ಕಲಬುರಗಿ: ಕಲ್ಯಾಣ ಕರ್ನಾಟಕ ಸಾರಿಗೆ ಸಂಸೆಯ ಸೇಡಮ್ ಡಿಪೋದಲ್ಲಿ ಚಾಲಕ ಕಂ ನಿರ್ವಾಹಕ ಭಿಮಾಶಂಕರ್ ಆತ್ಮಹತ್ಯೆಗೆ ವಿಭಾಗೀಯ ನಿಯಂತ್ರಾಧಿಕಾರಿ ಸುನೀಲ ಕುಮಾರ ಚಂದರಗಿ ಮತ್ತು ಡಿಪೋ ಮ್ಯಾನೇಜರ್ ಎಸ್.ಟಿ. ರಾಠೋಡ ಮತ್ತು ಡಿಟಿವೋ ಇಸ್ಮಾಯಿಲ್ ಹೊಸಮನಿ, ಇನ್ಸ್ಪೆಕ್ಟರ್ ಗೊಲ್ಲಾಳ್ಪ ಬಿರಾದಾರ ಅವರುಗಳ ಭ್ರಷ್ಟಾಚಾರ ಮತ್ತು ಕಿರುಕುಳವೇ ಕಾರಣವೆಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ ಆರೋಸಿದೆ.
ಶುಕ್ರವಾರ ತಡರಾತ್ರಿ ನಿರ್ವಾಹಕ ಭಿಮಾಶಂಕರ್ ಡಿಪೋದಲ್ಲಿಯೇ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಅಧಿಕಾರಿಗಳ ಕಿರುಕುಳವೇ ಕಾರಣವಾಗಿದೆ.
ಡಿಪೋ ಮ್ಯಾನೇಜರ್ ಕಳೆದ ಒಂದು ವಾರದಿಂದ ಡ್ಯೂಟಿ ಕೊಡದೇ ಹಿಂಸೆ ನೀಡಿದ್ದಾರೆ ಮತ್ತು ಡ್ಯೂಟಿ ಕೊಡಬೇಕಾದರೆ ಲಂಚದ ಬೇಡಿಕೆ ಇಟ್ಟಿದ್ದಾರೆ. ಆದರೆ ನಿರ್ವಾಹಕ ನಮಗೆ ಸರಿಯಾದ ಸಮಯಕ್ಕೆ ಸಂಬಳವೇ ನೀಡಿಲ್ಲ ನನ್ನ ಹೆಂತಿ ಮಕ್ಕಳಿಗೆ ಸಲುವಲಿಕ್ಕೆ ಬರುವ ಸಂಬಳ ಸಾಕಾಗುತ್ತಿಲ್ಲ. ಹಣ ಎಲ್ಲಿಂದ ಕೊಡಲಿ ಎಂದು ವಾಗ್ವಾದ ಮಾಡಿದ್ದಾನೆ. ಅದಕ್ಕೆ ಅಧಿಕಾರಿಗಳು ಸ್ಪಂದಿಸದೇ ಇರುವುದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಕೂಟದ ಗೌರವ ಅದ್ಯಕ್ಷ ಶೌಕತ್ ಅಲಿ ಆಲೂರು ಆರೋಪಿಸಿದ್ದಾರೆ.
ವಿಭಾಗೀಯ ನಿಯಂತ್ರಣಾಧಿಕಾರಿ ಸುನೀಲ ಕುಮಾರ ಅವರು ತಮ್ಮ ಅಧೀನದಲ್ಲಿ ಬರುವ ಡಿಪೋ ಮ್ಯಾನೇಜರ್‌ಗಳಿಗೆ ಪ್ರತಿ ತಿಂಗಳು ಇಂತಿಷ್ಟು ಹಣ ನೀಡುವುದು ಕಡ್ಡಾಯ ಮಾಡಿದ್ದಾರಂತೆ ಹಣ ಕೊಟ್ಟವರಿಗೆ ಲಾಭದಾಯಕ ಡ್ಯೂಟಿ ಮಾರ್ಗಗಳನ್ನು ನೀಡಿ ಹಣ ನೀಡದಿರುವ ಸಿಬ್ಬಂದಿಗಳಿಗೆ ನಷ್ಟದಲ್ಲಿ ಇರುವ ಮಾರ್ಗಗಳನ್ನು ನೀಡಿ ಹಿಂಸೆ ನೀಡುತ್ತಿದ್ದಾರೆಂದು ಆತ್ಮಹತ್ಯೆ ಮಾಡಿಕೊಂಡ ನೌಕರ ಹಲವಾರು ಬಾರಿ ಕುಟುಂಬದೊಂದಿಗೆ ಕಷ್ಟ ಹಂಚಿಕೊಂಡಿದ್ದಾನೆ.
ಹೀಗಾಗಿ ವ್ಯವಸ್ಥಾಪಕ ನಿರ್ದೇಶಕರು ತಕ್ಷಣವೇ ನೌಕರನ ಆತ್ಮಹತ್ಯೆಗೆ ವಿಭಾಗೀಯ ನಿಯಂತ್ರಾಧಿಕಾರಿ ಸುನೀಲ್ ಕುಮಾರ್ ಮತ್ತು ಡಿಪೋ ಮ್ಯಾನೇಜರ್ ಎಸ್ ಟಿ ರಾಠೋಡ ಅವರನ್ನು ಹೊಣೆಗಾರರನ್ನಾಗಿ ಮಾಡಿ ಕ್ರಮ ಜರುಗಿಸಬೇಕು ಮತ್ತು ನೊಂದ ಕುಟುಂಬಕ್ಕೆ ಸೂಕ್ತ ಪರಿಹಾರ ಮತ್ತು ಕುಟುಂಬದ ಸದಸ್ಯರಿಗೆ ಉದ್ಯೋಗ ನೀಡುವಂತೆ ಶೌಕತ್ ಅಲಿ ಆಲೂರು ಒತ್ತಾಯ ಮಾಡಿದ್ದಾರೆ.