ಸಾರಿಗೆ ನೌಕರರಿಗೆ ಮಾರಕವಾಗುವ ಆದೇಶ ಹೊರಡಿಸಿದ ಅಧಿಕಾರಿ: ಸಂಘಟನೆಯೊಂದರ ಅಡಿಯಾಳಂತೆ ವರ್ತನೆ !

ಬೆಂಗಳೂರು: ಕಳೆದ ಏಪ್ರಿಲ್‌ನಲ್ಲಿ ನಡೆದ ಸಾರಿಗೆ ಮುಷ್ಕರದ ವೇಳೆ ಏಕಾಏಕಿ ವರ್ಗಾವಣೆ ಮಾಡಿದ್ದ ಸಾರಿಗೆಯ ನಾಲ್ಕೂ ನಿಗಮಗಳ ಪೈಕಿ ಸೆ.14ರಂದು ಕೆಎಸ್‌ಆರ್‌ಟಿಸಿಯು ತಾನು ಆಡಳಿತಾತ್ಮಕವಾಗಿ ವರ್ಗಾವಣೆ ಮಾಡಿದ್ದವರನ್ನು ಮತ್ತೆ ಆಡಳಿತಾತ್ಮಕವಾಗಿಯೇ ಮರು ವರ್ಗಾವಣೆ ಮಾಡಿತ್ತು. ಆದರೆ, ಆ ವರ್ಗಾವಣೆ ಮಾಡಿದ ಒಂದು ಗಂಟೆಯಲ್ಲಿ ಮತ್ತೆ ಆ ಆದೇಶವನ್ನು ತಿರುಚಿದೆ.
ಹೌದು! ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಂದು ಮಾಡಿದ್ದ ಪ್ರತಿಭಟನೆ ವೇಳೆ ಮನಸೋಯಿಚ್ಛೆ ಅಧಿಕಾರಿಗಳು ನೌಕರರನ್ನು ದೂರದೂರುಗಳಿಗೆ ವರ್ಗಾವಣೆ, ಅಮಾನತು, ವಜಾದ ಜತೆಗೆ ಪೊಲೀಸ್ ಪ್ರಕರಣಗಳನ್ನು ದಾಖಲಿಸಿ ದರ್ಪ ಮೆರೆದಿದ್ದರು. ಅಂದು ಏಕಾಏಕಿ ನೌಕರರ ವಿರುದ್ಧ ಪಿತೂರಿನಡೆಸಿದ ಅಧಿಕಾರಿಗಳು ಮತ್ತೆ ಅದೇ ಚಾಳಿಯನ್ನು ಇಂದಿಗೂ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.
ನೋಡಿ.. ಏಪ್ರಿಲ್‌ನಲ್ಲಿ ಕೆಎಸ್‌ಆರ್‌ಟಿಸಿಯು ತಾನು ಆಡಳಿತಾತ್ಮಕವಾಗಿ ವರ್ಗಾವಣೆ ಮಾಡಿದ್ದ ನೌಕರರ ಪೈಕಿ 137 ನೌಕರರನ್ನು ಮತ್ತೆ ಸೆ.14ರಂದು ಅದೇ ವಿಭಾಗಕ್ಕೆ ವರ್ಗಾವಣೆ ಮಾಡಿದ್ದೇವೆ ಎಂದು ಆದೇಶ ಹೊರಡಿಸಿತ್ತು. ಆ ಆದೇಶ ಹೊರಬಿದ್ದ ಒಂದು ತಾಸಿನಲ್ಲೇ ಮತ್ತೆ ಆ ಆಡಳಿತಾತ್ಮಕ ಎಂದು ಇರುವುದನ್ನು ಕೋರಿಕೆ ಮೇರೆಗೆ ವರ್ಗಾವಣೆ ಎಂದು ಓದಿಕೊಳ್ಳುವುದು ಎಂದು ಮತ್ತೊಂದು ಆದೇಶ ಹೊರಡಿಸಿದೆ.
