ಬೆಂಗಳೂರು: ಮಾಜಿ ಮುಖ್ಯಮಂತ್ರಿ ಆರ್.ಗುಂಡೂರಾವ್ ಅವರು ಸಿಎಂ ಆಗಿದ್ದಾಗ ನಾನು ಜನತಾ ಪಕ್ಷದಲ್ಲಿ ಇದ್ದೇ, ಲೋಕಸಭಾ ಸದಸ್ಯರಾಗಿದ್ದ ಸಂದರ್ಭದಲ್ಲಿ ಅವರನ್ನು ನೋಡಲು ಹೋಗಿದ್ದೇ ಎಂದು ಸಿಎಂ ಸಿದ್ದರಾಮಯ್ಯ ಹಳೆಯ ನೆನಪನ್ನು ಮೆಲುಕುಹಾಕಿದರು.
ಇಂದು ಸಂಜೆ ಗಾಂಧಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶಾಂತಲಾ ಸಿಲ್ಕ್ಸ್ ಮುಂಭಾಗದಲ್ಲಿ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ಆರ್.ಗುಂಡೂರಾವ್ ಅವರು ಪ್ರತಿಮೆ ಅನಾವರಣ ಮತ್ತು ವೃತ್ತ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಾಜಿ ಮುಖ್ಯಮಂತ್ರಿಗಳಾದ ಆರ್.ಗುಂಡೂರಾವ್ ರವರ ಪುತ್ಥಳಿ ಮತ್ತು ವೃತ್ತ (ಸರ್ಕಲ್) ಅನಾವರಣ ಮಾಡಲಾಗಿದೆ. ಅವರು 1983ರಲ್ಲಿ ಮೂರು ವರ್ಷ ಮುಖ್ಯಮಂತ್ರಿಯಾಗಿದ್ದರು, ದೇವರಾಜ ಅರಸು ಕಾಂಗ್ರೆಸ್ ತೊರೆದಾಗ, ಗುಂಡೂರಾವ್ ಅವರು ಕಾಂಗ್ರೆಸ್ ಪಕ್ಷದಲ್ಲೇ ಉಳಿದರು, ಇನ್ನು ಲೋಕಸಭಾ ಚುನಾವಣೆಯಲ್ಲಿ ಅರಸು ಅವರ ಪಾರ್ಟಿ ಒಂದು ಸೀಟು ಗೆಲ್ಲಲಿಲ್ಲ.
ಈ ವೇಳೆ ಎಫ್.ಎಂ.ಖಾನ್ ಅವರು ಇಂದಿರಾ ಗಾಂಧಿ ಅವರ ಫೋಟೋ ತೋರಿಸಿದರೆ ಸಾಕು ಗೆಲ್ಲುತ್ತೀರ ಎಂದು ಹೇಳಿದ್ದರು. ಅದರಂತೆ ಆರ್.ಗುಂಡೂರಾವ್ ಅವರ ನೇತೃತ್ವದಲ್ಲಿ 27 ಲೋಕಸಭಾ ಕ್ಷೇತ್ರದಲ್ಲಿ ವಿಜಯಶಾಲಿಯಾದರು ಎಂದು ಅವರ ಹೋರಾಟದವನ್ನು ಮೆಲುಕುಹಾಕಿದರು.
ಇನ್ನು ಮೈಸೂರಿನಲ್ಲಿ ರೈತ ಸಂಘ ಆಯೋಜಿಸಿದ್ದ ಚರ್ಚೆಯಲ್ಲಿ ನಂಜುಂಡಸ್ವಾಮಿ ಅವರ ಜತೆಯಲ್ಲಿ ನಾನು ಭಾಗವಹಿಸಿದ್ದೇ. ಅಂದೇ ನಾನು ಗುಂಡೂರಾವ್ ಅವರನ್ನ ನೇರ ಭೇಟಿ ಮಾಡಿದೆ. ಆರ್.ಗುಂಡೂರಾವ್ ದಕ್ಷ ಆಡಳಿತಗಾರ ಎಂಬುದು ಮುಖ್ಯ. ಮುಖ್ಯಮಂತ್ರಿಯಾಗಿ ಜನಪರ ಕೆಲಸ ಮಾಡಿದ್ದಾರೆ. ಅವರು ಮಾಡಿರುವ ಆನೇಕ ಕೆಲಸಗಳಿಗೆ ಸಾಕ್ಷ್ಮಿ ಗುಡ್ಡೆಗಳೇ ಇವೆ, ಶಿಕ್ಷಣಕ್ಕೆ ಒತ್ತು ನೀಡಿದರು ಎಂದರು.
