NEWSನಮ್ಮರಾಜ್ಯ

ಬಿಎಂಟಿಸಿ ನೂತನ ಎಂಡಿ ಅನ್ಬುಕುಮಾರ್‌ ಅಧಿಕಾರ ಸ್ವೀಕಾರ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಬಿಎಂಟಿಸಿ ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ವಿ.ಅನ್ಬು ಕುಮಾರ್‌ ಅವರನ್ನು ನೇಮಕ ಮಾಡಿ  ನಿನ್ನೆ ಸೆ.13ರಂದು  ಸರ್ಕಾರ ಆದೇಶ ಹೊರಡಿಸಿತ್ತು. ಇಂದು (ಸೆ.14) ಅನ್ಬುಕುಮಾರ್‌ ಸಂಸ್ಥೆಯ ಎಂಡಿಯಾಗಿ ಅಧಿಕಾರ ಸ್ವೀಕರಿದ್ದಾರೆ.

ಕಳೆದ ಜುಲೈ 7ರಂದು ಐಎಎಸ್‌ ಅಧಿಕಾರಿ ಡಾ.ಎಂ.ಟಿ. ರೆಜು ಅವರನ್ನು ಬಿಎಂಟಿಸಿ ಎಂಡಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದ ಸರ್ಕಾರ ಅವರು ಅಧಿಕಾರ ವಹಿಸಿಕೊಂಡ ಎರಡೇ ತಿಂಗಳಲ್ಲಿ ಅವರನ್ನು ಎತ್ತಂಗಡಿ ಮಾಡಿ ಆ ಜಾಗಕ್ಕೆ 2004 ಬ್ಯಾಚ್‌ನ ಐಪಿಎಸ್ ಅಧಿಕಾರಿ ವಿ.ಅನ್ಬುಕುಮಾರ್‌ ಅವರನ್ನು ನೇಮಕ ಮಾಡಿದೆ.

ಈ ಹಿಂದೆ ಇದ್ದ ಸಿ. ಶಿಖಾ ಅವರನ್ನು ಜೂ.29ರಂದು ವರ್ಗಾವಣೆ ಮಾಡಿದ್ದ ರಾಜ್ಯ ಸರ್ಕಾರ ಮತ್ತೆ ಎರಡೇ ದಿನದಲ್ಲಿ ಅಂದರೆ ಜು.2ರಂದು ಶಿಖಾ ಅವರನ್ನು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಾಗಿ ಮರು ನೇಮಕ ಮಾಡಿತ್ತು. ಆದರೆ ಮತ್ತೆ ಒಂದು ವಾರ ಕಳೆಯುವಷ್ಟರಲ್ಲೇ ( ಜುಲೈ 7ರಂದು) ಎತ್ತಂಗಡಿ ಮಾಡಿತ್ತು.

ಆಗ ರಾಜ್ಯ ಸರ್ಕಾರ 2005ನೇ ಬ್ಯಾಚ್‌ನ ಕರ್ನಾಟಕ ಕೆಡರ್ ಐಪಿಎಸ್ ಅಧಿಕಾರಿ ಡಾ. ಎಂ.ಟಿ. ರೆಜು ಅವರನ್ನು ಕರ್ನಾಟಕ ಅರ್ಬನ್ ಇನ್ಫಾಸ್ಟ್ರಕ್ಚರ್‌ ಡೆವಲಪ್ ಮೆಂಟ್ ಆಂಡ್‌ ಫೈನಾನ್ಸ್ ಕಾರ್ಪೋರೇಶನ್ (ಕೆಯುಐಡಿಎಫ್‌ಸಿ) ನಿಂದ ವರ್ಗಾವಣೆ ಮಾಡಿ ಬಿಎಂಟಿಸಿ ಎಂಡಿಯಾಗಿ ನೇಮಕ ಮಾಡಿತ್ತು. ಈಗ ಅವರನ್ನು ಎರಡು ತಿಂಗಳಲ್ಲೇ ಕೆಯುಐಡಿಎಫ್‌ಸಿಗೆ ಅವರನ್ನು ವರ್ಗಾವಣೆ ಮಾಡಿದೆ.