ಇದನ್ನು ಗಮನಿಸಿದರೆ ತಿಳಿಯುತ್ತಿದೆ. ಒಬ್ಬ ಐಎಎಸ್ ಅಧಿಕಾರಿ ಗಂಟೆಗೊಂದು ಘಳಿಗೆಗೊಂದು ಎಂಬಂತೆ ತಮಗೆ ಇಷ್ಟ ಬಂದ ರೀತಿಯಲ್ಲಿ ಆದೇಶ ಹೊರಡಿಸುತ್ತಿದ್ದಾರೆ ಎಂದು. ಅಂದರೆ ಸಾರಿಗೆ ಈ ಅಧಿಕಾರಿಗಳು ಎಷ್ಟು ಬೇಜವಾಬ್ದಾರಿಯಿಂದ ನಡೆದುಕೊಂಡು ನೌಕರರಿಗೆ ಹಿಂಸೆ ನೀಡುವುದಕ್ಕೆ ಆದೇಶ ಹೊರಡಿಸುತ್ತಿದ್ದಾರೆ ಎಂಬುವುದು ಇಲ್ಲಿ ಸ್ಪಷ್ಟ. ಇಂಥ ಐಎಎಸ್ ಅಧಿಕಾರಿಗಳೇ ಕೆಳಹಂತದ ಅಧಿಕಾರಿಗಳನ್ನು ಬೆಂಬಲಿಸಿ ನೌಕರರಿಗೆ ಕಾನೂನಾತ್ಮಕವಾಗಿ ಸಿಗಬೇಕಾಗಿರುವುದನ್ನು ಕಿತ್ತುಕೊಳ್ಳುವ ಕೆಟ್ಟ ಉದ್ದೇಶದಿಂದ ಅಡ್ಡಗಾಲು ಹಾಕುವುದು ಎಷ್ಟು ಸರಿ.
ಇದರಂತೆ ಕಳೆದ ಜೂನ್‌ನಲ್ಲಿ 214 ತರಬೇತಿ ನೌಕರರನ್ನು ಮತ್ತೆ ಕರ್ತವ್ಯಕ್ಕೆ ತೆಗೆದುಕೊಂಡಿದ್ದೇವೇ ಎಂದು ಆದೇಶ ಹೊರಡಿಸಿದ್ದ ಅಧಿಕಾರಿಗಳು ಅರ್ಧ ತಾಸಿನಲ್ಲೇ ಮತ್ತೆ ಆ ಆದೇಶವನ್ನು ಹಿಂಪಡೆದಿರುವುದಾಗಿ ಹೇಳಿ ಮತ್ತೊಂದು ಆದೇಶ ಹೊರಡಿಸುತ್ತಾರೆ. ಅಂದರೆ ಈ ಸಾರಿಗೆ ನಿಗಮಗಳ ಉನ್ನತ ಅಧಿಕಾರಿಗಳು ಅಪ್ಪ ಅಮ್ಮ ಇಲ್ಲದ ಅನಾಥ ಮಕ್ಕಳ ರೀತಿಯಲ್ಲಿ ನೌಕರರನ್ನು ನಡೆಸಿಕೊಳ್ಳುತ್ತಿದ್ದು, ದರ್ಪ ಮೆರೆಯುತ್ತಿದ್ದಾರೆ ಎಂಬುವುದು ಇನ್ನಷ್ಟು ಸ್ಪಷ್ಟವಾಗಿದೆ.
