NEWSನಮ್ಮಜಿಲ್ಲೆನಮ್ಮರಾಜ್ಯ

NWKRTC: ನೌಕರರ ಸಮಸ್ಯೆಗೆ ಶೀಘ್ರ ಪರಿಹಾರ – ಕುಂದು ಕೊರತೆ ಸಭೆಯಲ್ಲಿ ಕೂಟದ ಪದಾಧಿಕಾರಿಗಳಿಗೆ ಎಂಡಿ ಪ್ರಿಯಾಂಗಾ ಭರವಸೆ

ವಿಜಯಪಥ ಸಮಗ್ರ ಸುದ್ದಿ

ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ನೌಕರರಿಗೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು ಎಂದು ನೌಕರರ ಕೂಟದ ಪದಾಧಿಕಾರಿಗಳು ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಪ್ರಿಯಾಂಗಾ ಅವರಿಗೆ ಮನವಿ ಸಲ್ಲಿಸಿದ್ದಾರೆ.

ನಿಗಮದ ಹುಬ್ಬಳ್ಳಿ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ವ್ಯವಸ್ಥಾಪಕರ ನಿರ್ದೇಶಕರ ಅಧ್ಯಕ್ಷತೆಯಲ್ಲಿ ನಡೆದ ನೌಕರರ ಕೂಟದ ಪದಾಧಿಕಾರಿಗಳ ಉತ್ಪಾದನೆ ಹಾಗೂ ಕುಂದು ಕೊರತೆ ಸಭೆಯಲ್ಲಿ ಎಂಡಿ ಪ್ರಿಯಾಂಗಾ ಅವರಿಗೆ ಕೂಟದಿಂದ ಮನವಿ ಸಲ್ಲಿಸಿದ ಬಳಿಕ ನೌಕರರು ಅನುಭವಿಸುತ್ತಿರುವ ಹಲವಾರು ಸಮಸ್ಯೆಗಳನ್ನು ವಿವರವಾಗಿ ತಿಳಿಸಿ ಪರಿಹರಿಸುವಂತೆ ಕೋರಿದರು.

ಇನ್ನು ಇದೇ ಪ್ರಪ್ರಥಮವಾಗಿ ಸಾರಿಗೆ ನೌಕರರ ಕೂಟದ ಪದಾಧಿಕಾರಿಗಳನ್ನು ಉತ್ಪಾದನೆ ಹಾಗೂ ಕುಂದು ಕೊರತೆ ಸಭೆಗೆ ಅಧಿಕೃತ ಅಹ್ವಾನ ನೀಡಿದ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಮುಖ್ಯ ಕಾರ್ಮಿಕ ಕಲ್ಯಾಣ ಅಧಿಕಾರಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು.

ಉತ್ತರ ಕನ್ನಡ ಹಾಗೂ ಹುಬ್ಬಳ್ಳಿ ವಿಭಾಗದಲ್ಲಿ ಸಂಚಾರಿ ನಿಯಂತ್ರಕರ ಬಡ್ತಿ ನೀಡಲಾಗಿದೆ ಆದರೆ ಉಳಿದ ವಿಭಾಗದಲ್ಲಿ ಬಡ್ತಿ ನೀಡಿಲ್ಲ ಅವರಿಗೂ ಮುಂಬಡ್ತಿ ನೀಡಬೇಕು ಎಂದು ಪದಾಧಿಕಾರಿಗಳು ಕೇಳಿದಕ್ಕೆ ಹೌದು ಹೊಸ ಸಿಬ್ಬಂದಿಗಳು ಬಂದ ತಕ್ಷಣ ಬಡ್ತಿ ನೀಡಲಾಗುವುದು ಎಂದು  ಎಂಡಿ ತಿಳಿಸಿದರು.

