NEWSನಮ್ಮಜಿಲ್ಲೆನಮ್ಮರಾಜ್ಯ

NWKRTC ಬೆಳಗಾವಿ ನೌಕರರ ಸಹಕಾರ ಸಂಘದ ಚುನಾವಣೆ: 15ಕ್ಕೆ 15 ಕೂಟದ ಅಭ್ಯರ್ಥಿಗಳೇ ಜಯಭೇರಿ

ವಿಜಯಪಥ ಸಮಗ್ರ ಸುದ್ದಿ

ಬೆಳಗಾವಿ: ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಸಹಕಾರ ಸಂಘದ 15 ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಬೆಳಗಾವಿ ವಿಭಾಗದ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ.

ಶನಿವಾರ ನಡೆದ ಚುನಾವಣೆಯಲ್ಲಿ 15ಕ್ಕೆ 15 ಮಂದಿಯೂ ನೌಕರರ ಕೂಟದ ಅಭ್ಯರ್ಥಿಗಳೇ ಗೆಲುವು ಸಾಧಿಸಿದ್ದು, ಕಳೆದ 30 ವರ್ಷಗಳಿಂದ ಆಡಳಿತ ನಡೆಸಿಕೊಂಡು ಬರುತ್ತಿದ್ದ ಮಹಾಮಂಡಲಕ್ಕೆ ಮರ್ಮಾಘಾತ ನೀಡಿದ್ದಾರೆ.

ಕೂಟದ ಮುಖಂಡರು ಒಂದು ವಾರದಿಂದ ಅಲ್ಲೇ ವಾಸ್ತವ್ಯ ಹೂಡಿ ತಮ್ಮ ಅಭ್ಯರ್ಥಿಗಳ ಪರ ಮತ ಪ್ರಚಾರ ಮಾಡಿದರು. ಅದೇ ರೀತಿ ಮಹಾಮಂಡಲದ ಮುಖಂಡರು ಮತ ಪ್ರಚಾರ ಮಾಡಿದರು. ಆದರೂ ಅವರ ಪರ ಅಭ್ಯರ್ಥಿಗಳನ್ನು ಸೋಲಿಸುವ ಮೂಲಕ ಮತದಾರರು ಶಾಕ್‌ ಕೊಟ್ಟಿದ್ದಾರೆ.

ಬೆಳಗಾವಿ ವಿಭಾಗದ ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಸಹಕಾರ ಸಂಘದ ಆಡಳಿತ ಮಂಡಲಿಯ ಸಾಮಾನ್ಯ ಚುನಾವಣೆಯ ಮತ ಎಣಿಕೆ ಮುಕ್ತಾಯದ ನಂತರ, ಚುನಾವಣೆಯಲ್ಲಿ ಸ್ಪರ್ಧಿಸಿದ ಈ ಎಲ್ಲ ಅಭ್ಯರ್ಥಿಗಳು ಚುನಾವಣೆ ಮೂಲಕ ಆಯ್ಕೆಯಾಗಿದ್ದಾರೆಂದು ಸಂಘದ ರಿಟರ್ನಿಂಗ್‌ ಅಧಿಕಾರಿಯಾದ ರವೀಂದ್ರ ಪಿ. ಪಾಟೀಲ ಘೋಷಿಸಿದ್ದಾರೆ.

ಚುನಾಯಿತ ಅಭ್ಯರ್ಥಿಗಳು: ಶಂಕರ ಈರಪ್ಪ ಕುಪಸ್ತ, ಸುರೇಶ ರಾಮಲಿಂಗಪ್ಪ ವಕ್ಕುಂದ, ಶಶಿಕಾಂತ ಅಶೋಕ ಬಡಿಗೇರ, ಮುಲ್ತಾನಿ ಕಾಶೀಮಾಸಾಬ, ಮಲ್ಲಿಕಾರ್ಜುನ ಸುಭಾಶ ಸಜ್ಜನ, ಬಸವರಾಜ ವೆಂಕಪ್ಪ ಲಗಳಿ, ಪಾಟೀಲ ಶಶಿಕಾಂತ ನಿಂಗನಗೌಡಾ, ಸೋಮಲಿಂಗಪ್ಪ ನಾಗಪ್ಪ ಬಾಗೋಡಿ, ಅಡಿವೆಪ್ಪಾ ಶಂಕರ ಗುಡದಿ ಆಯ್ಕೆಯಾಗಿದ್ದಾರೆ.

ಇನ್ನು ಮಹಿಳಾ ಮೀಸಲು ಕ್ಷೇತ್ರದಿಂದ ಸುಜಾತಾ ಪೋಪಟ ಚಾಂಬಾರ, ಭಾಗೀರತಿ ರಾಮಚಂದ್ರ ಕಂಕಣವಾಡಿ. ಹಿಂದುಳಿದ ಅ ವರ್ಗ ಮೀಸಲು ಕ್ಷೇತ್ರದಿಂದ ಸಿದ್ದಲಿಂಗಪ್ಪ ಸಿದ್ದಪ್ಪ ಕರೇಗಾರ, ಹಿಂದುಳಿದ ಬ ವರ್ಗ ಮೀಸಲು ಕ್ಷೇತ್ರದಿಂದ ಸಾಗರ ಶಾಂತಿನಾಥ ಕಾಡಾಪೂರ.

ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಮಾರುತಿ ಗುರುಸಿದ್ದಪ್ಪ ದಿನ್ನಿಮನಿ, ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ಸಿದರಾಯಿ ಪುಂಡಲೀಕ ಶೀಗಿಹಳ್ಳಿ ಅವರು ಚುನಾಯಿತರಾಗಿದ್ದಾರೆ ಎಂದು ಚುನಾವಣಾಧಿಕಾರಿ ರವೀಂದ್ರ ಪಿ.ಪಾಟೀಲ ಘೋಷಣೆ ಮಾಡಿದ್ದಾರೆ.

ಈ 15 ಮಂದಿ ಚುನಾಯಿತ ನಿರ್ದೇಶಕರು ಮುಂದಿನ 5 ವರ್ಷಗಳವರೆಗೆ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಇನ್ನು ಚುನಾವಣೆಯಲ್ಲಿ ನೌಕರರ ಕೂಟದ ಪರವಾಗಿ ಮತ ಚಲಾಯಿಸಿದ ಬೆಳಗಾವಿ, ಚಿಕ್ಕೋಡಿ, ಧಾರಾವಾಡ ವಿಭಾಗದ ಸಮಸ್ತ ಸಿಬ್ಬಂದಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು ಎಂದು ಕೂಟದ ಪದಾಧಿಕಾರಿಗಳು ಗೆಲುವಿನ ಸಂತಸ ಹಂಚಿಕೊಂಡಿದ್ದಾರೆ.

Leave a Reply

error: Content is protected !!
LATEST
KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು ಗಂಭೀರ ಸ್ವರೂಪ ಪಡೆಯುತ್ತಿದೆ ದೆಹಲಿ ರೈತರ ಹೋರಾಟ: ನ.26ರಿಂದ ಉಪವಾಸ ಸತ್ಯಾಗ್ರಹ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಾಗರದಂತೆ ಬನ್ನಿ: ಮೀರಾ ಶಿವಲಿಂಗಯ್ಯ ಕರೆ SC, ST ಅಲೆಮಾರಿ ಸಮುದಾಯಗಳ ಯೋಜನೆಗಳು ಸದ್ಬಳಕೆ ಆಗಬೇಕು: ಡಿಸಿ ಶಿವಶಂಕರ