ಇನ್ನು ಅಧಿಕಾರಿಗಳು ಗಂಟೆಗೊಂದು, ಘಳಿಗೆಗೊಂದು ಆದೇಶ ಮಾಡುತ್ತಿದ್ದರೂ ಸಂಬಂಧಪಟ್ಟ ಸಚಿವರು ಮತ್ತು ರಾಜ್ಯದ ಮುಖ್ಯಮಂತ್ರಿಗಳು ಹಾಗೂ ನಿಗಮಗಳ ಅಧ್ಯಕ್ಷರು ಏನು ಮಾಡುತ್ತಿದ್ದಾರೆ? ಅಧಿಕಾರಿಗಳು ಇವರ ಹಿಡಿತದಲ್ಲಿಲ್ಲವೇ? ಇಂಥ ಅಧಿಕಾರಿಗಳಿಗೆ ಕಡಿವಾಣ ಹಾಕಿ ಸಂಸ್ಥೆಯಲ್ಲಿ ಉತ್ತಮ ವಾತಾವರಣ ನಿರ್ಮಾಣ ಮಾಡಲು ಸಾಧ್ಯವಿಲ್ಲವೇ ಎಂಬುವುದು ಯಕ್ಷ ಪ್ರಶ್ನೆಯಾಗಿದೆ.

ಈ ಸಾರಿಗೆ ನಿಗಮದ ಅಧಿಕಾರಿಗಳನ್ನು ಯಾವುದೋ ಒಂದು ನೌಕರರ ಪರ ಸಂಘಟನೆ ಎಂದು ಹೇಳಿಕೊಂಡು ಕಳೆದ 40 ವರ್ಷಗಳಿಂದ ನೌಕರರು ಕೊಟ್ಟ ಹಣದಿಂದಲೇ ಬೆಳೆದು ಈಗ ಕೋಟಿ ಕೋಟಿ ರೂ.ಗಳನ್ನು ಸಂಗ್ರಹಿಸಿರುವ, ಆ ಸಂಘಟನೆ ನೌಕರರ ವಿರುದ್ಧವೇ ತಿರುಗಿ ಬಿದ್ದಿದ್ದು, ನೌಕರರ ಹಿತ ಕಾಯುವ ಬದಲಿಗೆ ಅಧಿಕಾರಿಗಳು ನೌಕರರನ್ನು ಹೇಗೆ ಹಿಂಸಿಸ ಬಹುದು ಎಂಬ ಸಲಹೆ ನೀಡುತ್ತಾ ನೌಕರರನ್ನು ಹುರಿದು ಮುಕ್ಕುವ ಕೆಲಸವನ್ನು ಮಾಡಿಸುತ್ತಿದೆ.
ಅಂದರೆ ಸರ್ಕಾರ ಇಲ್ಲಿ ನೌಕರರ ಪರ ಎಂದು ಹೇಳಿಕೊಂಡು ನೌಕರರ ವಿರುದ್ಧವೇ ಇರುವ ಈ ಸಂಘಟನೆಗೆ ಗುತ್ತಿಗೆ ಕೊಟ್ಟಂತೆ ನಡೆದುಕೊಳ್ಳುತ್ತಿದೆಯೇ ಎಂಬ ಅನುಮಾನ ಕಾಡುತ್ತಿದೆ. ಕಾರಣ ಒಂದು ಜವಾಬ್ದಾರಿಯುತ ಸ್ಥಾನದಲ್ಲಿರುವ ಐಎಎಸ್ ಅಧಿಕಾರಿಗಳು ಒಂದು ನಿರ್ಧಾರ ತೆಗೆದುಕೊಳ್ಳುವ ಮುನ್ನ ಹಲವಾರು ಬಾರಿ ಅದರ ಬಗ್ಗೆ ಚರ್ಚಿಸಿರುತ್ತಾರೆ. ನಂತರ ಆ ಆದೇಶವನ್ನು ಪ್ರಕಟಿಸುತ್ತಾರೆ. ಆದರೆ ಅಂಥ ಆದೇಶವನ್ನು ಪ್ರಕಟಿಸಿದ ಒಂದು ಗಂಟೆಯಲ್ಲೇ ತಿರುಚಿ ನೌಕರರಿಗೆ ಮಾರಕವಾಗುವ ರೀತಿಯಲ್ಲಿ ಮತ್ತೊಂದು ಆದೇಶ ಹೊರಡಿಸುತ್ತಾರೆ ಎಂದರೆ ಅದರ ಅರ್ಥ ಏನು?