ವರ್ಗಾವಣೆ ನೀತಿಯಲ್ಲಿ ಕಠಿಣ ನಿಲುವು ತಾಳಿದ್ದರು, ದಿವಂಗತ ಮಾಜಿ ಪ್ರಧಾನಿ ಇಂದಿರಾಗಾಂಧಿ, ಸಂಜಯ್ ಅವರ ಹತ್ತಿರ ನಿಕಟ ಸಂಪರ್ಕವಿದ್ದ ಅವರು ರಾಜಕೀಯದಲ್ಲಿ ಹಲವಾರು ಜನರನ್ನ ಬೆಳಸಿದರು, 44 ವರ್ಷ ವಯಸ್ಸಿನಲ್ಲಿಯೇ ಮುಖ್ಯಮಂತ್ರಿಯಾದರು. ಮೂರು ವರ್ಷ ಸಿಎಂ ಆಗಿ ಉತ್ತಮ ಕೆಲಸ ಮಾಡಿದ್ದಾರೆ ಅವರ ಪ್ರತಿಮೆ ಸ್ಥಾಪಿಸಿರುವುದು ಒಳ್ಳೆಯ ಕೆಲಸ ಎಂದು ಸಿದ್ದರಾಮಯ್ಯ ಹೇಳಿದರು.

ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ನಮ್ಮ ತಂದೆ ಆರ್.ಗುಂಡೂರಾವ್ ಅವರು ಬ್ರಾಹ್ಮಣ ಸಮುದಾಯ, ಶಿಕ್ಷಕ ಕುಟುಂಬದ ಮಗನಾದ ಸಿಎಂ ಆಗಿ ಅಧಿಕಾರ ಮಾಡಿದ್ದು ಈಗ ಇತಿಹಾಸ. ಹಂತ, ಹಂತವಾಗಿ ಬೆಳೆದು ಎರಡು ಬಾರಿ ಶಾಸಕರಾಗಿ ನಂತರ ವಿಪಕ್ಷದ ನಾಯಕರಾಗಿ, ಮುಖ್ಯಮಂತ್ರಿಯಾದರು.
ರಾಷ್ಟ್ರ ಮಟ್ಟದ ರಾಜಕಾರಣದಲ್ಲಿ ತಮ್ಮ ಛಾಪು ಮೂಡಿಸಿದರು. ಮೂರು ವರ್ಷದ ಮುಖ್ಯಮಂತ್ರಿಯಾಗಿ ಆಡಳಿತ ಅವಧಿಯಲ್ಲಿ ಕೆಂಪೇಗೌಡ ಬಸ್ ನಿಲ್ದಾಣವನ್ನು 40 ವರ್ಷಗಳ ಹಿಂದೆ ಸ್ಥಾಪಿಸಿದರು. ನಗರ ಸಿಲಿಕಾನ್ ಸಿಟಿಯಾಗಿ ಬೆಳಯಲು ಕಾರಣರಾದರು. ಇಂಜಿನಿಯರ್, ವೈದ್ಯಕೀಯ ಕಾಲೇಜು ಸ್ಥಾಪನೆ ಮತ್ತು ವಿಧಾನಸೌಧ ಮುಂಭಾಗ ಅಂಬೇಡ್ಕರ್ ಪ್ರತಿಮೆ ಅನಾವರಣ ಮಾಡಿದರು.
ಇನ್ನು ವಿಧಾನಸೌಧ ಎಲ್ಲ ಕಚೇರಿಯಲ್ಲಿ ಅಂಬೇಡ್ಕರ್ ಭಾವಚಿತ್ರ ಮತ್ತು ವರ್ಗಾವಣೆಯಲ್ಲಿ ಕಠಿಣ ನಿಲುವು ಮತ್ತು ವಿಶ್ವ ಕನ್ನಡ ಸಮ್ಮೇಳನ, ಮೈಸೂರು ಕಲಾಮಂದಿರ, ಜಂಗಲ್ ಲಾಡ್ಜ್ ಹೀಗೆ ಹಲವಾರು ಜನ ಪರ ಕಾರ್ಯ ಮಾಡಿದ ಧೀಮಂತ ನಾಯಕರು. ಅವರು ಏನೇ ಅಡತಡೆ ಬಂದರು ವರ್ಣರಂಜಿತ ರಾಜಕಾರಣಿಯಾಗಿ ಕೀರ್ತಿ ಪಡೆದರು ಎಂದು ತಂದೆಯ ಕೆಲಸ, ಸಾಧನೆಯ ಪುಟವನ್ನು ಒಮ್ಮೆ ತಿರುವಿಹಾಕಿದರು ದಿನೇಶ್ ಗುಂಡೂರಾವ್.
