NEWSಸಂಸ್ಕೃತಿ

ಗದಗ: ಪಂಚಾಕ್ಷರಿ ಗವಾಯಿಗಳವರಿಂದ ಗದಗು ಸಂಗೀತದ ಗದ್ದುಗೆಯಾಗಿದೆ : ಚನ್ನವೀರಸ್ವಾಮಿ ಹಿರೇಮಠ

‘ಗಾನಯೋಗಿ’ ಪಂ. ಪಂಚಾಕ್ಷರಿ ಗವಾಯಿಗಳವರ 131ನೇ ಜಯಂತೋತ್ಸವ

ವಿಜಯಪಥ ಸಮಗ್ರ ಸುದ್ದಿ

ಗದಗ: ಉತ್ತರದ ಹಿಂದೂಸ್ತಾನಿಯ ಶಾಸ್ತ್ರೀಯ ಸಂಗೀತವನ್ನು ದಕ್ಷಿಣಕ್ಕೆತಂದ ಮೊದಲಿಗರಲ್ಲಿ ಗಾನಯೋಗಿ ಪಂ. ಪಂಚಾಕ್ಷರಿ ಗವಾಯಿಗಳು ಅಗ್ರಸ್ಥಾನದಲ್ಲಿದ್ದಾರೆ ಎಂದು ಕಲಾ ವಿಕಾಸ ಪರಿಷತ್‌ನ ಸಂಸ್ಥಾಪಕ ವೇ. ಚನ್ನವೀರ ಸ್ವಾಮಿ ಹಿರೇಮಠ (ಕಡಣಿ) ಹೇಳಿದ್ದಾರೆ.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಉತ್ತರ ಕರ್ನಾಟಕದ ಕಲಾವಿದರ ಮತ್ತು ಕಲಾ ಪೋಷಕರ ಸಂಘಟನೆ ಗದುಗಿನ ಕಲಾ ವಿಕಾಸ ಪರಿಷತ್ ಮತ್ತು ಅಖಿಲ ಕರ್ನಾಟಕ ಗಾನಯೋಗಿ ಸಂಗೀತ ಪರಿಷತ್ ಗದಗದ ಸಂಯುಕ್ತ ಆಶ್ರಯದಲ್ಲಿ ಮುಂಡರಗಿ ರಸ್ತೆಯಲ್ಲಿ ಇರುವ ಚಿಕ್ಕಟ್ಟಿ ಸಂಸ್ಥೆಯ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ‘ಗಾನಯೋಗಿ’ ಪಂ. ಪಂಚಾಕ್ಷರಿ ಗವಾಯಿಗಳವರ 131ನೆಯ ಜಯಂತೋತ್ಸವ ಅಮರ ಸ್ವರ ಸಮಾರೋಹ ಸಮಾರಂಭದಲ್ಲಿ ಮಾತನಾಡಿದರು.

ಅರಮನೆಗೆ ಮೀಸಲಾಗಿದ್ದ ಸಂಗೀತಕ್ಕೆ ಗುರುಮನೆಯ ಗೌರವವನ್ನು ತಂದುಕೊಟ್ಟವರು, ಬಸವಾದಿ ಶರಣರ ವಚನಗಳಿಗೆ ರಾಗ ಸಂಯೋಜಿಸಿ ಹಾಡಿದ ಪ್ರಥಮರು ಪೂಜ್ಯ ಪಂಚಾಕ್ಷರಿ ಗವಾಯಿಗಳವರು. ಪೂಜ್ಯರು ಬದುಕಿದ್ದು ಕೇವಲ 52 ವರ್ಷ ಮಾತ್ರ. ಆದರೇ ಅವರ ಮೇರು ಸದೃಷ್ಯ, ಸಾಧನೆ ಎಂದಿಗೂ ಮರೆಯಲಾಗದು ಎಂದರು.

