ಬೆಂಗಳೂರು: ಕಳೆದ 2021ರ ಏಪ್ರಿಲ್ 7 ರಿಂದ 21ರವರೆಗೆ ಸಂಸ್ಥೆಯ ವಿರುದ್ಧ ನೌಕರರು ಕೈಗೊಂಡ ಮುಷ್ಕರದಲ್ಲಿ ಭಾಗವಹಿಸಿದ್ದ ಹಿನ್ನೆಲೆಯಲ್ಲಿ ಸೇವೆಯಿಂದ ವಜಾಗೊಂಡು ನಂತರ ಲೋಕಾದಲತ್ ಮೂಲಕ ಮರು ನೇಮಕ ಗೊಂಡಿರುವ ತರಬೇತಿ/ ಪರೀಕ್ಷಾರ್ಥಿ/ ಕಾಯಂ ನೌಕರರ ಮರು ನೇಮಕಾತಿ ಆದೇಶಗಳಲ್ಲಿ ಕೆಲವು ಮಾರ್ಪಾಡು ಮಾಡಿ ಬಿಎಂಟಿಸಿ ಆದೇಶ ಹೊರಡಿಸಿದೆ.
ಸಂಸ್ಥೆಯ ಜಂಟಿ ಮೊಮೋದಲ್ಲಿದ್ದದ್ದು ಏನು? :
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಹಲವಾರು ನೌಕರರು 2021ರ ಏಪ್ರಿಲ್ 7 ರಿಂದ 21 ರವರೆಗೆ ಸಂಸ್ಥೆಯ ವಿರುದ್ಧ ಕಾನೂನು ಬಾಹಿರ ಮುಷ್ಕರವನ್ನು ಕೈಗೊಂಡ ಹಿನ್ನೆಲೆಯಲ್ಲಿ ಸಾರ್ವಜನಿಕ ಪ್ರಯಾಣಿಕರಿಗೆ ಅನಾನುಕೂಲ ಉಂಟಾಗಿದ್ದ ಕಾರಣ ತಪ್ಪಿತಸ್ಥ ತರಬೇತಿ ನೌಕರರನ್ನು ಆಯ್ಕೆಪಟ್ಟಿಯಿಂದ ತೆಗೆದುಹಾಕಲಾಗಿತ್ತು.
ಪರೀಕ್ಷಾರ್ಥಿ ನೌಕರರನ್ನು ಸೇವೆಯಿಂದ ಬಿಡುಗಡೆಗೊಳಿಸಲಾಗಿತ್ತು ಹಾಗೂ ಕಾಯಂ ನೌಕರರನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು. ತದನಂತರ ಹಲವು ತರಬೇತಿ/ ಪರೀಕ್ಷಾರ್ಥಿ/ ಕಾಯಂ ನೌಕರರು ನ್ಯಾಯಾಲಯದಲ್ಲಿ ಪ್ರಕರಣಗಳನ್ನು ದಾಖಲಸಿದ್ದು, ಲೋಕಾದಲತ್‌ನಲ್ಲಿ ಸಲ್ಲಿಸಿರುವ ಈ ಕೆಳಕಂಡ ಜಂಟಿ ಮೆಮೋ ಷರತ್ತುಗಳನ್ವಯ 277 ತರಬೇತಿ ನೌಕರರು, 178 ಪರೀಕ್ಷಾರ್ಥಿ ನೌಕರರು ಹಾಗೂ 175 ಕಾಯಂ ನೌಕರರು, ಮರು ನೇಮಕಗೊಂಡು ಪ್ರಸ್ತುತ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
I. ತರಬೇತಿ ಹಾಗೂ ಪರೀಕಾರ್ಥಿ ನೌಕರರು:
1) ಹಿಂದಿನ ಸೇವೆಯನ್ನು ಯಾವುದೇ ಉದ್ದೇಶಕ್ಕಾಗಿ ಪರಿಗಣಿಸದೇ ಹೊಸದಾಗಿ(AFRESH) ತರಬೇತಿ/ ಪರೀಕ್ಷಾರ್ಥಿ ಸೇವೆ ಮೇಲೆ ಮನರ್ ನೇಮಕ ಮಾಡಿಕೊಳ್ಳುವುದು. 2) ಮುಂದೆ ಯಾವುದೇ ಮುಷ್ಕರದಲ್ಲಿ ಭಾಗವಹಿಸುವುದಿಲ್ಲ. ಇತರರನ್ನು ಪ್ರಚೋದಿಸುವುದಿಲ್ಲ ಹಾಗೂ ಮುಷ್ಕರದ ಅವಧಿಯಲ್ಲ ಗೈರು ಹಾರಿಯಾಗುವುದಿಲ್ಲವೆಂದು ನೌಕರರು ಮುಚ್ಚಳಿಕೆ ಸಲ್ಲಿಸುವುದು.