ಸಮಾರಾಂಭದಲ್ಲಿ ಸಚಿವರಾದ ಬೋಸರಾಜು, ಸುಧಾಕರ್, ಶಾಸಕರಾದ ಪಿ.ಎಂ.ಅಶೋಕ್, ರಿಜ್ವಾನ್ ಅರ್ಹದ್, ವಿಧಾನ ಪರಿಷತ್ ಸಚೇತಕ ಸಲೀಮ್ ಅಹಮದ್, ಗ್ಯಾರೆಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ, ಟಬೂ ದಿನೇಶ್ ಗುಂಡೂರಾವ್, ಅನನ್ಯಾ ರಾವ್ ಇದ್ದರು.
Related


You Might Also Like
ಬೆಳ್ಳಂಬೆಳಗ್ಗೆ ಅನಿರೀಕ್ಷಿತ ಭೇಟಿ ನೀಡಿ ಹಾಜರಾತಿ ಪರಿಶೀಲಿಸಿದ ಆಯುಕ್ತರು: ಪೌರ ಕಾರ್ಮಿಕರ ಮೇಲ್ವಿಚಾರಕರಿಬ್ಬರ ಮೇಲೆ ಕ್ರಮ
ಬೆಂಗಳೂರು: ಸರ್ವಜ್ಞನಗರ ಕ್ಷೇತ್ರದ ಬಾಣಸವಾಡಿಯ ಬಿಎಸ್ಎನ್ಎಲ್ ಮಸ್ಟರಿಂಗ್ ಪಾಯಿಂಟ್ (ಭುವನಗಿರಿ ಪಾರ್ಕ್) ನಲ್ಲಿ ಇಂದು ಮುಂಜಾನೆ ಬೆಂಗಳೂರು ಉತ್ತರ ನಗರ ಪಾಲಿಕೆ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್...
ನಾಡಹಬ್ಬ ದಸರಾಗೆ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ ಅಧಿಕೃತವಾಗಿ ಆಹ್ವಾನಿಸಿದ ಜಿಲ್ಲಾ ಉಸ್ತುವಾರಿ ಸಚಿವ HCM
ಮೈಸೂರು: ನಾಡಹಬ್ಬ ದಸರಾ ಮಹೋತ್ಸವಕ್ಕೆ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ ಮಹದೇವಪ್ಪ ಅಧಿಕೃತವಾಗಿ ಆಹ್ವಾನಿಸಿದರು. ಇದೇ ಸೆ.22 ರಂದು ಪ್ರಾರಂಭವಾಗಲಿರುವ...
ಮೊಸಳೆಹೊಸಳ್ಳಿ ದುರಂತ: ಮೃತರ ಮನೆಗಳಿಗೆ ವ್ಹೀಲ್ ಚೇರ್ನಲ್ಲೇ ತೆರಳಿ ಸಾಂತ್ವನ ಹೇಳಿದ ಮಾಜಿ ಪ್ರಧಾನಿ ಎಚ್ಡಿಡಿ
ಹಾಸನ: ಜಿಲ್ಲೆಯ ಮೊಸಳೆಹೊಸಳ್ಳಿಯಲ್ಲಿ ಮೊನ್ನೆ ನಡೆದ ಅಪಘಾತ ಪ್ರಕರಣ ನಿಜಕ್ಕೂ ಘನಘೋರ. ಅಪಘಾತದಲ್ಲಿ ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಚಂದನ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಈ ಮೂಲಕ...
ಸಾಲಬಾಧೆ-ಗಂಡ, ಇಬ್ಬರು ಮಕ್ಕಳು ಸೇರಿ ನಾಲ್ವರು ಆತ್ಮಹತ್ಯೆಗೆ ಯತ್ನ ಮೂವರು ಮೃತ: ಸಾವು ಬದುಕಿನ ನಡುವೆ ತಾಯಿ ಸೆಣಸಾಟ
ಹೊಸಕೋಟೆ: ಸಾಲಬಾಧೆ ತಾಳಲಾರದೇ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿದ್ದು, ಈ ಪೈಕಿ ಮೂವರು ಮೃತಪಟ್ಟಿರುವ ಘಟನೆ ತಾಲೂಕಿನ ಗೊಣಕನಹಳ್ಳಿಯಲ್ಲಿ ಗ್ರಾಮದಲ್ಲಿ ನಡೆದಿದೆ. ಗಂಡ, ಇಬ್ಬರು ಮಕ್ಕಳನ್ನು...
