NWKRTC: ಮಕ್ಕಳ ಶೈಕ್ಷಣಿಕ ಪ್ರವಾಸಕ್ಕೆ ಹಳೇ ಬಸ್ ಕೊಟ್ಟ ಕಾರವಾರ ಡಿಪೋ ಅಧಿಕಾರಿಗಳು -ತರಾಟೆಗೆ ತೆಗೆದುಕೊಂಡ ಡಿಡಿಪಿಐ

ಕಾರವಾರ: ವಾಯವ್ಯ ಕರ್ನಾಟ ರಸ್ತೆ ಸಾರಿಗೆ ನಿಗಮದ ಕಾರವಾರ ಘಟಕದ ಮ್ಯಾನೇಜರ ಹಾಗೂ ತಾಂತ್ರಿಕ AWS ಶೈಕ್ಷಣಿಕ ಪ್ರವಾಸಕ್ಕೆ ಒಪ್ಪಂದದ ಪ್ರಕಾರ ಕಳಿಸಬೇಕಾದ ಬಸ್ ಕಳಿಸದೆ ಹಳೇ ಬಸ್ ಕಳಿಸುವ ಮೂಲಕ ಯಾಮಾರಿಸಿದ್ದಾರೆ.

ಇನ್ನು ಈ ಬಗ್ಗೆ ಆಕ್ರೋಶಗೊಂಡ ಉತ್ತರ ಕನ್ನಡ ಜಿಲ್ಲಾ ಕಾರವಾರ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು, ಆಡಳಿತ ಹಾಗೂ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳು ಹೆಚ್ಚಿಗೆ ಹಣ ಪಡೆದು ಹಳೇ ಬಸ್ (ಕಡಿಮೆ ಹಣದ ಬಸ್) ನೀಡಿ ಯಾಮಾರಿಸಿದ್ದಕ್ಕೆ ಕಾರವಾರ ಡಿಪೋ ಮ್ಯಾನೇಜರ ಹಾಗೂ ತಾಂತ್ರಿಕ AWS ಅವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಆಗಿದ್ದು ಏನು?: ಶೈಕ್ಷಣಿಕ ಪ್ರವಾಸ ಸಿರ್ಸಿಗೆ ಕಾರವಾರದ ತೊಡುರ, ಬೇಲಿಕೇರಿ, ಕುಮಟಾ ಮಾರ್ಗವಾಗಿ ಸಿರ್ಸಿ ಮಾರಿಕಾಂಬ ಕ್ರೀಡಾಂಗಣ ಸ್ಪೋರ್ಟ್ ಗೆ BS-6 ಬಸ್ಸನ್ನು ಬುಕ್ ಮಾಡಲಾಗಿತ್ತು. ಆದರೆ, ಯಾರಿಗೂ ಸಂಶಯ ಬರುದಂತೆ
KA31 F1253 BS III ಬಸ್ ಕಳಿಸಿ BS-6 ಬಸ್ ಎಂದು ಯಾಮಾರಿಸಿದ್ದಾರೆ ಕಾರವಾರ ಘಟಕದ ಅಧಿಕಾರಿಗಳು.
ಇನ್ನು ಒಂದಿಲ್ಲೊಂದು ಸಮಸ್ಯೆಯಲ್ಲಿ ಸಿಲುಕಿಕೊಳ್ಳುತ್ತಿರುವ ಕಾರವಾರ ಡಿಪೋದ ಮ್ಯಾನೇಜರ್ ಸೌಮ್ಯ ನಾಯಕ ಮತ್ತು AWS ತಾಂತ್ರಿಕ ಅಧಿಕಾರಿ ದತ್ತಾ ನಾಯಕ ನಿನ್ನೆ ಅಂದರೆ, ಮಾ.9 ರಂದು ಶ್ರೇಕ್ಷಣಿಕ ಪ್ರವಾಸ (ಶಿರಶಿ ಮಾರಿಕಾಂಬಾ ಕ್ರಿಡಾಂಗಣಕ್ಕೆ )ಕ್ಕೆ BS -6 ಬಸ್ ಮುಂಗಡವಾಗಿ ಬುಕ್ ಮಾಡಿದ್ದು, BS-III ಬಸನ್ನು (ಹಳೆ KA 31 F 1253 ಲೋಕಲ್ ಓಡಾಡಿಕೊಂಡು ಇರುವ ಬಸನ್ನು ಕಳಿಸಿದ್ದಾರೆ)
ಇದು ಕಾರವಾರದ ತೋಡುರ ಗ್ರಾಮ – ಬೇಲೇಕೆರಿ ಖಾರ್ವಿವಾಡ, ಕುಮಟಾದ ವಿದ್ಯಾರ್ಥಿಗಳನ್ನು ಕರೆದೊಯ್ಯವ ಲಟಾರಿ ಬಸ್. ಇದನ್ನು ಕುಮುಟಾದಲ್ಲಿ ನೋಡಿದ ಉಪ ನಿರ್ದೇಶಕರಾದ ಸಮನ್ವಯಾಧಿಕಾರಿಗಳು ಕೊಪಗೊಂಡು ನಾವು ಮಕ್ಕಳ ಆರೋಗ್ಯ & ಸುರಕ್ಷತೆಗೆ ಹೆಚ್ಚಿಗೆ ಹಣ ನೀಡಿ ಒಳ್ಳೆ ಬಸ್ ಬುಕ್ ಮಾಡಿದ್ದೇವೆ.
