ಮಾನ್ಯರೇ: ಕರ್ನಾಟಕ ಮತ್ತು ಆಂಧ್ರಪ್ರದೇಶದ ಗಡಿ ಭಾಗದ ಮಂದಿ ಸಾರಿಗೆ ಬಸ್‌ಗಳ ಸಮರ್ಪಕ ಸೇವೆಯಿಲ್ಲದೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗಲು ತುಂಬ ಸಮಸ್ಯೆ ಎದುರಿಸುತ್ತಿದ್ದಾರೆ. ಹೀಗಾಗಿ ತಾವು ಗಡಿಬಾಗಗಳಲ್ಲಿ ಬಸ್‌ಸೇವೆಗಳನ್ನು ಹೆಚ್ಚಿಸಬೇಕಿದೆ.
ಅದರಲ್ಲೂ ಪ್ರಮುಖವಾಗಿ ಬೆಂಗಳೂರಿನಿಂದ – ಯಲಹಂಕ – ಚಿಂತಾಮಣಿ – ಮದನಪಲ್ಲಿ – ಪೈಲರ್ – ತಿರುಪತಿ ಮಾರ್ಗವಾಗಿ ಕಡಪ – ಮದನಪಲ್ಲಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳ ನಿಯಮಿತ ಸೇವೆ ತೀರಾ ಕಡಿಮೆಯಿದೆ. ಹೀಗಾಗಿ ಈ ಮಾರ್ಗಗಳಲ್ಲಿ ಖಾಸಗಿ ಬಸ್‌ಗಳಿಂದ ಪ್ರಯಾಣಿಕರು ಹಲವಾರು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಬೆಂಗಳೂರಿನಿಂದ – ಚಿಕ್ಕಬಳ್ಳಾಪುರ ವಿಭಾಗದ ಚಿಂತಾಮಣಿ – ಮದನಪಲ್ಲಿ ಪೈಲರ್ ತಿರುಪತಿ ಮಾರ್ಗವಾಗಿ ಕಡಪ ಮದನಪಲ್ಲಿ ಕರ್ನಾಟಕ ಮತ್ತು ಆಂಧ್ರ ಪ್ರದೇಶದ ಗಡಿಗಳಾಗಿದ್ದು ಈ ಭಾಗದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಭಾರಿ ಬೇಡಿಕೆ ಇದೆ.
ಈ ಮಾರ್ಗಗಳಲ್ಲಿ ಖಾಸಗಿ ಬಸ್ಗಳು ಇವೆ. ಆದರೆ, ಬೆಂಗಳೂರಿನಿಂದ ಕಡಪ – ಮದನಪಲ್ಲಿಗೆ ಸಂಚರಿಸಬೇಕಿರುವ ಸಾರ್ವಜನಿಕರಿಗೆ ಹೊರೆಯಾಗುವಂತಹ ಪ್ರಯಾಣ ದರ ವಿಧಿಸುತ್ತಿದ್ದಾರೆ. ಇದರಿಂದ ಪ್ರಯಾಣಿಕರು ಹೆಚ್ಚು ಹಣ ಕೊಟ್ಟು ಪ್ರಯಾಣಿಸುವ ಸ್ಥಿತಿ ಬಂದಿದೆ.
ಹೀಗಾಗಿ ಚಿಂತಾಮಣಿ ಸಾರಿಗೆ ಘಟಕದಿಂದ ಅಂತಾರಾಜ್ಯ ಮಾರ್ಗಗಳಿಗೆ ಯಲಹಂಕ – ಚಿಂತಾಮಣಿ – ಮದನಪಲ್ಲಿ – ಪೈಲರ್ ತಿರುಪತಿ ಮಾರ್ಗವಾಗಿ, ಬೆಂಗಳೂರಿನಿಂದ ಕಡಪ – ಮದನಪಲ್ಲಿ – ತಿರುಪತಿಗೆ ಕೆಎಸ್ಆರ್ಟಿಸಿ ಬಸ್ ಸಂಖ್ಯೆಗಳನ್ನು ಹೆಚ್ಚಿಸಬೇಕು. ಇದರಿಂದ ಈ ಮಾರ್ಗವಾಗಿ ಪ್ರಯಾಣಿಸುವ ಸಾರ್ವಜನಿಕರಿಗೂ ಅನುಕೂಲವಾಗಲಿದ್ದು, ಖಾಸಗಿ ಬಸ್‌ಗಳಲ್ಲಿ ನಡೆಯುತ್ತಿರುವ ಸುಲಿಗೆಯನ್ನು ತಪ್ಪಿಸಬಹುದಾಗಿದೆ.
ವಾರದ ಕೊನೆ ಮತ್ತು ಹಬ್ಬ ಹರಿದಿನಗಳೂ ಸೇರಿದಂತೆ ಸಾಮಾನ್ಯ ದಿನಗಳಲ್ಲೂ ಬಸ್ ಸೇವೆ ಒದಗಿಸುವ ಮೂಲಕ ಅಂತಾರಾಜ್ಯ ಕೆಎಸ್‌ಆರ್‌ಟಿಸಿ ನಿಯಮಿತ ಸೇವಾ ಸಮಸ್ಯೆಗಳನ್ನು ಪರಿಹರಿಸಿ. ಕರ್ನಾಟಕ ಮತ್ತು ಆಂಧ್ರ ಗಡಿಗಳಿಂದ ಅಂತಾರಾಜ್ಯ ಪರಸ್ಪರ ಒಪ್ಪಂದದ ಕೆಎಸ್‌ಆರ್‌ಟಿಸಿ ಮತ್ತು ಎಪಿಎಸ್‌ಆರ್‌ಟಿಸಿ ಬಸ್‌ಗಳ ವ್ಯವಸ್ಥೆ ಮಾಡಿಕೊಡಿ.
l ಶ್ರೀಸಾಯಿ, ಪ್ರಯಾಣಿಕ ಮೊ: 91778 29677