Please assign a menu to the primary menu location under menu

NEWSನಮ್ಮಜಿಲ್ಲೆನಮ್ಮರಾಜ್ಯ

NWKRTC: ಕರ್ತವ್ಯದ ವೇಳೆ ಮಾನಸಿಕ ಚಿತ್ರಹಿಂಸೆ ಅನುಭವಿಸುತ್ತಿರುವ TA, ATI, TI, ATSಗಳು

ವಿಜಯಪಥ ಸಮಗ್ರ ಸುದ್ದಿ
  • ಡ್ಯೂಟಿ ಮೇಲೆ ವಂದ ಮಾಡಲಿಕ್ಕೂ ಪರದಾಟ
  • ವಾರಗಟ್ಟಲೇ ಮನೆಯಿಂದ ಹೊಗುಳಿಯುವ ಶಿಕ್ಷೆ
  • ಅನಾರೋಗ್ಯಕ್ಕೊಳಗಾದ ಕುಟುಂಬದವರ ನೋಡಲಾಗದ ಪರಿಸ್ಥಿತಿ
  • 8ಗಂಟೆ ಬದಲಿಗೆ 12-14 ಗಂಟೆಗಳ ಕಾಲ ಡ್ಯೂಟಿ

ಹುಬ್ಬಳ್ಳಿ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ (NWKRTC) ಕರ್ತವ್ಯ ನಿರ್ವಹಿಸುತ್ತಿರುವ ಸಹಾಯಕ ಸಂಚಾರಿ ನಿರಿಕ್ಷಕರು, ಸಂಚಾರಿ ನೀರಿಕ್ಷಕರು ಹಾಗೂ ಸಹಾಯಕ ಸಂಚಾರಿ ಅಧಿಕ್ಷಕರಿಗೆ ಘಟಕಗಳು, ವಿಭಾಗಿಯ ತನಿಖಾದಳ/ ಕೇಂದ್ರಿಯ ತನಿಖಾದಳದಲ್ಲಿ ಡ್ಯೂಟಿ ನೆಪದಲ್ಲಿ ಮಾನಸೀಕ ಕಿರುಕುಳ ಅನುಭವಿಸುತ್ತಿದ್ದಾರೆ.

ಪ್ರಮುಖವಾಗಿ ಈ ತನಿಖಾ ಸಿಬ್ಬಂದೊಗಳೇ ಮಾರ್ಗ ತನಿಖಾ ವೇಳೆ ಚಾಲನಾ ಸಿಬ್ಬಂದಿಗಳಿಗೆ ಹಿಂಸೆ ನೀಡುತ್ತಾರೆ ಜತೆಗೆ ಘಟಕಗಳಲ್ಲೂ ಇವರ ಕಿರಿಕು ಮಿತಿ ಮೀರಿದೆ ಎಂಬ ಆರೋಪ ಕೇಳಿ ಬರುತ್ತಲೇ ಇರುತ್ತದೆ. ಆದರೆ ಚಾಲನಾ ಸಿಬ್ಬಂದಿಗಳನ್ನು ಕಾಡುವ ಆರೋಪ ಹೊತ್ತಿರುವ ಇವರಿಗೆ ಕರ್ತವ್ಯ ನೆಪದಲ್ಲಿ ಮಾನಸಿಕ ಹಿಂಸೆ ಆಗುತ್ತಿದೆ ಎಂದರೆ ಇವರು ಕೂಡ ಎಷ್ಟು ಒತ್ತಡದಲ್ಲಿ ಡ್ಯೂಟಿ ಮಾಡುತ್ತಿದ್ದಾರೆ ಎಂಬುವುದು ಗೊತ್ತಾಗುತ್ತದೆ.

ಆ ಬಗ್ಗೆ NWKRTC ನಿಗಮದಲ್ಲಿ ಡ್ಯೂಟಿ ಮಾಡುತ್ತಿರುವ ಈ ಸಿಬ್ಬಂದಿಗಳು ತಮಗೆ ಆಗುತ್ತಿರುವ ಮಾನಸಿಕ ಕಿರುಕುಳಗಳನ್ನು ವಿಜಯಪಥದೊಂದಿಗೆ ತೋಡಿಕೊಂಡಿದ್ದಾರೆ. ಅವುಗಳಲ್ಲಿ ಪ್ರಮುಖವಾಗಿ ಅನುಭವಿಸುತ್ತಿರುವ ಸಮಸ್ಯೆಗಳನ್ನು ವಿವರಿಸಲಾಗಿದೆ.

ಮೊದಲನೆಯದಾಗಿ ವಿಭಾಗಿಯ ತನಿಖಾದಳ ಕರ್ತವ್ಯ ನಿರ್ವಹಿಸುತ್ತಿರುವಂತಹ ಸಂಚಾರಿ ನೀರಿಕ್ಷಕರಿಗೆ ನೀಡುತ್ತಿರುವ ಕಿರುಕುಳ:

ಎ) ಸಂಸ್ಥೆಯ ನಿಯಮನುಸಾರ ಕರ್ತವ್ಯ ನಿರ್ವಹಿಸುತ್ತಿರುವಂತಹ ಪ್ರತಿಯೊಬ್ಬರಿಗೂ ಕರ್ತವ್ಯ ನಿರ್ವಹಿಸುತ್ತಿರುವ ಸಮಯ 8 ಗಂಟೆಗಳ ಕಾಲ ಪ್ರತಿ ದಿನಕ್ಕೆ ಇರುತ್ತದೆ. ಆದರೆ ನಮಗೆ ಪ್ರತಿ-ನಿತ್ಯ, ಪ್ರತಿ-ದಿನ 12 ಗಂಟೆಗಳಿಗೂ ಹೆಚ್ಚು ಸಮಯ ನಮ್ಮ ಕಡೆಯಿಂದ ಕರ್ತವ್ಯ ಮಾಡಿಸಿಕೊಳ್ಳುತ್ತಾರೆ. ಒಂದು ವೇಳೆ ನಾವು ಇಷ್ಟೊಂದು ಸಮಯ ಕರ್ತವ್ಯ ನಿರ್ವಹಿಸುವುದಿಲ್ಲ ಅಂದರೆ, ನಮಗೆ ಬೇರೆ ಕಡೆಗೆ ವರ್ಗಾವಣೆ ಮಾಡುತ್ತೇವೆ ಎಂದು ಹೆದರಿಸುತ್ತಾರೆ.

ಬಿ) ಅಷ್ಟೆ ಅಲ್ಲದೇ ಬೇರೆ ಕಡೆ ವಸ್ತಿ (ವಾಸ್ತವ್ಯ) ಮಾಡಬೇಕೆಂದು ತನಿಖಾ ಕಾರ್ಯಕ್ರಮದ ಪಟ್ಟಿಯಲ್ಲಿ ನಮೂದಿಸಿರುತ್ತಾರೆ. ಆದರೆ ವಸ್ತಿ ಮಾಡುವುದಕ್ಕೆ ಯಾವುದೇ ರೀತಿಯಾದ ವ್ಯವಸ್ಥೆ ಮಾಡಿರುವುದಿಲ್ಲ ಹಾಗೂ ಮೂಲಭೂತ ಸೌಕರ್ಯಗಳು ಇರುವುದಿಲ್ಲ. ಇದರಿಂದ ನಾವು ನಿತ್ಯ ಕರ್ಮಗಳನ್ನು ಮಾಡಿಕೊಳ್ಳುವುದಕ್ಕೂ ಭಾರಿ ತೊಂದರೆ ಅನುಭವಿಸುತ್ತಿದ್ದೇವೆ.

ಸಿ) ವಸ್ತಿ ಮಾಡುವುದಕ್ಕೆ ಯಾವುದೇ ಇತರೆ ಭತ್ಯೆಗಳು ಸಹ ನೀಡುವುದಿಲ್ಲ. ಇನ್ನು ಸರಕಾರಿ ಐಬಿಗಳಿಗೆ ಹೋದರೆ ಒಬ್ಬರಿಗೆ 400 ರೂ. ಬಾಡಿಗೆ ಕೇಳುತ್ತಾರೆ. ಅಂತಹದರಲ್ಲಿ ನಾವು 3 ಜನ ಸಿಬ್ಬಂದಿಗಳು ಇರುತ್ತೇವೆ. ಆದ್ದರಿಂದ 1 ದಿನಕ್ಕೆ ವಸ್ತಿ ಮಾಡುವುದಕ್ಕೆ ಕನಿಷ್ಠ 1200 ರೂ. ಹಣ ಬೇಕಾಗುತ್ತದೆ. ಹಾಗೂ 1 ದಿನಕ್ಕೆ 12 ಗಂಟೆಗಳಕ್ಕಿಂತ ಹೆಚ್ಚುವರಿ ಕರ್ತವ್ಯ ನಿರ್ವಹಿಸಿದರೇ ಟಿಎ ಬಿಲ್ ಅಂತಾ ಒಬ್ಬರಿಗೆ 200 ರೂ. ಮಾತ್ರ ಈವರೆಗೂ ನೀಡುತ್ತಿದ್ದಾಋೆ. ಈ ಟಿಎ ಬಿಲ್ ಅಂದರೆ ಪ್ರಯಾಣ ಭತ್ಯೆ ಈ ಭತ್ಯೆಯನ್ನು ನಾವು 12 ಗಂಟೆಗಳಕ್ಕಿಂತ ಹೆಚ್ಚು ಕರ್ತವ್ಯ ನಿರ್ವಹಿಸಿದರೇ ಮಾತ್ರ ನೀಡುತ್ತಾರೆ.

ಡಿ) ಅಧಿಕಾರಿಗಳು 8 ಗಂಟೆಗಳ ಕಾಲ ಕರ್ತವ್ಯ ಅವಧಿಯಲ್ಲಿ ಘಟಕಗಳಿಗೆ ಭೇಟಿ ನೀಡಿದರೇ ಪ್ರಯಾಣ ಭತ್ಯೆ ಪಡೆದುಕೊಳ್ಳುತ್ತಾರೆ. ಆದರೆ ನಾವು 12 ಗಂಟೆಗಿಂತ ಹೆಚ್ಚು ಕಾಲ ಡ್ಯೂಟಿ ಮೇಲೆ ಇದ್ದರೆ ಮಾತ್ರ 200 ರೂ. ಕೊಡುತ್ತಾರೆ. ಇದು ತಾರತಮ್ಯ ನೀತಿಯಾಗಿದೆ.

ಇ) ಇನ್ನು ತಿಂಗಳಿಗೆ ಒಮ್ಮೆ ಕೇಂದ್ರ ಕಚೇರಿಯಿಂದ ವಿಶೇಷ ತನಿಖಾ ಕಾರ್ಯಕ್ರಮವೆಂದು 6 ದಿನಗಳ ಕಾಲ 1 ವಿಭಾಗದಿಂದ ಇನ್ನೊಂದು ವಿಭಾಗಕ್ಕೆ ಕರ್ತವ್ಯ ನಿರ್ವಹಿಸಲು ನಿಯೋಜನೆ ಮಾಡುತ್ತಾರೆ. ಆದರೆ, ನಾವು ಈ 6 ದಿನಗಳ ಕಾಲ ಬೇರೆ ವಿಭಾಗದಲ್ಲಿ ವಾಸ್ತವ್ಯ ಮಾಡುವುದು ಕಡ್ಡಾಯವಾಗಿರುತ್ತದೆ. ಅದಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯಾದ ಮೂಲಭೂತ ಸೌಕರ್ಯಗಳನ್ನು ನೀಡುವುದಿಲ್ಲ. ಈ ರೀತಿಯಾದ ಅವೈಜ್ಞಾನಿಕ ತನಿಖಾ ಕಾರ್ಯಕ್ರಮದ ಪಟ್ಟಿಯು ವ್ಯವಸ್ಥಾಪಕ ನಿರ್ದೇಶಕರ ಗಮನಕ್ಕೆ ಬಾರದೇನೆ ಸಿಟಿಎಂ ಅವರು ಮಾಡಿರುತ್ತಾರೆ.

ಎಫ್) ಈ ರೀತಿಯಾಗಿ ಒಬ್ಬ ಸಿಬ್ಬಂದಿಯು ಮನೆಬಿಟ್ಟು 6 ದಿನಗಳ ಕಾಲ ನಿರಂತರವಾಗಿ ಬೇರೆ ವಿಭಾಗಕ್ಕೆ ಕರ್ತವ್ಯ ನಿರ್ವಹಿಸಲು ಹೋದರೆ ಮನೆಯ ಪರಿಸ್ಥಿತಿ, ನಮ್ಮ ಆರೋಗ್ಯದ ಸ್ಥಿತಿಯ ಜತೆಗೆ ಮಕ್ಕಳ ಪರಿಸ್ಥಿತಿ, ಪತ್ನಿ ಅನಾರೋಗ್ಯ, ವಯಸ್ಸಾದ ತಂದೆ-ತಾಯಿಯ ಅನಾರೋಗ್ಯದ ಸ್ಥಿತಿ ಈ ರೀತಿಯಾದ ಪ್ರತಿಯೊಬ್ಬರಿಗೂ ಸಮಸ್ಯೆ ಇದ್ದೆ ಇರುತ್ತದೆ. ಇದರ ನಡುವೆ ಒತ್ತಡದಲ್ಲಿ ನಾವು ಡ್ಯೂಟಿ ಮಾಡುತ್ತಿದ್ದೇವೆ. ಇದರಿಂದ ನಮ್ಮ ಸಂಚಾರಿ ನೀರಿಕ್ಷಕರ ಕುಟುಂಬಗಳಲ್ಲಿ ಮನಶಾಂತಿ, ವಿಚ್ಛೇಧನ, ಕುಟುಂಬ ಕಲಹಗಳಂತಹ ಸಮಸ್ಯೆಗಳು ನಿರಂತರವಾಗಿ ಕಾಡುತ್ತಿವೆ.

ಜಿ) ಸಂಚಾರಿ ನೀರಿಕ್ಷಕರಿಗೆ ತಿಂಗಳ ಗುರಿ ಸಾಧನೆ ನೀಡಿರುತ್ತಾರೆ. ಇಂತಹ ಕಾಲಮಾನದಲ್ಲಿ ಎಲ್ಲ ನಿರ್ವಾಹಕರು ನಿಷ್ಠೆ ಮತ್ತು ಪ್ರಮಾಣಿಕತೆಯಿಂದ ಕರ್ತವ್ಯ ನಿರ್ವಹಿಸುತ್ತಾರೆ. ಉದಾಹರಣೆಗೆ: ವಾಹನಗಳಲ್ಲಿ ಪ್ರಯಾಣಿಕರು ಬಿಟ್ಟು ಹೋಗಿರುವಂತಹ ವಸ್ತುಗಳು, ಬಂಗಾರಗಳು, ಬೆಲೆ ಬಾಳುವಂತಹ ವಸ್ತುಗಳನ್ನು ಮರಳಿ ನೀಡುವಂತಹ ಪ್ರವೃತ್ತಿವುಳ್ಳವರಾಗಿರುತ್ತಾರೆ. ಈ ರೀತಿಯಾದ ಸಂದರ್ಭಗಳು ಅನೇಕಬಾರಿ ಪತ್ರಿಕೆಗಳಲ್ಲಿ ನಿರ್ವಾಹಕರ ಬಗ್ಗೆ ಪ್ರಸಂಶೆ ಕೂಡಾ ಪ್ರಕಟವಾಗಿದೆ. ಆದರೂ ಅಂಥ ಪ್ರಾಮಾಣಿಕ ನೌಕರರನ್ನು ನಾವು ಪ್ರಶ್ನೆ ಮಾಡುವ ಸಂದರ್ಭವನ್ನು ಈ ಅಧಿಕಾರಿಗಳೇ ಸೃಷ್ಟಿಸಿ ಶಿಕ್ಷೆಗೆ ಗುರಿಪಡಿಸಲು ನಮಗೆ ಸೂಚನೆ ನೀಡುತ್ತಾರೆ.

ಎರಡನೆಯದಾಗಿ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಂಚಾರಿ ನೀರಿಕ್ಷಕರಿಗೆ ನೀಡುತ್ತಿರುವ ಕಿರುಕುಳ: ಎ) ಪ್ರತಿನಿತ್ಯ ಘಟಕದ ಮೊದಲನೆ ಅನುಸೂಚಿ: ನಿರ್ಗಮನದ ವೇಳೆಗೆ ನಾವು ಹಾಜರಾಗಿ ಘಟಕದ ಕೊನೆಯ ಅನುಸೂಚಿ ನಿರ್ಗಮನದವರಿಗೆ ಘಟಕದಲ್ಲಿ ಡ್ಯೂಡಿ ಮಾಡಬೇಕು. ಪ್ರತಿದಿನ ಸುಮಾರು 14 ಗಂಟೆಗಳ ಕಾಲ ನಿರಂತರವಾಗಿ ಘಟಕಗಳಲ್ಲಿ ಕರ್ತವ್ಯ ನಿರ್ವಹಿಸಬೇಕಾಗಿದೆ.

ಬಿ) ಚಾಲನಾ ಸಿಬ್ಬಂದಿಗಳ ಕೊರತೆಯಿಂದ ಕೀಲೋ ಮೀಟರ್ ರದ್ದತಿಯಾದರೆ ನಮ್ಮನೇ ಹೊಣೆಗಾರನ್ನಾಗಿ ಮಾಡಿ ನಮ್ಮ ಮೇಲೆ ಆರೋಪ ಪತ್ರಗಳನ್ನು ನೀಡುತ್ತಿದ್ದಾರೆ. ಇಷ್ಟೆಲ್ಲ ಮಾನಸಿಕ ನೋವು ಅನುಭವಿಸುತ್ತಿದ್ದರೂ ನಮ್ಮ ವ್ಯವಸ್ಥಾಪಕ ನಿರ್ದೇಶಕರ ಗಮನಕ್ಕೆ ಇದೆಲ್ಲ ಬರುವುದೇ ಇಲ್ಲ. ಜತೆಗೆ ಇದು ಸಾರ್ವಜನೀಕರಿಗೆ ಗೊತ್ತಾಗುವುದೇ ಇಲ್ಲ. ಇಂಥ ಪರಿಸ್ಥಿತಿಯಲ್ಲಿ ಅದು ಕೂಡ ಕಡಿಮೆ ವೇತನಕ್ಕೆ ದುಡಿಯುತ್ತಿದ್ದೇವೆ.

ಹೀಗಾಗಿ ನಮಗೆ ಸಂಸ್ಥೆಯ ನಿಯಮದ ಪ್ರಕಾರ 8ಗಂಟೆಗಳ ಕಾಲ ಡ್ಯೂಟಿ ನೀಡಿ ಬಳಿಕ ಒಟಿ ಕೊಡಬೇಕು. ಜತೆಗೆ ಈ ಮಾರ್ಗ ತನಿಖಾ ವೇಳೆ ನಾವು ಶೌಚಕ್ಕೆ ಹೋಗುವುದಕ್ಕೆ ಹಾಗೂ ಮಧ್ಯಾಹ್ನ ರಾತ್ರಿ ಊಟ ಮಾಡುವುದಕ್ಕೆ ಹಾಗೂ ತಂಗುವುದಕ್ಕೆ ಸೂಕ್ತ ವ್ಯವಸ್ಥೆ ಮಾಡಿಕೊಡಬೇಕು ಎಂದು ಈ ನೌಕರರು ಮನವಿ ಮಾಡಿದ್ದಾರೆ.

Leave a Reply

error: Content is protected !!
LATEST
KSRTC: ನಗದು ರಹಿತ ವೈದ್ಯಕೀಯ ಚಿಕಿತ್ಸಾ ಯೋಜನೆಗೆ ಸಿಎಂ ಸಿದ್ದರಾಮಯ್ಯ ಚಾಲನೆ NWKRTC: ನಿರ್ವಾಹಕ ಆತ್ಮಹತ್ಯೆಗೆ ಯತ್ನ- ಅಮಾನತು ಮಾಡುವ ಉದ್ದೇಶದಿಂದಲೇ ಮೆಮೋ ಕೊಟ್ಟ ಆರೋಪ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ನೈರ್ಮಲ್ಯದ ಕೊರತೆ: ಕಸ ಮುಕ್ತ ಅಭಿಯಾನ ಕನ್ನಡ ನುಡಿ ಪ್ರತಿಯೊಬ್ಬ ಕನ್ನಡಿಗನ ಉಸಿರಾಗಬೇಕು: ಅಂದಾನೆಪ್ಪ ವಿಭೂತಿ ಸರ್ವೇ ನಂ-97 ಪುಸ್ತಕ ಮನುಷ್ಯನ ಬದುಕಿನ ಸಂಕಟಗಳಿಗೆ ಕನ್ನಡಿ ಇದ್ದಂತೆ: ರಘುನಾಥ ನ್ಯೂಡೆಲ್ಲಿ: ದಲೈವಾಲ ಪ್ರಾಣಕ್ಕೆ ಕುತ್ತು ಬಂದರೆ ದೇಶದ ರೈತರು ಕೇಂದ್ರ ಸರ್ಕಾರದ ಮರಣ ಶಾಸನ ಬರೆಯಬೇಕಾಗುತ್ತದೆ ಎಚ್ಚರ ಜ್ವರ ಬಂದಾಗ ಎಳನೀರು ಕುಡಿಯುವುದು ಒಳ್ಳೆಯದೇ..ಏಕೆಂದರೆ? ಬಿಜೆಪಿ ಸರ್ಕಾರದಲ್ಲಿ ನಿರಂತರವಾಗಿ ವರ್ಷಕ್ಕೆ ಎರಡೆರಡು ಬಾರಿ ಬಸ್ ಟಿಕೆಟ್‌ ದರ ಹೆಚ್ಚಳ: ಪಟ್ಟಿ ರಿಲೀಸ್​ ಮಾಡಿದ ಸಾರಿಗ... KSRTC: ಅಧಿಕಾರದಲ್ಲಿದ್ದಾಗ ಅಭಿವೃದ್ಧಿ ಮರೆತಿದ್ದ ಬಿಜೆಪಿಯವರು ಈಗ ಬಸ್ ದರ ಹೆಚ್ಚಳ ಖಂಡಿಸುತ್ತಾರೆ- ರಾಮಲಿಂಗಾರೆಡ್ಡಿ APSRTCಯಲ್ಲೂ ಶಕ್ತಿ ಯೋಜನೆ ಶೀಘ್ರ ಜಾರಿ: ಬೆಂಗಳೂರಿಗೆ ಭೇಟಿ ನೀಡಿದ ಸಾರಿಗೆ ಸಚಿವ ಮಂಡಿಪಲ್ಲಿ ರಾಮಪ್ರಸಾದ್ ರೆಡ್ಡಿ ನಿ...