
ಬೆಳಗಾವಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ತಾಂತ್ರಿಕ ಸಿಬ್ಬಂದಿಯೊಬ್ಬರು ಅಧಿಕಾರಿಗಳ ಕಿರುಕುಳದಿಂದ ಬೇಸತ್ತು ಬಸ್‌ನಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಡಿಪೋ 1ರಲ್ಲಿ ನಡೆದಿದೆ.
ಸಮಸ್ಥೆಯ ಬೆಳಗಾವಿ ಘಟಕ-1ರಲ್ಲಿ ಡ್ಯೂಟಿ ಮಾಡುತ್ತಿದ್ದ ತಾಂತ್ರಿಕ ಸಿಬ್ಬಂದಿ (ಮೆಕ್ಯಾನಿಕ್) ಕೇಶವ ಕಮಡೊಳಿ (57) ಆತ್ಮಹತ್ಯೆ ಮಾಡಿಕೊಂಡವರು.
ಹಲವು ತಿಂಗಳುಗಳಿಂದಲೂ ಬೆನ್ನು ನೋವಿನಿಂದ ಬಳಲುತ್ತಿದ್ದ ಕೇಶವ ಕಮಡೊಳಿ ಅವರನ್ನು ಅಧಿಕಾರಿಗಳು ಪಂಚರ್ ಕೆಲಸಕ್ಕೆ ಹಾಕಿದ್ದರು. ಆದರೆ ಈ ಕೆಲಸ ಮಾಡಲು ನನಗೆ ಆಗುತ್ತಿಲ್ಲ ಡ್ಯೂಟಿ ಬದಲಿಸಿಕೊಡಿ ಎಂದು ಪರಿಪರಿಯಾಗಿ ಡಿಪೋ ವ್ಯವಸ್ಥಾಪಕ ಲಿಂಗರಾಜ್ ಎಸ್. ಲಾಠಿ, ಸಹಾಯಕ ಕಾರ್ಯ ಅಧೀಕ್ಷಕ ಅನಿಲ್ ಬಾಂದೇಕರ್ ಅವರ ಬಳಿ ಬೇಡಿಕೊಂಡರು ಪ್ರಯೋಜನವಾಗಲಿಲ್ಲ.
ಇನ್ನು ದೈಹಿಕವಾಗಿ ನೋವು ಅನುಭವಿಸುತ್ತಿದ್ದರು ಈ ಅಧಿಕಾರಿಗಳ ಮನಸ್ಸು ಕಲ್ಲಾಗಿದಕ್ಕೆ ಭಾರಿ ನಮನೊಂದು ಜತೆಗೆ ಇತ್ತ ಕೆಲಸ ಮಾಡಲು ದೇಹ ಸ್ಪಂದಿಸದಿರುವುದರಿಂದ ಖಿನ್ನತೆಗೆ ಒಳಗಾದ ಕೇಶವ ಅವವರು ಕೊನೆಗೆ ಬಸ್‌ನಲ್ಲೇ ಆತ್ಮಹತ್ಯೆ ಮಾಡಿಕೊಂಡು ಜೀವನವನ್ನು ಕೊನೆಗಾಣಿಸಿಕೊಂಡಿದ್ದಾರೆ.
ಬೆಳಗಾವಿಯ ಹಳೆ ಗಾಂಧಿ ನಗರದ ನಿವಾಸಿ ಕೇಶವ್ ಅವರು ಬಸ್ ವಾಶಿಂಗ್‌ನಲ್ಲಿ, ಬಸ್‌ಗಳಿಗೆ ಪಂಚರ್ ಹಾಕುವ ಕೆಲಸ ಮಾಡುತ್ತಿದ್ದರು. ಬೆನ್ನು ನೋವಿದ್ದರೂ ಸಹ ಪಂಚರ್ ಹಾಕುವುದಕ್ಕೆ ಅಧಿಕಾರಿಗಳು ಹಚ್ಚಿದ್ದರು. ಕೆಲಸದ ಒತ್ತಡ ತಡೆದಕೊಳ್ಳಲಾಗದೇ ಆತ್ಮಹತ್ಯೆ ಮಾಡಿದಕೊಂಡಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ಮೃತ ಕೇಶವ್ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಮಾರ್ಕೆಟ್ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಧಿಕಾರಿಗಳ ಕಿರುಕುಳದಿಂದ ಈಗಾಗಲೇ ನೂರಾರು ಮಂದಿ ನೌಕರರು ಆತ್ಮಹತ್ಯೆ ಮಾಡಿಕೊಂಡಿರುವುದು ಮುಚ್ಚಿಡುವ ವಿಷಯವೇನಲ್ಲ. ಆದರೂ ಪದೆ ಪದೆ ಅಧಿಕಾರಿಗಳು ಈರೀತಿ ಕಿರುಕುಳ ಕೊಡುತ್ತಿದ್ದರು ಸಂಬಂಧಪಟ್ಟ ಮೇಲಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಳ್ಳದೆ ಸುಮ್ಮನಾಗುತ್ತಿರುವುದು ಏತಕ್ಕೆ ಎಂಬುವುದು ಈವರೆಗೂ ಗೊತ್ತಿಲ್ಲ.
ಇನ್ನು ಕಳೆದ ಮೂರು ದಿನಗಳ ಹಿಂದೆಯಷ್ಟೇ KSRTC ಮೈಸೂರು ನಗರ ವಿಭಾಗದ ಚಾಲಕರು ಅಪಘಾತವಾಗಿದಕ್ಕೆ ತಮ್ಮ ನೆರವಿಗೆ ಅಧಿಕಾರಿಗಳು ಬರಲಿಲ್ಲ ಎಂದು ಮನನೊಂದು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ನೋವು ಮಾಸುವ ಮುನ್ನವೇ ಇಂದು ತಾಂತ್ರಿಕ ಸಿಬ್ಬಂದಿ ಕೇಶವ ಅವರು ನೇಣಿಗೆ ಶರಣಾಗಿದ್ದಾರೆ.
ಇದಕ್ಕೆಲ್ಲ ಕಡಿವಾಣ ಬೀಳುವುದು ಯಾವಾಗ ಎಂದು ನೌಕರರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಆತ್ಮಹತ್ಯೆ ಮಾಡಿಕೊಂಡವರ ಕುಟುಂಬಕ್ಕೆ ಅಧಿಕಾರಿಗಳಿಂದ ಪರಿಹಾರ ಮೊತ್ತವನ್ನು ಕಟ್ಟಿಸಬೇಕು. ಆಗ ಇಂಥವರಿಗೆ ಬುದ್ಧಿ ಬರುತ್ತದೆ. ಸಾರಿಗೆ ಸಚಿವರು ಈ ಬಗ್ಗೆ ಗಮನ ಹರಿಸಬೇಕು. ನೌಕರರಿಗೆ ಕಿರುಕುಳ ಕೊಡುತ್ತಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.