ಇನ್ನು ಸಾರಿಗೆ ಸಚಿವರು ಈ ರೀತಿಯ ಅಧಿಕಾರಿಗಳ ನಡೆಗೆ ಬ್ರೇಕ್‌ಹಾಕಿ, ಸಂಸ್ಥೆಯಲ್ಲಿ ಎಲ್ಲರೂ ಸಂವಿಧಾನಾತ್ಮಕವಾಗಿ ಒಂದೇ ಎಂದು ನೋಡುವ ದೃಷ್ಟಿಕೋನದಡಿ ತರಬೇಕಾದ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಿದೆ. ಹೀಗೆಯೇ ಅಧಿಕಾರಿಗಳನ್ನು ಬಿಟ್ಟರೆ ಮುಂದಿನ ದಿನಗಳಲ್ಲಿ ದೇಶದಲ್ಲೇ ನಂ.1 ಸಾರಿಗೆ ಎನಿಸಿಕೊಂಡಿರುವ ಸಂಸ್ಥೆ ಇತಿಹಾಸ ಸೇರಲಿದೆ.
ಹೀಗಾಗಿ ಯಾವುದೋ ಒಂದು ಸಂಘಟನೆಯ ಮುಖಂಡ ಹೇಳಿದಂತೆ ಕೇಳುವ ಬದಲಿಗೆ ಸಂಸ್ಥೆಗೆ ಮತ್ತು ಸಂಸ್ಥೆಯ ನೌಕರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಧಿಕಾರಿಗಳು ನಡೆದುಕೊಳ್ಳುವಂತೆ ಮಾಡುವ ನಿಟ್ಟಿನಲ್ಲಿ ಸಚಿವರು ತಾಕೀತು ಮಾಡಬೇಕಿದೆ.
ಇನ್ನು ನೌಕರರ ಹಂಗಿನಿಂದಲೇ 40 ವರ್ಷದಿಂದ ಬೆಳೆದು ಈಗ ಹೆಮ್ಮರವಾಗಿ ನಿಂತಿರುವ ಸಂಘಟನೆಯ ಮುಖಂಡ ನೌಕರರಿಗೆ ನ್ಯಾಯ ಕೊಡಿಸುವ ಬದಲು ಅವರನ್ನು ಹಿಂಸಿರುವ ನಿಟ್ಟಿನಲ್ಲಿ ನಡೆದುಕೊಳ್ಳುತ್ತಿರುವ ಆತನಿಗೆ ಶೋಭೆಯಲ್ಲ. ನಮ್ಮ ಕೈಯಲ್ಲಿ ಮಾಡಲು ಸಾಧ್ಯವಿಲ್ಲ ಎಂದರೆ ಸುಮ್ಮನಿರೋಣ ಅದನ್ನು ಬಿಟ್ಟು ಒಳ್ಳೆ ಕೆಲಸಕ್ಕೆ ಮೂಗುತೂರಿಸಿ ಹಾಳುಮಾಡುವುದು ಒಬ್ಬ ನಾಯಕನ ಲಕ್ಷಣವಲ್ಲ.
ಇನ್ನು ಸೆ.14ರಂದು ಮೊದಲು ಹೊರಡಿಸಿದ್ದ ಆದೇಶದಂತೆ ನೌಕರರನ್ನು ಆಡಳಿತಾತ್ಮಕ ವರ್ಗಾವಣೆ ಮಾಡಬೇಕು ಎಂದು ಹಲವು ಸಂಘಟನೆಗಳ ಮುಖಂಡರು ಒತ್ತಾಯಿಸಿದ್ದಾರೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಮತ್ತೆ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ.
Related


You Might Also Like
ಬೀದರ್: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸಹಕಾರ ಸಂಘದ ವಾರ್ಷಿಕೋತ್ಸವ
ಬೀದರ್: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಸಹಕಾರ ಸಂಘವು ತನ್ನ 30ನೇ ಸಾಮಾನ್ಯ ಮಹಾಸಭೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ರಂಗಮಂದಿರದಲ್ಲಿ ಭವ್ಯವಾಗಿ ಆಚರಿಸಿತು....
