NWKRTC: ಬುದ್ಧಿ ಹೇಳಿದ ಬಸ್ ಚಾಲಕರ ಮೇಲೆ ತನ್ನೂರಿನ ಪುಂಡರ ಗುಂಪು ಕರೆಸಿ ದೊಣ್ಣೆಯಿಂದ ಹೊಡೆಸಿದ ಬೈಕ್ ಸವಾರ


ಬಾಗಲಕೋಟೆ: ನಿಧಾನವಾಗಿ ಹೋಗಪ್ಪ ಎಂದು ಬುದ್ಧಿವಾದ ಹೇಳಿದಕ್ಕೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (NWKRTC) ಬಸ್ ಚಾಲಕ ಮತ್ತು ನಿರ್ವಾಹಕನಿಗೆ ದೊಣ್ಣೆಯಿಂದ ಹೊಡೆದಿರುವ ಘಟನೆ ರಬಕವಿ-ಬನಹಟ್ಟಿ ತಾಲೂಕಿನ ಜಗದಾಳ ಗ್ರಾಮದಲ್ಲಿ ಇಂದು ನಡೆದಿದೆ.
ಚಲಿಸುತ್ತಿದ್ದ NWKRTC ಬಸ್ಗೆ ಬೈಕ್ ಸವಾರ ಅಡ್ಡ ಬಂದಿದ್ದಾರೆ ಆಗ, ಬಸ್ ಚಾಲಕ ನಿಧಾನವಾಗಿ ಹೋಗಪ್ಪ ಅಂತ ಬುದ್ಧಿವಾದ ಹೇಳಿದ್ದಾರೆ. ಅಷ್ಟಕ್ಕೇ ಬಸ್ ಚಾಲಕನ ಜತೆ ಬೈಕ್ ಸವಾರ ವಾಗ್ವಾದಕ್ಕೆ ಇಳಿದಿದ್ದಾನೆ. ಚಾಲಕನಿಗೆ ನಿಂದಿಸಿ, ಬಳಿಕ ತನ್ನ ತಂದೆಗೆ ಕರೆ ಮಾಡಿದ್ದಾನೆ.
ಈ ಜಗಳವಾದ ಬಳಿ ಬೊಲೆರೋ ವಾಹನದಲ್ಲಿ ಜನರನ್ನು ಕರೆತಂದು ಚಾಲಕ ಮತ್ತು ನಿರ್ವಾಹಕರ ಮೇಲೆ ದೊಣ್ಣೆಯಿಂದ ಆ ಜನರು ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿರುವುದನ್ನು ಅಲ್ಲೆ ಇದ್ದ ಸ್ಥಳಿಯರು ವಿಡಿಯೋ ಮಾಡಿದ್ದಾರೆ.

ಇನ್ನು ವಿಡಿಯೋ ನೋಡಿರುವ ನಾಲ್ಕೂ ನಿಗಮಗಳ ಚಾಲನಾ ಸಿಬ್ಬಂದಿಗಳು ನಮ್ಮ ಸಹೋದ್ಯೋಗಿಗಳ ಮೇಲೆ ಮೇಲಿಂದ ಮೇಲೆ ಈ ರೀತಿಯ ಹಲ್ಲೆಗಳು ನಡೆಯುತ್ತಿದ್ದು, ನಾವು ಭಯದಲ್ಲೇ ಡ್ಯೂಟಿ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ನಮ್ಮ ವಿಭಾಗೀಯ ನಿಯಂತ್ರಣಾಧಿಕಾರಿಗಳು ಹಾಗೂ ಕಾನೂನು ವಿಭಾಗದ ಅಧಿಕಾರಿಗಳು ನಮಗೆ ಭದ್ರತೆ ನೀಡುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಅಲ್ಲದೆ ಈ ರೀತಿ ಹಲ್ಲೆಯಾದರೂ ನಮ್ಮ ನಿಗಮಗಳ ಬಹುತೇಕ ಅಧಿಕಾರಿಗಳು ನಮ್ಮ ವಿರುದ್ಧವೇ ನಡೆದುಕೊಳ್ಳುವ ಮೂಲಕ ಹಲ್ಲೆ ಕೋರರಿಗೆ ಶ್ರೀರಕ್ಷೆಯಾಗಿ ನಿಲ್ಲುತ್ತಿದ್ದಾರೆ ಕಾರಣ ಪ್ರಯಾಣಿಕರ ನಮ್ಮ ದೇವರು ಎಂದು ಭಾವಿಸಿ ಹಲ್ಲೆಕೋರರಿಗೆ ಶಿಕ್ಷೆಯಾಗುವುದನ್ನು ತಪ್ಪಿಸುತ್ತಿದ್ದಾರೆ. ಇದು ನಮಗೆ ಭಾರಿ ಸಮಸ್ಯೆಯಾಗಿ ಪರಿಣಮಿಸುತ್ತಿದೆ.
ಹೀಗಾಗಿ ನಾವಾಗಲಿ ಸಾರ್ವಜನಿಕರಾಗಲಿ ಯಾರೆ ತಪ್ಪು ಮಾಡಿದರು ಕಾನೂನು ರೀತಿ ಶಿಕ್ಷೆಗೆ ಒಳಪಡಿಸಬೇಕು. ಜತೆಗೆ ನಾವು ಸಾರ್ವಜನಿಕ ಸೇವೆಯಲ್ಲಿರುವಾಗ ನಮ್ಮನ್ನು ಜನರು ನಮ್ಮನ್ನು ಒಂದು ರೀತಿ ಕೀಳಾಗಿ ಕಾಣುವ ಸ್ವಾಭಾವವಿದೆ. ಇದಕ್ಕೆ ಕಾರಣ ನಮ್ಮ ಸಾರಿಗೆ ನಿಗಮಗಳಲ್ಲಿ ತಪ್ಪು ಮಾಡಿದ ಜನರಿಗೆ ಶಿಕ್ಷೆ ನೀಡದೆ ಅದನ್ನು ಚಾಲನಾ ಸಿಬ್ಬಂದಿಗಳ ಮೇಲೆಯೇ ಹೊರಿಸುತ್ತಿರುವುದು. ಇದು ನಿಲ್ಲಬೇಕು ಎಂದು ಆಗ್ರಹಿಸಿದ್ದಾರೆ.
ಇದಲ್ಲದೇ ಇನ್ನು ಮುಂದೆ ರಾಜ್ಯದ ಯಾವುದೇ ಭಾಗದಲ್ಲಿಯಾಗಲಿ ನೌಕರರ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಶಕಾನೂನು ಕ್ರಮ ತೆಗೆದುಕೊಳ್ಳದೆ ಹೋದರೆ ನಮ್ಮ ಸಂಘಟನೆಗಳ ಜೊತೆಗೂಡಿ ನಾವು ಪೊಲೀಸ್ ಠಾಣೆಗೆ ಹೋಗಿ ದೂರು ನೀಡುತ್ತೇವೆ. ಆ ಬಳಿಕ ಡಿಪೋಗಳ ಮುಂದೆ ಬಂದು ಧರಣಿ ಮಾಡುತ್ತೇವೆ ಇದನ್ನು ಇನ್ನಾದರೂ ಗಂಭೀರವಾಗಿ ಪರಿಗಣಿ ನಮ್ಮ ಸಹೋದ್ಯೋಗಳ ಮೇಲೆ ಆಗುತ್ತಿರುವ ಹಲ್ಲೆಯನ್ನು ತಪ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.
Related

 








