NEWSಕೃಷಿನಮ್ಮಜಿಲ್ಲೆ

NWKRTC: ವರುಣನ ಅಬ್ಬರಕ್ಕೆ ಕಾರವಾರದ ಬಸ್‌ ಡಿಪೋ ಜಲಾವೃತ- ಮಳೆ ನೀರಿನಲ್ಲೇ ನಿಂತು ಹೆರಿಗೆ ಮಾಡಿಸಿದ ವೈದ್ಯರು

ಕಾರವಾರ ಆಸ್ಪತ್ರೆ, ಬಸ್‌ ಡಿಪೋಗೆ ನುಗ್ಗಿದ ಮಳೆ ನೀರು.
ವಿಜಯಪಥ ಸಮಗ್ರ ಸುದ್ದಿ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಧಾರಾಕರ ಮಳೆಯಾಗುತ್ತಿದ್ದು, ಈ ಮಳೆಗೆ ವಾಯುವ್ಯ ರಸ್ತೆ ಸಾರಿಗೆ ನಿಮಗದ ಘಟಕ ಸಂಪೂರ್ಣ ಜಲಾವೃತವಾಗಿದ್ದು, ಬಸ್‌ಗಳನ್ನು ತೆಗೆಯುವುದಕ್ಕೂ ಸಿಬ್ಬಂದಿ ಪರದಾಡಿತ ಸ್ಥಿತಿ ನಿರ್ಮಾವಾಗಿತ್ತು.

ಜಿಲ್ಲೆಯ ಹಲವೆಡೆ ಭಾರಿ ಮಳೆಯಾಗುತ್ತಿದ್ದು, ಕಾರವಾರದಲ್ಲಿ ಮಳೆಯಿಂದ ಅವಾಂತರ ಸೃಷ್ಟಿಯಾಗಿದೆ. ನಗರದ NWKRTC ಘಟಕ ಸಂಪೂರ್ಣ ಜಲಾವೃತಗೊಂಡಿದ್ದು, ಡಿಪೋದಿಂದ ಬಸ್ ಹೊರ ತೆಗೆಯಲು ಚಾಲಕರು ಪರದಾಟಪಡುವಂತಾಗಿದೆ.

ಇನ್ನು ಮಳೆ ನೀರಿನಿಂದ ಒದ್ದೆಯಾದ ವಸ್ತುಗಳನ್ನು ಬೇರೆ ಕಡೆ ಸ್ಥಳಾಂತರಿಸಲು ಡಿಪೋದಲ್ಲಿ ನೌಕರರು ತಲೆ ಮೇಲೆ ವಸ್ತುಗಳನ್ನು ಹೊತ್ತುಕೊಂಡು ಬರುವ ಮೂಲಕ ಹರಸಾಹಸಪಟ್ಟಿದ್ದಾರೆ.

ಕಾರವಾರ ನಗರದ ಸರ್ಕಾರಿ ಆಸ್ಪತ್ರೆಗೂ ನೀರು ನುಗ್ಗಿದ್ದು, ಹೆರಿಗೆ ವಾರ್ಡ್‌ ಜಲಾವೃತಗೊಂಡಿತ್ತು. ಈ ವೇಳೆ ನೀರಿನ ನಡುವೆಯೇ ನಿಂತು ಹೆರಿಗೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಕೆಲ ಬಾಣಂತಿಯರನ್ನು ಕೆಳ ಮಹಡಿಯಿಂದ ಮೇಲ್ಮಹಡಿಗೆ ಸ್ಥಳಾಂತರಿಸಿದ್ದಾರೆ.

ಆದರೆ, ಅಲ್ಲಿ ಜಾಗ ಸಿಗದಿದ್ದಕ್ಕೆ ವೀಲ್‌ ಚೇರ್‌ನಲ್ಲೇ ಬಾಣಂತಿಯರನ್ನು ಕೂರಿಸಿಕೊಂಡಿದ್ದ ದೃಶ್ಯ ಅಲ್ಲಿನ ಜನಪ್ರತಿನಿಗಳ ಜವಾಬ್ದಾರಿಯನ್ನು ತೋರಿಸುತ್ತಿತ್ತು. ಇನ್ನು ಇಡೀ ರಾತ್ರಿ ಮಳೆಯಿಂದಾಗಿ ನಿದ್ದೆ ಇಲ್ಲದೆ ಆಸ್ಪತ್ರೆಯ ಸಿಬ್ಬಂದಿ ಹಾಗೂ ಹೆರಿಗೆಗೆ ದಾಖಲಾದವರು ಸೇರಿದಂತೆ ಇತರೆ ರೋಗಿಗಳು ಪರದಾಡಿದ್ದಾರೆ.

Megha
the authorMegha

Leave a Reply

error: Content is protected !!