ಇತ್ತೀಚಿಗೆ ಆಹಾರ ಉತ್ಪಾದನಾ ಪ್ರಮಾಣ ಕಡಿಮೆ ಆಗಿದೆ: ಸಿಎಂ ಸಿದ್ದರಾಮಯ್ಯ ಆತಂಕ
ಧಾರವಾಡ: ಸ್ವಾತಂತ್ರ್ಯದ ಹೊಸ್ತಿಲಲ್ಲಿ ಆಹಾರ ಉತ್ಪಾದನೆಯಲ್ಲಿ ಹಿಂದೆ ಇದ್ದೆವು. ಬಳಿಕ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಬೆಳೆಸಿಕೊಂಡು ರಫ್ತು ಮಾಡುವುದರಲ್ಲೂ ಮುಂದೆ ಬಂದೆವು. ಆದರೆ, ಇತ್ತೀಚಿಗೆ ಫಲವತ್ತತೆ ಕಡಿಮೆ...
ಉಪೇಂದ್ರ ದಂಪತಿಗೆ ಸೈಬರ್ ವಂಚಕರಿಂದ ಸಂಕಷ್ಟ: 1,65,000 ರೂ. ಎಗರಿಸಿದ ಹ್ಯಾಕರ್
ಬೆಂಗಳೂರು: ನಟ ಉಪೇಂದ್ರ ಹಾಗೂ ನಟಿ ಪ್ರಿಯಾಂಕ ಉಪೇಂದ್ರ ದಂಪತಿಗೆ ಸೈಬರ್ ವಂಚಕರಿಂದ ಸಂಕಷ್ಟ ಎದುರಾಗಿದೆ. ಪ್ರಿಯಾಂಕ ಉಪೇಂದ್ರ ಅವರು ಆನ್ಲೈನ್ ವಸ್ತುಗಳನ್ನು ಆರ್ಡರ್ ಮಾಡಿದ್ದಾರೆ. ಇದನ್ನೇ...
ಸಂವಿಧಾನದ ರಕ್ಷಣೆ ಎಲ್ಲ ನಾಗರಿಕರ ಜವಾಬ್ದಾರಿ ಈ ಕರ್ತವ್ಯ ತಪ್ಪದೇ ಎಲ್ಲರೂ ನಿರ್ವಹಿಸಿ: ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಸಂವಿಧಾನದ ರಕ್ಷಣೆ ಎಲ್ಲ ನಾಗರಿಕರ ಜವಾಬ್ದಾರಿಯಾಗಿದ್ದು, ಈ ಕರ್ತವ್ಯವನ್ನು ಎಲ್ಲರೂ ತಪ್ಪದೇ ನಿರ್ವಹಿಸಲೇಬೇಕು. ಪ್ರಜಾಪ್ರಭುತ್ವದ ರಕ್ಷಣೆಯಿಂದ ದೇಶದ ಜನರ ರಕ್ಷಣೆ ಸಾಧ್ಯ. ದೇಶದಲ್ಲಿ ವಿವಿಧ ಜಾತಿ,...
ಅವನನ್ನ ಮೂರ್ಖ ಅಂತ ಕರೆಯಬೇಕು: ಪ್ರತಾಪ್ ಸಿಂಹ ಹೆಸರು ಹೇಳದೆ ಸಿಎಂ ವಾಗ್ದಾಳಿ
ಬೆಂಗಳೂರು: ಬಾನು ಮುಷ್ತಾಕ್ ಮೈಸೂರು ದಸರಾ ಉದ್ಘಾಟನೆ ಮಾಡಬಾರದು ಎಂಬ ಮಾಜಿ ಸಂಸದ ಪ್ರತಾಪ್ ಸಿಂಹ ಹಾಗೂ ಬಿಜೆಪಿ ನಾಯಕರ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದಾರೆ....