ಇನ್ನು ಬೆಳಗಾವಿ ವಿಭಾಗದಲ್ಲಿ ಕ್ರೇನ್ ಒದಗಿಸೊ ಬಗ್ಗೆ ಹಾಗೂ ಪ್ರತಿಯೊಂದು ವಿಭಾಗದಲ್ಲೂ ಕ್ರೇನ್ ಸಮಸ್ಯೆ ಇದ್ದು, ಅವುಗಳನ್ನು ಬಗೆಹರಿಸಬೇಕು ಎಂಬುವುದು ಸೇರಿ ಇತರ ಸಮಸ್ಯೆಗಳ ಬಗ್ಗೆ ಸುದೀರ್ಘವಾದ ಚರ್ಚೆ ಸಭೆಯಲ್ಲಿ ನಡೆಯಿತು. ಅವುಗಳಲ್ಲಿ ಪ್ರಮುಖವಾಗಿ ನೌಕರರು ಡ್ಯೂಟಿ ವೇಳೆ ಸರಿಯಾಗಿ ನಿದ್ರೆ ಮಾಡುವುದಕ್ಕೆ ವ್ಯವಸ್ಥೆ ಇಲ್ಲದಿರುವುದು, ಮಹಿಳಾ ಸಿಬ್ಬಂದಿಗೆ ಶೌಚಾಲಯ ವ್ಯವಸ್ಥೆ ಇಲ್ಲದಿರುವುದು, ಡ್ಯೂಟಿ ಸರಿಯಾಗಿ ಕೊಡದೆ ನೌಕರರನ್ನು ಕೀಳಾಗಿ ಕೆಲ ಡಿಪೋ ಅಧಿಕಾರಿಗಳು ಕಾಣುತ್ತಿರುವುದು, ಇನ್ನು ಅಂಥ ಡಿಎಂಗಳಿಗೆ ಸೂಕ್ತ ತಿಳಿವಳಿಕೆ ನೀಡಬೇಕು.

ಅಲ್ಲದೆ ಕೆಲವು ಡಿಪೋಗಳಲ್ಲಿ ನೌಕರರು ಬೈಕ್‌ಗಳನ್ನು ನಿಲ್ಲಿಸಿ ಡ್ಯೂಟಿಗೆ ಹೋಗುವುದಕ್ಕೆ ಡಿಎಂಗಳು ಬಿಡುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ. ಬೈಕ್‌ ಇಲ್ಲಿ ನಿಲ್ಲಿಸಬೇಡಿ ಎಂದು ಗದರುತ್ತಿದ್ದಾರೆ. ಅಲ್ಲದೆ ಈ ಬಗ್ಗೆ ಸಂಬಂಧಪಟ್ಟ ಡಿಸಿಗಳ ಗಮನಕ್ಕೆ ತಂದರೂ ಅವರು ಸರಿಯಾಗಿ ಗಮನ ಹರಿಸುತ್ತಿಲ್ಲ. ಜತೆಗೆ ಡ್ಯೂಟಿ ಬಳಿಕ ಒಟಿ ಮಾಡಿದರು ಅದನ್ನು ಸರಿಯಾಗಿ ಕೊಡುತ್ತಿಲ್ಲ ಎಂಬ ಬಗ್ಗೆ ಎಂಡಿ ಅವರ ಗಮನ ಸೆಳೆಯಲಾಯಿತು.