ಪಂಚಾಕ್ಷರಿ ಗವಾಯಿಗಳವರ ಸಂಗೀತ ಪ್ರತಿಭೆಯನ್ನು ಗುರುತಿಸಿದ ಮೈಸೂರ ಅರಮನೆಯ ಆಸ್ಥಾನವಿದ್ವಾನರಾಗಿದ್ದ ವೀಣೆ ಶೇಷಣ್ಣನವರು, ಪೂಜ್ಯರನ್ನು ಮೈಸೂರು ಅರಮನೆಯ ಸಂಗೀತ ವಿದ್ವಾನರನ್ನಾಗಿ ಮಾಡಲು ಮುಂದಾದಾಗ ಅದನ್ನು ನಯವಾಗಿ ತಿಸ್ಕರಿಸಿ, ಸಮಾಜಕ್ಕೆ ಮಾತ್ರವಲ್ಲ ತಂದೆ ತಾಯಿಗಳಿಗೂ ಬೇಡವಾದ ಮಕ್ಕಳನ್ನು ಭಿಕ್ಷೆರೂಪದಲ್ಲಿ ಸ್ವೀಕರಿಸಿ ಅವರಿಗೆ ಸಂಗೀತ ದೀಕ್ಷೆ ನೀಡಿ, ಬಾಳಿಗೆ ಬೆಳಕಾಗಿ ಸ್ವಾವಲಂಬಿಯಾಗಿ ಬದುಕುವ ಪಾಠ ಹೇಳಿಕೊಟ್ಟವರು. ಪೂಜ್ಯ ಪಂಚಾಕ್ಷರಿ ಗವಾಯಿಗಳವರಿಂದ ಗದಗು ಸಂಗೀತದ ಗದ್ದುಗೆಯಾಗಿದೆ ಎಂದು ಹೇಳಿದರು.

ಈ ಸಮಾರಂಭದ ಅಧ್ಯಕ್ಷತೆಯನ್ನು ಭಾರತೀಯ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷರಾದ ಪ್ರೊ. ಡಾ. ಎಸ್ ವೈ ಚಿಕ್ಕಟ್ಟಿಯವರು ವಹಿಸಿಕೊಂಡಿದ್ದರು. ಆನಂದ ಸಾಲಿಗ್ರಾಮ್ ಹಿರಿಯ ಪತ್ರಕರ್ತರು ಗದಗ, ಡಾ. ಪಂಪುಟ್ಟರಾಜ ಸೇವಾ ಸಮಿತಿಯ ಜಿಲ್ಲಾ ಅಧ್ಯಕ್ಷರಾದ ವೇ. ಮಂಜುನಾಥ ಹಳ್ಳೂರುಮಠ (ಬೆಳದಡಿ) ಗದಗ ಮತ್ತು ಶ್ರೀಮತಿ ಅನಸೂಯಾ ಧೂಳಾಯಿ ಗೋಕಾಕ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ, ಗೋಕಾದ ವಿದ್ಯಾ ಸೋಮಶೇಖರ್ ಮಗದುಮ್, ರಾಜಲಿಂಗಪ್ಪ ಸಜ್ಜನ (ಚಂಡ್ರಕಿ) ಗುರುಮಠಕಲ್ ಹಾಗೂ ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ ಪರಮ ಭಕ್ತರಾದ ಪೀರ್ ಸಾಬ್ ಕೌತಾಳ ಮಾಜಿ ಅಧ್ಯಕ್ಷರು ಗದಗ-ಬೆಟ್ಟಿಗೇರಿ ನಗರಸಭೆ ಅವರನ್ನು ಗಾನಯೋಗಿ ಪಂಚಾಕ್ಷರಿ ಅನುಗ್ರಹ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯ ರಾಜ್ಯ ಕಾರ್ಯದರ್ಶಿ, ಬೆಳಗಾವಿಯ ಪ್ರೊ. ಮಂಜುಶ್ರೀ ಹಾವಣ್ಣವರ್ ಪೂಜ್ಯ ಪಂಚಾಕ್ಷರಿ ಗವಾಯಿಗಳವರ ಕುರಿತು ನುಡಿ ನೈವೇದ್ಯ ಉಪನ್ಯಾಸ ನೀಡಿದರು. ಪ್ರಾಚಾರ್ಯ ವಿನಯ್ ಚಿಕ್ಕಟ್ಟಿಯವರು ಸರ್ವರಿಗೂ ಸ್ವಾಗತಿಸಿದರು. ಶಿಕ್ಷಕಿ ಹೇಮಲತಾ ಅವರು ಕಾರ್ಯಕ್ರಮ ನಿರೂಪಣೆ ಮಾಡಿದರು.

