NEWSನಮ್ಮಜಿಲ್ಲೆಬೆಂಗಳೂರು

BMTC ಬಸ್‌ನಲ್ಲಿ ಬೆಂಗಳೂರು- ಕನಕಪುರ ನಡುವೆ ಪ್ರಯಾಣಿಸುವ ಸಾರ್ವಜನಿಕರಿಂದ ಟೋಲ್ ಶುಲ್ಕ ₹5 ಸಂಗ್ರಹ: ಸಿಟಿಎಂ ಆದೇಶ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ರಾಷ್ಟ್ರೀಯ ಹೆದ್ದಾರಿ-948ರ ಬೆಂಗಳೂರು-ಕನಕಪುರ ರಸ್ತೆಯಲ್ಲಿನ ಪ್ರಯಾಣಿಸುವ ಸಾರ್ವಜನಿಕರು ಹೆಚ್ಚುವರಿಯಾಗಿ ಗೆ ಟೋಲ್ ಶುಲ್ಕ 5ರೂಪಾಯಿಯನ್ನು ಪಾವತಿಸಬೇಕು.

ಈ ಸಂಬಂಧ ಮಂಗಳವಾರ ಬಿಎಂಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕರು (ಕಾ) ಆದೇಶ ಹೊರಡಿಸಿದ್ದು, ಸೋಮನಹಳ್ಳಿ ಟೋಲ್ ಪ್ಲಾಜಾ ಮಾರ್ಗವಾಗಿ ಕಾರ್ಯಾಚರಣೆಯಾಗುವ ಸಂಸ್ಥೆಯ ಸಾರಿಗೆಗಳಿಗೆ ಟೋಲ್ ಶುಲ್ಕ 5 ರೂಪಾಯಿಯನ್ನು ಪ್ರತಿ ಟಿಕೆಟ್‌ಗೂ ಹೆಚ್ಚುವರಿಯಾಗಿ ಪಡೆಯುವಂತೆ ನಿರ್ವಾಹಕರಿಗೆ ತಿಳಿಸಿದ್ದಾರೆ.

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ರಾಷ್ಟ್ರೀಯ ಹೆದ್ದಾರಿ-948 ರ ಬೆಂಗಳೂರು-ಕನಕಪುರ ರಸ್ತೆಯಲ್ಲಿ ಸೋಮನಹಳ್ಳಿ ಗೇಟ್ ಹತ್ತಿರ ಹೊಸದಾಗಿ ಟೋಲ್ ಪ್ಲಾಜಾ ನಿರ್ಮಿಸಿದ್ದು, ಈ ರಸ್ತೆ ಮಾರ್ಗವಾಗಿ ಕಾರ್ಯಾಚರಣೆಯಾಗುವ ವಾಹನಗಳಿಗೆ ಇದೇ ಮೇ 9 ರಿಂದ ಜಾರಿಗೆ ಬರುವಂತೆ ಟೋಲ್ ಶುಲ್ಕವನ್ನು ಹಾಕಲಾಗುತ್ತಿದೆ.

ಅದರಂತೆ ಈ ಟೋಲ್ ಮಾರ್ಗವಾಗಿ ಸಂಸ್ಥೆಯ ಸಾರಿಗೆಗಳಲ್ಲಿ ಪ್ರಯಾಣಿಸುವ ಎಲ್ಲ ಪ್ರಯಾಣಿಕರಿಗೆ ಪಾಸು ಪ್ರಯಾಣಿಕರಿಗೂ ಸೇರಿದಂತೆ (ವಿಶೇಷಚೇತನ ಪಾಸು ಹಾಗೂ ವಿದ್ಯಾರ್ಥಿ ರಿಯಾಯಿತಿ ಪಾಸುದಾರರನ್ನು ಮಾತ್ರ ಹೊರತುಪಡಿಸಿ) 5ರೂಪಾಯಿ ಟೋಲ್ ಶುಲ್ಕವನ್ನು ನಿಗದಿಪಡಿಸಲಾಗಿದೆ ಎಂದು ಮುಖ್ಯ ಸಂಚಾರ ವ್ಯವಸ್ಥಾಪಕರು ತಿಳಿಸಿದ್ದಾರೆ.

