NWKRTC: ದೈನಂದಿನ ಆದಾಯ ಸಂಗ್ರಹದಲ್ಲಿ ಇತಿಹಾಸ ಸೃಷ್ಟಿ- ಸಂಸ್ಥೆಯ ಪ್ರತಿ ಸಿಬ್ಬಂದಿಗೂ ಸಿಹಿ ಹಂಚಿ ಸಂಭ್ರಮ

 ರಾಮದುರ್ಗ ಘಟಕದಲ್ಲಿ  ಡಿಟಿಒ ಕಾಮತ್  ನೌಕರರಿಗೆ ಸಿಹಿ ಹಂಚಿ ಸಂಭ್ರಮ.
ರಾಮದುರ್ಗ ಘಟಕದಲ್ಲಿ  ಡಿಟಿಒ ಕಾಮತ್  ನೌಕರರಿಗೆ ಸಿಹಿ ಹಂಚಿ ಸಂಭ್ರಮ.ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಇತಿಹಾಸಲ್ಲಿಯೇ ಅತೀ ಹೆಚ್ಚಿನ ದೈನಂದಿನ ಸಾರಿಗೆ ಆದಾಯ ಸಂಗ್ರಹವಾಗಿರುವ ಹಿನ್ನೆಲೆಯಲ್ಲಿ ಸಿಬ್ಬಂದಿ-ಅಧಿಕಾರಿಗಳಿಗೆ ಸಿಹಿ ಹಂಚಿ ಇಂದು ಸಂಭ್ರಮಾಚರಣೆ ಮಾಡಲಾಯಿತು.
ಕಳೆದ ಏಪ್ರಿಲ್ 21 ಹಾಗೂ ಇದೇ ಮೇ 19 ರಂದು ಸಂಸ್ಥೆಯ ದೈನಂದಿನ ಸಾರಿಗೆ ಆದಾಯವು ಕ್ರಮವಾಗಿ ₹1019.37 ಲಕ್ಷ (10ಕೋಟಿ 19 ಲಕ್ಷದ 37 ಸಾವಿರ) ಮತ್ತು 1009.11 (10ಕೋಟಿ 9ಲಕ್ಷದ11ಸಾವಿರ) ಲಕ್ಷ ರೂ.ಗಳು ಸಂಗ್ರಹವಾಗಿದೆ.
ಈ ಹಿನ್ನೆಲೆಯಲ್ಲಿ ಸಂಸ್ಥೆಯಲ್ಲಿ ಇಂದು ಮೇ 21ರಂದು ಸಿಹಿ ಹಂಚಿ ಸಂಭ್ರಮಿಸಲಾಯಿತು. ಈ ವೇಳೆ ಮಾತನಾಡಿದಸಂಸ್ಥೆಯ ಮುಖ್ಯ ಸಂಚಾರ ವ್ಯವಸ್ಥಾಪಕರು, ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾರಿಗೆ ಆದಾಯ ಸಂಗ್ರಹಿಸುವ ನಿಟ್ಟಿನಲ್ಲಿ ಶ್ರಮಿಸುವಂತೆ ಎಲ್ಲ ಸಿಬ್ಬಂದಿ-ಅಧಿಕಾರಿಗಳಿಗೆ ಕರೆ ನೀಡಿದರು.
ಇನ್ನು ಎಲ್ಲ ಹಿರಿಯ/ ವಿಭಾಗೀಯ ನಿಯಂತ್ರಣಾಧಿಕಾರಿ, ಕಾರ್ಯ ವ್ಯವಸ್ಥಾಪಕರು, ಪ್ರಾದೇಶಿಕ ಕಾರ್ಯಾಗಾರ ಹಾಗೂ ಪ್ರಾಚಾರ್ಯರು, ಪ್ರಾದೇಶಿಕ ತರಬೇತಿ ಕೇಂದ್ರಗಳಲ್ಲಿ ಏ. 21 ಹಾಗೂ ಮೇ 19 ರಂದು ಸಂಸ್ಥೆಯ ದೈನಂದಿನ ಸಾರಿಗೆ ಆದಾಯ10 ಕೋಟಿ ರೂ.ಗಳು ಬಂದಿದೆ. ಈ ದೈನಂದಿನ ಸಾರಿಗೆ ಆದಾಯವು ಸಂಸ್ಥೆಯ ಇತಿಹಾಸದಲ್ಲಿಯೇ 10 ಕೋಟಿ ರೂ.ಗಳ ಮೈಲಿಗಲ್ಲು ಸ್ಥಾಪಿಸಿದೆ ಎಂದು ಸಂತಸ ಹಂಚಿಕೊಂಡರು.
ಈ ಆದಾಯವು ಸಂಸ್ಥೆಯು ಪ್ರಾರಂಭವಾದ ದಿನದಿಂದಲೂ ಇಲ್ಲಿಯವರೆಗಿನ ದೈನಂದಿನ ಸಂಗ್ರಹವಾದ ಸಂಸ್ಥೆಯ ಅತೀ ಹೆಚ್ಚಿನ ಆದಾಯವಾಗಿದ್ದು, ಇದಕ್ಕೆ ಸಂಸ್ಥೆಯ ಕಾರ್ಮಿಕರು, ಸಿಬ್ಬಂದಿಗಳು, ಅಧಿಕಾರಿಗಳ ಪರಿಶ್ರಮ ಕಾರಣವಾಗಿರುವುದನ್ನು ಪರಿಗಣಿಸಿ ಸಂಸ್ಥೆಯ ಸಿಬ್ಬಂದಿ -ಅಧಿಕಾರಿಗಳಿಗೆ ಸಿಹಿ ಹಂಚಲು ವ್ಯವಸ್ಥಾಪಕ ನಿರ್ದೇಶಕರಾದ ಪ್ರಿಯಾಂಗಾ ಅವರು ಅನುಮೋದನೆ ನೀಡಿದ್ದಾರೆ.
ಹೀಗಾಗಿ ವೆಚ್ಚದ ಪರಿಮಿತಿಯಲ್ಲಿ ಸಿಹಿ ಹಂಚಲು ಕ್ರಮಕೈಗೊಂಡು ಇಂದು ಸಿಹಿ ಹಂಚಲಾಗಿದ್ದು, ಅದಕ್ಕಾಗಿ ಕೇಂದ್ರ ಕಚೇರಿಗೆ (ಎಲ್ಲ ಇಲಾಖೆ) ₹2,500, ಪ್ರಾದೇಶಿಕ ತರಬೇತಿ ಕೇಂದ್ರಕ್ಕೆ ₹1,000, ಪ್ರಾದೇಶಿಕ ಕಾರ್ಯಾಗಾರಗಳಿಗೆ 1,000, ವಿಭಾಗೀಯ ಕಚೇರಿಗಳಿಗೆ ₹1,000, ವಿಭಾಗೀಯ ಕಾರ್ಯಾಗಾರಗಳಿಗೆ ₹1,000, ಪ್ರತಿ ಘಟಕಗಳಿಗೆ (100 ಅನುಸೂಚಿಗಳ ಮೇಲ್ಪಟ್ಟು) ₹2,500, ಪ್ರತಿ ಘಟಕಗಳಿಗೆ (99 ಅನುಸೂಚಿಗಳ ವರೆಗೆ) 2,000 ರೂ.ಗಳನ್ನು ನೀಡಲಾಗಿತ್ತು ಎಂದು ವಿವರಿಸಿದ್ದಾರೆ.