KSRTC: ಎಂ.ಆರ್. ಶ್ರೀನಿವಾಸಮೂರ್ತಿ ನೇತೃತ್ವದ ಏಕ ಸದಸ್ಯ ಸಮಿತಿ ಕೂಡ 38 ತಿಂಗಳ ಹಿಂಬಾಕಿ ಸರ್ಕಾರ ಕೊಟ್ಟರೆ ನೌಕರರು ಖುಷಿಯಾಗುತ್ತಾರೆ ಎಂದೇ ಶಿಫಾರಸು ಮಾಡಿದೆ
ಬೆಂಗಳೂರು: ಸಾರಿಗೆ ನೌಕರರಿಗೆ 2020 ಜನವರಿ 1ರಿಂದ ಜಾರಿಗೆ ಬಂದಿರುವ ಶೇ.15ರಷ್ಟು ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಕೊಡುವುದಕ್ಕೆ ತಾವು ಈಗಾಗಲೇ 14 ತಿಂಗಳ ಹಿಂಬಾಕಿಯಷ್ಟೇ...
ಬೆಳ್ಳಂಬೆಳಗ್ಗೆ ನಡು ರಸ್ತೆಯಲ್ಲೇ ಧಗಧಗಿಸಿದ ಬಿಎಂಟಿಸಿ ಬಸ್- ಸದ್ಯ 75 ಪ್ರಯಾಣಿಕರು ಸೇಫ್
ಬೆಂಗಳೂರು: ಚಲಿಸುತ್ತಿದ್ದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಬಸ್ ಇಂಜಿನ್ನಲ್ಲಿ ಬೆಂಕಿ ಕಾಣಿಸಿಕೊಂಡ ಕ್ಷಣಾರ್ಧದಲ್ಲೆ ಹೊತ್ತು ಉರಿದು ಸಂರ್ಪೂಣ ಸುಟ್ಟು ಕರಕಲಾದ ಘಟನೆ ನಗರದ ಎಚ್ಎಎಲ್ ಮುಖ್ಯದ್ವಾರದ...
ಬೆಳ್ಳಂಬೆಳಗ್ಗೆ ಅನಿರೀಕ್ಷಿತ ಭೇಟಿ ನೀಡಿ ಹಾಜರಾತಿ ಪರಿಶೀಲಿಸಿದ ಆಯುಕ್ತರು: ಪೌರ ಕಾರ್ಮಿಕರ ಮೇಲ್ವಿಚಾರಕರಿಬ್ಬರ ಮೇಲೆ ಕ್ರಮ
ಬೆಂಗಳೂರು: ಸರ್ವಜ್ಞನಗರ ಕ್ಷೇತ್ರದ ಬಾಣಸವಾಡಿಯ ಬಿಎಸ್ಎನ್ಎಲ್ ಮಸ್ಟರಿಂಗ್ ಪಾಯಿಂಟ್ (ಭುವನಗಿರಿ ಪಾರ್ಕ್) ನಲ್ಲಿ ಇಂದು ಮುಂಜಾನೆ ಬೆಂಗಳೂರು ಉತ್ತರ ನಗರ ಪಾಲಿಕೆ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್...
ನಾಡಹಬ್ಬ ದಸರಾಗೆ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ ಅಧಿಕೃತವಾಗಿ ಆಹ್ವಾನಿಸಿದ ಜಿಲ್ಲಾ ಉಸ್ತುವಾರಿ ಸಚಿವ HCM
ಮೈಸೂರು: ನಾಡಹಬ್ಬ ದಸರಾ ಮಹೋತ್ಸವಕ್ಕೆ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ ಮಹದೇವಪ್ಪ ಅಧಿಕೃತವಾಗಿ ಆಹ್ವಾನಿಸಿದರು. ಇದೇ ಸೆ.22 ರಂದು ಪ್ರಾರಂಭವಾಗಲಿರುವ...