NEWSನಮ್ಮಜಿಲ್ಲೆನಮ್ಮರಾಜ್ಯನಿಮ್ಮ ಪತ್ರ

NWKRTC: ಹಳಿ ತಪ್ಪಿತೆ 21 ಸಾವಿರ ನೌಕರರ ಸಮಸ್ಯೆ ಪರಿಹರಿಸಲು ಆರಂಭಗೊಂಡ “ಸಾರಿಗೆ ಸ್ಪಂದನ”

ವಿಜಯಪಥ ಸಮಗ್ರ ಸುದ್ದಿ

ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ನೌಕರರ ಸಮಸ್ಯ ಪರಿಹರಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಜಾರಿ ಮಾಡಿರುವ “ಸಾರಿಗೆ ಸ್ಪಂದನ” ನೌಕರರ ಕುಂದೂಕೊರತೆ ನಿವಾರಿಸುವ ನಿಟ್ಟಿನಲ್ಲಿ ಹಿಂದಿನ ಎಂಡಿ ಭರತ್‌ ಎಸ್‌. ಅವರು ಸೃಷ್ಟಿಸಿದ ವೇದಿಕೆ ಈಗ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ನೌಕರರ ಯಾವುದೇ ಸಮಸ್ಯೆಗೂ ಈವರೆಗೂ ಸ್ಪಂದನೆ ಸಿಗುತ್ತಿಲ್ಲ.

ಹೌದು! ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಸುಮಾರು 21,000 ಸಿಬ್ಬಂದಿಗಳ ಕುಂದುಕೊರತೆ ನಿರ್ವಹಣಾ ವೇದಿಕೆಯಾಗಿ ಸಾರಿಗೆ ಸ್ಪಂದನವನ್ನು ಪ್ರಾರಂಭಿಸಲಾಗಿದೆ. ನೌಕರರು ತಮ್ಮ ಸಮಸ್ಯೆಗಳನ್ನು ಬಗೆಹರಿಕೊಳ್ಳಲು ವಿಭಾಗೀಯ ಕಚೇರಿಗಳಿಗೆ ಬರುವುದರಿಂದ ದೈನಂದಿನ ಕರ್ತವ್ಯಕ್ಕೆ ಅಡ್ಡಿಯಾಗುತ್ತದೆ ಎಂಬ ದೃಷ್ಟಿಯಿಂದ ಆನಲೈನ್ ಮೂಲಕವೇ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಈ ಸಾರಿಗೆ ಸ್ಪಂದನ ಜಾರಿಯಾಗಿದೆ.

ಜನವರಿ 2024ರಲ್ಲಿ ಅಂದಿನ ಎಂಡಿ ಭರತ್‌ ಎಸ್‌. ಅವರು ಈ ವೇದಿಕೆ ಹುಟ್ಟುಹಾಕಿದ ಆ ವೇಳೆ ನಿಗಮದ ಸಮಸ್ತ ನೌಕರರು ಸಂತೋಷಪಟ್ಟರು. ಇನ್ನೇನು ನಮ್ಮ ಸಮಸ್ಯೆ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಆನ್‌ಲೈನ್‌ ಮೂಲಕವೇ ಹೇಳಿಕೊಂಡು ಅತೀ ಶೀಘ್ರದಲ್ಲೇ ಪರಿಹಾರ ಕಂಡುಕೊಳ್ಳಬಹುದು ಎಂದು ಖುಷಿಯಲ್ಲಿ ಹಿಗ್ಗಿದರು. ಆದರೆ, ಈಗ ಸಾರಿಗೆ ಸ್ಪಂದನದಲ್ಲಿ ನೌಕರರ ಸಮಸ್ಯೆಗಳಿಗೆ ಈವರೆಗೂ ಸಂಬಂಧಪಟ್ಟ ಅಧಿಕಾರಿಗಳು ಪರಿಹಾರ ಒದಗಿಸಿಲ್ಲ.

ಸುಖಸುಮ್ಮನೇ ವಿಳಂಬ ಧೋರಣೆ ಅನುಸರಿಸುತ್ತಿದ್ದು, ನೌಕರರು ಯಾವುದೇ ಸಮಸ್ಯೆಗೂ ಈ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಹೀಗಾಗಿ ನೌಕರರು ಆನ್‌ಲೈನ್‌ನಲ್ಲಿ ನೀಡಿರುವ ಎಲ್ಲ ದೂರುಗಳು ದೂರುಗಳಾಗಿಯೇ ಉಳಿದಿವೆ.