ಬೆಳಗಾವಿ ವಿಭಾಗದ ರಾಮದುರ್ಗ ಘಟಕಕ್ಕೆ ಆಗಮಿಸಿದ ಡಿಟಿಒ ಸಂತೋಷ್ ಕಾಮತ್ ಅವರು ಘಟಕದ ನೌಕರರಿಗೆ ಸಿಹಿ ಹಂಚಿ ಹೆಚ್ಚಿನ ಆದಾಯ ಸಂಗ್ರಹವಾಗಿರುವ ಬಗ್ಗೆ ಸಂತಸ ಹಂಚಿಕೊಂಡರು.
ಇನ್ನು ಘಟಕಗಳು ಹಾಗೂ ಕೇಂದ್ರ ಕಚೇರಿ, ವಿಭಾಗೀಯ ಕಚೇರಿಗಳು ಸೇರಿದಂತೆ ಎಲ್ಲ ನೌಕರರಿಗೂ ಸಿಹ ಹಂಚಿ ಸಂಭ್ರಮಿಸಲಾಯಿತು. ಈ ವೇಳೆ ಘಟಕಮಟ್ಟದ ಹಾಗೂ ವಿಭಾಗೀಯ ಕಚೇರಿ ಸೇರಿದಂತೆ ಎಲ್ಲ ನೌಕರರಿಗೂ ಇದೇ ರೀತಿ ಆದಾಯ ಹೆಚ್ಚಿಸುವ ಬಗ್ಗೆ ಕಾಳಜಿಯಿಂದ ಕೆಲಸ ಮಾಡಬೇಕು ಎಂಬ ಬಗ್ಗೆ ಸಲಹೆ ಸೂಚನೆಗಳನ್ನು ಹಿರಿಯ ಅಧಿಕಾರಿಗಳು ನೀಡಿದರು.
Related

 