ಕಾಯಂ ನೌಕರರು: 3) ವಜಾಗೊಂಡ ದಿನಾಂಕದಿಂದ ಮರು ನೇಮಕಗೊಳ್ಳುವ ದಿನಾಂಕದವರೆಗೆ ಯಾವುದೇ ಹಿಂಬಾಕಿ ವೇತನ, ನಿರಂತರ ಸೇವೆ, ತತ್ಪಲಿತ ಸೇವಾ ಸೌಲಭ್ಯ ರಹಿತವಾಗಿ ಮರು ನೇಮಕ ಮಾಡುವುದು.
4) ಮೂಲ ವೇತನದಲ್ಲಿ ಎರಡು ವೇತನ ಬಡ್ತಿಗಳನ್ನು ಸಂಚಿತವಾಗಿ ಇಳಸುವುದು ಹಾಗೂ ನೌಕರರು ನಿವೃತ್ತಿವರೆಗೂ ಮುಂಬಡ್ತಿಗೆ ಅರ್ಹರಿರುವುದಿಲ್ಲ.
5) ಮುಂದೆ, ಯಾವುದೇ ಮುಷ್ಕರದಲ್ಲಿ ಭಾಗವಹಿಸುವುದಿಲ್ಲ. ಇತರರನ್ನು ಪ್ರಚೋದಿಸುವುದಿಲ್ಲ ಹಾಗೂ ಮುಷ್ಕರದ ಅವಧಿಯಲ್ಲಿ ಗೈರು ಹಾಜರಿಯಾಗುವುದಿಲ್ಲ ಎಂದು ನೌಕರರು ಮುಚ್ಚಳಕೆ ಸಲ್ಲಸುವುದು ಇಂದು ಜಂಟಿ ಮೆಮೋದಲ್ಲಿ ಇದ್ದ ಅಂಶ.
ಸಂಸ್ಥೆಯೂ ಮಾಡಿದ ಮಾರ್ಪಾಡು ಏನು?
ಬೆಂ.ಮ.ಸಾ.ಸಂಸ್ಥೆಯು ಆಗಸ್ಟ್ 15 -1997 ರಂದು ಸ್ಥಾಪನೆಗೊಂಡಿದ್ದು ಇದೇ ಆ. 15-2022 ರಂದು ಅಂದರೆ ಸ್ವಾತಂತ್ರ್ಯ ದಿನದಂದು 25 ವರ್ಷ ಪೂರ್ಣಗೊಳಿಸಿರುತ್ತದೆ. ಈ ರಜತ ಮಹೋತ್ಸವದ ಹಿನ್ನೆಲೆಯಲ್ಲ, ಮುಷ್ಕರದಲ್ಲಿ ಸೇವೆಯಿಂದ ತೆಗೆದು ಹಾಕಲ್ಪಟ್ಟು ನಂತರ ಮರು ನೇಮಕಗೊಂಡು, ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ 277 ತರಬೇತಿ ನೌಕರರು, 178 ಪರೀಕ್ಷಾರ್ಥಿ ನೌಕರರು ಹಾಗೂ 175 ಕಾಯಂ ನೌಕರರಿಗೆ ರಿಯಾಯಿತಿ ನೀಡಲು ಸಂಸ್ಥೆಯು ಉದ್ದೇಶಿಸಿದೆ.