ಹೀಗಾಗಿ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಈಗಲಾದರೂ ಇತ್ತ ಗಮನ ಹರಿಸಬೇಕು ಎಂದು ನಿಗಮದ ನೌಕರರೊಬ್ಬರು ಮನವಿ ಮಾಡಿದ್ದು, ಈ ಸಂಬಂಧ ವಿಜಯಪಥದ ನಿಮ್ಮ ಪತ್ರ ವಿಭಾಗಕ್ಕೂ ಪತ್ರ ಬರೆದು ಸಮಸ್ಯೆ ಹೇಳಿಕೊಂಡಿದ್ದಾರೆ. ಇನ್ನಾರೂ ನೌಕರರ ಸಮಸ್ಯೆಗೆ ಸ್ಪಂದಿಸುವ ನಿಟ್ಟಿನಲ್ಲಿ ಆರಂಭವಾಗಿರುವ “ಸಾರಿಗೆ ಸ್ಪಂದನ”ಕ್ಕೆ ಅಧಿಕಾರಿಗಳು ಸ್ಪಂದಿಸಬೇಕು ಎಂದು ಕೋರಿದ್ದಾರೆ.

ಏನೀ ಸಾರಿಗೆ ಸ್ಪಂದನ?: NWKRTCಯು ರಾಜ್ಯದ ಸಾರಿಗೆ ವಲಯದಲ್ಲಿ ಇದೇ ಮೊದಲ ಬಾರಿಗೆ “ಸಾರಿಗೆ ಸ್ಪಂದನ” ಎಂಬ ಹೊಸ ಕುಂದುಕೊರತೆ ನಿರ್ವಹಣಾ ವೇದಿಕೆಯನ್ನು 2024ರ ಜನವರಿಯಲ್ಲಿ ಪರಿಚಯಿಸಿದೆ. ಇದು ಸಂಸ್ಥೆಯೊಳಗೆ ಸಂವಹನವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದ್ದು, ಕುಂದುಕೊರತೆ ನಿರ್ವಹಣಾ ವೇದಿಕೆಯಾಗಿ, ನಿಗಮದ 21,000 ಸಿಬ್ಬಂದಿಗಳಿಗೆ ಸಮಸ್ಯೆಗಳು ಮತ್ತು ಕುಂದುಕೊರತೆಗಳನ್ನು ನೇರವಾಗಿ ತಮ್ಮ ಮೇಲಧಿಕಾರಿಗಳಿಗೆ ಸಲ್ಲಿಸಲು ಇದು ಸಹಕಾರಿಯಾಗಿದೆ.

ಈ ತಂತ್ರಜ್ಞಾನ ಆಧಾರಿತ ವ್ಯವಸ್ಥೆಯು ಸಿಬ್ಬಂದಿಗಳ ಅನುಕೂಲಕ್ಕಾಗಿ ಮತ್ತು ಸಮರ್ಥ ಕುಂದುಕೊರತೆ ಪರಿಹಾರಕ್ಕಾಗಿ ಹುಟ್ಟುಹಾಕಲಾಯಿತು. ಅಂದು ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಭರತ್ ಎಸ್. ಇದರ ಬಗ್ಗೆ ಆಸಕ್ತಿ ವಹಿಸಿ ಜಾರಿಮಾಡಿ ನೌಕರರಿಗೆ ಅನುಕೂಲವಾಗಲಿದೆ ಎಂದು ನಂಬಿದ್ದರು. ಆದರೆ ಈಗ ಹಳ್ಳ ಹಿಡಿಯುತ್ತಿದೆ.

ಅಂದಿನ ಎಂಡಿ ಅವರು ಹೇಳಿದಂತೆ 6 ಜಿಲ್ಲೆಗಳಲ್ಲಿ ಕೆಲಸ ಮಾಡುವ ನಿಗಮದ ಸುಮಾರು 21,000 ಸಿಬ್ಬಂದಿಗಳ ಕುಂದುಕೊರತೆ ನಿರ್ವಹಣಾ ವೇದಿಕೆಯಾಗಿ ಸಾರಿಗೆ ಸ್ಪಂದನವನ್ನು ಪ್ರಾರಂಭವಾಗಿದ್ದು, ಪಿಎಫ್, ಗ್ರಾಚ್ಯುಟಿ, ವೈದ್ಯಕೀಯ ಮರುಪಾವತಿ, ತಮ್ಮ ಮಕ್ಕಳಿಗೆ ವಿದ್ಯಾರ್ಥಿವೇತನ ಮತ್ತು ಇತರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ತಮ್ಮ ಕುಂದುಕೊರತೆಗಳು ಅಥವಾ ಪ್ರಶ್ನೆಗಳನ್ನು ಸಲ್ಲಿಸಲು ಸಿಬ್ಬಂದಿ ಆಗಾಗ್ಗೆ ಕಚೇರಿಗೆ ಭೇಟಿ ನೀಡಬೇಕಾಗಿಲ್ಲ.

