Please assign a menu to the primary menu location under menu

NEWSನಮ್ಮಜಿಲ್ಲೆನಮ್ಮರಾಜ್ಯ

ಆರ್‌.ಸಿ. ಗುಪ್ತ, ಸುನಿಲ್ ಕುಮಾರ್ ಪ್ರಕರಣ: ನಿವೃತ್ತರಿಗೆ ಅನ್ವಯ: BMTC & KSRTC ಸಂಘಟನೆ ಕಾರ್ಯಧ್ಯಕ್ಷ ನಂಜುಂಡೇಗೌಡ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಸರ್ವೋಚ್ಚ ನ್ಯಾಯಾಲಯದ ಮಹತ್ವದ ತೀರ್ಪುಗಳಾದ ಆರ್‌.ಸಿ. ಗುಪ್ತ ಹಾಗೂ ಸುನಿಲ್ ಕುಮಾರ್ ಪ್ರಕರಣದ ಆದೇಶ ಸೆ.1-2014ರ ಪೂರ್ವ ಹಾಗೂ ನಂತರ ನಿವೃತ್ತರಾದವರಿಗೆ ಅನ್ವಯವಾಗಲಿದೆ ಎಂದು ಬಿಎಂಟಿಸಿ ಹಾಗೂ ಕೆಎಸ್ಆರ್‌ಟಿಸಿ ನಿವೃತ್ತ ನೌಕರರ ಸಂಘಟನೆ ಕಾರ್ಯಧ್ಯಕ್ಷ ನಂಜುಂಡೇಗೌಡ ತಿಳಿಸಿದ್ದಾರೆ.

ನಡಿಗೆದಾರರ ಸ್ವರ್ಗ ಎಂದು ಖ್ಯಾತಿಯಾಗಿರುವ ಲಾಲ್ ಬಾಗ್ ಉದ್ಯಾನವನದ ಆವರಣದಲ್ಲಿ ಭಾನುವಾರ ಜರುಗಿದ ಇಪಿಎಸ್ ಪಿಂಚಣಿಗಾರರ 74ನೇ ಮಾಸಿಕ ಸಭೆಯಲ್ಲಿ ಮಾತನಾಡಿದ ಅವರು, ಸೆ.1-2014ರ ಪೂರ್ವ ನಿವೃತ್ತರಾದವರಿಗೆ ಹೆಚ್ಚುವರಿ ಪಿಂಚಣಿ ನೀಡಲು ಕಾನೂನಿನ ತೊಡಕಿದೆ. ನಂತರ ನಿವೃತ್ತರಾದವರಿಗೆ ಹೆಚ್ಚುವರಿ ಪಿಂಚಣಿಯನ್ನು ಇದೆ ಮೇ 31, ನಂತರ ಕಾನೂನಾತ್ಮಕವಾಗಿ ನಿಗದಿಪಡಿಸಿ ನೀಡಲಾಗುತ್ತದೆ ಎಂದು ವಿವರಿಸಿದರು.

ಆರ್‌.ಸಿ. ಗುಪ್ತ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನಾತ್ಮಕ ಹೋರಾಟ ಪ್ರಗತಿಯಲ್ಲಿದ್ದು, ಮಾತ್ರವಲ್ಲದೆ ನ್ಯಾಯಾಲಯ ನಿಂದನಾ ಪ್ರಕರಣ ಮಾ.5 ರಂದು ವಿಚಾರಣೆಗೆ ಬಂದಿದೆ. ಇಂದಲ್ಲ ನಾಳೆ ಎಲ್ಲ ಇಪಿಎಸ್ ನಿವೃತ್ತಿದಾರರಿಗೂ ಜಯ ಶತಾಸಿದ್ದ ಎಂದು ಹೇಳಿದರು.

ಇನ್ನು ಕನಿಷ್ಠ ಹೆಚ್ಚುವರಿ ಪಿಂಚಣಿಗೆ ಸಂಬಂಧಿಸಿದಂತೆ ಕಮಾಂಡರ್ ಅಶೋಕ್ ರಾವುತ್ ಹಾಗೂ ಇತರೆ ಮುಖಂಡರು ಕೇಂದ್ರ ಸರ್ಕಾರದ ಜತೆ ನಡೆಸುತ್ತಿರುವ ಸಂದಾನ ಸಭೆ ಯಶಸ್ವಿಯಾಗುವ ಎಲ್ಲ ಸಂಭವವಿದ್ದು, ನಾವೆಲ್ಲರೂ ತಾಳ್ಮೆಯಿಂದ ಇರೋಣ ಎಂದರು.

Little more time: “RC Guptha judgement, con’t be defeated in any court of law, it’s only matter of time. Legal luminaries opined that Justice is not availed in the present circumstances, ultimately, the matter will be taken up before the FIVE BENCH COURT for redressal. Therefore, all EPS pensioners claiming minimum higher pension need not be panic, please be await calmly for little more time” ಎಂದು ನಂಜುಡೇಗೌಡ ಸಲಹೆ ನೀಡಿದ್ದಾರೆ.