ಸಭಾ ಕಾರ್ಯಕ್ರಮದ ನಂತರ ಚಿಕ್ಕಟ್ಟಿ ಕಾಲೇಜಿನ ಯುವ ಕಲಾವಿದರಿಂದ ಸಮೂಹ ನೃತ್ಯಗಳು ಮತ್ತು ಪ್ರಶಸ್ತಿ ಪುರಸ್ಕೃತ ಶ್ರೀಮತಿ ವಿದ್ಯಾ ಮಗದುಮ್ ಅವರಿಂದ ಸಂಗೀತ ಪಂಚಾಕ್ಷರಿ ಗವಾಯಿಗಳವ ಮತ್ತು ಜ್ಞಾನ ಯೋಗಿ ಶ್ರೀ ಸಿದ್ದೇಶ್ವರ ಸ್ವಾಮಿಗಳವರ ಕುರಿತಾದ ಗೀತೆಗಳ ಗಾಯನ ನಡೆಯಿತು.

Leave a Reply

error: Content is protected !!
LATEST
APSRTC ನೌಕರರು ಸಂತೋಷವಾಗಿದ್ದಾರೆ, ಕರ್ನಾಟಕದ ಸಾರಿಗೆ ನೌಕರರು ತೊಂದರೆಗೆ ಒಳಗಾಗಿದ್ದಾರೆ ಇದಕ್ಕೆ ಕಾರಣರಾರು? APSRTC ನೌಕರರಿಗೆ ಸರ್ಕಾರದಿಂದಲೇ ವೇತನ ಪಾವತಿ, 5 ತಿಂಗಳ ಫ್ಯಾಮಿಲಿ ಪಾಸ್‌, ಇನ್ನಷ್ಟು ಸೌಲಭ್ಯಗಳು ಸೇರ್ಪಡೆ BBMP: ನಗರದಲ್ಲಿ ವಿಪತ್ತು ನಿರ್ವಹಣೆಯ ನಿವಾರಣೆಗೆ ತುರ್ತು ಕ್ರಮ: ತುಷಾರ್ ಗಿರಿನಾಥ್ ಕೆಎಸ್‌ಆರ್‌ಟಿಸಿ ರಾಮನಗರ: ಹೊಸ ETM ಮಷಿನ್ ಅವಾಂತರ- ಪಾಸ್ ನಮೂದಿಸಿದರೂ ಟಿಕೆಟ್ ಬರುತ್ತದೆ ! KSRTC: ಇದು ನಿನ್ನ ಮಗುವಲ್ಲ, ಪ್ಯಾಸೆಂಜರ್‌, ಫ್ಯಾಮಿಲಿ ಎದುರೆ ಸಹೋದ್ಯೋಗಿಯ ಅವಮಾನಿಸಿದ ಕಂಡಕ್ಟರ್‌!!? ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KKRTC ಇಂಡಿ ಘಟಕದ ಡಿಎಂ ಕರ್ಮಕಾಂಡ: 1-2ದಿನ ರಜೆಗೆ ಕೊಡಬೇಕು 2ಸಾವಿರ - ನೌಕರರ ಕಿತ್ತು ತಿನ್ನುತ್ತಿರುವ ನರರೂಪದ ರಕ್ಕಸ ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