ಮಂಗಳೂರು: ಮಂಗಳೂರಿನಲ್ಲಿ ಇಂದು ನಡೆದ ಪ್ರಧಾನಿ ಮೋದಿ ಕಾರ್ಯಕ್ರಮ ನಿರೀಕ್ಷಿಸಿದಷ್ಟು ಯಶಸ್ವಿಯಾಗಿಲ್ಲ. ಇದನ್ನು ಗಮನಿಸಿದರೆ ರಾಜ್ಯದ ಬಿಜೆಪಿ ನಾಯಕರಿಗೆ ಈ ಬಾರಿ ಗೆಲ್ಲುತ್ತೇವೆ ಎಂಬ ವಿಶ್ವಾಸ ಇಲ್ಲ ಎಂಬಂತೆ ಕಾಣುತ್ತಿದೆ.
ಇಂದಿನ ಈ ಕಾರ್ಯಕ್ರಮ ನೋಡಿದರೆ ಒಂದು ರೀತಿ ರಾಜ್ಯ ಬಿಜೆಪಿಗೆ ತೀವ್ರ ಹಿನ್ನಡೆಯಾದಂತೆ ಅನಿಸುತ್ತಿದೆ. ದೇಶದ ಹಾಲಿ ಪ್ರಧಾನಿಯ ಸಮಾವೇಶದಲ್ಲಿ ಅಂದುಕೊಂಡಷ್ಟು ಜನರನ್ನು ಸೇರಿಸಲು ಆಗಿಲ್ಲ ಎಂದರೆ ಇನ್ನು ಮತ್ತೆ ಮತ್ತೆ ರಾಜ್ಯಕ್ಕೆ ಬರುತ್ತೇನೆ ಎಂದು ಮೋದಿ ಹೇಳಿಯಿಂದ ಇನ್ನೆಷ್ಟು ಕುಸಿದುಬಿದ್ದಿದ್ದಾರೋ ಬಿಜೆಪಿಯ ರಾಜ್ಯ ಮುಖಂಡರು ಗೊತ್ತಿಲ್ಲ.
ಕನಿಷ್ಠ 1 ಲಕ್ಷ ಜನರು ಸೇರುವ ನಿರೀಕ್ಷೆಯಲ್ಲಿ ರಾಜ್ಯ ಬಿಜೆಪಿ ನಾಯಕರು ಇದ್ದರು. ಆದರೆ ಅದರ ಅರ್ಧದಷ್ಟು ಜನ ಸೇರಿಸಲು ಮಾತ್ರ ಸಫಲರಾದರು, ಹೀಗಾಗಿ ಆ ನಾಯಕರಲ್ಲಿದ್ದ ಭಾರಿ ನಿರೀಕ್ಷೆಯ ಕಾರ್ಯಕ್ರಮ ಯಶಸ್ವಿಯಾಗಲಿಲ್ಲ ಎಂದೇ ಹೇಳಬಹುದು. ಅಂದರೆ ಮೋದಿ ಸಮಾವೇಶದಲ್ಲಿ ಸುಮಾರು 50 ಸಾವಿರ ಜನರು ಭಾಗಿಯಾಗಿದ್ದರು ಎನ್ನಬಹುದು.
ಪ್ರಧಾನಿ ಮೋದಿಯವರು 3,800 ಕೋಟಿ ರೂ. ವೆಚ್ಚದ ವಿವಿಧ ಯೋಜನೆಗಳಿಗೆ ಚಾಲನೆ ನೀಡಿದರು. ಸಮಾವೇಶದ ಅಂಗವಾಗಿ ಮಂಗಳೂರಿಗೆ ಬಂದಿದ್ದ ಅನೇಕ ಪ್ರಭಾವಿ ನಾಯಕರು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದರು. ಸಂಜೆಯ ವೇಳೆಗೆ ಪ್ರಧಾನಿ ಮೋದಿ ದೆಹಲಿಗೆ ವಾಪಸಾದರು. ವಾಪಸಾಗುವ ಮುನ್ನ ಮಂಗಳೂರಿನ ಎನ್ಎಂಪಿಎ ಹೆಲಿಪ್ಯಾಡ್ ನಲ್ಲಿ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ನಡೆಸಿದರು.
ಕೋರ್ ಕಮಿಟಿ ಸಭೆಯಲ್ಲಿ ಕರ್ನಾಟಕ ಬಿಜೆಪಿ ನಾಯಕರ ಜತೆ ಆಪ್ತ ಮಾತುಕತೆ ನಡೆಸಿದ ಪ್ರಧಾನಿ ಮೋದಿ ಇನ್ನು ಮುಂದೆ ಪ್ರತಿ ತಿಂಗಳೂ ನಾನು ಕರ್ನಾಟಕಕ್ಕೆ ಬರುತ್ತೇನೆ ಎಂದು ರಾಜ್ಯದ ನಾಯಕರಿಗೆ ತಿಳಿಸಿದರು ಎನ್ನಲಾಗಿದೆ.