BMTC ನೂತನ ಎಂಡಿಗೆ ಸ್ವಾಗತ ಕೋರಿದ ನಿಗಮದ ನಿಕಟಪೂರ್ವ ಎಂಡಿ
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆಯ ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ಐಎಎಸ್ ಅಧಿಕಾರಿ ಸದ್ಯ ಬಿಬಿಎಂಪಿಯಲ್ಲಿ ವಿಶೇಷ ಆರ್ಥಿಕ ಆಯುಕ್ತರಾಗಿರುವ ಆರ್.ರಾಮಚಂದ್ರನ್ ನಿನ್ನೆ ಅಧಿಕಾರಿ ವಹಿಸಿಕೊಂಡಿದ್ದಾರೆ.
ನಿಗಮದ ನಿಕಟಪೂರ್ವ ಎಂಡಿ, ಹಿರಿಯ ಐಎಎಸ್ ಅಧಿಕಾರಿ ಜಿ.ಸತ್ಯವತಿ ಅವರು ಗೂಗುಚ್ಛ ನೀಡುವ ಮೂಲಕ ನೂತನ ಎಂಡಿ ಅವರನ್ನು ಸ್ವಾಗತಿಸಿ ತಮ್ಮ ಅಧಿಕಾರಿರನ್ನು ಹಸ್ತಾಂತರಿಸಿದರು.
ಕಳೆದ ಒಂದೂವರೆ ವರ್ಷದಿಂದ ನಿಗಮದ ಎಂಡಿಯಾಗಿದ್ದ ಸತ್ಯವತಿ ಅವರಿಗೆ ಸದ್ಯ ಯಾವುದೇ ಹುದ್ದೆ ತೋರಿಸದೇ ವರ್ಗ ಮಾಡಲಾಗಿದೆ. ಆದರೆ, ನಿಗಮದಲ್ಲಿ ಕಳಹಂತತ ನೌಕರರ ಬಗ್ಗೆ ಅಪಾರ ಕಾಳಜಿ ಹೊಂದಿದ ಇವರ ವಿರುದ್ಧ ಕೆಲ ಸಂಘಟನೆಗಳ ನಾಯಕರು ತಮ್ಮ ಬೇಳೆ ಬೇಯಿಸಿಕೊಳ್ಳುವುದಕ್ಕೆ ವರ್ಗಾವಣೆ ಮಾಡಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಒಬ್ಬ ನೌಕರರ ಪರವಾಗಿ ನಿಲ್ಲುವ ಅಧಿಕಾರಿಯನ್ನು ನೌಕರರ ಪರವಾದ ಸಂಘಟನೆಗಳೇ ವರ್ಗಾವಣೆ ಮಾಡಿಸುವ ಕುತಂತ್ರ ಬುದ್ಧಿ ತೋರಿಸುತ್ತವೆ ಎಂದರೆ ಇವುಗಳು ನೌಕರರ ಸಮಸ್ಯೆಗೆ ಎಷ್ಟರ ಮಟ್ಟಿಗೆ ಸ್ಪಂದಿಸುತ್ತವೆ ಎಂಬುದನ್ನು ನೌಕರರೇ ತಿಳಿದುಕೊಳ್ಳಬೇಕಿದೆ.
ಇನ್ನು ಮತ್ತೊಂದು ಸಂಘಟನೆ ನೌಕರರಿಗೆ ಸರ್ಕಾರ ಏನು ಮಾಡದಿದ್ದರೂ ಸಾರಿಗೆ ಸಂಭ್ರಮ ಮಾಡಲು ಹೊರಟಿದೆ. 38 ತಿಂಗಳ ವೇತನ ಅರಿಯರ್ಸ್ ಬಗ್ಗೆ ಈವರೆಗೂ ತುಟಿ ಬಿಚ್ಚದ ಸರ್ಕಾರದ ಯಾವ ಸಾಧನೆ ನೋಡಿ ಈ ಸಂಭ್ರಮವನ್ನು ಆಚರಿಸಲು ಹೊರಟಿದೆಯೋ ಕಾಣೆ ಎಂದು ನೌಕರರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಈ ಎಲ್ಲವನ್ನು ನೋಡಿದರೆ ನೌಕರರ ಪರವಾಗಿ ನಾವು ನಿಲ್ಲುತ್ತೇವೆ ಎಂದು ಹೇಳಿಕೊಂಡು ನಾಯಿಕೊಡೆಯಂತೆ ಹುಟ್ಟಿಕೊಂಡಿರುವ ಈ ಸಂಘಟನೆಗಳಿಂದ ಕಳೆದ 4 ದಶಕಗಳಿಂದ ನೌಕರರಿಗೆ ಒಳ್ಳೆಯದಕ್ಕಿಂತ ಕೆಟ್ಟ ಅನುಭವವೇ ಹೆಚ್ಚಾಗಿ ಆಗಿದೆ ಎಂದು ಹಿರಿಯ ನೌಕರರೊಬ್ಬರು ಕಿಡಿಕಾರಿದ್ದಾರೆ.

