ಮಾ.18ರಂದು ಸಾರಿಗೆ ಇಲಾಖೆ ಕಾರ್ಯದರ್ಶಿ ಅಧ್ಯಕ್ಷತೇಲಿ ಸಾರಿಗೆ ಎಂಡಿಗಳು ಸೇರಿ ಇತರೆ ಇಲಾಖೆ ಅಧಿಕಾರಿಗಳೊಂದಿಗೆ ಸಭೆ

ಬೆಂಗಳೂರು: ಸಾರಿಗೆ ಇಲಾಖೆಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಇದೇ ಮಾರ್ಚ್ 18ರಂದು ಸಂಜೆ 04.30ಕ್ಕೆ ಮಾರ್ಚ್ 16ರವರೆಗೆ ಸಾರಿಗೆ ಇಲಾಖೆ ಹಾಗೂ ಸಾರಿಗೆ ಸಂಸ್ಥೆಗಳು ಸಾಧಿಸಿರುವ ಪ್ರಗತಿ ಪರಿಶೀಲನಾ (MPIC) ಸಭೆಯನ್ನು ವಿಡಿಯೋ ಸಂವಾದ (Microsoft Team) ಮೂಲಕ ನಡೆಸಲಾಗುವುದು ಎಂದು ಸಾರಿಗೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಪುಷ್ಪ ತಿಳಿಸಿದ್ದಾರೆ.

ಈ ಸಭೆಗೆ ಅಗತ್ಯ ಮಾಹಿತಿಯೊಂದಿಗೆ ವಿಡಿಯೋ ಸಂವಾದ (Microsoft Team) ಮುಖಾಂತರ ಭಾಗವಹಿಸುವಂತೆ ಸಾರಿಗೆ ಮತ್ತು ರಸ್ತೆ ಸುರಕ್ಷತೆಯ ಆಯುಕ್ತರು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರನ್ನು ಕೋರಿದ್ದಾರೆ.
ಅಲ್ಲದೆ ಡಿ.ದೇವರಾಜ ಅರಸ್ ಟ್ರಕ್ ಟರ್ಮಿನಲ್‌ನ ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರದ ಅಪರ ಆಯುಕ್ತರು, ವಿಶೇಷಾಧಿಕಾರಿ (ಜಿ.ಪಂ.) ಮತ್ತು ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ, ಆರ್ಥಿಕ ಇಲಾಖೆ, ಆಂತರಿಕ ಆರ್ಥಿಕ ಸಲಹೆಗಾರರು ಹಾಗೂ ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ, ಒಳಾಡಳಿತ ಮತ್ತು ಸಾರಿಗೆ ಇಲಾಖೆ ಹಾಗೂ ಮಾನವ ಅಭಿವೃದ್ಧಿ ವಿಭಾಗ (ಎಚ್.ಡಿ.ಡಿ ವಿಭಾಗ) ಯೋಜನಾ ಇಲಾಖೆಯ ಹಿರಿಯ ನಿರ್ದೇಶಕರನ್ನು ಕೋರಿದ್ದಾರೆ.
MPIC ಸಭೆಯಲ್ಲಿ ಚರ್ಚಿಸುವ ಅಂಶಗಳು: ಹಿಂದಿನ ಕೆಡಿಪಿ ಸಭೆಯ ನಿರ್ಣಯಗಳ ಮೇಲೆ ತೆಗೆದುಕೊಂಡ ಕ್ರಮದ ವರದಿ. 2025-26ನೇ ಸಾಲಿನಲ್ಲಿ ಮಾರ್ಚ್ ತಿಂಗಳ 16ರವರೆಗೆ ವಿವಿಧ ಇಲಾಖೆಗಳಲ್ಲಿ ಸಾಧಿಸಿರುವ ಒಟ್ಟಾರೆ ಆರ್ಥಿಕ ಪ್ರಗತಿ. 2025-26ನೇ ಸಾಲಿನಲ್ಲಿ ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳ ಪ್ರಗತಿ (ಮಾರ್ಚ್ 16ನೇ ತಾರೀಖಿನವರೆಗೆ).
2025-26ನೇ ಸಾಲಿನಲ್ಲಿ ವಿವಿಧ ಇಲಾಖೆಗಳಲ್ಲಿನ SCSP/TSP/SDP ಕಾರ್ಯಕ್ರಮಗಳಲ್ಲಿ ಸಾಧಿಸಿದ ಪ್ರಗತಿ (ಮಾರ್ಚ್ 16ನೇ ತಾರೀಖಿನವರೆಗೆ). 2026-27ನೇ ಸಾಲಿನ ಆಯವ್ಯಯ ಘೋಷಣೆಗಳ ಕಂಡಿಕೆಗಳ ಮೇಲೆ ಕೈಗೊಳ್ಳಬೇಕಾದ ಕ್ರಮದ ಕುರಿತು. ಮುಖ್ಯಮಂತ್ರಿಯವರ ಜನತಾ ದರ್ಶನದ ಸಾರ್ವಜನಿಕ ಕುಂದುಕೊರತೆಗಳು/ ಜನಸ್ಪಂದನ/ ಬಾಕಿ ಅರ್ಜಿಗಳು/ ಸಕಾಲ. ಕಡತಗಳ ವಿಲೇವಾರಿ (e-Office) ಪ್ರಗತಿ ವಿವರ.
ಸಿ.ಸಿ.ಎಂ.ಎಸ್. ಉಚ್ಚ ನ್ಯಾಯಾಲಯದ ಆದೇಶಗಳ ಅನುಸರಣೆ (within Secretariat & outside Secretariat) ಹಾಗೂ ಬಾಕಿ ಇರುವ ನ್ಯಾಯಾಂಗ ನಿಂದನಾ ಪ್ರಕರಣಗಳು ಜಾರಿಗೊಳಿಸಿರುವ ಕುರಿತು. ಕರ್ನಾಟಕ ಆಡಳಿತ ಸುಧಾರಣಾ ಆಯೋಗ-2ರ ಶಿಫಾರಸುಗಳ ಅನುಷ್ಠಾನದ ಪ್ರಗತಿ ವಿವರ.
ಪ್ರಾದೇಶಿಕ ಸಾರಿಗೆ ಕಚೇರಿ ಹಾಗೂ ಇತರೆ ಎಲ್ಲ ಕಾಮಗಾರಿಗಳ ಪ್ರಗತಿಯ ವಿವರ. District Good Governance Index. ಬಾಕಿ ಇರುವ ಅಭಿಯೋಜನಾ ಮಂಜೂರಾತಿ ಪ್ರಕರಣಗಳು (ಲೋಕಾಯುಕ್ತ & ಸಿಐಡಿ). ಇಲಾಖಾ ವಿಚಾರಣೆಗಳ (ಮಾರ್ಚ್-16ರವರೆಗೆ) ಕುರಿತಾದ ವಿಷಗಳು ಪ್ರಮುಖವಾಗಿ ಚರ್ಚೆಗೆ ಬರಲಿವೆ ಎಂದು ತಿಳಿಸಿದ್ದಾರೆ.
Related