ಉಪಾಧ್ಯಕ್ಷ ಆರ್. ಸುಬ್ಬಣ್ಣ ಮಾತನಾಡಿ, ಹೆಚ್ಚುವರಿ ಪಿಂಚಣಿ ಕೋರಿ ಆನ್ ಲೈನ್ ಅರ್ಜಿ ಸಲ್ಲಿಸಿರುವ ಇಪಿಎಸ್ ಪಿಂಚಣಿದಾರರ ಸಂಖ್ಯೆ ಕೇವಲ 17 ವರೆ ಲಕ್ಷ ಇದ್ದು, ಸೆಪ್ಟೆಂಬರ್ 1,2014 ಪೂರ್ವ, ನಂತರ ಹಾಗೂ ಹಾಲಿ ಸೇವೆಯಲ್ಲಿರುವವರನ್ನು ಪರಿಗಣಿಸಿದಲ್ಲಿ ಶೇಕಡ 70% ನಿವೃತ್ತರು ಕನಿಷ್ಠ ಹೆಚ್ಚುವರಿ ಪಿಂಚಣಿ ವ್ಯಾಪ್ತಿಯಲ್ಲಿ ಬರುತ್ತಾರೆ. ಈ ನಿವೃತ್ತ ರಿಗೆ ನ್ಯಾಯ ದೊರಕಿಸಲು ರಾಷ್ಟ್ರೀಯ ಸಂಘರ್ಷ ಸಮಿತಿ ನಿರಂತರವಾಗಿ ಹೋರಾಟ ಮಾಡುತ್ತಿದ್ದು, ಈ ನಿಟ್ಟಿನಲ್ಲಿ ಕಮಾಂಡರ್ ಶ್ರೀ ಅಶೋಕ್ ರಾಹುತ್ ರವರ ಕೈ ಬಲಪಡಿಸಬೇಕು ಎಂದು ಮನವಿ ಮಾಡಿದರು.

ರಾಷ್ಟ್ರೀಯ ಸಂಘರ್ಷ ಸಮಿತಿ ಮಂಡ್ಯ ಉಪಾಧ್ಯಕ್ಷ ಹುಚ್ಚಪ್ಪನವರು ಮಾತನಾಡಿ, ಪಾರ್ಲಿಮೆಂಟ್ ಅಧಿವೇಶನದಲ್ಲಿ ಕರ್ನಾಟಕದ ಸಂಸತ್ ಸದಸ್ಯರು ಇಪಿಎಸ್ ಪಿಂಚಣಿದಾರರ ಬಗ್ಗೆ ಚಕಾರ ಎತ್ತದೇ ಇರುವ ಬಗ್ಗೆ ತಮ್ಮ ಆಕ್ರೋಶ (akrosh) ವ್ಯಕ್ತಪಡಿಸಿ, ಎಲ್ಲ ಇಪಿಎಸ್ ಪಿಂಚಣಿದಾರರು ಒಗ್ಗಟ್ಟಾಗಿ ಹೋರಾಟ ಮಾಡಿದಲ್ಲಿ ನಮ್ಮ ಜಯ ಶತ ಸಿದ್ದ ಎಂದರು.

ಒಟ್ಟಾರೆ ಇಂದಿನ ಮಾಸಿಕ ಸಭೆಯಲ್ಲಿ ಈ ಮೇಲ್ಕಂಡ ಎಲ್ಲ ಅಂಶಗಳ ಬಗ್ಗೆ ಚರ್ಚಿಸಿ, ನಿರ್ಣಯಿಸಲಾಯಿತು. ಇಂದಿನ ಸಭೆಯ ನಿರ್ವಹಣೆಯನ್ನು ಪದಾಧಿಕಾರಿಗಳಾದ ನಾಗರಾಜು, ಮನೋಹರ್ ಹಾಗು ರುಕ್ಮೇಶ್ ರವರು ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟರು ಡೋಲಪ್ಪನವರ ವಂದನಾರ್ಪಣೆಯೊಂದಿಗೆ ಸಭೆ ಪೂರ್ಣಗೊಂಡಿತು.

ಸಭೆಗೂ ಮುನ್ನ: ನಡಿಗೆದಾರರ ಸ್ವರ್ಗ ಎಂದು ಖ್ಯಾತಿಯಾಗಿರುವ ಲಾಲ್ ಬಾಗ್ ಉದ್ಯಾನವನಕ್ಕೆ ಅಧಿಕ ಸಂಖ್ಯೆಯಲ್ಲಿ ಆಗಮಿಸಿದ್ದ ಇಪಿಎಸ್ ನಿವೃತ್ತರು, ಸುಂದರ ಹೂತೋಟದಲ್ಲಿ ವಾಯು ವಿಹಾರ ನಡೆಸಿ, ಸ್ಥಳಕ್ಕಾಗಮಿಸಿದ ನಿವೃತ್ತರು ತಮ್ಮ ಹಳೆಯ ಸಹೋದ್ಯೋಗಿಗಳನ್ನು ಕಂಡೊಡನೆ ತಮ್ಮ ಘತಕಾಲದ ವೈಭವವನ್ನು ಮೇಲುಕು ಹಾಕುತ್ತಾ, ಉಭಯ ಕುಶಲೋಪರಿ ಹಂಚಿಕೊಳ್ಳುತ್ತಿದ್ದದು, ಸಾಮಾನ್ಯ ದೃಶ್ಯಾವಳಿಯಾಗಿತ್ತು.

