ಪಾಂಡವಪುರ: ರಾಜ್ಯರೈತ ಸಂಘಟನೆ ಮಂಡ್ಯ ಜಿಲ್ಲಾದ್ಯಕ್ಷ ಕೆಂಪುಗೌಡ ಅವರ ನೇತೃತ್ವದಲ್ಲಿ ಪಟ್ಟಣದ ರೈತಸಂಘದ ಕಚೇರಿಯಲ್ಲಿ ತಾಲೂಕು ಪದಾಧಿಕಾರಿಗಳ ಘೊಷಣೆ ಮಾಡಲಾಯಿತು.
ತಾಲೂಕು ನೂತನ ಅಧ್ಯಕ್ಷರಾಗಿ ಪಿ.ನಾಗರಾಜು, ಉಪಾಧ್ಯಕ್ಷರಾಗಿ ಹಾರೋಹಳ್ಳಿ ಲಕ್ಷ್ಮೇಗೌಡರು, ಹರವು ಗೋವಿಂದರಾಜು, ಹರಳಕುಪ್ಪೆ ವೆಂಕಟರಾಮ್, ಬೆಟ್ಟಹಳ್ಳಿ ಮಾಕೇಗೌಡರು, ಮಾವಳ್ಳಿ ಪುಟ್ಟೇಗೌಡರು, ನುಗ್ಗಹಳ್ಳಿ ರಾಮಕೃಷ್ಣ ಆಯ್ಕೆಯಾಗಿದ್ದಾರೆ.
ಇನ್ನು ಕೆನ್ನಾಳು ವಿಜಯಕುಮಾರ್, ಪ್ರಧಾನ ಕಾರ್ಯದರ್ಶಿ, ಬೇವಿನಕುಪ್ಪೆ ಯೋಗೇಶ್ ಖಜಾಂಚಿ, ಬಿರಸಟ್ಟಹಳ್ಳಿ ಗೀರೀಶ್, ಕಟೇರಿ ಕುಮಾರ್, ಬೇಬಿ ನಟರಾಜ್, ಚಿನಕುರಳಿ ಪುಟ್ಟೆಗೌಡ, ಕದಲಗೆರೆ ರಾಮು, ಪಾಂಡವಪುರ ಪಾರ್ಥ, ಹಾರೋಹಳ್ಳಿ ಸೋಮು, ಕ್ಯಾತನಹಳ್ಳಿ ಚಿದಾನಂದ, ಬ್ಯಾಟರಹಳ್ಳಿ ಪ್ರೇಮ್, ಅಶೋಕ್ ಹರಳಕುಪ್ಪೆ, ರಾಜೇಂದ್ರ ಪಟ್ಟಸೋಮನಹಳ್ಳಿ, ಬನ್ನಂಗಾಡಿ ಶಂಕರ್, ಬೋಮ್ಮಲಪುರ ಉಮೇಶ್, ಸಿಂಗ್ರಿಗೌಡನಕೊಪ್ಪಲು ಬಾಬು, ಡಿಂಕಾ ರಮೇಶ ಅವರನ್ನು ಸಂಘಟನಾ ಕಾರ್ಯದರ್ಶಿಯಾಗಿ ನೇಮಕ ಮಾಡಲಾಯಿತು.
ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತಾಲೂಕು ನೂತನ ಅಧ್ಯಕ್ಷ ಪಿ.ನಾಗರಾಜು ತಾಲೂಕಿನ ರೈತಸಂಘದ ಕಾರ್ಯಕರ್ತರು, ರೈತ ಮುಖಂಡರು ಮತ್ತು ಪದಾಧಿಕಾರಿಗಳನ್ನು ಒಗ್ಗೂಡಿಸಿ ಕೊಂಡು ಸಂಘಟನೆ ಮಾಡುವುದರ ಮೂಲಕ ಮುಂಬರುವ ಚುನಾವಣೆಯಲ್ಲಿ ನಮ್ಮ ನಾಯಕರಾದ ದರ್ಶನ ಪುಟ್ಟಣಯ್ಯ ಅವರನ್ನು ಶಾಸಕರಾಗಿ ಮಾಡುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತೇನೆ ಎಂದು ಹೇಳಿದರು.
ವರದಿ: ವಿಶ್ವನಾಥ್, ಪಾಂಡವಪುರ