ಆದರೆ, ತದನಂತರದಲ್ಲಿ ಹಳೆ ಲಟಾರಿ BS-III ಬಸನ್ನು ಕಳಿಸಿದ್ದೀರಿ ಈ ಬಸ್‌ನ್ನು ಶಿರಶಿ ಮುಖ್ಯ ಕಚೇರಿ ಬಾಗಿಲಲ್ಲಿ ನಿಲ್ಲಿಸುತ್ತೇವೇ ಎಂದು ಆಕ್ರೊಶ ವ್ಯಕ್ತ ಪಡಿಸಿದ್ದಾರೆ.
ಕೂಡಲೇ ಎಚ್ಚೆತ್ತುಕೊಂಡ ಕಾರವಾರ ಡಿಪೊ ಮ್ಯಾನೇಜರ್ ಈ ವಿಷಯ ನನಗೆ ಗೊತ್ತಿಲ್ಲದಂತೆ ಆಗಿದ್ದು, ಅದನ್ನು ನಾವು ಸರಿಪಡಿಸುತ್ತೇವೆ ಎಂದು ನಟಿಸಿ ತದನಂತರದಲ್ಲಿ ಕುಮಟಾ ಡಿಪೋದಿಂದ BS-6 ಬಸ್ ವ್ಯವಸ್ಥೆ ಮಾಡಿದ್ದಾರೆ.
ಆದರೆ, ಈರೀತಿಯ ಬೇಜವಾಬ್ದಾರಿಯಿಂದ ಡಿಪೋ ಮಟ್ಟದ ಅಧಿಕಾರಿಗಳು ನಡೆದುಕೊಂಡು ಪ್ರವಾಸದಲ್ಲಿರುವ ಮಕ್ಕಳ ಜೀವಗಳ ಜತೆ ಚೆಲ್ಲಾಟವಾಡುತ್ತಿರುವುದು ಎಷ್ಟರ ಮಟ್ಟಿಗ ಸರಿ ಎಂಬ ಆಕ್ರೋಶದಿಂದ ಪ್ರಜ್ಞಾವಂತರು ಕಿಡಿಕಾರಿದ್ದಾರೆ.
ಇನ್ನಾದರೂ ಈ ರೀತಿಯ ತಪ್ಪುಗಳನ್ನು ಬೇಕು ಬೇಕು ಎಂದಂತೆ ಮಾಡುವುದು ಸರಿಯಲ್ಲ ಮುಂದೆ ಇದೇ ರೀತಿಯಾದರೆ ನಾವು ಸರ್ಕಾರಕ್ಕೆ ಪತ್ರ ಬರೆದು ಖಾಸಗಿ ಬಸ್‌ಗಳ ಸೇವೆ ಪಡೆಯುವುದಕ್ಕೆ ಅವಕಾಶ ಮಾಡಿಕೊಡಬೇಕು ಅಲ್ಲದೆ ಅದಕ್ಕೆ ಆಗುವ ಪ್ರವಾಸ ವೆಚ್ಚವನ್ನು ಸರ್ಕಾರ ಭರಿಸಬೇಕು ಎಂದು ಮನವಿ ಮಾಡುವುದಾಗಿ ಸೂಕ್ಷ್ಮವಾಗಿ ಅಧಿಕಾರಿಗಳು ಸಾರಿಗೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
Related