ಅವರ ವರ್ಗಾವಣೆಯಿಂದ ತೆರವಾದ ಬಿಎಂಟಿಸಿ ಎಂಡಿ ಸ್ಥಾನಕ್ಕೆ ಕಮಿಷನರ್‌ ಫಾರ್‌ ಪಬ್ಲಿಕ್‌ ಇನ್‌ಸ್ಟ್ರಕ್ಷನ್ಸ್‌‌ ವಿ.ಅನ್ಬುಕುಮಾರ್‌ ಅವರನ್ನು ನೇಮಕ ಮಾಡಿದೆ. ನೂತನ ಎಂಡಿಯಾಗಿ ಇಂದು ಅಧಿಕಾರ ಸ್ವೀಕರಿಸಿರುವ ಅನ್ಬು ಕುಮಾರ್‌ ಅವರ ಜವಾಬ್ದಾರಿ ಹೆಚ್ಚಾಗಿದ್ದು, ಬರಿ ಸಮಸ್ಯೆಗಳ ಸುಳಿಯಲ್ಲೇ ಸಿಲುಕಿರುವ ಸಂಸ್ಥೆಯಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಜತೆಗೆ ನೌಕರರ ಸಮಸ್ಯೆಗೂ ಪರಿಹಾರ ಕಂಡುಕೊಳ್ಳುವ ಗುರುತರ ಜವಾಬ್ದಾರಿಯೂ ನೂತನ ಎಂಡಿ ಮೇಲಿದೆ.

ಇದೆಲ್ಲವನ್ನು ತಮ್ಮ ಸೇವಾನುಭವದ ಮೂಲಕ ತಾಳ್ಮೆಯಿಂದ ಆದಷ್ಟು ಶೀಘ್ರದಲ್ಲೇ ಪರಿಹರಿಸಿ ನೌಕರರ ಪಾಲಿನ ನಾಯಕನಾಗಬೇಕಿದೆ.

Megha
the authorMegha

Leave a Reply

error: Content is protected !!
Latest news
KSRTC ನೌಕರರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಓಂಕಾರಪ್ಪನ ಸಹಿ ಮಾಡುವ ಅಧಿಕಾರ ರದ್ದುಗೊಳಿಸಿ ತನಿಖೆಗೆ ಹೈ ಕೋರ್ಟ್‌ ಆದೇಶ BMTC: 30ನೇ ಘಟಕದ ಎಲೆಕ್ಟ್ರಿಕ್‌ ಬಸ್‌ಗಳ ಅಸಮರ್ಪಕ ಕಾರ್ಯಾಚರಣೆ ವಿರುದ್ಧ ಸಿಎಸ್‌ಗೆ ದೂರು ನೀಡಿದ ನಿರ್ವಾಹಕರು ಪಬ್‌ನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡ -ಅಬಕಾರಿ ಡಿಸಿ ಅಮಾನತಿಗೆ ಶಿಫಾರಸು: ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಹೊಲದ ಕೂಲಿ ಕೆಲಸ ಬಿಟ್ಟು ಮತ್ತೆ ಶಿಕ್ಷಣದತ್ತ ಹೆಜ್ಜೆ ಇಟ್ಟ ವಿದ್ಯಾರ್ಥಿನಿ: ಪ್ರಾಂಶುಪಾಲರ ಮಾನವೀಯತೆಗೆ ಬೆಲೆ ಕಟ್ಟಲಾದ... ಕನಿಷ್ಠ ವಿದ್ಯಾರ್ಹತೆ SSLC ಪಾಸ್‌: ಡಿಪ್ಲೊಮಾ ಇನ್ ಕೋ ಆಪರೇಟಿವ್ ಮ್ಯಾನೇಜ್‌ಮೆಂಟ್ ಪ್ರವೇಶಕ್ಕೆ ಅರ್ಜಿ ಆಹ್ವಾನ ಕರ್ನಾಟಕದಲ್ಲಿ ‘ಕರ್ತವ್ಯ’ ಕ್ರಾಂತಿ: ಸ್ವದೇಶಿ ಎಐ ತಂತ್ರಜ್ಞಾನದ ಹೊಸ ಹೆಜ್ಜೆ ಜೂನ್, 21ರಂದು ವಿಶ್ವ ಯೋಗ ದಿನ ಆಚರಿಸೋಣ ಬನ್ನಿ ಡಿಸಿ ಡಾ.ಅನುರಾಧ ಕರೆ ಇ-ಖಾತಾ ತಿದ್ದುಪಡಿ ಜವಾಬ್ದಾರಿ ಉಪ ಆಯುಕ್ತರಿಗೆ ಕೊಡಿ: ಮಹೇಶ್ವರ್ ರಾವ್ ವಿದ್ಯುತ್ ಖಾಸಗೀಕರಣ ನಿಲ್ಲಿಸಿ: ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಆಗ್ರಹ BMTC: ದೈಹಿಕವಾಗಿ ಫಿಟ್‌ ಇದ್ದರೂ ಲಘುಡ್ಯೂಟಿ ಮಾಡುತ್ತಿರುವ ನೌಕರರ ಸಂಘಟನೆಯ ಮುಖಂಡ- ಕಂಡು ಕಾಣದಂತೆ ಮೌನವಾಗಿರುವ ಅಧಿಕ...