದಾಧಿಕಾರಿಗಳು ಒಕ್ಕೋರಲಿನಿಂದ ಮನವಿ ಮಾಡಿದ್ದಾರೆ. ಇವರ ಮನವಿಗೆ ಸ್ಪಂದಿಸಿ ಇಂಥ ಅಧಿಕಾರಿಯ ವಿರುದ್ಧ ಮೊದಲು ಕ್ರಮ ಜರುಗಿಸಿ ನೊಂದ ನೌಕರರಿಗೆ ನ್ಯಾಯ ಕೊಡಿಸಬೇಕಿದೆ.

Leave a Reply

error: Content is protected !!
LATEST
KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು ಗಂಭೀರ ಸ್ವರೂಪ ಪಡೆಯುತ್ತಿದೆ ದೆಹಲಿ ರೈತರ ಹೋರಾಟ: ನ.26ರಿಂದ ಉಪವಾಸ ಸತ್ಯಾಗ್ರಹ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಾಗರದಂತೆ ಬನ್ನಿ: ಮೀರಾ ಶಿವಲಿಂಗಯ್ಯ ಕರೆ SC, ST ಅಲೆಮಾರಿ ಸಮುದಾಯಗಳ ಯೋಜನೆಗಳು ಸದ್ಬಳಕೆ ಆಗಬೇಕು: ಡಿಸಿ ಶಿವಶಂಕರ