ಜತೆಗೆ ಈ ಹೊಸ ವ್ಯವಸ್ಥೆಯಡಿ ಅವರು ತಮ್ಮ ಫೈಲ್‌ಗಳ ಸ್ಥಿತಿಯನ್ನು ತಿಳಿದುಕೊಳ್ಳಬಹುದು. ಸಿಬ್ಬಂದಿ ಕೇವಲ ss.itnwkrtc.in ಗೆ ಲಾಗ್ ಇನ್ ಮಾಡಬಹುದು ಅಥವಾ 7760991555 ಗೆ ಕರೆ ಮಾಡಬಹುದು ಅಥವಾ ಎಲ್ಲ ವಿವರಗಳನ್ನು ಪಡೆಯಲು QR ಕೋಡ್ ಅನ್ನು ಸ್ಕ್ಯಾನ್ ಮಾಡಬಹುದಾಗಿದೆ.

ರಾಜ್ಯದಲ್ಲಿ ಮೊದಲ ಬಾರಿಗೆ, ಈ ದೊಡ್ಡ ಪ್ರಮಾಣದಲ್ಲಿ ಸಿಬ್ಬಂದಿಗೆ ಸಹಾಯ ಮಾಡಲು ಮತ್ತು ಸೇವೆಯನ್ನು ಸುಧಾರಿಸಲು ಆನ್‌ಲೈನ್ ಪ್ಲಾಟ್‌ಫಾರ್ಮ್ ಅನ್ನು ಭರತ್‌ ಅವರು ಪರಿಚಯಿಸಿದ್ದಾರೆ. NWKRTCಯ ಸಿಬ್ಬಂದಿಗಾಗಿ ಈ ವ್ಯವಸ್ಥೆಯನ್ನು ಪ್ರಾಯೋಗಿಕ ಯೋಜನೆಯಾಗಿ ಪ್ರಾರಂಭಿಸಿದ್ದರು. ಆ ಬಳಿಕ ಅದರ ಕಾರ್ಯಸಾಧ್ಯತೆ ಮತ್ತು ಇತರ ಅಂಶಗಳನ್ನು ವಿಶ್ಲೇಷಿಸಿದ ನಂತರ ಸಿಬ್ಬಂದಿಗಳಿಗೆ ಅನುಕೂಲಕರವಾಗಲಿದೆ ಎಂದು ಹೇಳಿದ್ದರು.

ಸಾರಿಗೆ ಇಲಾಖೆಯ ಮೂಲಗಳ ಪ್ರಕಾರ, ಹೊಸದಾಗಿ ಪ್ರಾರಂಭಿಸಲಾದ ಆನ್‌ಲೈನ್ ಪ್ಲಾಟ್‌ಫಾರ್ಮ್ ಬಳಕೆದಾರ ಸ್ನೇಹಿಯಾಗಿದೆ. NWKRTCಯ ಸಿಬ್ಬಂದಿ ತಮ್ಮ PF ಸಂಖ್ಯೆಯನ್ನು ನಮೂದಿಸಬೇಕು ಮತ್ತು ಅವರ ನೋಂದಾಯಿತ ಸೆಲ್‌ಫೋನ್ ಸಂಖ್ಯೆಗೆ OTP ಕಳುಹಿಸಲಾಗುತ್ತದೆ. OTP ನಮೂದಿಸಿದ ನಂತರ, ಅವರ ಹೆಸರು, ಡಿಪೋ ಮತ್ತು ಇತರ ವಿವರಗಳನ್ನು ಒಳಗೊಂಡಂತೆ ಸಿಬ್ಬಂದಿ ಸದಸ್ಯರ ವಿವರಗಳು ಪರದೆಯ ಮೇಲೆ ಕಾಣಿಸಿಕೊಳ್ಳುತ್ತವೆ.

ನಂತರ ಸಿಬ್ಬಂದಿ ತಮ್ಮ ಕುಂದುಕೊರತೆಗಳನ್ನು ನಮೂದಿಸಬಹುದು ಅಥವಾ ತಮ್ಮ ಅರ್ಜಿಗಳನ್ನು ಅಥವಾ ಇತರ ಸಮಸ್ಯೆಗಳನ್ನು ಸಲ್ಲಿಸಬಹುದು ಮತ್ತು ಅದನ್ನು ಪೋಸ್ಟ್ ಮಾಡಬಹುದು. ಅದರ ಸ್ಥಿತಿಗತಿಯನ್ನು ಸಹ ತಿಳಿದುಕೊಳ್ಳಬಹುದು ಎಂದು ಮೂಲಗಳು ತಿಳಿಸಿವೆ.
ಈಗ ಸಿಬ್ಬಂದಿಯ ಕುಂದುಕೊರತೆಗಳನ್ನು ನೇರವಾಗಿ ಆಲಿಸಿ, ಇತರೆ ಅಧಿಕಾರಿಗಳು ಅಥವಾ ಸಿಬ್ಬಂದಿಯ ಮಧ್ಯಪ್ರವೇಶವನ್ನು ತಪ್ಪಿಸಿ ಎಂಡಿ ಕಚೇರಿಯಿಂದ ಸಾರಿಗೆ ಸ್ಪಂದನದ ಮೂಲಕ ತ್ವರಿತವಾಗಿ ಪರಿಹರಿಸಬಹುದಾಗಿದೆ.