ನೌಕರರು ನಿತ್ಯ ಅನುಭವಿಸುತ್ತಿರುವ ರಜೆ ಪಡೆಯುವುದಕ್ಕೂ ಆಗದ ಸ್ಥಿತಿ ಸೇರಿದಂತೆ ಡಿಪೋ ಮಟ್ಟಲ್ಲಿ ಹಾಗೂ ಡಿಸಿ ಮಟ್ಟದಲ್ಲಿ ನಡೆಯುತ್ತಿರುವ ಲಂಚಾವತಾರದ ಬಗ್ಗೆಯೂ ಎಂಡಿ ಅವರ ಗಮನಕ್ಕೆ ತಂದಿದ್ದು ಈ ಎಲ್ಲದಕ್ಕೂ ಸಾಕ್ಷಿ ಸಹಿತ ದಾಖಲೆ ಕೊಟ್ಟರೆ ಅಂಥ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವುದಕ್ಕೆ ಹಿಂದೆಮುಂದೆ ನೋಡುವುದಿಲ್ಲ ಎಂದು ಎಂಡಿ ಪ್ರಯಾಂಗಾ ಭರವಸೆ ನೀಡಿದ್ದಾರೆ ಎಂದು ಪದಾಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಈ ಎಲ್ಲ ವಿಷಯಗಳ ಬಗ್ಗೆ ವ್ಯವಸ್ಥಾಪಕ ನಿರ್ದೇಶಕರಾದ  ಪ್ರಿಯಾಂಗಾ, ಮುಖ್ಯ ಕಾರ್ಮಿಕ ಕಲ್ಯಾಣ ಅಧಿಕಾರಿ ಪಿ.ವೈ. ನಾಯಕ, ಮುಖ್ಯ ಸಂಚಾರಿ ವ್ಯವಸ್ಥಾಪಕ ವಿವೇಕಾನಂದ ವಿಶ್ವಜ್ಞ, ಮುಖ್ಯ ಭದ್ರತಾ ಹಾಗೂ ಜಾಗೃತಿ ಅಧಿಕಾರಿ ಗಣೇಶ್ ರಾಠೋಡ್, ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರಾದ ಶ್ರೀಮತಿ ನರಗುಂದ, ಮುಖ್ಯ ಲೆಕ್ಕಧಿಕಾರಿ ಜಗದಂಬಾ ಕೊರ್ಪಡೆ, ಮುಖ್ಯ ತಾಂತ್ರಿಕ ಶಿಲ್ಪಿಗಳು ಹಾಗೂ CEE ಅವರು ಹಾಗೂ ಎಲ್ಲ ನಮ್ಮ ಇಲಾಖೆಯ ಮುಖ್ಯ ಅಧಿಕಾರಿಗಳು ಸಭೆಯಲ್ಲಿ ಇದ್ದು ಇವರೆಲ್ಲರೂ ನಾವು ಸಲ್ಲಿಸಿರುವ ಮನವಿಯಲ್ಲಿರುವ ಎಲ್ಲ ಸಮಸ್ಯೆಗಳನ್ನು ಸೂಕ್ತ ರೀತಿಯಲ್ಲಿ ಪರಿಹರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ಸಭೆಯಲ್ಲಿ ನೌಕರರ ಕೂಟದ ವಾಯುವ್ಯ ವಲಯ ಕಾರ್ಯಧ್ಯಕ್ಷ ವಿರೇಶ್ ಪೂಜಾರ, ರಾಜ್ಯ ಸಹ ಕಾರ್ಯದರ್ಶಿ ಶಶಿಕಾಂತ ನಿಂ ಪಾಟೀಲ, ರಾಜ್ಯ ಉಪಾಧ್ಯಕ್ಷ ಸಂಜೀವ ಜೋಗೋಜಿ, ಬೆಳಗಾವಿ ನೌಕರರ ಕೂಟದ ಅಧ್ಯಕ್ಷ ಮಲ್ಲಿಕಾರ್ಜುನ ಸಜ್ಜನ, ಹಾವೇರಿ ವಿಭಾಗದ ಕೂಟದ ಅಧ್ಯಕ್ಷ ಚಂದ್ರು ದಾನಪ್ಪನವರ, ಹಾವೇರಿ ವಿಭಾಗದ ಮಹಿಳಾ ಅಧ್ಯಕ್ಷೆ ರೇಣುಕಾ, ಧಾರವಾಡ ವಿಭಾಗದ ಅಧ್ಯಕ್ಷ ತಿರುಪತಿ ಕಮ್ಮಾರ, ಬಾಗಲಕೋಟ ವಿಭಾಗದ ಅಧ್ಯಕ್ಷ ತಿರುಪತಿ ಪತ್ತಾರ, ಹುಬ್ಬಳ್ಳಿ ಗ್ರಾಮೀಣ ವಿಭಾಗದ ವಿನಾಯಕ ಕಲ್ಲಣ್ಣವರ, ಧಾರವಾಡ ವಿಭಾಗದ ಪ್ರಧಾನ ಕಾರ್ಯದರ್ಶಿ ಪುಂಡಲೀಕ್ ಕೊಲ್ಕಾರ.

ಶಿರಸಿ ವಿಭಾಗದ ಅಧ್ಯಕ್ಷ ಕೃಷ್ಣ ಸಣ್ಣಮನೆ, ವಾಕರಸಾ ಪತ್ತಿನ ಸಹಕಾರಿ ಸಂಘ ಬಾಗಲಕೋಟಯ ಅಧ್ಯಕ್ಷ ರಾಮಚಂದ್ರ ವಜ್ರಮಟ್ಟಿ, ಬಾಗಲಕೋಟ ಮುಖಂಡ ಅಬ್ಬಾಸ್ ಅತ್ತಾರ, ಚಿಕ್ಕೋಡಿ ಪ್ರಧಾನ ಕಾರ್ಯದರ್ಶಿ ಗುರುರಾಜ ಪಾಟೀಲ, ಗದಗ್‌ ಅಧ್ಯಕ್ಷ ಮಂಜುನಾಥ ತೋಟದ್ ಸೇರಿದಂತೆ ಇನ್ನಿತರ ಪದಾಧಿಕಾರಿಗಳು ಈ ಸಭೆಯಲ್ಲಿ ಭಾವಹಿಸಿದ್ದರು.

Leave a Reply

error: Content is protected !!
LATEST
NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು