Please assign a menu to the primary menu location under menu

NEWSನಮ್ಮರಾಜ್ಯವಿಡಿಯೋ

NWKRTC: ಡಿ.31ರ ಮುಷ್ಕರಕ್ಕೆ ನಮ್ಮ ಬೆಂಬಲ ಇಲ್ಲ- ಹುಬ್ಬಳ್ಳಿ ಸಾರಿಗೆ ನೌಕರರ ಒಕ್ಕೂಟ

ವಿಜಯಪಥ ಸಮಗ್ರ ಸುದ್ದಿ

ಹುಬ್ಬಳ್ಳಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರ ಒಕ್ಕೂಟದ ಪದಾಧಿಕಾರಿಗಳು ಹುಬ್ಬಳ್ಳಿಯ ನಗರ ಸಾರಿಗೆ ಘಟಕ 1, ಗ್ರಾಮಾಂತರ ಘಟಕ 1, ಗ್ರಾಮಾಂತರ ಘಟಕ 2ರಲ್ಲಿ ಶನಿವಾರ ನಡೆಸಿದ ದ್ವಾರಸಭೆ ಯಶಸ್ವಿಯಾಯಿತು.

ಇದೇ ಡಿ.31ರಿಂದ ಜಂಟಿ ಕ್ರಿಯಾ ಸಮಿತಿ ಕರೆ ಕೊಟ್ಟಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಒಕ್ಕೂಟದ ವತಿಯಿಂದ ಬೆಂಬಲ ಇರುವುದಿಲ್ಲ ಎಂದು ಸಭೆಯಲ್ಲಿ ಸ್ಪಷ್ಟ ಪಡಿಸಲಾಯಿತು.

ಸರ್ಕಾರದ ಮೇಲೆ ವಿಶ್ವಾಸ ಇಟ್ಟಿರುವ ನೌಕರರಾದ ನಾವು ಸರ್ಕಾರಕ್ಕೆ ಯಾವುದೇ ಮುಜುಗರ ಉಂಟು ಮಾಡದೆ ಎಲ್ಲ ಬಸ್ ಕಾರ್ಯಾಚರಣೆ ಮಾಡುತ್ತೇವೆ ಹಾಗೂ ಮುಂದಿನ ದಿನಗಳಲ್ಲಿ ಸರ್ಕಾರ ತನ್ನ ಪ್ರಣಾಳಿಕೆಯಲ್ಲಿ ನೀಡಿರುವ ಸರಿ ಸಮಾನ ವೇತನವನ್ನು ನೀಡುತ್ತದೆ ಎಂಬ ಅಪಾರವಾದ ವಿಶ್ವಾಸವಿದೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.

ಇನ್ನು ಅತೀ ಶೀಘ್ರದಲ್ಲೇ ಅದಕ್ಕೆ ಶಾಶ್ವತ ಪರಿಹಾರ ದೊರೆಯಲಿದೆ ಎಂಬ ನಂಬಿಕೆ ತಮಗಿದೆ ಎಂದು ವಾಯವ್ಯ ವಲಯ ನೌಕರರ ಕೂಟದ ಕಾರ್ಯಾಧ್ಯಕ್ಷ ವಿ.ಜಿ. ಪೂಜಾರ ಹೇಳಿದರು. ರಾಜ್ಯ ಮುಖಂಡರಾದ ಕೃಷ್ಣ ಗುಡುಗುಡಿ, ಹುಬ್ಬಳ್ಳಿ ಗ್ರಾಮಾಂತರ ವಿಭಾಗದ ಅಧ್ಯಕ್ಷ ವಿನಾಯಕ ಕಲ್ಲಣವರ ನೌಕರರ ಕುರಿತು ಮಾತನಾಡಿದರು.

ದ್ವಾರ ಸಭೆಯಲ್ಲಿ ರಾಜ್ಯ ಸಮಿತಿಯ ರಾಜೇಂದ್ರ, ರಮೇಶ್ ವಜ್ರಮಟ್ಟಿ, ವಿಭಾಗದ ಪದಾಧಿಕಾರಿಗಳಾದ ಆರ್‌.ಎಸ್‌. ಮಾವಿನಕಾಯಿ, ಎಂ.ಐ. ಮಡಿವಾಳರ, ಇಸಾಕ ಗುಡುವಾಲ, ಎಸ್‌.ಎಚ್‌.ಬಟ್ಟುರ, ರಾಜೂರ, ಹುರಳಿ, ವಿ.ಎಸ್‌.ಪೂಜಾರ ಸೇರಿದಂತೆ ಹಲವು ನೌಕರರು ಇದ್ದರು.

Leave a Reply

error: Content is protected !!
LATEST
ಸಿಡ್ನಿಯಲ್ಲಿ 2025ರ ನೂತನ ವರ್ಷ ಸ್ವಾಗತಿಸಿದ ಮಿಲಿಯನ್‌ಗಿಂತಲೂ ಹೆಚ್ಚು ಜನರು KSRTC: 4 ಸಾರಿಗೆ ನಿಗಮಗಳು 2,000 ಕೋಟಿ ರೂ. ಸಾಲ ಪಡೆಯಲು ಒಪ್ಪಿದ ಸರ್ಕಾರ ವರ್ಲ್ಡ್ ಆಫ್ ರೆಕಾರ್ಡ್ಸ್: ವಿಶ್ವ ದಾಖಲೆ ಸೇರಿದ 1.9 ವರ್ಷದ ಜನ್ವಿತಾ BBMP ಪೂರ್ವ ವಲಯ: ಪಾದಚಾರಿ ಮಾರ್ಗ ಒತ್ತುವರಿ, ಪ್ಲೆಕ್ಸ್ ಬ್ಯಾನರ್ ತೆರವು ದೆಹಲಿ ರೈತರ ಹೋರಾಟ ಬೆಂಬಲಿಸಿ ಮೈಸೂರಿನಲ್ಲಿ ಪೆಂಜಿನ ಮೆರವಣಿಗೆ ಪ್ರತಿಭಟನೆ ಜ.1ರಿಂದ ನೆಲಮಂಗಲ ಸಾರ್ವಜನಿಕ ಆಸ್ಪತ್ರೆಯ ಶಸ್ತ್ರ ಚಿಕಿತ್ಸಾ ಕೊಠಡಿ ಸ್ಥಗಿತ ಬಿ.ಎಡ್‌  ವಿದ್ಯಾರ್ಥಿಗಳ ವಿಶೇಷ ಪ್ರೋತ್ಸಾಹ ಧನದ ಅರ್ಜಿ ಸಲ್ಲಿಕ್ಕೆ ಅವಧಿ ವಿಸ್ತರಣೆ ಜ.6ರಿಂದ KSRTC ಸಂಸ್ಥೆಯ ನೌಕರರಿಗೆ ನಗದು ರಹಿತ ವೈದ್ಯಕೀಯ ಸೌಲಭ್ಯ ಜಾರಿ: ನಿರ್ದೇಶಕರ ಆದೇಶ ಸಾರಿಗೆ ಕಾರ್ಮಿಕರ ಬೀದಿಗೆ ತಂದಿದ್ದು ಹೊಸ ಸಂಘಟನೆ ಮುಖಂಡ ನಾವಲ್ಲ: ಜಂಟಿ ಪದಾಧಿಕಾರಿ ಡಿ.31ರಂದು ಜಗಜಿತ್ ಸಿಂಗ್ ದಲೈವಾಲರ ಹೋರಾಟ ಬೆಂಬಲಿಸಿ ರಾಜ್ಯಾದ್ಯಂತ ಪಂಜಿನ ಪ್ರತಿಭಟನಾ ಮೆರವಣಿಗೆ