ಆದರೆ ಭರತ್‌ ಅವರ ಬಳಿಕ ಬಂದಿರುವ ಎಂಡಿ ಅವರು ಈ ಬಗ್ಗೆ ಸರಿಯಾದ ಗಮನಕೊಡದೆ ಇರುವ ಕಾರಣವೋ ಏನೋ ಗೊತ್ತಿಲ್ಲ ವಿಭಾಗೀಯ ನಿಯಂತ್ರಣಾಧಿಕಾರಿಗಳು ಮತ್ತು ಇತರೆ ಸಂಬಂಧಪಟ್ಟ ಅಧಿಕಾರಿಗಳು ಇದಕ್ಕೆ ಸ್ಪಂದಿಸದ ಕಾರಣ ನಿರ್ಲಕ್ಷ್ಯಕ್ಕೆ ಒಳಗಾಗಿ ಈಗ ಹಳಿ ತಪ್ಪುತ್ತಿದೆ ಎಂದು ಹೇಳಲಾಗುತ್ತಿದೆ.

Leave a Reply

error: Content is protected !!
LATEST
ಸೆ.12ರಂದು 5 ಭಾಷೆಗಳಲ್ಲಿ ಬೆಳ್ಳಿತೆರೆ ಮೇಲೆ ARM- ಚಿತ್ರದ ಟ್ರೈಲರ್‌ಗೆ ಭಾರೀ ಮೆಚ್ಚುಗೆ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಬೇಕೇಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ ಮೈಸೂರು: ಕಲುಷಿತ ನೀರು ಸೇವಿಸಿ 12ಮಂದಿಗೆ ವಾಂತಿ, ‌ಭೇದಿ, ಓರ್ವ ಮೃತ ಬಾಲಿವುಡ್‌ ನಟಿ ಮಲೈಕಾ ಅರೋರಾ ತಂದೆ ಆತ್ಯಹತ್ಯೆ KSRTC ನೌಕರರ ಕಿತ್ತು ತಿನ್ನುವ ಭ್ರಷ್ಟರು: ಹೋಟೆಲ್‌ಗೆ ತಿನ್ನಲು ಹೋಗಿ ನೌಕರನಿಗೆ ಫೋನ್‌ ಪೇ ಮಾಡಲು ಹೇಳಿದ ಎಟಿಐ ಗಂಗಾಧ... KSRTC ಮಂಡ್ಯ: ಓವರ್‌ಟೇಕ್‌ ನೆಪದಲ್ಲಿ ತಾನೇ ಬಸ್‌ಗೆ ಬೈಕ್‌ ಡಿಕ್ಕಿ ಹೊಡೆಸಿ ಅಪಘಾತದ ಹೈಡ್ರಾಮ ಮಾಡಿದ ಬೈಕ್‌ ಸವಾರ ಯೋಗ... KSRTC: ಆ‌ರ್‌ಟಿಒ ಚಾಲನಾ ಪರವಾನಗಿ ಅಮಾನತುಗೊಳಿಸಿದ ಚಾಲಕರಿಗೆ ಡ್ಯೂಟಿ ಕೊಟ್ಟರೆ ಕ್ರಮ- ಡಿಸಿ ಸೂಚನೆ ಆರೋಗ್ಯ ಶಿಬಿರ ಸಾಮಾಜಿಕ ಜವಾಬ್ದಾರಿ: ನ್ಯಾಯ ಸಮಿತಿ ಅಧ್ಯಕ್ಷ ಸಚಿನ್ ಶಿರವಾಳ ಚಾರ್ಜ್‌ಶೀಟ್ ಗೌಪ್ಯ ದಾಖಲಾತಿ ಏನಲ್ಲ: ಗೃಹ ಸಚಿವ ಪರಮೇಶ್ವರ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಡುವುದರಲ್ಲಿ ಎಳ್ಳಷ್ಟೂ ಅನುಮಾನವಿಲ್ಲ : ಬಿವೈವಿ