NEWSನಮ್ಮಜಿಲ್ಲೆಮೈಸೂರು

ಅತ್ತಹಳ್ಳಿಯ ಎ.ಸಿ.ಲಿಂಗೇಗೌಡರ ಪುತ್ರ ರಾಘವ ಲಿಂಗೇಗೌಡ ನಿಧನ

ವಿಜಯಪಥ ಸಮಗ್ರ ಸುದ್ದಿ

ಮೈಸೂರು: ನಗರದ ತಿ.ನರಸೀಪುರ ರಸ್ತೆಯ ಜಿ.ಎಲ್.ಗಾರ್ಡನ್ ನಿವಾಸಿ ಲಂಡನ್‌ನಲ್ಲಿ ಕೆಲಸದಲ್ಲಿದ್ದ ರಾಘವ ಲಿಂಗೇಗೌಡ (49) ಬುಧವಾರ ಸಂಜೆ ನಿಧನರಾದರು.

ಮೂಲತಃ ತಿ.ನರಸೀಪುರ ತಾಲೂಕು ಬನ್ನೂರು ಹೋಬಳಿಯ ಅತ್ತಹಳ್ಳಿ ಗ್ರಾಮದವರಾದ ಹಾಲಿ ಜಿ.ಎಲ್.ಗಾರ್ಡನ್ನಲ್ಲಿರುವ ಎ.ಸಿ.ಲಿಂಗೇಗೌಡ ಅವರ ಪುತ್ರರಾದ ಮೃತರು ಹಲವು ವರ್ಷಗಳ ಕಾಲ ಲಂಡನ್‌ನಲ್ಲಿ ಕೆಲಸದಲ್ಲಿದ್ದರು. ತಂದೆ ತಾಯಿ ನೋಡಿಕೊಳ್ಳುವುದಕ್ಕಾಗಿ ಆ ಕೆಲಸವನ್ನು ಬಿಟ್ಟುಬಂದಿದ್ದರು.

ರಾಘವ ಲಿಂಗೇಗೌಡ ಅವರ ಸಹೋದರ ನರೇಂದ್ರ ಮತ್ತು ಸಹೋದರಿ ಸುನಿತಾ ಅಮೆರಿಕದಲ್ಲಿ ಇರುವುದರಿಂದ ಅವರು ಇಂದು ತಡರಾತ್ರಿ ಬರಲಿದ್ದಾರೆ.

ಈ ಹಿನ್ನೆಲೆಯಲ್ಲಿ ಪಾರ್ಥಿವ ಶರೀರವನ್ನು ಜುಲೈ 18 ರಂದು ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ12 ಗಂಟೆಯವರಗೆ  ಚಿಕ್ಕಹಳ್ಳಿ ಹತ್ತಿರ ಇರುವ ದೊಡ್ಡ ಆಲದ ಮರದ ಎದುರಿನ ನರಸೀಪುರ ರಸ್ತೆಯ ಜಿ.ಎಲ್.ಗಾರ್ಡನ್ ನಿವಾಸದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗುವುದು.

ನಂತರ ಚಾಮುಂಡಿ ಬೆಟ್ಟದ ತಪ್ಪಲಿನ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ. ಮೃತರು ಪತ್ನಿ, ಪುತ್ರ, ಪುತ್ರಿ, ತಂದೆ, ತಾಯಿ, ಸಹೋದರ, ಸಹೋದರಿಯರು ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಬುಧವಾರ ನಿಧನರಾದ ರಾಘವ ಲಿಂಗೇಗೌಡ ಅವರ ಪಾರ್ಥಿವ ಶರೀರವನ್ನು ಜೆಎಸ್‌ಎಸ್‌ ಆಸ್ಪತ್ರೆಯಲ್ಲಿ ಇಡಲಾಗಿದ್ದು, ನಾಳೆ ಬೆಳಗ್ಗೆ ಜಿ.ಎಲ್.ಗಾರ್ಡನ್ ನಿವಾಸಕ್ಕೆ ತೆಗೆದುಕೊಂಡು ಬಂದು ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು.

Advertisement
ವಿಜಯಪಥ - vijayapatha.in
Megha
the authorMegha

Leave a Reply

error: Content is protected !!