ಇನ್ನು ನಿಷ್ಠಾವಂತ ಅಧಿಕಾರಿಗಳನ್ನು ಎತ್ತಂಗಡಿ ಮಾಡಿಸುವ ಕೆಲಸ, ಹಣ ಮಾಡುವುದನ್ನೇ ದಂದೆ ಮಾಡಿಕೊಂಡು ಕೆಲ ಸಂಘಟನೆಗಳು ನೌಕರರನ್ನು ಯಾಮಾರಿಸಿಕೊಂಡು ಬರುವುದರಲ್ಲೇ ಕಾಲ ಕಳೆಯುತ್ತಿದ್ದು, ಇದಕ್ಕೆ ಅಧಿಕಾರಿ ವರ್ಗವೂ ಕಾರಣವಾಗಿದೆ. ಏಕೆಂದರೆ ಈ ಎಲ್ಲ ಸಂಘಟನೆಗಳನ್ನು ಬದಿಗೊತ್ತಿ ನಮ್ಮ ನಿಗಮದಲ್ಲಿನ ಸಮಸ್ಯೆಗಳನ್ನು ನಾವೇ ನೋಡಿಕೊಳ್ಳುತ್ತೇವೆ ಎಂದು ಟೊಂಕಕಟ್ಟಿ ನಿಂತಿದ್ದರೆ ಈ ಸಮಸ್ಯೆಗಳು ಆಗುತ್ತಿರಲಿಲ್ಲ.
ಆದರೆ, ಅಧಿಕಾರಿಗಳು ಇದಕ್ಕೂ ನಮಗೂ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿರುವುದರಿಂದ ಸರ್ಕಾರಿ ಸ್ವಾಮ್ಯದ ನಿಗಮದವನ್ನು ಬೇರೆಯವರು ಆಳುವ ಪರಿಸ್ಥಿತಿ ಬಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Related


You Might Also Like
KKRTC: ಲಾರಿಗೆ ಡಿಕ್ಕಿ ಹೊಡೆಯುವುದ ತಪ್ಪಿಸಲು ಹೋಗಿ ರಸ್ತೆಬದಿ ಕಂದಕಕ್ಕೆ ನುಗ್ಗಿದ ಬಸ್- ತಪ್ಪಿದ ಭಾರಿ ಅನಾಹುತ
ವಿಭಾಗೀಯ ನಿಯಂತ್ರಣಾಧಿಕಾರಿಗಳ ಆದೇಶ ಪಾಲಿಸದ ಬೀದರ್ ಘಟಕ-1ರ ಡಿಎಂ ಬೀದರ್: ಎದುರಿಗೆ ಬಂದ ಲಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ...
BMTC: ಕರ್ತವ್ಯ ನಿರತ ಚಾಲಕರು ಮೊಬೈಲ್ ಬಳಸಿದರೆ ಗಂಭೀರ ಕೆಂಪು ಗುರುತಿನ ಪ್ರಕರಣ ದಾಖಲಿಸಿ- ತನಿಖಾ ಸಿಬ್ಬಂದಿಗೆ ಎಂಡಿ ಆದೇಶ
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಚಾಲನಾ ಸಿಬ್ಬಂದಿಗಳು ಮಾರ್ಗದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದಾಗ ಮೊಬೈಲ್ ಮತ್ತು ಡಿಜಿಟಲ್ ಗ್ಯಾಜೆಟ್ಸ್ (Bluetooth, Earphone ಇತ್ಯಾದಿಗಳನ್ನು ಬಳಸಿದರೆ ಅವರ...
ಕೆಐಎಡಿಬಿ: ಭೂ ಸ್ವಾಧೀನ ಕುರಿತು ಕೈಗಾರಿಕಾ ಮಂತ್ರಿ ಎಂ.ಬಿ.ಪಾಟೀಲ್ ರೈತರ ನಿಯೋಗದ ಜತೆ ಚರ್ಚೆ- ರಾಮಲಿಂಗಾರೆಡ್ಡಿ
ಆನೇಕಲ್: ತಾಲೂಕಿನ ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿಯ ರೈತರ ನಿಯೋಗದ ಜತೆ ಇಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಮಂತ್ರಿ ಎಂ.ಬಿ.ಪಾಟೀಲ ಅವರನ್ನು ಭೇಟಿಯಾಗಿ ಪ್ರಸ್ತುತ...