ಸಂಘದ ಪ್ರಧಾನ ಕಾರ್ಯದರ್ಶಿ ಡೋಲಪ್ಪನವರು ಸಭೆ ಪ್ರಾರಂಭಕ್ಕೂ ಮುನ್ನ ಅಗಲಿದ ನಮ್ಮ ಸಹೋದ್ಯೋಗಿಗಳನ್ನು ನೆನೆಸಿ, ಅವರ ಆತ್ಮಕ್ಕೆ ಶಾಂತಿ ಕೋರಿದ್ದು, ಒಂದು ನಿಮಿಷ ಮೌನ ಆಚರಿಸಲಾಯಿತು. ಮಾಸಿಕ ಸಭೆಗೆ ಆಗಮಿಸಿದ್ದ, ಎಲ್ಲ ಇಪಿಎಸ್ ನಿವೃತ್ತರನ್ನು ಸ್ವಾಗತಿಸಿ, ಪ್ರಾಸ್ತಾವಿಕ ಭಾಷಣ ಮಾಡಿದರು.

Leave a Reply

error: Content is protected !!
LATEST
ಪತ್ನಿ ಅಕ್ರಮ ಸಂಬಂಧದಿಂದ ಪತಿ ಆತ್ಮಹತ್ಯೆ ಪ್ರಕರಣ: ಹೆಂಡತಿಗೆ ಶಿಕ್ಷಿಸಲಾಗದು - ಹೈ ಕೋರ್ಟ್ ತೀರ್ಪು ತುಮಕೂರು: ಗೋವಾಗೆ ಹೋಗುತ್ತಿದ್ದ ಬಸ್ ಪಲ್ಟಿ: ಮೂವರು ಮಹಿಳೆಯರು ಮೃತ ಮೈಸೂರು-ಮಂಡ್ಯ: ಮಳೆ ಹೆಚ್ಚಾಗಿರುವ ಹಿನ್ನೆಲೆ ಶಾಲೆಗಳಿಗೆ ರಜೆ- ಡಿಸಿಗಳ ಆದೇಶ ದೆಹಲಿ: ರೈತರು ಉಪವಾಸ ಸತ್ಯಾಗ್ರಹ ಬೆಂಬಲಿಸಿ ಡಿ.6ರಿಂದ ಬೆಂಗಳೂರಿನಲ್ಲೂ ಸತ್ಯಾಗ್ರಹ: ಕುರುಬೂರು ಶಾಂತಕುಮಾರ್ ರಾಜ್ಯದಲ್ಲಿ ವರುಣನ ಅಬ್ಬರ: ಹಲವು ಜಿಲ್ಲೆಗಳ ಶಾಲಾ- ಕಾಲೇಜುಗಳಿಗೆ ನಾಳೆ ರಜೆ ಕನ್ನಡ ಕಿರುತೆರೆಯ ಬ್ರಹ್ಮಗಂಟು ಸೀರಿಯಲ್ ಖ್ಯಾತಿಯ ಶೋಭಿತಾ ಶಿವಣ್ಣ ಆತ್ಮಹತ್ಯೆ KSRTC: 1308 ನೌಕರರ ವರ್ಗಾವಣೆ- ಆಕ್ಷೇಪಣೆ ಸಲ್ಲಿಸಲು ಡಿ.4ರವರೆಗೂ ಅವಕಾಶ ಸಾರಿಗೆ ನೌಕರರ ಬೇಡಿಕೆ ಅರ್ಥ ಮಾಡಿಕೊಳ್ಳಿ: ಜಂಟಿ ಕ್ರಿಯಾ ಸಮಿತಿಗೆ ನೌಕರನ ಒತ್ತಾಯ ಬಿಬಿಎಂಪಿ: 13 ಕೆರೆಗಳ ಒತ್ತುವರಿ ತೆರವು- ₹242.5 ಕೋಟಿ ಮೌಲ್ಯದ 7 ಎಕರೆ ಪ್ರದೇಶ ವಶ -ಪ್ರೀತಿ ಗೆಹ್ಲೋಟ್ ಫೆಂಗಲ್ ಚಂಡಮಾರುತದ ಪರಿಣಾಮ ಎಲ್ಲಾ ಅಧಿಕಾರಿಗಳು ಮುಂಜಾಗ್ರತಾ ಕ್ರಮ ವಹಿಸಲು ಸೂಚನೆ: ತುಷಾರ್ ಗಿರಿನಾಥ್