ಈ ಹಿನ್ನೆಲೆಯಲ್ಲ, ಮುಷ್ಕರಕ್ಕೆ ಸಂಬಂಧಿಸಿದಂತೆ ಸೇವೆಯಿಂದ ತೆಗೆದು ಹಾಕಲ್ಪಟ್ಟು, ನಂತರ ಲೋಕಾದಲತ್ ಮೂಲಕ ಮರು ನೇಮಕಗೊಂಡು 15-08-2022 ರಂದು ಇದ್ದಂತೆ, ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ 277 ತರಬೇತಿ ನೌಕರರು, 178 ಪರೀಕ್ಷಾರ್ಥಿ ನೌಕರರು ಹಾಗೂ 175 ಕಾಯಂ ನೌಕರರ ಮರು ನೇಮಕಾತಿ ಆದೇಶಗಳನ್ನು ಭವಿಷ್ಯವರ್ತಿಯಾಗಿ, ಈ ಕೆಳಕಂಡಂತೆ ಮಾರ್ಪಾಡು ಮಾಡಿ ಆದೇಶಿಸಿದೆ.
l. ತರಬೇತಿ ನೌಕರರಿಗೆ: • ನೇಮಕಗೊಂಡ ದಿನಾಂಕದಿಂದ ತರಬೇತಿ ಸೇವೆಯಿಂದ ತೆಗೆದು ಹಾಕಲಾದ ದಿನಾಂಕದವರೆಗೆ ಸಲ್ಲಿಸಿರುವ ಸೇವೆಯೊಂದಿಗೆ ಮರು ನೇಮಕ ಮಾಡಲಾಗಿದೆ.
• ತರಬೇತಿ ಸೇವೆಯಿಂದ ತೆಗೆದು ಹಾಕಲಾದ ದಿನಾಂಕದಿಂದ ಮರು ನೇಮಕಗೊಂಡ ದಿನಾಂಕದವರೆಗಿನ ಅವಧಿಗೆ ಯಾವುದೇ ಹಿಂಬಾಕಿ ತರಬೇತಿ ಭತ್ಯೆ, ನಿರಂತರ ಸೇವೆ ಹಾಗೂ ತತ್ಪಲಿತ ಸೇವಾ ಸೌಲಭ್ಯಗಳಿಗೆ ಇವರು ಅರ್ಹರಿರುವುದಿಲ್ಲ.
* ತರಬೇತಿ ಅವಧಿಯನ್ನು ಆರು ತಿಂಗಳ ಕಾಲ ವಿಸ್ತರಿಸಲಾಗಿದೆ. ಇನ್ನುಳದಂತೆ, ಜಂಟಿ ಮೆಮೋದಲ್ಲಿರುವ ಅಂಶಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
II. ಪರೀಕ್ಷಾರ್ಥಿ ನೌಕರರಿಗೆ: • ನೇಮಕಗೊಂಡ ದಿನಾಂಕದಿಂದ ಪರೀಕ್ಷಾರ್ಥಿ ಸೇವೆಯಿಂದ ಬಿಡುಗಡೆಗೊಳಿಸಿದ ದಿನಾಂಕದವರೆಗೆ ಸಲ್ಲಿಸಿರುವ ಸೇವೆಯೊಂದಿಗೆ ಮರು ನೇಮಕ ಮಾಡಲಾಗಿದೆ.