KKRTC ನೌಕರ ನಿಧನ ಪ್ರಕರಣ: ಸಹೋದರನಿಗೆ ಅನುಕಂಪದ ಉದ್ಯೋಗ ಪಡೆಯುವ ಹಕ್ಕಿದೆ- ಹೈಕೋರ್ಟ್ ತೀರ್ಪು
ಬೆಂಗಳೂರು: ಸರ್ಕಾರಿ ನೌಕರನ ಪತ್ನಿ, ಪತಿಗಿಂತ ಮೊದಲೇ ನಿಧನರಾಗಿ ಆಕೆಗೆ ಮಕ್ಕಳಿರಲಿಲ್ಲದಿದ್ದಾಗ ಹಾಗೂ ಆನಂತರದಲ್ಲಿ ಸರ್ಕಾರಿ ನೌಕರನೂ ನಿಧನರಾದಾಗ ಅಂತಹ ಪ್ರಕರಣಗಳಲ್ಲಿ ನೌಕರನ ಸಹೋದರರಿಗೆ ಅನುಕಂಪದ ಆಧಾರದಲ್ಲಿ...
ದೇವನಹಳ್ಳಿ ಸರ್ಕಾರಿ ಶಾಲೆ ಕಿಟಕಿ ಛಾವಣಿ ಕುಸಿದು ವಿದ್ಯಾರ್ಥಿಗಳಿಗೆ ಗಾಯ ಪ್ರಕರಣ: ಆಯೋಗದ ಅಧ್ಯಕ್ಷ ನಾಗಣ್ಣಗೌಡ ಭೇಟಿ
ಗಾಯಗೊಂಡ ಮೂವರು ವಿದ್ಯಾರ್ಥಿಗಳ ಚಿಕಿತ್ಸಾ ವೆಚ್ಚ ಸರ್ಕಾರ ಭರಿಸಲಿದೆ ಬೆಂಗಳೂರು ಗ್ರಾಮಾಂತರ: ದೇವನಹಳ್ಳಿಯ ಕೋಟೆ ಬೀದಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆ ಕಟ್ಟಡದ ಕಿಟಕಿ ಚಾವಣಿ...
NWKRTC: DA ಅರಿಯರ್ಸ್ ಬಗ್ಗೆ ಚರ್ಚಿಸಿ ಆದೇಶ ಮಾಡುವೆ-ಕೂಟದ ಪದಾಧಿಕಾರಿಗಳ ಜತೆ ವ್ಯವಸ್ಥಾಪಕ ನಿರ್ದೇಶಕರ ಚರ್ಚೆ
ಹುಬ್ಬಳ್ಳಿ: ಸಾರಿಗೆ ನೌಕರರ ಕೂಟದಿಂದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಲಯ ಮಟ್ಟದ ಕುಂದು ಕೊರತೆ ಬಗ್ಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಪ್ರಿಯಾಂಗಾ ಅವರ ಜತೆ...
ಗಣಪನ ವಿಸರ್ಜನೆಗೆ 41 ಕಲ್ಯಾಣಿಗಳು, 489 ಸಂಚಾರಿ ವಾಹನಗಳು ಸಜ್ಜು
ಬೆಂಗಳೂರು: ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಬಿಬಿಎಂಪಿ ವತಿಯಿಂದ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಗಣೇಶ ಮೂರ್ತಿಗಳ ವಿಸರ್ಜನೆಗಾಗಿ 41 ಕೆರೆ ಅಂಗಳದ ಶಾಶ್ವತ/ ತಾತ್ಕಾಲಿಕ ಕಲ್ಯಾಣಿಗಳು ಹಾಗೂ...
ರಸ್ತೆ ಅಗೆದೆಡೆ ಪುನರ್ ಸ್ಥಾಪನೆ ಮಾಡುವ ವೇಳಾಪಟ್ಟಿ ಕೊಡಿ: ಆಡಳಿತಗಾರ ತುಷಾರ್ ಗಿರಿನಾಥ್
ಬೆಂಗಳೂರು: ನಗರದಲ್ಲಿ ಜಲಮಂಡಳಿ ವತಿಯಿಂದ ರಸ್ತೆ ಅಗೆದ ಭಾಗಗಳ ಪುನರ್ ಸ್ಥಾಪನೆ ಮಾಡುವ ವೇಳಾಪಟ್ಟಿ ನೀಡಲು ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಆಡಳಿತಗಾರರಾದ ತುಷಾರ್...
ಆ.28ರಂದು ಕನಿಷ್ಠ ಪಿಂಚಣಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ EPS ಪಿಂಚಣಿದಾರರ ಬೃಹತ್ ಪ್ರತಿಭಟನೆ
ಬೆಂಗಳೂರು: ಕೇಂದ್ರ ಸರ್ಕಾರ ಮುಸ್ಸಂಜೆಯ ಇಳಿವಯಸ್ಸಿನಲ್ಲಿರುವ ಪ್ರಬುದ್ಧ ಇಪಿಎಸ್-95 ನಿವೃತ್ತರು ಕಳೆದೊಂದು ದಶಕದಿಂದ ದೇಶಾದ್ಯಂತ ನಡೆಸಿದ ಹೋರಾಟಕ್ಕೆ ಯಾವುದೇ ಪ್ರತಿಫಲ ಕೊಡದೆ ಉದ್ಧಟತನದಿಂದ ನಡೆದುಕೊಳ್ಳುತ್ತಿರುವುದಕ್ಕೆ ಸಮಸ್ತ ನಿವೃತ್ತರು...