ಜಿಲ್ಲೆಯೊಳಗೆ ನೋಂದಣಿ ಆಗಿರುವ ವಾಣಿಜ್ಯ ವಾಹನಗಳಿಗೆ ಪ್ರತಿ ಏಕಮುಖ ಸುತ್ತುವಳಿಗೆ 145 ರೂ.ಗಳನ್ನು ಪಾವತಿಸಬೇಕು. ಹೀಗಾಗಿ ಪ್ರತಿ ಪ್ರಯಾಣಿಕರಿಂದ 5 ರೂ. ಪಡೆಯಬೇಕು ಎಂದು ಆದೇಶ ಹೊರಡಿಸಿದ್ದಾರೆ.

ಇನ್ನು ಹಿರಿಯ/ ಘಟಕ ವ್ಯವಸ್ಥಾಪಕರು FASTag ಅಳವಡಿಸಿದ ವಾಹನಗಳನ್ನು ಮಾತ್ರ ಟೋಲ್ ಮಾರ್ಗವಾಗಿ ಕಾರ್ಯಾಚರಣೆಗೊಳಿಸಲು ಹಾಗೂ ಟೋಲ್ ಶುಲ್ಕವನ್ನು FASTag ಮೂಲಕವೇ ಪಾವತಿಸಲು ಕ್ರಮ ವಹಿಸಬೇಕು. ಟೋಲ್ ಮಾರ್ಗವಾಗಿ ಆಚರಣೆಗೊಳಿಸುವ ಎಲ್ಲ ಸಾರಿಗೆಗಳಿಗೆ ಸಂಬಂಧಿಸಿದಂತೆ ದಿನನಿತ್ಯ ಟೋಲ್ ಶುಲ್ಕ ಸಂದಾಯ ಮಾಡುವ ಬಗ್ಗೆ ಪರಿಶೀಲಿಸಿ, ಲಾಭದಾಯಕವಾಗಿದ್ದಲ್ಲಿ ಕಡ್ಡಾಯವಾಗಿ ದೈನಂದಿನ/ ಮಾಸಿಕ ಪಾಸುಗಳನ್ನು ಪಡೆಯಲು ಕ್ರಮ ವಹಿಸಬೇಕು ಎಂದು ತಿಳಿಸಿದ್ದಾರೆ.

ಸಂಸ್ಥೆಯ ಸಾಮಾನ್ಯ ಸಾರಿಗೆಗಳಲ್ಲಿ ಟೋಲ್ ಮಾರ್ಗವಾಗಿ ಪ್ರಯಾಣಿಸುವ ಪ್ರತಿ ಪ್ರಯಾಣಿಕರಿಂದ, ಪಾಸು ಪ್ರಯಾಣಿಕರು ಸೇರಿದಂತೆ (ವಿಶೇಷಚೇತನ ಪಾಸು ಹಾಗೂ ವಿದ್ಯಾರ್ಥಿ ರಿಯಾಯಿತಿ ಪಾಸುದಾರರನ್ನು ಮಾತ್ರ ಹೊರತುಪಡಿಸಿ) ಪ್ರಯಾಣ ದರದ ಜತೆಗೆ 5 ರೂ. ಟೋಲ್ ಶುಲ್ಕವನ್ನು ಪಡೆಯಬೇಕು. ವಿದ್ಯಾರ್ಥಿ ರಿಯಾಯಿತಿ ಪಾಸು ಹಾಗೂ ವಿಶೇಷಚೇತನರ ಪಾಸುದಾರರನ್ನು ಹೊರತುಪಡಿಸಿ ಉಳಿದೆಲ್ಲ ಪಾಸುದಾರರಿಗೆ ಈ ಟೋಲ್ ಶುಲ್ಕ ಅನ್ವಯಿಸಲಿದೆ ಎಂದು ತಿಳಿಸಿದ್ದಾರೆ.

ಅಲ್ಲದೆ ಈ ಟೋಲ್ ಮಾರ್ಗವಾಗಿ ಆಚರಣೆಯಾಗುವ ಎಲ್ಲ ಮಾರ್ಗದ ಅನುಸೂಚಿಗಳಲ್ಲಿನ ವಿದ್ಯುನ್ಮಾನ ಯಂತ್ರಗಳ ತಂತ್ರಾಂಶದಲ್ಲಿ ಪ್ರಯಾಣಿಕರ ಚೀಟಿ ಹಾಗೂ ಟೋಲ್ ಶುಲ್ಕ ಅಳವಡಿಸಲು ಮುಖ್ಯ ಗಣಕ ವ್ಯವಸ್ಥಾಪಕರವರು ಅಗತ್ಯ ಕ್ರಮ ಕೈಗೊಳ್ಳಬೇಕು. ಈ ಸುತ್ತೋಲೆಯು ಮೇ 21ರಿಂದ ಅಂದರೆ ಇಂದಿನಿಂದ ಜಾರಿಗೆ ಬರುತ್ತದೆ ಎಂದು ತಿಳಿಸಿದ್ದಾರೆ.