KSRTC ಹಾಸನ: ಸತ್ಯ ಮರೆಮಾಚಿದ ತನಿಖಾ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಮುಂದಾದ ಡಿಸಿ
ಹಾಸನ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಹಾಸನ ವಿಭಾಗದ ತನಿಖಾ ಸಿಬ್ಬಂದಿ ಸತ್ಯ ಮರೆಮಾಚಲು ಬಾಡಿ ಕ್ಯಾಮರಾ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಕೆಲವೊಂದು ಸಮಯದಲ್ಲಿ ಹ್ಯಾಂಗ್...
KSRTC ಹಾಸನ: ತನಿಖಾಧಿಕಾರಿಗಳ ಬಾಡಿ ಕ್ಯಾಮೆರಾದ ವಿಡಿಯೋ ರೆಕಾರ್ಡಿಂಗ್ ಕೊಡಲು ವಿಫಲ- ಆರೋಪ ಪತ್ರ ಜಾರಿ ಮಾಡಿದ ಡಿಸಿ
ಹಾಸನ: ಸಾರಿಗೆ ಸಂಸ್ಥೆಯ ಮಾರ್ಗ ತನಿಖಾಧಿಕಾರಿಗಳು ಬಾಡಿ ಕ್ಯಾಮೆರಾವನ್ನು ಹಾಕಿಕೊಂಡು ತನಿಖೆ ಮಾಡದ ಪರಿಣಾಮ ಮಾಹಿತಿ ಆಯೋಗದಲ್ಲಿ ಪ್ರಕರಣ ದಾಖಲು ಮಾಡಿದ ನೌಕರನಿಗೆ ವಿಡಿಯೋ ರೆಕಾರ್ಡಿಂಗ್ ಕೊಡಲು...
ಮೆಜೆಸ್ಟಿಕ್ BMTC: ಟೀ ಚೆನ್ನಾಗಿರುವುದಿಲ್ಲ ಬೇರೆ ಅಂಗಡಿಗೆ ಹೋಗೋಣ ಎಂದಿದ್ದಕ್ಕೆ ಚಾಲಕನ ಮೇಲೆ ಹಲ್ಲೆ- ಆರೋಪಿ ಬಂಧನ
ಬೆಂಗಳೂರು: ಈ ಅಂಗಡಿಯಲ್ಲಿ ಬೇಡ ಇಲ್ಲಿ ಟೀ ಚೆನ್ನಾಗಿರುವುದಿಲ್ಲ ಎಂದು ಹೇಳಿ ಅಲ್ಲಿಯೇ ಪಕ್ಕದಲ್ಲಿದ್ದ ಟೀ ಅಂಗಡಿಗೆ ಹೋಗೋಣ ಎಂದು ಸಹೋದ್ಯೋಗಿಗೆ ಹೇಳಿದ್ದಕ್ಕೆ ಕುಪಿತನಾದ ಟೀ ಮಾರುವ...
KRSTC: ಅನ್ಯಮಾರ್ಗದಲ್ಲಿ ಹೋಗಲು ಮಹಿಳಾ ಕಂಡಕ್ಟರನ್ನು ರಾತ್ರಿ ಅರ್ಧದಲ್ಲೇ ಇಳಿಸಿಹೋದ ಸಹೋದ್ಯೋಗಿಗಳು…!
ಸಾರಿಗೆ ಚಾಲನಾ ಸಿಬ್ಬಂದಿಗಳಲ್ಲಿ ಒಬ್ಬರಿಗೊಬ್ಬರು ಆಗುವುದಿಲ್ಲ ಎಂಬುದಕ್ಕೆ ಇದು ಮತ್ತೊಂದು ನಿದರ್ಶನ ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಬಹುತೇಕ ಎಲ್ಲ ಚಾಲನಾ ಸಿಬ್ಬಂದಿಗಳಲ್ಲಿ...
ಸೆ.22ರಿಂದ ಅ.7ರವರೆಗೆ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ: ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು: ರಾಜ್ಯದಲ್ಲಿ ಇದೇ ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 7ರವರೆಗೆ ಹೊಸದಾಗಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯನ್ನು ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿದೆ. ಈ ಸಮೀಕ್ಷೆಯಲ್ಲಿ ಎಲ್ಲರೂ...