• ಪರೀಕ್ಷಾರ್ಥಿ ಸೇವೆಯಿಂದ ತೆಗೆದು ಹಾಕಲಾದ ದಿನಾಂಕದಿಂದ ಮರು ನೇಮಕಗೊಂಡ ದಿನಾಂಕದವರೆಗಿನ ಅವಧಿಗೆ ಯಾವುದೇ ಹಿಂಬಾಕಿ ವೇತನ, ನಿರಂತರ ಸೇವೆ ಹಾಗೂ ತತ್ಪಲಿತ ಸೇವಾ ಸೌಲಭ್ಯಗಳಿಗೆ ಇವರು ಅರ್ಹರಿರುವುದಿಲ್ಲ.
• ಪರೀಕ್ಷಾರ್ಥಿ ಅವಧಿಯನ್ನು ಒಂದು ವರ್ಷಕಾಲ ವಿಸ್ತರಿಸಲಾಗಿದೆ. • ಇನ್ನುಳಿದಂತೆ, ಜಂಟಿ ಮೆಮೋದಲ್ಲಿರುವ ಅಂಶಗಳಲ್ಲಿ ಯಾವುದೇ ಬದಲಾವಣಿ ಇರುವುದಿಲ್ಲ.
III ಕಾಯಂ ನೌಕರರಿಗೆ: • ನಿರಂತರ ಸೇವೆಯೊಂದಿಗೆ ಮರು ನೇಮಕ ಮಾಡಲಾಗಿದೆ.
• ಸೇವೆಯಿಂದ ವಜಾಗೊಂಡ ದಿನಾಂಕದಿಂದ ಮರು, ನೇಮಕಗೊಂಡ ದಿನಾಂಕದವರೆಗಿನ ಅವಧಿಗೆ ಯಾವುದೇ ಹಿಂಬಾಕಿ ವೇತನ, ನಿರಂತರ ಸೇವೆ, ತತ್ಪಲಿತ ಸೇವಾ ಸೌಲಭ್ಯಗಳಗೆ ಇವರು ಅರ್ಹರಿರುವುದಿಲ್ಲ.
• ಮೂಲ ವೇತನದಲ್ಲಿ ಒಂದು ವೇತನ ಬಡ್ತಿಯನ್ನು ಸಂಚಿತವಾಗಿ ಇಳಿಸಲಾಗಿದೆ.
• ಮುಂಬಡ್ತಿಗೆ ಅರ್ಹರಿರುವುದಿಲ್ಲವೆಂದು ಜಂಟಿ ಮಮೋದಲ್ಲಿ ವಿಧಿಸಿರುವ ಷರತ್ತನ್ನು ಹಿಂಪಡೆಯಲಾಗಿದೆ. ಇನ್ನುಳದಂತೆ, ಜಂಟಿ ಮೆಮೋದಲ್ಲಿರುವ ಅಂಶಗಳಲ್ಲಿ ಯಾವುದೇ ಬದಲಾವಣಿ ಇರುವುದಿಲ್ಲ.
ವಿಶೇಷ ಸೂಚನೆ: ಪುನರ್ ನೇಮಕಗೊಂಡು 15-08-2022 ರಂದು ಇದ್ದಂತೆ, ಕಾರ್ಯ ನಿರ್ವಹಿಸುತ್ತಿರುವ 277 ತರಬೇತಿ ನೌಕರರು, 178 ಪರೀಕ್ಷಾರ್ಥಿ ನೌಕರರು ಹಾಗೂ 175 ಕಾಯಂ ನೌಕರರಿಗೆ ಮಾತ್ರ ಈ ಮಾರ್ಪಾಡು ಆದೇಶವು ಅನ್ವಯಿಸುತ್ತದೆ. ಈ ಮಾರ್ಪಾಡು ಆದೇಶವು 15-08-2022 ರಿಂದ ಭವಿಷ್ಯವರ್ತಿಯಾಗಿ ಜಾರಿಗೆ ಬರುತ್ತದೆ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸತ್ಯವತಿ ಆದೇಶ ಹೊರಡಿಸಿದ್ದಾರೆ.