Megha
the authorMegha

Leave a Reply

error: Content is protected !!
Latest news
KSRTC: ಪಲ್ಲಕ್ಕಿಯಲ್ಲಿ ಆಕಸ್ಮಿಕ ಬೆಂಕಿ- ಧಗಧಗಿಸಿದ ಬಸ್‌- ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ KSRTC ಕಡೂರು: ಘಟಕದಲ್ಲೊಬ್ಬಳು ಟಾರ್ಚರ್‌ ಟಿಸಿ- ನೌಕರರಿಗೆ ಮಾನಸಿಕ ಕಿರುಕುಳ- ರಜೆ ಬದಲು ಗೈರು ತೋರಿಸುವ ನಟ ಭಯಂಕರಿ! EPS ಪಿಂಚಣಿದಾರರ 100ನೇ ಮಾಸಿಕ, ಶತದಿನೋತ್ಸವದಲ್ಲಿ ಮುಸ್ಸಂಜೆಯ ತರುಣರ ಸಂಭ್ರಮ KSRTC: ಫ್ರೀಡಂ ಪಾರ್ಕ್‌ನಲ್ಲಿ ಸರಿ ಸಮಾನ ವೇತನ, 38 ತಿಂಗಳ ಹಿಂಬಾಕಿಗೆ ಆಗ್ರಹಿಸಿ ಸಾರಿಗೆ ನೌಕರರ ಪ್ರತಿಭಟನೆ- ಸರ್ಕಾರ... ಗೆದ್ದ3ವರ್ಷದ ಬಳಿಕ ಶಾಸಕರಾದ ಜೀವರಾಜ್: ಅಧಿಕಾರಿಗಳ ಎಡವಟ್ಟಿಗೆ ಸೋತರು 3ವರ್ಷ ಶಾಸಕರಾಗಿದ್ದ ರಾಜೇಗೌಡ KSRTC: ಇಂದು ಸರಿ ಸಮಾನ ವೇತನ, 38 ತಿಂಗಳ ಹಿಂಬಾಕಿ ಕೊಡಲು ಆಗ್ರಹಿಸಿ ಸಾರಿಗೆ ನೌಕರರ ಧರಣಿ ಸತ್ಯಾಗ್ರಹ KSRTC: ನಾಳೆ ಸರಿ ಸಮಾನ ವೇತನ, 38 ತಿಂಗಳ ಹಿಂಬಾಕಿ ಕೊಡದ ಸರ್ಕಾರದ ವಿರುದ್ಧ ಸಾರಿಗೆ ನೌಕರರ ಧರಣಿ ಸತ್ಯಾಗ್ರಹ KKRTC: ನೋಡಿ ಎಂಡಿ ಅವರೇ ನಿಮ್ಮ ಸಂಸ್ಥೆಯಲ್ಲಿ ಚಾಲನಾ ಸಿಬ್ಬಂದಿಗಳು ಮೇ 1ರಂದು ರಜೆ ತೆಗೆದುಕೊಂಡರೆ ಆಬ್ಸೆಂಟ್‌ ಹಾಕುವ ... ಪ್ರಾಮಾಣಿಕತೆ ಮೆರೆದ KSRTC ಸಿಬ್ಬಂದಿ - ಆಭರಣ ಅಡವಿಟ್ಟು ತಂದಿದ್ದ ಹಣ ಕಳೆದು ಕೊಂಡ ಪ್ರಯಾಣಿಕನಿಗೆ ಮರಳಿ ಕೊಟ್ಟ ನೌಕರರ... KSRTC: ಚಾಲನಾ ಸಿಬ್ಬಂದಿ ವಿರುದ್ಧ ಮೆಮೊ ನೀಡುವುದಕಷ್ಟೇ ತಮ್ಮ ಕಾರ್ಯ ವ್ಯಾಪ್ತಿಯ ಸೀಮಿತಗೊಳಿಸಿಕೊಂಡ ತನಿಖಾಧಿಕಾರಿಗಳು?...